ರಜನಿಕಾಂತ್ ಅವರ ಪತ್ನಿ ಲತಾ ಅವರು ‘ಮಕ್ಕಳ್ ಮಂದಿರಂ’ ಎಂಬ ಸಂಘಟನೆ ಆರಂಭಿಸಿದಾಗ, ರಜನಿ ಅವರು ಮತ್ತೆ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಹರಿದಾಡಿದ್ದವು. ಈ ಎಲ್ಲಾ ಬೆಳವಣಿಗೆಗಳು ರಜನಿಕಾಂತ್ ಅವರ ಆರೋಗ್ಯ ಮತ್ತು ಅವರ ವೈಯಕ್ತಿಕ ಶಾಂತಿಗೆ ಧಕ್ಕೆ ತರುತ್ತಿವೆ. ಇದೀಗ ಈ ಸುದ್ದಿ ಬಂದಿದೆ!
'ಸೂಪರ್‌ಸ್ಟಾರ್' ಆಜ್ಞೆ: ರಾಜಕೀಯಕ್ಕೆ ರಜನಿ ಹೆಸರು ಬಳಸಿದರೆ ಹುಷಾರ್!
ಚೆನ್ನೈ/ಬೆಂಗಳೂರು: ತಮಿಳುನಾಡು ಇರಲಿ ಅಥವಾ ಭಾರತವೇ ಇರಲಿ, 'ತಲೈವಾ' ರಜನಿಕಾಂತ್ (Rajinikanth) ಅಂದ್ರೆ ಅದೊಂದು ಬ್ರ್ಯಾಂಡ್. ಆ ಹೆಸರಿಗೆ ಇರುವ ಶಕ್ತಿ ಎಂತದ್ದು ಎಂಬುದು ಎಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ರಾಜಕೀಯ ಲಾಭಕ್ಕಾಗಿ ರಜನಿ ಹೆಸರನ್ನು ಬಳಸಿಕೊಳ್ಳಲು ಹಲವರು ಹೊಂಚು ಹಾಕುತ್ತಲೇ ಇರುತ್ತಾರೆ. ಆದರೆ, ಈಗ ಇದಕ್ಕೆಲ್ಲಾ ರಜನಿಕಾಂತ್ ಅಭಿಮಾನಿ ಸಂಘ ಅಧಿಕೃತವಾಗಿ ‘ಫುಲ್ ಸ್ಟಾಪ್’ ಇಟ್ಟಿದೆ. ರಾಜಕೀಯದ ಸಣ್ಣ ಸುಳಿವಿಗೂ ರಜನಿ ಹೆಸರನ್ನು ಎಳೆದು ತಂದರೆ ಕಾನೂನು ಕ್ರಮ ಗ್ಯಾರಂಟಿ ಎಂಬ ಖಡಕ್ ಸಂದೇಶ ರವಾನೆಯಾಗಿದೆ.
ಫ್ಯಾನ್ಸ್ ಅಸೋಸಿಯೇಷನ್ ‘ರೆಡ್ ಕಾರ್ಡ್’: ಏನಿದೆ ಆ ಆದೇಶದಲ್ಲಿ?
ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಕಲ್ಯಾಣ ಸಂಘವು ಇತ್ತೀಚೆಗೆ ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. "ಸೂಪರ್‌ಸ್ಟಾರ್ ರಜನಿಕಾಂತ್ ಅವರು ಚುನಾವಣಾ ರಾಜಕೀಯದಿಂದ ಸಂಪೂರ್ಣವಾಗಿ ದೂರ ಉಳಿಯಲು ನಿರ್ಧರಿಸಿದ್ದಾರೆ. ಅವರ ಈ ವೈಯಕ್ತಿಕ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು. ಯಾವುದೇ ರಾಜಕೀಯ ಪಕ್ಷ, ಸಂಘಟನೆ ಅಥವಾ ವ್ಯಕ್ತಿಗಳು ತಮ್ಮ ಲಾಭಕ್ಕಾಗಿ ರಜನಿಕಾಂತ್ ಅವರ ಹೆಸರು ಅಥವಾ ಭಾವಚಿತ್ರವನ್ನು ಬಳಸುವಂತಿಲ್ಲ" ಎಂದು ಆದೇಶ ಹೊರಡಿಸಿದೆ. ಈ ಮೂಲಕ ಅಭಿಮಾನಿಗಳಲ್ಲಿ ಮೂಡುತ್ತಿದ್ದ ಗೊಂದಲಕ್ಕೆ ಸಂಘವು ತೆರೆ ಎಳೆದಿದೆ.
ಅಣ್ಣಾಮಲೈ ಮತ್ತು ರಾಘವ ಲಾರೆನ್ಸ್ ಕಥೆಯೇನು?
ಇತ್ತೀಚೆಗೆ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರು ಹೊಸ ಸಂಘಟನೆ ಆರಂಭಿಸಿದಾಗ, ಅವರ ಬೆಂಬಲಿಗರು ರಜನಿಕಾಂತ್ ಅವರ ಫೋಟೋ ಇರುವ ಪೋಸ್ಟರ್‌ಗಳನ್ನು ವ್ಯಾಪಕವಾಗಿ ಬಳಸಿದ್ದರು. ಅಲ್ಲದೆ, ರಜನಿ ಅವರು ತಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬರ್ಥದಲ್ಲಿ ಅಣ್ಣಾಮಲೈ ಹೇಳಿಕೆ ನೀಡಿದ್ದರು. ಇತ್ತ ನಟ ರಾಘವ ಲಾರೆನ್ಸ್ ಅವರು ಕೂಡ ಉಪ ಚುನಾವಣೆಗೆ ಸ್ಪರ್ಧಿಸುವ ವದಂತಿ ಬೆನ್ನಲ್ಲೇ, "ರಜನಿ ಅವರು ನನ್ನ ಮೂಲಕ ರಾಜಕೀಯ ಬದಲಾವಣೆ ಬಯಸಿದ್ದರು" ಎಂಬ ಹೇಳಿಕೆ ನೀಡಿ ಬೆಂಕಿಗೆ ತುಪ್ಪ ಸುರಿದಿದ್ದರು. ಈ ಇಬ್ಬರು ಗಣ್ಯರ ಹೇಳಿಕೆಗಳು ಅಭಿಮಾನಿಗಳಲ್ಲಿ ಭಾರೀ ಗೊಂದಲ ಮೂಡಿಸಿದ್ದವು.
ಲತಾ ರಜನಿಕಾಂತ್ ಸಂಘಟನೆ ಮತ್ತು ಹರಿದಾಡಿದ ವದಂತಿಗಳು:
ಇಷ್ಟೇ ಅಲ್ಲದೆ, ರಜನಿಕಾಂತ್ ಅವರ ಪತ್ನಿ ಲತಾ ಅವರು ‘ಮಕ್ಕಳ್ ಮಂದಿರಂ’ ಎಂಬ ಸಂಘಟನೆ ಆರಂಭಿಸಿದಾಗ, ರಜನಿ ಅವರು ಮತ್ತೆ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಹರಿದಾಡಿದ್ದವು. ಈ ಎಲ್ಲಾ ಬೆಳವಣಿಗೆಗಳು ರಜನಿಕಾಂತ್ ಅವರ ಆರೋಗ್ಯ ಮತ್ತು ಅವರ ವೈಯಕ್ತಿಕ ಶಾಂತಿಗೆ ಧಕ್ಕೆ ತರುತ್ತಿವೆ ಎಂದು ಅರಿತ ಅಭಿಮಾನಿ ಸಂಘ, ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಸಿನೆಮಾ ಮಾತ್ರವೇ ತಲೈವಾ ಗುರಿ!
ಕಳೆದ ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಅವರು ರಾಜಕೀಯ ಪಕ್ಷ ಆರಂಭಿಸುವುದಾಗಿ ಘೋಷಿಸಿ, ನಂತರ ಆರೋಗ್ಯದ ಕಾರಣಗಳಿಂದ ಹಿಂದೆ ಸರಿದಿದ್ದರು. ಈಗ ಅವರು ಕೇವಲ ಸಿನಿಮಾಗಳತ್ತ ಮಾತ್ರ ಗಮನ ಹರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ತಮ್ಮ ಹೆಸರನ್ನು ರಾಜಕೀಯದ ‘ಚದುರಂಗದಾಟ’ಕ್ಕೆ ಬಳಸಿಕೊಳ್ಳುವುದನ್ನು ಅವರು ಇಷ್ಟಪಡುತ್ತಿಲ್ಲ. ಅಭಿಮಾನಿ ಸಂಘದ ಈ ಖಡಕ್ ನಿರ್ಧಾರದಿಂದಾಗಿ, ಇನ್ಮುಂದೆ ಚುನಾವಣಾ ಪೋಸ್ಟರ್‌ಗಳಲ್ಲಿ ರಜನಿ ಮುಖ ಕಾಣಿಸಿಕೊಳ್ಳುವುದು ಕಷ್ಟವೇ ಸರಿ.
ತಲೈವಾ ಫ್ಯಾನ್ಸ್ ಅಸೋಸಿಯೇಷನ್‌ನಿಂದ ಬಂತು ಫೈನಲ್ ವಾರ್ನಿಂಗ್!
ಒಟ್ಟಿನಲ್ಲಿ, 'ನಾನು ಬರಲ್ಲ, ನನ್ನ ಹೆಸರನ್ನೂ ಬಳಸಬೇಡಿ' ಎಂಬ ತಲೈವಾ ಸಂದೇಶ ಈಗ ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ.


