- Home
- Entertainment
- Cine World
- Dorothy Trailer: ಕೀರ್ತಿ ಸುರೇಶ್ ಸಿನಿಮಾ ವಯಸ್ಕರಿಗೆ ಮಾತ್ರ...! ಟ್ರೈಲರ್ ನೋಡಿ ಶಾಕ್ ಆದ ಫ್ಯಾನ್ಸ್
Dorothy Trailer: ಕೀರ್ತಿ ಸುರೇಶ್ ಸಿನಿಮಾ ವಯಸ್ಕರಿಗೆ ಮಾತ್ರ...! ಟ್ರೈಲರ್ ನೋಡಿ ಶಾಕ್ ಆದ ಫ್ಯಾನ್ಸ್
ತಮಿಳು ಚಿತ್ರರಂಗದಲ್ಲಿ 'ಮಹಾನಟಿ' ಎಂದೇ ಖ್ಯಾತಿ ಪಡೆದಿರುವ ನಟಿ ಕೀರ್ತಿ ಸುರೇಶ್ ನಟಿಸಿರುವ 'ಡೊರೊಥಿ'(Dorothy) ಬಿಡಗಡೆಗೆ ಮೊದಲೇ ಅದರ ಟ್ರೇಲರ್ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ. ವಯಸ್ಕರ ಚಿತ್ರದಲ್ಲಿ ನಟಿಸಿದ್ದರಾ ಕೀರ್ತಿ ಸುರೇಶ್?

'ಡೊರೊಥಿ' ಮಹಾನಟಿ ಸುರೇಶ್ ಕೀರ್ತಿ ವಯಸ್ಕರ ಚಿತ್ರದಲ್ಲಿ?
ತಮಿಳು ಚಿತ್ರರಂಗದಲ್ಲಿ 'ಮಹಾನಟಿ' ಎಂದೇ ಖ್ಯಾತಿ ಪಡೆದಿರುವ ನಟಿ ಕೀರ್ತಿ ಸುರೇಶ್ ಮದುವೆ ಬಳಿಕ ಮೊದಲಿನಂತ ಗ್ಲಾಮರ್ ಆಗಿ ನಟಿಸಲಾರರು ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಅಭಿಮಾನಿಗಳ ಮಾತು ತಲೆಕೆಳಗಾಗಿದೆ. ಈ ಶುಕ್ರವಾರ(ಸೆಪ್ಟಂಬರ್ 25) ರಂದು ಕೀರ್ತಿ ಸುರೇಶ್ ನಟಿಸಿರುವ 'ಡೊರೊಥಿ'(Dorothy) ಬಿಡಗಡೆಗೆ ಸಿದ್ಧವಾಗಿದ್ದು, ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿಯಿಂದ(ಸೆನ್ಸಾರ್ ಮಂಡಳಿ)ಯಿಂದ 'ಎ' ಪ್ರಮಾಣಪತ್ರ ದೊರೆತಿರವುದು ಇದೀಗ ತಮಿಳು ಚಿತ್ರರಂಗದಲ್ಲಿ ಕೀರ್ತಿ ಸುರೇಶ್ ಮತ್ತೆ ಸುದ್ದಿಯಲ್ಲಿದ್ದಾರೆ.
ಡೊರೊಥಿ ವಯಸ್ಕರ ಚಿತ್ರವಾ? ಮೊದಲ ಸೀನ್‌ನಲ್ಲೇ ಏಕೆ ಹಸಿಬಿಸಿ?
ಚಿತ್ರತಂಡ ಸಿನಿಮಾ ಬಿಡುಗಡೆಗೆ ಟ್ರೇಲರ್ ಬಿಡುಗಡೆ ಮಾಡಿದ್ದು. ಅದರಲ್ಲಿ ದೃಶ್ಯಗಳಿಗೂ, ಸೆನ್ಸಾರ್ ಬೋರ್ಡ್‌ನಿಂದ ಎ ಸರ್ಟಿಫಿಕೇಟ್ ಸಿಕ್ಕಿರೋದಕ್ಕೂ ತಾಳೆ ಹಾಕಿ ಇದೊಂದು ವಯಸ್ಕರ ಚಿತ್ರವಾಗಿರಬಹುದಾ ಎಂಬ ಚರ್ಚೆಗಳ ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿವೆ.
'ಡೊರೊಥಿ' ಟ್ರೇಲರ್‌ನಲ್ಲಿ ಏನಿದೆ?
ಟ್ರೇಲರ್‌ನಲ್ಲಿ ಮಕ್ಕಳು ವಯಸ್ಕರ ಸಿನಿಮಾಗಳನ್ನು ನೋಡುತ್ತಿದ್ದಾರೆ. 'ಡೊರೊಥಿ' ಚಿತ್ರದಲ್ಲಿ ಸನಂತ್ ಮತ್ತು ರಿಷಿಕಾಂತ್ ನಾಯಕರು. ಈ ಸಿನಿಮಾದಲ್ಲಿ ಇಬ್ಬರೂ ಬಾಲ್ಯದಿಂದ ಪ್ರೌಢಾವಸ್ಥೆಯವರೆಗೆ ರೌಡಿಗಳಾಗುವುದನ್ನು ತೋರಿಸಲಾಗಿದೆ ಎಂಬುದು ಟ್ರೇಲರ್ ನೋಡಿದವರಿಗೆ ಗೊತ್ತಾಗುತ್ತದೆ.. ಒಬ್ಬ ಹುಡುಗಿ (ಕೀರ್ತಿ ಸುರೇಶ್) ಜೀವನದಲ್ಲಿ ಬಂದ ಏನೆಲ್ಲ ನಡೆಯಿತು, ಇಬ್ಬರ ನಡುವೆ ಯಾವ ರೀತಿಯ ಜಗಳಗಳು, ಭಿನ್ನಾಭಿಪ್ರಾಯಗಳು ಶುರುವಾದವು ಎಂಬುದೇ ಈ ಚಿತ್ರದ ಕಥಾವಸ್ತು. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಈ ಕಥೆಯನ್ನು ಸ್ವಲ್ಪ ವಿಭಿನ್ನವಾಗಿ, ಗಂಭೀರವಾಗಿ ತೋರಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಮಲಯಾಳಂ ಎಂದರೆ ವಯಸ್ಕರ ಚಿತ್ರಗಳೇ ತುಂಬಿ ಹೋಗಿದ್ದವು. ಆಗ ಯಾವುದೇ ಸಿನಿಮಾ ಬಂದರೂ, ಸಿನಿಮಾ ನೋಡೋಣವೆಂದರೂ ಎಲ್ಲವೂ ವಯಸ್ಕರ ಸಿನಿಮಾಗಳೇ ಆಗಿರುತ್ತಿದ್ದವು. ಅದನ್ನೇ ನೈಜವಾಗಿ ತೋರಿಸಲು ಟ್ರೇಲರ್‌ನಲ್ಲಿ ಇಬ್ಬರು ಮಕ್ಕಳು ಥಿಯೇಟರ್‌ಗೆ ಬಂದಿರುತ್ತಾರೆ. ಸಿನಿಮಾ ಶುರುವಾದಾಗ ಹಸಿಬಿಸಿ ದೃಶ್ಯಗಳನ್ನ ಕಂಡು ಒಬ್ಬ ಕಣ್ಣು ಮುಚ್ಚುವುದು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಇನ್ನೊಬ್ಬ 'ಅದನ್ನ ನಾವು ನೋಡಬೇಕು, ಏಕೆಂದರೆ ನಾವು ಅದನ್ನು ಮಾಡಬೇಕು' ಎನ್ನುತ್ತಾನೆ. ಹೀಗಾಗಿ ಡೊರೊಥಿ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

