- Home
- Entertainment
- ಯಶ್ ಹಾಗೂ ಟಾಕ್ಸಿಕ್ ಚಿತ್ರದ ಬಗ್ಗೆ ಆ ಎಲ್ಲ ಸೀಕ್ರೆಟ್‌ಗಳನ್ನ ಹೇಳಿಬಿಟ್ರು ನಟಿ ತಾರಾ ಸುತಾರಿಯಾ!
ಯಶ್ ಹಾಗೂ ಟಾಕ್ಸಿಕ್ ಚಿತ್ರದ ಬಗ್ಗೆ ಆ ಎಲ್ಲ ಸೀಕ್ರೆಟ್‌ಗಳನ್ನ ಹೇಳಿಬಿಟ್ರು ನಟಿ ತಾರಾ ಸುತಾರಿಯಾ!
ಟಾಕ್ಸಿಕ್ ಸಿನಿಮಾದ ಬಗ್ಗೆ ನಟಿ ತಾರಾ ಸುತಾರಿಯಾ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರನ್ನು ಹೊಗಳಿದ್ದಾರೆ. ಸಿನಿಮಾ ಕಾಯುವಿಕೆ ವ್ಯರ್ಥವಾಗದು ಎಂದಿದ್ದಾರೆ.

ಅತೀ ವಿಶಿಷ್ಟ ಕಥೆ
ಟಾಕ್ಸಿಕ್ ಚಿತ್ರದಲ್ಲಿ ಮಹಿಳಾ ಪಾತ್ರಗಳನ್ನು ಘನತೆಯಿಂದ ಚಿತ್ರಿಸಲಾಗಿದೆ. ಅವರಿರುವ ಪ್ರತೀ ದೃಶ್ಯವೂ ಮಹಾ ಸಂಭ್ರಮದಂತಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ನಮ್ಮ ಹೆಮ್ಮೆ. ಜಗತ್ತಿನ ಅತೀ ವಿಶಿಷ್ಟ ಕಥೆಯನ್ನು ಅವರು ಕ್ರಾಫ್ಟ್ ಮಾಡಿರುವ ರೀತಿಯೇ ಅದ್ಭುತ.

ಅವಿಸ್ಮರಣೀಯ ಕ್ಷಣ
ಜೊತೆಗೆ ಯಶ್ ಒಬ್ಬ ವ್ಯಕ್ತಿಯಾಗಿ ಹಾಗೂ ಕಲಾವಿದನಾಗಿ ಅವರಿಗೆ ಅವರೇ ಸಾಟಿ. ಟಾಕ್ಸಿಕ್ ಸಿನಿಮಾ ಮೇಕಿಂಗ್ ಅನ್ನು ಸುಮ್ಮನೆ ಕೂತು ಗಮನಿಸಿದರೂ ಸಾಕು ಸಾಕಷ್ಟು ಕಲಿಯುತ್ತೇವೆ. ಈ ಸಿನಿಮಾದಲ್ಲಿ ನಟಿಸಿದ್ದು ಬದುಕಿನ ಅವಿಸ್ಮರಣೀಯ ಕ್ಷಣ.
ರೆಬೆಕಾ ಪಾತ್ರದಲ್ಲಿ ತಾರಾ ಸುತಾರಿಯಾ
ಇದು ಟಾಕ್ಸಿಕ್ ಸಿನಿಮಾ ಬಗ್ಗೆ ಬಾಲಿವುಡ್ ನಟಿ ತಾರಾ ಸುತಾರಿಯಾ ಮಾತು. ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ರೆಬೆಕಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಹಲವರಿಗೆ ಬೇಸರ
ಸಂದರ್ಶನವೊಂದರಲ್ಲಿ ‘ಟಾಕ್ಸಿಕ್’ ಬಗ್ಗೆ ಮಾತನಾಡಿದ ಅವರು, ಟಾಕ್ಸಿಕ್ ಸಿನಿಮಾ ರಿಲೀಸ್ ವಿಳಂಬವಾಗುತ್ತಿರುವುದು ಹಲವರಿಗೆ ಬೇಸರ ತಂದಿದೆ. ಆದರೆ ಈ ವಿಳಂಬಕ್ಕೆ ಅನೇಕ ಕಾರಣಗಳಿವೆ.
ಖಂಡಿತಾ ವ್ಯರ್ಥವಾಗದು
ಒಂದಂತೂ ಹೇಳಬಲ್ಲೆ, ಟಾಕ್ಸಿಕ್‌ಗಾಗಿನ ನಿಮ್ಮ ಕಾಯುವಿಕೆ ಖಂಡಿತಾ ವ್ಯರ್ಥವಾಗದು ಎಂದಿದ್ದಾರೆ. ಸದ್ಯ ವಿಶ್ವದ ಪ್ರತಿಷ್ಠಿತ ಕಾನ್ ವೇದಿಕೆಯಲ್ಲಿ ತಾರಾ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

