ಅಂಗವೈಕಲ್ಯ ಮೆಟ್ಟಿ ನಿಂತು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದ ನಟ-ನಟಿಯರು
ಸಾಧನೆ ಮಾಡೋದಕ್ಕೆ ಗುರಿ ಮತ್ತು ಪರಿಶ್ರಮ ಮುಖ್ಯ, ಯಾವುದೇ ಅಂಗವೈಕಲ್ಯ ಮುಖ್ಯ ಅಲ್ಲ, ಸಾಧಿಸುವ ಛಲ ಸಾಕು ಎಂದು ಹಲವಾರು ನಟ-ನಟಿಯರು ತೋರಿಸಿಕೊಟ್ಟಿದ್ದಾರೆ. ಅವರಲ್ಲಿ ಕೆಲವು ಸ್ಟಾರ್ ಗಳ ಕುರಿತು ಮಾಹಿತಿ ಇಲ್ಲಿದೆ. ಇವರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಸಾಧಿಸಿದ್ದಾರೆ.

ಅಂಗವೈಕಲ್ಯ ಶಾಪ ಅಲ್ಲ
ನಾವು ಸಣ್ಣದೊಂದು ಗಾಯವಾದರೆ ಸಾಕು, ಅಯ್ಯೋ ಹೀಗಾಯ್ತಲ್ಲ ಎಂದು ಕೊರಗುತ್ತೇವೆ. ಆದರೆ ಚಿತ್ರರಂಗದ ಕೆಲವು ನಟ-ನಟಿಯರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸ್ಟಾರ್ ಆಗಿ ಮೆರೆದಿದ್ದಾರೆ. ಅಂತಹ ನಟ-ನಟಿಯರ ಲಿಸ್ಟ್ ಇಲ್ಲಿದೆ.
ರಾಣಾ ದಗ್ಗುಭಾಟಿ
ದಕ್ಷಿಣ ಭಾರತದ ಜನಪ್ರಿಯ ನಟ, ಬಾಹುಬಲಿ ಸಿನಿಮಾದಲ್ಲಿ ಬಳ್ಳಾಲದೇವನಾಗಿ ಮೆರೆದ ರಾಣಾ ದಗ್ಗುಭಾಟಿಗೆ ಬಲ ಕಣ್ಣು ಕಾಣೋದೇ ಇಲ್ಲ. ಹಾಗಂತ ಅದನ್ನೇ ಸಮಸ್ಯೆ ಎಂದು ನಟ ಸುಮ್ಮನೆ ಕುಳಿತಿಲ್ಲ. ಇಂದಿಗೂ ಸಾಲು ಸಾಲು ಸಿನಿಮಾಗಳಲ್ಲಿ ತಮ್ಮ ನಟನೆ ಮೂಲಕವೇ ಸದ್ದು ಮಾಡ್ತಿದ್ದಾರೆ ನಟ.
ರಶ್ಮಿ ಪ್ರಭಾಕರ್
ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಶ್ಮಿ ಪ್ರಭಾಕರ್, ಇವರು ಲಕ್ಷ್ಮೀ ಬಾರಮ್ಮ, ಶುಭ ವಿವಾಹ, ಮಹಾಭಾರತ, ಜೀವನಚೈತ್ರ, ಅರುಂಧತಿ, ಪೌರ್ಣಮಿ, ಮನಸೆಲ್ಲಾ ನೀನೇ ಸೇರಿ ಕನ್ನಡ , ತಮಿಳು, ತೆಲುಗು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ಈ ನಟಿಗೆ ಎಡಗಣ್ಣು 70%ದಷ್ಟು ಕಾಣಿಸೋದೆ ಇಲ್ಲ.
ನಿತಿನ್
ತೆಲುಗಿನ ಸ್ಟಾರ್ ನಟ ನಿತಿನ್ ಅವರಿಗೂ ಸ್ಟಾಮರಿಂಗ್ ಸಮಸ್ಯೆ ಇದೆ. ಆದರೆ ಅದರಿಂದ ಹೊರಗೆ ಬರಲು ನಿತಿನ್ ತೀವ್ರವಾಗಿ ಅಭ್ಯಾಸ ಮಾಡಿದರು. ಮಿರರ್ ಮುಂದೆ ಅಭ್ಯಾಸ ಮಾಡಿ ಮಾಡಿ, ನಂತರವಷ್ಟೇ ಶೂಟಿಂಗ್ ನಲ್ಲಿ ಡೈಲಾಗ್ ಡೆಲಿವರಿ ಮಾಡುತ್ತಿದ್ದರು.
ಹೃತಿಕ್ ರೋಷನ್
ಗ್ರೀಕ್ ಗಾಡ್ ಎಂದೇ ಜನಪ್ರಿಯತೆ ಪಡೆದಿರುವ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಅವರಿಗೆ ಸ್ಟಾಮರಿಂಗ್ ಸಮಸ್ಯೆ ಇದೆ, ಜೊತೆಗೆ ಇವರ ಕೈಗಳಲ್ಲಿ ಐದಲ್ಲ ಆರು ಬೆರಳುಗಳಿವೆ. ಆದರೆ ಅವರಿಗೆ ಇದ್ಯಾವುದೂ ಸಮಸ್ಯೆಯಾಗಿ ಕಾಣಲಿಲ್ಲ., ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ಆದಿ ಲೋಕೇಶ್
ಮೈಸೂರ್ ಲೋಕೇಶ್ ಅವರ ಪುತ್ರ ಆದಿ ಲೋಕೇಶ್ ಅವರಿಗೂ ಸಹ ಬಲಗಣ್ಣಿನಲ್ಲಿ ಸಮಸ್ಯೆ ಇದೆ. ಇವರಿಗೆ ಬಲ ಕಣ್ಣು ಸರಿಯಾಗಿ ಕಾಣಿಸೋದೆ ಇಲ್ಲ. ಆದರೂ ಚಿತ್ರರಂಗದಲ್ಲಿ ನಾಯಕನಾಗಿ, ವಿಲನ್ ಆಗಿ ಮಿಂಚಿದ್ದಾರೆ.
ಬಾಲಕೃಷ್ಣ
ಕನ್ನಡ ಸಿನಿಮಾಗಳಲ್ಲಿ ಹಾಸ್ಯನಟನಾಗಿ, ವಿಲನ್ ಪಾತ್ರಗಳಲ್ಲಿ ಗುರುತಿಸಿಕೊಂಡ ನಟ ಬಾಲಕೃಷ್ಣ. ನಿಮಗೆ ಗೊತ್ತಾ ಇವರಿಗೆ ಕಿವಿ ಕೇಳಿಸುವುದೇ ಇಲ್ಲ. ಆದರೆ ಅದನ್ನು ಅವರು ಸವಾಲಾಗಿ ತೆಗೆದುಕೊಂಡು ಕನ್ನಡ ಚಿತ್ರರಂಗದಲ್ಲಿ ಹಲವಾರು ದಶಕಗಳ ಮೆರೆದಿದ್ದಾರೆ.
ಆಲಿ
ತೆಲುಗಿನ ಕಾಮಿಡಿ ನಟ ಆಲಿ, ತಮ್ಮ ಕಾಮಿಡಿ ಮೂಲಕ ಅದೆಷ್ಟೋ ಜನರನ್ನು ನಗಿಸಿದ್ದಾರೆ. ಆದರೆ ಇವರಿಗೆ ಮಾತಿನ ಸಮಸ್ಯೆ ಇದೆ. ಅಂದರೆ ಇವರು ತೊದಲು ಮಾತನಾಡುತ್ತಾರೆ. ಆದರೆ ಸಿನಿಮಾದಲ್ಲಿ ಡೈಲಾಗ್ ಮಾತ್ರ ಸೂಪರ್.
ಅಭಿನಯ
ಕನ್ನಡದಲ್ಲಿ ಹುಡುಗರು ಸಿನಿಮಾದಲ್ಲಿ ಶ್ರೀನಗರ ಕಿಟ್ಟಿಗೆ ಜೋಡಿಯಾಗಿ ನಟಿಸಿದ್ದ ನಟಿ ಅಭಿನಯ. ಈ ತಮಿಳು ನಟಿಗೆ ಕಿವಿ ಕೇಳಿಸೋದಿಲ್ಲ, ಮಾತು ಕೂಡ ಬರೋದಿಲ್ಲ. ಆದರೂ ಇವರು ಕನ್ನಡದಲ್ಲಿ ಕಿಚ್ಚು, ರಾಮಣ್ಣ ಸೇರಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸುಧಾ ಚಂದ್ರನ್
ಸುಧಾ ಚಂದ್ರನ್ ಅವರು ಪ್ರಖ್ಯಾತ ಡ್ಯಾನ್ಸರ್ ಕೂಡ ಹೌದು, ಜೊತೆಗೆ ಜನಪ್ರಿಯ ನಟಿ ಕೂಡ ಹೌದು. ಆದರೆ ಇವರಿಗೆ ಒಂದೇ ಕಾಲು ಇಲ್ಲ ಅನ್ನೋದು ನಿಮಗೆ ಗೊತ್ತಿದ್ಯಾ? ಆದ್ರೂ ಇವರು ಡ್ಯಾನ್ಸ್ ಮಾಡುವ ರೀತಿ ಮಾತ್ರ ಅದ್ಭುತ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

