ಆರ್ಯನ್ ಖಾನ್ ಡ್ರಗ್ಸ್ ಕೇಸ್: ಶಾರೂಖ್ ನಟಿಸಿದ ಜಾಹೀರಾತು ಹಿಂಪಡೆದ ಬೈಜೂಸ್

  • ಮುಂಬೈ ಡ್ರಗ್ಸ್ ಕೇಸ್‌ನಲ್ಲಿ ಆರ್ಯನ್‌ ಖಾನ್‌ಗೆ ಜಾಮೀನಿಲ್ಲ
  • BrandEd-tech  ಪ್ಲಾಟ್‌ಫಾರ್ಮ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾದ ನಂತರ ಶಾರೂಖ್ ಜಾಹೀರಾತುಗಳನ್ನು ನಿಲ್ಲಿಸಿದ ಬೈಜುಸ್
  • ಶಾರುಖ್ ಖಾನ್‌ಗೆ ವಾರ್ಷಿಕವಾಗಿ 3-4 ಕೋಟಿ ರೂ.
  • ಶಾರೂಖ್ ನಟಿಸಿದ್ದ ಜಾಹೀರಾತು ಹಿಂಪಡೆದ ಬೈಜೂಸ್
Aryan Khan Drugs case Byjus pulls ads featuring Shah Rukh Khan dpl

ನವದೆಹಲಿ(ಅ.09): ಶಾರೂಖ್ ಖಾನ್(Shah Rukh Khan) ನಟಿಸಿದ್ದ ಎಲ್ಲ ಜಾಹಿರಾತನ್ನು ಬೈಜೂಸ್ ತಡೆ ಮಾಡಿದೆ. ಮುಂಬೈ(Mumbai)ಕರಾವಳಿ ತೀರದಲ್ಲಿ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಡ್ರಗ್ಸ್ (Drugs)ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು ಈ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಟ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಶಾರೂಖ್ ಪುತ್ರ ಆರ್ಯನ್ ಖಾನ್(Aryan Khan) ಕಸ್ಟಡಿಯಲ್ಲಿದ್ದು, ಈ ನಿಟ್ಟಿನಲ್ಲಿ ಬೈಜೂಸ್‌ ಪಾಠ ಮಾಡಿ ಮಗನಿಗೆ ಪಾಠ ಮಾಡಿಲ್ವೇ ಎಂದು ಜನ ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದರು.

ಟ್ವಿಟರ್ ನಂತಹ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಕಂಪನಿಯು ಟೀಕೆಗೆ ಒಳಗಾಗಿದ್ದರಿಂದ ಬೈಜು ಕಳೆದ ಕೆಲವು ದಿನಗಳಲ್ಲಿ ಎಲ್ಲಾ ಜಾಹೀರಾತುಗಳನ್ನು ನಿಲ್ಲಿಸಿತು. ಶಾರೂಖ್ ಪುತ್ರ ಕೇಸ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಂತೆ ಬೈಜೂಸ್(Byjus) ವಿರುದ್ಧ ಭಾರೀ ಕೋಪ ವ್ಯಕ್ತವಾಗಿತ್ತು.

"

ಶಾರೂಖ್ ಖಾನ್‌ಗೆ ಬೈಜೂ ಜಾಹೀರಾತು ದೊಡ್ಡ ಆದಾಯವಾಗಿತ್ತು. ಇದರ ಜೊತೆಗೇ ಹ್ಯೂಂಡಾಯ್, ಎಲ್‌ಜಿ(LG) , ದುಬೈ ಟೂರಿಸಂ(Dubai Tourism), ಐಸಿಐಸಿಐ ಹಾಗೂ ರಿಲಯನ್ಸ್ ಜಿಯೋಗೆ ಶಾರೂಖ್ ಜಾಹೀರಾತು ನೀಡುತ್ತಿದ್ದರು. ಶಾರೂಖ್ ಜಾಹೀರಾತಿಗಾಗಿ ಬೈಜೂಸ್ ವರ್ಷಕ್ಕೆ ಸುಮಾರು 3ರಿಂದ 4 ಕೋಟಿ ರೂಪಾಯಿ ನಟನಿಗೆ ನೀಡುತ್ತಿತ್ತು ಎನ್ನಲಾಗಿದೆ. 2017ರಿಂದಲೂ ಜಾಹೀರಾತಲ್ಲಿ ನಟ ಕಾಣಿಸಿಕೊಂಡಿದ್ದಾರೆ.

ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಿದ ಕೋರ್ಟ್, ಗೌರಿ ಖಾನ್ ಹುಟ್ಟು ಹಬ್ಬ ಆಚರಣೆ ಕ್ಯಾನ್ಸಲ್!

ಶಾರೂಕ್ ಮಗನ ಸುತ್ತ ವಿವಾದ ಇರುವ ಕಾರಣ ಕಂಪನಿಯು ನಟನೊಂದಿಗೆ ಜಾಹೀರಾತು ಒಪ್ಪಂದ ಮುಂದುವರಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಬೈಜು ಕಂಪನಿ SRK ಜಾಹೀರಾತುಗಳನ್ನು ಹಿಂಪಡೆದಿದ್ದಾರೆ ಎಂದು ಹೇಳಿದೆ. ಆದರೂ ಕಂಪನಿಯು ನಟನನ್ನು ತನ್ನ ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಕೈಬಿಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

Aryan Khan Drugs case Byjus pulls ads featuring Shah Rukh Khan dpl

ಏಪ್ರಿಲ್‌ನಲ್ಲಿ ಬೈಜೂಸ್‌ ಕಂಪನಿಗೆ ಒಟ್ಟು 16.5 ಬಿಲಿಯನ್ ಡಾಲರ್ ಮೌಲ್ಯವಿದೆ. ಹೂಡಿಕೆದಾರರೊಂದಿಗೆ ಸುಮಾರು 1.5 ಬಿಲಿಯನ್ ಡಾಲರ್‌ಗಳನ್ನು 20-21 ಬಿಲಿಯನ್ ಡಾಲರ್ ಮೌಲ್ಯದಲ್ಲಿ ಸಂಗ್ರಹಿಸಲು ಮಾತುಕತೆ ನಡೆಸಲಾಗುತ್ತಿದೆ ಎಂದು ವರದಿಯಾಗಿತ್ತು. ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿ 2021 ರ ಪ್ರಕಾರ ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ ಮತ್ತು ಕುಟುಂಬವು 24,300 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಹೊಂದಿದೆ ಎನ್ನಲಾಗಿದೆ.

ಸುಶಾಂತ್ ಪರ ವಾದಿಸಿದ್ದ ಲಾಯರ್‌ನಿಂದ ಆರ್ಯನ್‌ಗೆ ಸಪೋರ್ಟ್

ಆರ್ಯನ್ ಖಾನ್ ಮತ್ತು ಇತರ ಏಳು ಮಂದಿ ಕಳೆದ ವಾರ ಮುಂಬೈನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ‘ಕೊರ್ಡೆಲಿಯಾ’ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಬಸ್ಟ್‌ನಲ್ಲಿ ಸಿಕ್ಕಿಬಿದ್ದರು. ಅಂಡರ್‌ಕವರ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಡೆಸಿದ ದಾಳಿಯಲ್ಲಿ 13 ಗ್ರಾಂ ಕೊಕೇನ್, 21 ಗ್ರಾಂ ಹಶಿಶ್, 22 ಮಾತ್ರೆಗಳ ಎಂಡಿಎಂಎ ಮತ್ತು 5 ಗ್ರಾಂ ಎಂಡಿಗಳನ್ನು ಉತ್ಪಾದಿಸಿವೆ ಎಂದು ಸಂಸ್ಥೆ ಹೇಳಿದೆ.

ಆರ್ಯನ್ ಖಾನ್‌ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಸ್ಟಾರ್ ಕಿಡ್ ವಾರಾಂತ್ಯವನ್ನು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಳೆಯಲಿದ್ದಾರೆ. ಅವರ ಜಾಮೀನು ಅರ್ಜಿಯನ್ನೂ ನಿರಾಕರಿಸಲಾಗಿದೆ. ಆರ್ಯನ್ ಖಾನ್‌ನಿಂದ ಯಾವುದೇ ಔಷಧಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಎನ್‌ಸಿಬಿ ಒಪ್ಪಿಕೊಂಡಿದೆ. ಆದರೆ ವಾಟ್ಸಾಪ್‌ನಲ್ಲಿ ಅವರ ಚಾಟ್‌ಗಳು ಆರೋಪಕ್ಕೆ ಪೂರಕವಾಗಿದ್ದವು ಎನ್ನಲಾಗಿದೆ. ಆರ್ಯನ್ ಜೊತೆಗೆ ಸುಮಾರು 10ಕ್ಕೂ ಹೆಚ್ಚು ಜನರನ್ನು ಎನ್‌ಸಿಬಿ ಬಂಧಿಸಿದೆ.

ಗೌರಿ ಖಾನ್ ಹುಟ್ಟುಹಬ್ಬದ ಸಂದರ್ಭ ಆರ್ಯನ್ ಖಾನ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಗ ಜೈಲಿನಲ್ಲಿರುವ ಕಾರಣ ಖಾನ್ ದಂಪತಿಗಳು ಬರ್ತ್‌ಡೇ ಪಾರ್ಟಿಯನ್ನೂ ಮಾಡಿಲ್ಲ.

Latest Videos
Follow Us:
Download App:
  • android
  • ios