Anushka Rajan Aditya seal wedding: ಮಿಂಚಿದ ಆಲಿಯಾ, ಅಥಿಯಾ
ನಟ ಆದಿತ್ಯ ಸೀಲ್ (Aditya seal) ತಮ್ಮ ಬಹುಕಾಲದ ಗೆಳತಿ (Girlfriend) ಅನುಷ್ಕಾ ರಂಜನ್ (Anushka Rajan) ಅವರನ್ನು ವಿವಾಹವಾಗಿದ್ದಾರೆ. ಭಾನುವಾರ ಈ ಜೋಡಿ ಸಪ್ತಪದಿ ತುಳಿಯಿತು. ಏಳು ಹೆಜ್ಜೆಗಳನ್ನು ಜೊತೆಯಾಗಿಟ್ಟ ನಂತರ, ಆದಿತ್ಯ ಅವರು ಖುಷಿಯಲ್ಲಿ ಎಲ್ಲರ ಸಮ್ಮುಖದಲ್ಲಿ ಪತ್ನಿ ಅನುಷ್ಕಾರನ್ನು ತಮ್ಮ ತೋಳುಗಳಲ್ಲಿ ಎತ್ತುಕೊಂಡರು. ಮದುವೆಗಾಗಿ ಕೆಂಪು ಬಣ್ಣದ ಬದಲಾಗಿ ಲ್ಯಾವೆಂಡರ್ ಬಣ್ಣದ ಲೆಹೆಂಗಾವನ್ನು ಆಯ್ಕೆ ಮಾಡಿಕೊಂಡ ಅನುಷ್ಕಾ, ತುಂಬಾ ಸುಂದರವಾಗಿ ಕಂಗೊಳಿಸುತ್ತಿದ್ದರು. ಇದರೊಂದಿಗೆ, ಅವರು ಹೊಂದಿಕೆಯಾಗುವ ಆಭರಣಗಳನ್ನು ಪೇರ್ ಮಾಡಿಕೊಂಡಿದ್ದರು. ಈ ಜೋಡಿಯ ಮದುವೆಯಲ್ಲಿ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.
ಫ್ರೆಂಡ್ ಅನುಷ್ಕಾ ರಂಜನ್ ಮದುವೆಯ ಎಲ್ಲಾ ಫಂಕ್ಷನ್‌ಗಳಲ್ಲಿ ಹಾಜರಿದ್ದರು ಆಲಿಯಾ ಭಟ್. ಅನುಷ್ಕಾ ಆದಿತ್ಯರ ಮದುವೆಯಲ್ಲಿ ಭಾಗವಹಿಸಿದ್ದ ಆಲಿಯಾ ತಿಳಿ ಹಳದಿ ಬಣ್ಣದ ಸೀರೆ ಉಟ್ಟಿದ್ದರು. ತಲೆ ಕೂದಲಿಗೆ ಮಲ್ಲಿಗೆ, ದೊಡ್ಡ ಕಿವಿಯೋಲೆ, ಹಣೆಯಲ್ಲಿ ಚಿಕ್ಕ ಬಿಂದಿ ಧರಿಸಿದ್ದರು.
ಅಲಿಯಾ ಭಟ್ ತನ್ನ ಅಕ್ಕ ಶಾಹಿನ್ ಭಟ್ ಜೊತೆ ಮದುವೆಗೆ ಆಗಮಿಸಿದ್ದರು. ಈ ವೇಳೆ ಆಲಿಯಾ ಕ್ಯಾಮರಾಮನ್ ನೋಡಿ ವಿಶ್ ಮಾಡಿದರು. ಆಲಿಯಾ ತಮ್ಮ ಸ್ನೇಹಿತೆ ಅನುಷ್ಕಾರ ಮದುವೆಯಲ್ಲಿ ಭಾಗವಹಿಸಿ, ಮೆರಗು ಹೆಚ್ಚಿಸಿದ್ದಾರೆ.
ಅಥಿಯಾ ಶೆಟ್ಟಿ ಕಡು ಗುಲಾಬಿ ಬಣ್ಣದ ಲೆಹೆಂಗಾ ಧರಿಸಿ ಮದುವೆಗೆ ಆಗಮಿಸಿದ್ದರು. ಲೆಹೆಂಗಾ ಜೊತೆ ದೊಡ್ಡ ಕಿವಿಯೋಲೆಗಳನ್ನು ಅಥಿಯಾ ಪೇರ್ ಮಾಡಿಕೊಂಡಿದ್ದರು .ಆದರೆ ಛಾಯಾಗ್ರಾಹಕರಿಗೆ ಪೋಸ್ ಕೊಡಲು ಹೆಚ್ಚು ಹೊತ್ತು ನಿಲ್ಲಲಿಲ್ಲ.
ನಟಿ ವಾಣಿ ಕಪೂರ್ ತಮ್ಮ ಫ್ರೆಂಡ್ ಅನುಷ್ಕಾರ ಮದುವೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ತುಂಬಾ ಉತ್ಸಾಹದಿಂದ ಕಾಣಿಸಿಕೊಂಡರು. ಮದುವೆಯ ಸಮಯದಲ್ಲಿ ಬಿಳಿ ಬಣ್ಣದ ಲೆಹೆಂಗಾ ಧರಿಸಿ ವಾಣಿ ಕಪೂರ್, ತನ್ನ ಸ್ನೇಹಿತೆಯ ಮದುವೆಗೆ ಆಗಮಿಸಿದ್ದರು. ಅದೇ ಸಮಯದಲ್ಲಿ, ಪೂನಂ ಧಿಲ್ಲೋನ್ ಗೋಲ್ಡನ್-ರೆಡ್ ಸೀರೆಯಲ್ಲಿ ಕಾಣಿಸಿಕೊಂಡರು.
ಭೂಮಿ ಪೆಡ್ನೇಕರ್ ಸಹ ಅನುಷ್ಕಾ ರಂಜನ್ ಮತ್ತು ಆದಿತ್ಯಾ ಸೀಲ್ ಅವರ ಮದುವೆಯಲ್ಲಿ ಭಾಗವಹಿಸಿದ ಇನ್ನೊಬ್ಬ ಬಾಲಿವುಡ್ ಸೆಲೆಬ್ರಿಟಿ. ಎಲ್ಲೋ ಸಿಲ್ವರ್ ಕಲರ್ ಲೆಹೆಂಗಾ ಧರಿಸಿ ಭೂಮಿ ಮದುವೆಯಲ್ಲಿ ಗುರುತಿಸಿಕೊಂಡರು. ಕ್ಯಾಮರಾಮನ್ ನೋಡಿ ಅವರೂ ಕೈ ಬೀಸಿದರು. ಅದೇ ಸಮಯದಲ್ಲಿ, ಆಲಿ ಗೋನಿ ತನ್ನ ಗೆಳತಿ ಜಾಸ್ಮಿನ್ ಭಾಸಿನ್ ಜೊತೆ ಕಾಣಿಸಿಕೊಂಡರು.
ನಿಖಿಲ್ ದ್ವಿವೇದಿ ಪತ್ನಿ ಗೌರಿ ಜೊತೆ ಕಾಣಿಸಿಕೊಂಡಿದ್ದರು. ಈ ಜೋಡಿ ಫೋಟೋಗ್ರಾಫರ್‌ಗಳಿಗೆ ಪೋಸ್ ಕೊಟ್ಟಿದೆ. ಅದೇ ಸಮಯಕ್ಕೆ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ಕೂಡ ಮದುವೆಗೆ ಬಂದಿದ್ದರು.
ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಜೊತೆ ಕಾಣಿಸಿಕೊಂಡಿದ್ದಾರೆ. ದಂಪತಿಗಳು ಪರಸ್ಪರ ಕೈ ಹಿಡಿದಿದ್ದರು. ವಧುವಿನ ಜೊತೆಗೆ ಅನುಷ್ಕಾ ರಂಜನ್ ಅವರ ತಾಯಿ ಅನು ರಂಜನ್ ಕೂಡ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಮಧುರ್ ಭಂಡಾರ್ಕರ್ ಪತ್ನಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಜೋಡಿಯು ಛಾಯಾಗ್ರಾಹಕರಿಗೆ ದೀರ್ಘಕಾಲದವರೆಗೆ ಪೋಸ್ ನೀಡಿತು. ಅದೇ ಸಮಯದಲ್ಲಿ, ಡೇವಿಡ್ ಧವನ್ ಅವರ ಪತ್ನಿ ಲಾಲಿ ಧವನ್ ಕೂಡ ಕಾಣಿಸಿಕೊಂಡರು.
ಆದಿತ್ಯ ಸೀಲ್ ಮತ್ತು ಅನುಷ್ಕಾ ರಂಜನ್ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಫೋಟೋಗ್ರಾಫರ್‌ಗಳಿಗೆ ಪೋಸ್ ನೀಡಿದರು. ಈ ಸಮಯದಲ್ಲಿ, ನವ ವಧು ಅನುಷ್ಕಾ ತನ್ನ ಕೈಯಲ್ಲಿ ಪತಿ ಆದಿತ್ಯನೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.