ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಿದ ಕೋರ್ಟ್, ಗೌರಿ ಖಾನ್ ಹುಟ್ಟು ಹಬ್ಬ ಆಚರಣೆ ಕ್ಯಾನ್ಸಲ್!
- ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ಆರ್ಯನ್ ಖಾನ್
- ಮತ್ತೆ ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್
- 51ನೇ ಹುಟ್ಟು ಹಬ್ಬ ಆಚರನೆ ರದ್ದುಗೊಳಿಸಿದ ಗೌರಿ ಖಾನ್
ಮುಂಬೈ(ಅ.08): ಡ್ರಗ್ಸ್ ಪ್ರಕರಣದಲ್ಲಿ(Drugs Case) ಜೈಲು ಸೇರಿರುವ ಬಾಲಿವುಡ್(Bollywood) ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ(Aryan Khan) ಮುಂಬೈ ಜಿಲ್ಲಾ ಸೆಷನ್ ಕೋರ್ಟ್(Mumbai Court) ಜಾಮೀನು ನಿರಾಕರಿಸಿದೆ. ಹೀಗಾಗಿ ಆರ್ಯನ್ ಖಾನ್ ಮುಂಬೈನ ಆರ್ಥರ್ ಜೈಲಿನಲ್ಲಿ ಉಳಿಯಬೇಕಿದೆ. ಆರ್ಯನ್ ಖಾನ್‌ಗೆ ಇಂದು ಜಾಮೀನು ಸಿಗುವ ಸಾಧ್ಯತೆ ಎಂದೇ ಶಾರುಖ್ ಕುಟುಂಬ ಭಾವಿಸಿತ್ತು. ಆದರೆ ಪ್ರಕರಣದ ಗಂಭೀರತೆಯನ್ನು ಅರಿತ ಕೋರ್ಟ್ ಜಾಮೀನು(Bail) ನಿರಾಕರಿಸಿದೆ.
"
ಸುಶಾಂತ್ ಪರ ವಾದಿಸಿದ್ದ ಲಾಯರ್‌ನಿಂದ ಆರ್ಯನ್‌ಗೆ ಸಪೋರ್ಟ್
ಜಾಮೀನು ನಿರಾಕರಿಸಿದ ಪರಿಣಾಮ, ಶಾರುಖ್ ಪತ್ನಿ ಗೌರಿ ಖಾನ್(Gauri Khan) ಹುಟ್ಟು ಹಬ್ಬ(Birthday) ಆಚರಣೆ ರದ್ದಾಗಿದೆ. ಇಂದು ಗೌರಿ ಖಾನ್ 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪುತ್ರ ಆರ್ಯನ್ ಖಾನ್‌ಗೆ ಜಾಮೀನು ಸಿಗುವ ಸಾಧ್ಯತೆ ಕುರಿತು ವಕೀಲರು ಸೂಚಿಸಿದ್ದರು. ಹೀಗಾಗಿ ಆರ್ಯನ್ ಬಿಡುಗಡೆ ಬಳಿಕ ಸರಳವಾಗಿ ಹುಟ್ಟು ಹಬ್ಬ ಆಚರಿಸಲು ಖಾನ್ ಕುಟುಂಬ ಪ್ಲಾನ್ ಮಾಡಿಕೊಂಡಿತ್ತು. ಆದರೆ ಜಾಮೀನು ನಿರಾಕರಣೆಯೊಂದಿಗೆ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದೆ.
NCBಯಿಂದ ಮಗನ ಕಾಪಾಡಲು ವಾಟ್ಸಾಪ್ ಬ್ಲಾಕ್ ಮಾಡ್ಸಿದ್ರಾ ಶಾರೂಖ್ ?
ಅಕ್ಟೋಬರ್ 7 ರಂದು ಆರ್ಯನ್ ಖಾನ್ ಸೇರಿ ಡ್ರಗ್ಸ್ ಪ್ರಕರಣದ 7 ಮಂದಿಗೆ ಮುಂಬೈ ಸ್ಥಳೀಯ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇತ್ತ ನ್ಯಾಯಾಲದಲ್ಲಿ ಜಾಮೀನಿಗಾಗಿ ಆರ್ಯನ್ ಖಾನ್ ಪರ ವಕೀಲರು ಮನವಿ ಮಾಡಿದ್ದರು. ಈ ಅರ್ಜಿ ಇಂದು ವಿಚಾರಣೆ ನಡೆಸಿದ ಮುಂಬೈ ಕೋರ್ಟ್, ಜಾಮೀನು ನಿರಾಕರಿಸಿದೆ.
ಶಾರುಖ್ ಪುತ್ರನಿಗೆ ಜೈಲೇ ಗತಿ.. ಆರ್ಯನ್ ಖಾನ್ ವಕೀಲರ ವಾದವೇನು?
ಆರ್ಯನ್ ಖಾನ್ ಜಾಮೀನನ ಮೇಲೆ ಬಿಡುಗಡೆಯಾದರೆ ಇದು ಗೌರಿ ಖಾನ್ ಅವರ ವಿಶೇಷ ಹುಟ್ಟುಹಬ್ಬ ಆಚರಣೆಯಾಗಲಿದೆ ಎಂದೇ ಬಾಲಿವುಡ್ ಹೇಳಿತ್ತು. ಬಾಲಿವುಡ್ ಸೆಲೆಬ್ರೆಟಿಗಳು ಗೌರಿ ಖಾನ್ ಹುಟ್ಟು ಹಬ್ಬಕ್ಕೆ ಶುಭಕೋರಿದ್ದರು. ಆದರೆ ಶುಭಾಶಯಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಮುಂಬೈ ಕರಾವಳಿಯಿಂದ ಹೊರಟ ಕ್ರ್ಯೂಸ್ ಹಡಗಿನಲ್ಲಿ(Cruise Ship) ರೇವ್ ಪಾರ್ಟಿ(Rave Party) ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಶಾರುಖ್ ಫುತ್ರ ಆರ್ಯನ್ ಖಾನ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆ ಕುರಿತು ಮಾಹಿತಿ ಪಡೆದಿದ್ದ NCB ಅಧಿಕಾರಿಗಳು ಮಫ್ತಿಯಲ್ಲಿ ಹಡುಗ ಸೇರಿಕೊಂಡಿದ್ದರು.
CCTV ಚೆಕ್ ಮಾಡಿ: NCB ಬೇಕೆಂದೇ ಡ್ರಗ್ಸ್ ತಂದಿಟ್ಟರು ಎಂದ ಆರ್ಯನ್ ಗೆಳೆಯ
ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ರೆಡ್ ಹ್ಯಾಂಡ್ ಆಗಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಸೇರಿದಂತೆ 7 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ಬಳಿಕ ಆರ್ಯನ್ ಸೇರಿ ಮೂವರನ್ನು NCB ಅಧಿಕಾರಿಗಳು ಬಂಧಿಸಿದ್ದರು. ಇದೀಗ ಆರ್ಥರ್ ಜೈಲಿನಲ್ಲಿ ಕಳೆಯಬೇಕಾಗಿದೆ.