Asianet Suvarna News Asianet Suvarna News

ಕೊಕೇನ್ ಸೇರಿ ಹಲವು ಡ್ರಗ್ಸ್ ಬಳಸಿದ್ದ ಶಾರೂಖ್ ಪುತ್ರ ಆರ್ಯನ್

  • ಆರ್ಯನ್ ಖಾನ್ ಅರೆಸ್ಟ್ ಆಗಿದ್ದು ಡ್ರಗ್ಸ್ ಬಳಸಿದ್ದಕ್ಕಾ ?
  • ಡ್ರಗ್ಸ್ ಕೇಸ್‌ನಲ್ಲಿ ಹೊಸ ಟ್ವಿಸ್ಟ್
  • ಕೊಕೇನ್ ಸೇರಿ ಹಲವು ಬಗೆಯ ಡ್ರಗ್ಸ್ ಸೇವನೆ ಆರೋಪ
Drugs case Aryan khan linked with consumption of cocaine other illegal drugs dpl
Author
Bangalore, First Published Oct 7, 2021, 1:52 PM IST

ದೆಹಲಿ(ಅ.06): ಸೂಪರ್‌ಸ್ಟಾರ್ ಶಾರೂಖ್ ಖಾನ್ ಮಗ ಆರ್ಯನ್ ಖಾನ್(Aryan Khan) ಅವರನ್ನು ಎನ್‌ಸಿಬಿ ವಶಕ್ಕೆ ಪಡೆದು ಬಂಧಿಸಿದೆ. ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ(Drugs Party) ಭಾಗಿಯಾಗಿದ್ದ ಆರ್ಯನ್ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಇಟ್ಟುಕೊಂಡಿದ್ದರು ಎಂಬ ಆರೋಪ ಇಲ್ಲಿವರೆಗೆ ಕೇಳಿ ಬಂದಿತ್ತು. ಈಗ ಈ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಕೇಸ್‌ಗೆ ಸಂಬಂಧಿಸಿದ ಲೇಟೆಸ್ಟ್ ಅಪ್ಡೇಟ್‌ನ ಪ್ರಕಾರ ಡ್ರಗ್ಸ್ ಮಾರಾಟ, ಖರೀದಿ ಹಾಗೂ ಸೇವನೆಯ ಆರೊಪದಲ್ಲಿ ಆರ್ಯನ್ ಖಾನ್‌ನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅರೆಸ್ಟ್ ಮೆಮೋ ಪ್ರಕಾರ 13 ಗ್ರಾಂ ಕೊಕೇನ್ ಸೀಝ್, 5 ಗ್ರಾಂ ಎಂಡಿ(MD) 21 ಗ್ರಾಂ ಚರಸ್ ಹಾಗೂ 22 ಎಂಡಿಎಂಎ ಮಾತ್ರೆಗಳು ಹಾಗೂ 1.33 ಲಕ್ಷ ಹಣ ವಶಪಡಿಸಿಕೊಂಡ ಘಟನೆಯಲ್ಲಿ ಆರ್ಯನ್ ಆರೆಸ್ಟ್ ಆಗಿರುವುದಾಗಿ ಹೇಳಲಾಗಿದೆ.

90ರ ದಶಕದಲ್ಲಿ ಡ್ರಗ್ಸ್ ವಿರುದ್ಧ ಬಾಲಿವುಡ್ ಫೈಟ್, ಫೋಟೋ ಶೇರ್ ಮಾಡಿದ ನಟ

ಮೂಲಗಳ ಪ್ರಕಾರ ಆರೋಪಿಯೊಬ್ಬನು ಕಣ್ಣಿನ ಲೆನ್ಸ್ ಕವರ್‌ನಲ್ಲಿ ಅಡಗಿಸಿ ನಿಷೇಧಿತ ವಸ್ತು ಕೊಕೇನ್ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಅಕ್ಟೋಬರ್ 3ರಂದು ಕ್ರೂಸ್‌ ಪಾರ್ಟಿಗೆ ದಾಳಿ ಮಾಡಿದ ಎನ್‌ಸಿಬಿ(NCB) ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಏಳು ಮಂದಿಯನ್ನು ಬಂಧಿಸಿದೆ. ಬಂಧಿತರು ಮುಂಬೈನಿಂದ(Mumbai) ಗೋವಾಕ್ಕೆ (Goa)ತೆರಳುವ ಕ್ರೂಸ್ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದರು.

ಆರ್ಯನ್ ಖಾನ್ ಹೊರತುಪಡಿಸಿ, ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಮತ್ತು ಅರ್ಬಾಜ್ ಮರ್ಚೆಂಟ್ ಅವರನ್ನು ಎನ್ಸಿಬಿಯಿಂದ ಬಂಧಿಸಲಾಗಿದೆ.

ಸುಳಿವು ಸಿಕ್ಕಿದ ನಂತರ, ಎನ್‌ಸಿಬಿ ಮುಂಬೈನ ಅಧಿಕಾರಿಗಳು ಅಕ್ಟೋಬರ್ 2 ರಂದು ಕ್ರೂಸ್ ಮೇಲೆ ದಾಳಿ ನಡೆಸಿದರು. ಕಾರ್ಯಾಚರಣೆಯ ಸಮಯದಲ್ಲಿ ಮಾಹಿತಿಯ ಪ್ರಕಾರ, ಎಂಡಿಎಂಎ/ ಎಕ್ಟಾಸಿ, ಕೊಕೇನ್, ಎಂಡಿ (ಮೆಫೆಡ್ರೋನ್) ಮತ್ತು ಚರಸ್ ನಂತಹ ವಿವಿಧ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರು ಮಹಿಳೆಯರನ್ನು ಒಳಗೊಂಡಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ. ಶನಿವಾರ ಸಂಜೆ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದಲ್ಲಿ ದಾಳಿ ನಡೆಯಿತು. ಕಾರ್ಯಾಚರಣೆಯ ಸಮಯದಲ್ಲಿ, ಶಂಕಿತರನ್ನು ಶೋಧಿಸಲಾಯಿತು. ಅವರಿಂದ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಅದನ್ನು ಅವರು ಬಟ್ಟೆ, ಒಳ ಉಡುಪು ಮತ್ತು ಪರ್ಸ್‌ಗಳಲ್ಲಿ ಬಚ್ಚಿಟ್ಟಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios