- Home
- Entertainment
- Cine World
- 'ಧುರಂಧರ್ 2' ಅಬ್ಬರಕ್ಕೆ ಫಿದಾ ಆದ ಕಾಜಲ್ ಅಗರ್ವಾಲ್: ರಣವೀರ್ ಸಿಂಗ್ ಒಬ್ಬ ಲೆಜೆಂಡ್ ಎಂದ 'ಮಗಧೀರ' ಬೆಡಗಿ!
'ಧುರಂಧರ್ 2' ಅಬ್ಬರಕ್ಕೆ ಫಿದಾ ಆದ ಕಾಜಲ್ ಅಗರ್ವಾಲ್: ರಣವೀರ್ ಸಿಂಗ್ ಒಬ್ಬ ಲೆಜೆಂಡ್ ಎಂದ 'ಮಗಧೀರ' ಬೆಡಗಿ!
ರಣವೀರ್ ಸಿಂಗ್ ಅವರ ಅಭಿನಯಕ್ಕೆ ಕಾಜಲ್ ಫಿದಾ ಆಗಿದ್ದಾರೆ. "ರಣವೀರ್, ನೀವು ಈ ಸಿನಿಮಾದಲ್ಲಿ ಮಾಡಿರುವ ಮ್ಯಾಜಿಕ್‌ನಿಂದ ನಾನು ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ನಿಮ್ಮ ಪಾತ್ರದ ತೀವ್ರತೆ, ಭಾವನೆಗಳು ಮತ್ತು ನೀವು ಪಟ್ಟಿರುವ ಶ್ರಮ ಅದ್ಭುತ. ಸಿನಿಮಾದ ಮೇಲಿರುವ ನಿಮ್ಮ ಪ್ಯಾಶನ್ಎದ್ದು ಕಾಣುತ್ತದೆ…

'ಧುರಂಧರ್' ಅಬ್ಬರಕ್ಕೆ ಫಿದಾ ಆದ ಕಾಜಲ್ ಅಗರ್ವಾಲ್: ರಣವೀರ್ ಸಿಂಗ್ ಒಬ್ಬ 'ಲೆಜೆಂಡ್' ಎಂದ 'ಸಿಂಗಂ' ಬೆಡಗಿ!
ಬಾಲಿವುಡ್ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಸಿನಿಮಾ ಈಗ ಭಾರತೀಯ ಚಿತ್ರರಂಗದ ಹಾಟ್ ಟಾಪಿಕ್.
ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿರುವುದು ಮಾತ್ರವಲ್ಲದೆ, ಚಿತ್ರರಂಗದ ಗಣ್ಯರ ಮನಸ್ಸನ್ನೂ ಗೆಲ್ಲುತ್ತಿದೆ. ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಸ್ಟಾರ್ ಸೆಲೆಬ್ರಿಟಿಗಳವರೆಗೆ ಪ್ರತಿಯೊಬ್ಬರೂ ಈ ಸಿನಿಮಾದ ಮೇಕಿಂಗ್ ಮತ್ತು ರಣವೀರ್ ಸಿಂಗ್ ಅಭಿನಯಕ್ಕೆ ಮಾರುಹೋಗಿದ್ದಾರೆ. ಈಗ ಈ ಸಾಲಿಗೆ ಬಹುಭಾಷಾ ತಾರೆ ಕಾಜಲ್ ಅಗರ್ವಾಲ್ ಕೂಡ ಸೇರ್ಪಡೆಯಾಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮೆಚ್ಚುಗೆಯ ಸುರಿಮಳೆ:
ಇತ್ತೀಚೆಗೆ 'ಧುರಂಧರ್ 2' ಸಿನಿಮಾವನ್ನು ವೀಕ್ಷಿಸಿದ ಕಾಜಲ್ ಅಗರ್ವಾಲ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಬಗ್ಗೆ ಅತ್ಯಂತ ಭಾವನಾತ್ಮಕ ಮತ್ತು ಸುದೀರ್ಘವಾದ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.
ಸಿನಿಮಾದ ಪ್ರತಿಯೊಂದು ಅಂಶವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಅವರು, "ಧುರಂಧರ್: ದಿ ರಿವೆಂಜ್... ಒಮ್ಮೆ ಶಾಂತವಾಗಿ ಯೋಚಿಸಿ, ಈ ಸಿನಿಮಾ ನಿಮ್ಮ ಮನಸ್ಸಿನ ಆಳಕ್ಕೆ ಇಳಿಯಲು ಬಿಡಿ" ಎಂದು ಬರೆಯುವ ಮೂಲಕ ಚಿತ್ರದ ತೀವ್ರತೆಯನ್ನು ವಿವರಿಸಿದ್ದಾರೆ.
ರಣವೀರ್ ಸಿಂಗ್ ಒಬ್ಬ 'ಲೆಜೆಂಡ್':
ಮುಖ್ಯವಾಗಿ ರಣವೀರ್ ಸಿಂಗ್ ಅವರ ಅಭಿನಯಕ್ಕೆ ಕಾಜಲ್ ಫಿದಾ ಆಗಿದ್ದಾರೆ. "ರಣವೀರ್, ನೀವು ಈ ಸಿನಿಮಾದಲ್ಲಿ ಮಾಡಿರುವ ಮ್ಯಾಜಿಕ್‌ನಿಂದ ನಾನು ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ನಿಮ್ಮ ಪಾತ್ರದ ತೀವ್ರತೆ, ಭಾವನೆಗಳು ಮತ್ತು ನೀವು ಪಟ್ಟಿರುವ ಶ್ರಮ ಅದ್ಭುತ. ಸಿನಿಮಾದ ಮೇಲಿರುವ ನಿಮ್ಮ ಪ್ಯಾಶನ್ ಪ್ರತಿಯೊಂದು ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ. ಜಸ್ಕಿರತ್ ಮತ್ತು ಹಮ್ಜಾ ಎಂಬ ಪಾತ್ರಗಳು ನಮ್ಮೊಂದಿಗೆ ದೀರ್ಘಕಾಲ ಉಳಿಯುತ್ತವೆ. ನೀವು ನಮ್ಮ ಕಾಲದ ನಿಜವಾದ ಲೆಜೆಂಡ್" ಎಂದು ರಣವೀರ್ ಅವರನ್ನು ಕೊಂಡಾಡಿದ್ದಾರೆ.
ತಂಡದ ಕಾರ್ಯವೈಖರಿಗೆ ಶ್ಲಾಘನೆ:
ಕೇವಲ ರಣವೀರ್ ಮಾತ್ರವಲ್ಲದೆ ಇಡೀ ಚಿತ್ರತಂಡದ ಕೆಲಸವನ್ನು ಕಾಜಲ್ ಗೌರವಿಸಿದ್ದಾರೆ. ಆರ್. ಮಾಧವನ್ ಅವರ ಪಾತ್ರದಲ್ಲಿದ್ದ 'ಶಾಂತ ಶಕ್ತಿ' ಮತ್ತು 'ಅಧಿಕಾರಯುತ ನಟನೆ'ಯನ್ನು ಅವರು ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ಬಗ್ಗೆ ಮಾತನಾಡುತ್ತಾ, "ಇದು ಸಿನಿಮಾ ಪ್ರಿಯರಿಗೆ ಸಿಕ್ಕ ಅತಿದೊಡ್ಡ ರಸದೌತಣ (Cinematic ecstasy pro max). ಮೊದಲ ಭಾಗ ಅನ್-ಫರ್ಗೆಟಬಲ್ ಆಗಿದ್ದರೆ, ಎರಡನೇ ಭಾಗ ನಮ್ಮನ್ನು ಭಾವನೆಗಳ ಲೋಕಕ್ಕೆ ಕರೆದೊಯ್ಯುತ್ತದೆ. ನೀವು ಸಿನಿಮಾದ ಗುಣಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದೀರಿ" ಎಂದಿದ್ದಾರೆ.
ಸಿನಿಮಾದ ಇತರೆ ನಟಿಯರಾದ ಯಾಮಿ ಗೌತಮ್ ಅವರ 'ಪರಿಣಾಮಕಾರಿ ನಟನೆ' ಮತ್ತು ಸಾರಾ ಅರ್ಜುನ್ ಅವರ 'ಚಾರ್ಮಿಂಗ್ ಪರ್ಫಾರ್ಮೆನ್ಸ್' ಬಗ್ಗೆಯೂ ಕಾಜಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಶ್ವತ್ ಸಚದೇವ್ ಅವರ ಸಂಗೀತದ ಬಗ್ಗೆ ಹೇಳುತ್ತಾ, "ಸಂಗೀತ ಕೇವಲ ಚಿತ್ರಕ್ಕೆ ಬೆಂಬಲ ನೀಡುವುದಿಲ್ಲ, ಬದಲಾಗಿ ಆ ಸಿನಿಮಾದಲ್ಲೇ ಜೀವಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಧೂಳಿಪಟ:
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ 'ಧುರಂಧರ್' ಮೊದಲ ಭಾಗದಂತೆಯೇ, ಈಗಿನ 'ಧುರಂಧರ್: ದಿ ರಿವೆಂಜ್' ಕೂಡ ಬಾಕ್ಸ್ ಆಫೀಸ್‌ನಲ್ಲಿ ಅಡೆತಡೆಯಿಲ್ಲದ ಓಟ ಮುಂದುವರಿಸಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಈ ಸಿನಿಮಾ ಕೇವಲ ನಾಲ್ಕೇ ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 700 ಕೋಟಿ ರೂಪಾಯಿ ಗಳಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸೆಲೆಬ್ರಿಟಿಗಳ ಈ ಮೆಚ್ಚುಗೆ ಚಿತ್ರದ ಯಶಸ್ಸಿಗೆ ಮತ್ತಷ್ಟು ವೇಗ ನೀಡಲಿದೆ ಎಂಬುದು ಸಿನಿ ತಜ್ಞರ ಅಭಿಪ್ರಾಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

