Fact Check: ಕೋರ್ಟ್ ಮುಂದೆ ಅಳುತ್ತಿದ್ದ ಮಹಿಳೆ ಗೌರಿ ಖಾನಾ?
ಆರ್ಯನ್ ಖಾನ್ (Aryan Khan) ಜಾಮೀನು (Bail) ತಿರಸ್ಕೃತಗೊಂಡ ನಂತರ ನ್ಯಾಯಾಲಯದ ಹೊರಗೆ ಮಹಿಳೆಯೊಬ್ಬರು ಅಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆ ಮಹಿಳೆ ಗೌರಿ ಖಾನ್ ಎಂದು ಹಲವು ವರದಿಗಳು ಸಹ ಹರಿದಾಡುತ್ತಿವೆ. ಆದರೆ ಆದು ಗೌರಿ ಖಾನ್ ( Gauri Khan) ಅಲ್ಲ ಎಂದು ತಿಳಿದು ಬಂದಿದೆ. ಹಾಗಾದರೆ ಯಾರಾದು? ಇಲ್ಲಿದೆ ನೋಡಿ ವಿವರ.
ಅಕ್ಟೋಬರ್ 08 ರಂದು, ಮುಂಬೈ ನ್ಯಾಯಾಲಯವು ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದಾಗ ಶಾರುಖ್ ಖಾನ್ ಕುಟುಂಬ ಆಘಾತ ಅನುಭವಿಸಿತು. ಅದೇ ದಿನ ಶಾರುಖ್ ಖಾನ್ ಪತ್ನಿ, ಗೌರಿ ಖಾನ್ ಅವರ 51 ನೇ ವರ್ಷದ ಬರ್ತ್‌ಡೇ ಆಗಿತ್ತು.
NCB ಆರ್ಯನ್ ಖಾನ್ ನನ್ನು ಸೆಕ್ಷನ್ 8C, 20B, 27 ( Punishment), 35 (Presumption of culpable mental state) of the Narcotic Drugs and Psychotropic Substances Act (NDPS Act), 28 and 29 ಅಡಿಯಲ್ಲಿ ಬಂಧಿಸಿದೆ.
ನಿನ್ನೆ ರಾತ್ರಿ, ಆರ್ಯನ್ ಖಾನ್ ವಿಚಾರಣೆ ನಂತರ ನ್ಯಾಯಾಲಯದ ಹೊರಗೆ ಮುಖ ಮುಚ್ಚಿಕೊಂಡು ಬಿಳಿ ಶರ್ಟ್ ಧರಿಸಿದ ಮಹಿಳೆಯೊಬ್ಬರು ಕಾರಿನಲ್ಲಿ ಅಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಕಾರಿನಲ್ಲಿರುವ ಮಹಿಳೆ ಆರ್ಯಾನ್ ಖಾನ್ ತಾಯಿ ಗೌರಿ ಎಂದು ಗೆಸ್ ಮಾಡಲಾಯಿತು.
ಸೋಶಿಯಲ್ ಮೀಡಿಯಾ ಬಳಕೆದಾರರು ಅದೇ ವಿಡಿಯೋಗಳು ಮತ್ತು ಫೊಟೋಗಳನ್ನು ಹಂಚಿಕೊಳ್ಳಲಾರಂಭಿಸಿದರು, ಆ ಮಹಿಳೆ ತನ್ನ ಮುಖವನ್ನು ಮರೆಮಾಚುತ್ತಿರುವುದು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಎಂದು. ನ್ಯಾಯಾಲಯವು ಆರ್ಯನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಗೌರಿ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ ಎಂದು ಅನೇಕರು ಫೊಟೋಗೆ ಕ್ಯಾಪ್ಷನ್ ನೀಡಿದ್ದಾರೆ.
ಆದಾಗ್ಯೂ, ವೀಡಿಯೊಗಳು ಮತ್ತು ಫೋಟೋಗಳಲ್ಲಿ ಕಾರಿನಲ್ಲಿ ಅಳುತ್ತಾ ಕಂಡುಬಂದಿರುವ ಮಹಿಳೆ ಗೌರಿ ಖಾನ್ ಅಲ್ಲ ಎಂಬುದು ತಿಳಿದು ಬಂದಿದೆ. ಅವರು ಖಾನ್ ಫ್ಯಾಮಿಲಿಗೆ ತುಂಬಾ ಕ್ಲೋಸ್ ಆಗಿರುವ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಆಗಿದ್ದರು ಪೂಜಾ ಕುಟುಂಬದ ಪ್ರತಿನಿಧಿಯಾಗಿ ನ್ಯಾಯಾಲಯದ ಹೊರಗೆ ಕಾಣಿಸಿಕೊಂಡರು.
ವರದಿಗಳ ಪ್ರಕಾರ, ಒಂದು ವಿಚಾರಣೆಯಲ್ಲಿ ಆರ್ಯನ್ ಖಾನ್ ಅವರನ್ನು ನೋಡಿದ ನಂತರ ಪೂಜಾ ಮುರಿದು ಬಿದ್ದ ವೀಡಿಯೊಗಳು ಮತ್ತು ಫೋಟೋಗಳು ವೈರಲ್ ಆಗಿವೆ ಮತ್ತು ನೆಟಿಜನ್‌ಗಳು ಇದು ಗೌರಿ ಖಾನ್ ಎಂದು ಭಾವಿಸಿ ಹೆಚ್ಚು ಹೆಚ್ಚು ಶೇರ್ ಮಾಡಿದ್ದಾರೆ.
Aryan
ಮಾದಕ ದ್ರವ್ಯ ದಾಳಿ ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಐದು ಜನರೊಂದಿಗೆ ಆರ್ಯನ್ ಖಾನ್ ಅವರನ್ನು ಆರ್ಥರ್ ರಸ್ತೆ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಮತ್ತು ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಮಹಿಳೆಯರಾದ ಮುಮುನ್ ಧಮೇಚಾ ಅವರನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಕಳುಹಿಸಲಾಯಿತು.