Bollywood Couples: ಸದ್ಯದಲ್ಲೇ ಸಪ್ತಪದಿ ತುಳಿಯಲು ರೆಡಿಯಾಗಿರೋ ಜೋಡಿಗಳಿವರು
ಬಾಲಿವುಡ್‌ನ (Bollywood) ಕಪಲ್‌ಗಳಾದ (Couple) ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal), ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಈ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳಿವೆ. ಇವರು ಮಾತ್ರ ಮುಂಬರುವ ತಿಂಗಳುಗಳಲ್ಲಿ ಶೀಘ್ರದಲ್ಲೇ ಮದುವೆಯಾಗಲು ರೆಡಿಯಾಗಿವೆ ಇನ್ನೂ ಕೆಲವು ಜೋಡಿಗಳು. ಅವರಾರು ಗೊತ್ತಾ? ಮಾಹಿತಿಗಾಗಿ ಕೆಳಗೆ ಓದಿ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್: (Ranbir Kapoor-Alia Bhatt) : ದಂಪತಿ ಇತ್ತೀಚೆಗೆ ಜೋಧ್‌ಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮದುವೆಯ ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ವರದಿಗಳು ಸೂಚಿಸಿವೆ. ಇದೇ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ಸಹ ಹೇಳಲಾಗುತ್ತಿದೆ. ಹಿಂದಿನ ಸಂದರ್ಶನವೊಂದರಲ್ಲಿ, ರಣಬೀರ್ ಕಪೂರ್ ಕೊರೋನಾ ಇಲ್ಲದಿದ್ದರೆ 2020 ರಲ್ಲಿ ಆಲಿಯಾಳನ್ನು ಮದುವೆಯಾಗುತ್ತಿದ್ದೆ ಎಂದು ಹೇಳಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್: (Vicky Kaushal and Katrina Kai): ಕಳೆದ ಕೆಲವು ವಾರಗಳಿಂದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಿವಾಹದ ವಿವರಗಳ ಬಗ್ಗೆ ಸಾಕಷ್ಟು ವರದಿಗಳು ಹರಿದಾಡುತ್ತಿವೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಕುರಿತು ಪ್ರಕಟವಾದ ಹಲವು ವರದಿಗಳ ಪ್ರಕಾರ, ಡಿಸೆಂಬರ್ 7 ಅಥವಾ 9 ರಂದು ಸವಾಯಿ ಮಾಧೋಪುರದ ರೆಸಾರ್ಟ್ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಅದ್ಧೂರಿ ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ.
ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ: (Rajkummar Rao and Patralekhaa) : ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಸುಮಾರು ಹತ್ತು ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಹಾಗೂ ಅವರಿಬ್ಬರೂ ಬಹಳ ದಿನಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಸಹ ಇದ್ದಾರೆ. ವರದಿಗಳ ಪ್ರಕಾರ, ದಂಪತಿಗಳು ನವೆಂಬರ್ 10 ರಂದು ವಿವಾಹವಾಗಲು ಯೋಜಿಸುತ್ತಿದ್ದಾರೆ.
ರಿಚಾ ಚಡ್ಡಾ ಮತ್ತು ಅಲಿ ಫಜಲ್: (Richa Chadha and Ali Fazal): ಸಂದರ್ಶನವೊಂದರಲ್ಲಿ, ನಟ ಅಲಿ ಫಜಲ್ ಕಳೆದ ವರ್ಷ COVID-19 ಲಾಕ್‌ಡೌನ್‌ನಿಂದಾಗಿ ರಿಚಾ ಚಡ್ಡಾ ಅವರೊಂದಿಗಿನ ವಿವಾಹವನ್ನು ಮುಂದೂಡಲಾಗಿದೆ ಎಂದು ಬಹಿರಂಗಪಡಿಸಿದರು. ಇನ್ನೂ ಈ ದಂಪತಿಗಳು ತಮ್ಮ ಮದುವೆಯನ್ನು ವಿಳಂಬ ಮಾಡದಿರಲು ನಿರ್ಧರಿಸಿದ್ದಾರೆ ಮತ್ತು ಮುಂಬರುವ ವಾರಗಳಲ್ಲಿ ಅದನ್ನು ಪ್ಲಾನ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕೌರ್ಟ್ನಿ ಕಾರ್ಡಶಿಯಾನ್ ಮತ್ತು ಟ್ರಾವಿಸ್ ಬಾರ್ಕರ್: (Kourtney Kardashian and Travis Barker)
ಇತ್ತೀಚೆಗೆ ಕೌರ್ಟ್ನಿ ಕಾರ್ಡಶಿಯಾನ್ ಮತ್ತು ಟ್ರಾವಿಸ್ ಬಾರ್ಕರ್ ರೋಸ್ ಮತ್ತು ಕ್ಯಾಂಡಲ್‌ಗಳಿಂದ ತುಂಬಿದ ಕ್ಯಾಲಿಫೋರ್ನಿಯಾದ ಮೊಂಟೆಸಿಟೊದ ಬೀಚ್‌ನಲ್ಲಿ ಎಂಗೇಜ್ ಆದರು. ವರದಿಗಳ ಪ್ರಕಾರ, ದಂಪತಿಗಳು ಶೀಘ್ರದಲ್ಲೇ ಇಟಾಲಿಯನ್ ಮದುವೆಗೆ ಪ್ಲಾನ್ ಮಾಡಬಹುದು.