- Home
- Entertainment
- Cine World
- 'ಪರದೆ'ಯ ಮೇಲಷ್ಟೇನಾ ಪ್ರೀತಿ? ರೀಲ್ ಲೈಫ್‌ನಲ್ಲಿ ಒಂದಾಗಿ, ರಿಯಲ್ ಲೈಫ್‌ನಲ್ಲಿ ದೂರಾದ ತಾರೆಯರು!
'ಪರದೆ'ಯ ಮೇಲಷ್ಟೇನಾ ಪ್ರೀತಿ? ರೀಲ್ ಲೈಫ್‌ನಲ್ಲಿ ಒಂದಾಗಿ, ರಿಯಲ್ ಲೈಫ್‌ನಲ್ಲಿ ದೂರಾದ ತಾರೆಯರು!
Bollywood Celebrity divorce: ಯಾವುದೇ ಸೆಲೆಬ್ರಿಟಿ ಜೋಡಿ ವಿಚ್ಛೇದನ ಪಡೆದರೂ ಅದು ಅಭಿಮಾನಿಗಳಿಗೆ ಆಘಾತ ನೀಡುತ್ತದೆ. ಮೌನಿ ರಾಯ್, ಸೂರಜ್ ನಂಬಿಯಾರ್ ಬೇರೆಯಾಗಿದ್ದಾರೆ ಎಂಬ ಸುದ್ದಿ ಅಚ್ಚರಿಗೊಳಿಸಿತ್ತು. ಮೌನಿ-ಸೂರಜ್‌ಗಿಂತ ಮುಂಚೆಯೇ ಚಿತ್ರರಂಗದಲ್ಲಿ ನಡೆದ ಕೆಲವು ವಿಚ್ಛೇದನಗಳು ಸದ್ದು ಮಾಡಿದ್ದವು.

ಬಾಲಿವುಡ್‌ನಲ್ಲಿ ಶಾಕಿಂಗ್ ತಲಾಖ್

1. ಸೈಫ್ ಅಲಿ ಖಾನ್-ಅಮೃತಾ ಸಿಂಗ್
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಮದುವೆ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಆದರೆ, ಅವರಿಬ್ಬರ ವಿಚ್ಛೇದನ ಅದಕ್ಕಿಂತಲೂ ದೊಡ್ಡ ಆಘಾತ ನೀಡಿತ್ತು. 1991ರಲ್ಲಿ ಕುಟುಂಬದ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದ ಈ ಜೋಡಿ, 2004ರಲ್ಲಿ ಬೇರೆಯಾದರು.
2. ಅರ್ಬಾಜ್ ಖಾನ್-ಮಲೈಕಾ ಅರೋರಾ
ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ವಿಚ್ಛೇದನ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. 19 ವರ್ಷಗಳ ಕಾಲ ಒಟ್ಟಿಗೆ ಬಾಳಿದ ಈ ಜೋಡಿ, ನಂತರ ವಿಚ್ಛೇದನ ಪಡೆಯಲು ನಿರ್ಧರಿಸಿದರು. ಇಂದಿಗೂ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದು, ಮಗ ಅರ್ಹಾನ್‌ನ ಜವಾಬ್ದಾರಿಯನ್ನು ಒಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅರ್ಬಾಜ್ ಈಗಾಗಲೇ ಎರಡನೇ ಮದುವೆಯಾಗಿದ್ದು, ಓರ್ವ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.
3. ಹೃತಿಕ್ ರೋಷನ್-ಸುಸ್ಸಾನೆ ಖಾನ್
ಹೃತಿಕ್ ರೋಷನ್ ಮತ್ತು ಸುಸ್ಸಾನೆ ಖಾನ್ ಅವರ ವಿಚ್ಛೇದನ ಕೂಡ ಬಹಳ ಕಾಲ ಚರ್ಚೆಯಲ್ಲಿತ್ತು. ಬಾಲ್ಯದ ಸ್ನೇಹಿತರಾಗಿದ್ದ ಈ ಜೋಡಿ, 14 ವರ್ಷಗಳ ದಾಂಪತ್ಯದ ನಂತರ 2014ರಲ್ಲಿ ಬೇರೆಯಾಗಲು ನಿರ್ಧರಿಸಿದ್ದರು. ಇವರ ವಿಚ್ಛೇದನ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
4. ಆಮೀರ್ ಖಾನ್-ಕಿರಣ್ ರಾವ್
ಆಮೀರ್ ಖಾನ್ ಮತ್ತು ಕಿರಣ್ ರಾವ್ ಇದ್ದಕ್ಕಿದ್ದಂತೆ ವಿಚ್ಛೇದನದ ಸುದ್ದಿ ಹಂಚಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. 16 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಇಬ್ಬರೂ ಬೇರೆಯಾಗಿದ್ದರು. ವಿಚ್ಛೇದನದ ನಂತರವೂ ಇಬ್ಬರೂ ಪರಸ್ಪರ ಬೆಂಬಲವಾಗಿ ನಿಲ್ಲುತ್ತಾರೆ. ಈ ಜೋಡಿಗೆ ಓರ್ವ ಮಗನಿದ್ದಾನೆ.
5. ಸೊಹೈಲ್ ಖಾನ್-ಸೀಮಾ ಸಚ್‌ದೇವ್
ಸೊಹೈಲ್ ಖಾನ್ ಮತ್ತು ಸೀಮಾ ಸಚ್‌ದೇವ್ ವಿಚ್ಛೇದನ ಪಡೆಯುತ್ತಿರುವ ಸುದ್ದಿ ಬಂದಾಗ ಹಲವರಿಗೆ ಆಘಾತವಾಗಿತ್ತು. ಇಬ್ಬರೂ 1998ರಲ್ಲಿ ಮದುವೆಯಾಗಿದ್ದು, 2022ರಲ್ಲಿ ವಿಚ್ಛೇದನ ಪಡೆದರು. ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
6. ಫರ್ಹಾನ್ ಅಖ್ತರ್-ಅಧುನಾ ಭಬಾನಿ
ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ 2000ನೇ ಇಸವಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದರು. 17 ವರ್ಷಗಳ ಕಾಲ ಒಟ್ಟಿಗೆ ಇದ್ದ ಈ ಜೋಡಿ, 2017ರಲ್ಲಿ ಬೇರೆಯಾದರು. ಇವರ ವಿಚ್ಛೇದನ ಕೂಡ ಅಭಿಮಾನಿಗಳನ್ನು ಅಚ್ಚರಿಗೊಳಿಸಿತ್ತು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಸೇರಿ ಮಕ್ಕಳನ್ನು ಪಾಲನೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

