Alia Bhatt: ಫ್ರೆಂಡ್ ಮದುವೆ ಸಂಭ್ರಮದಲ್ಲಿ ಮಿಂಚಿದ ನಟಿ
ನಟಿ ಅನುಷ್ಕಾ ರಂಜನ್ (Anushka ranjan) ಅವರು ನವೆಂಬರ್ 21 ರಂದು ಸ್ಟೂಡೆಂಟ್ ಅಫ್ ದಿ ಇಯರ್ 2 (Student Of The Year 2) ನಟ ಆದಿತ್ಯ ಸೀಲ್ (Aditya Seal) ಅವರನ್ನು ವಿವಾಹವಾಗಲಿದ್ದಾರೆ. ಮದುವೆ ಸಂಭ್ರಮ ಶುರುವಾಗಿದೆ. ಮೂರು ದಿನಗಳ ಕಾಲ ಮದುವೆ ಸಮಾರಂಭ ನಡೆಯಲಿದೆ. ನವೆಂಬರ್ 19 ರಂದು ಅನುಷ್ಕಾ ಅವರ ಸಂಗೀತ ಸಮಾರಂಭ ನಡೆಯಿತು. ಇದರಲ್ಲಿ ಬಾಲಿವುಡ್ ಮತ್ತು ಮಾಡೆಲಿಂಗ್‌ಗೆ ಸಂಬಂಧಿಸಿದ ಅನೇಕ ಸೆಲೆಬ್ರೆಟಿಗಳು ಹಾಜರಿದ್ದರು. ಆಲಿಯಾ ಭಟ್ (Alia Bhatt) ಅನುಷ್ಕಾ ಮತ್ತು ಅದಿತ್ಯರ ಸಂಗೀತ್ ಸೆರಮನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದ ಕೆಲವು ಪೋಟೋಗಳು ಇಲ್ಲಿವೆ.
ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸೂಸನ್ ಖಾನ್ ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲಿ ಟಿವಿ ಇಂಡಸ್ಟ್ರಿಯ ಫೇಮಸ್ ಫೇಸ್ ಕ್ರಿಸ್ಟಲ್ ಡಿಸೋಜಾ ಕೂಡ ಪಾರ್ಟಿಯಲ್ಲಿ ಸದ್ದು ಮಾಡಿದರು. ಹಾಗೂ ನಟಿ ವಾಣಿ ಕಪೂರ್ ಕೂಡ ಪಾರ್ಟಿಯ ರಂಗು ಹೆಚ್ಚಿಸಿದ್ದರು.
ನಟಿ ಅನುಷ್ಕಾ ರಂಜನ್ ಆದಿತ್ಯ ಸೀಲ್ ಅವರ ಮದುವೆಯ ಸಂಗೀತ ಸಮಾರಂಭದ ಫೋಟೋಗಳು ಸಖತ್ ವೈರಲ್ ಆಗಿವೆ. ಸಮಾರಂಭಕ್ಕೆ ವಾಣಿ ಕಪೂರ್ ಮತ್ತು ಕ್ರಿಸ್ಟಲ್ ಡಿಸೋಜಾ (Krystle ಆಗಮಿಸಿದ್ದರು. ವಾಣಿ ಮತ್ತು ಕ್ರಿಸ್ಟಲ್ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅನುಷ್ಕಾ ಅವರ ಆತ್ಮೀಯ ಸ್ನೇಹಿತೆ ಕ್ರಿಸ್ಟಲ್ ಡಿಸೋಜಾ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಫೋಟೋವನ್ನು ಹಂಚಿಕೊಂಡು, 'ಮೆಹಂದಿ ಲಗಾ ಕೆ ರಖನಾ ಡೋಲಿ ಸಾಜ್ ಕೆ ರಖ್ನಾ, ಲವ್ ಯು ಅನುಷ್ಕಾ' ಎಂದು ಬರೆದಿದ್ದಾರೆ. ಇದರೊಂದಿಗೆ, ಅವರು ಹೃದಯದ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ. ಮಾಹಿತಿ ಪ್ರಕಾರ, ಅನುಷ್ಕಾ ಡಿಸೋಜಾರ ಫೇವರೇಟ್ ಫ್ರೆಂಡ್.
ಅದೇ ಸಮಯದಲ್ಲಿ, ವಾಣಿ ಕಪೂರ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಜೊತೆಗೆ, ಅವರು ಬರೆದಿದ್ದಾರೆ, '#ಅನುಷ್ ಗಾಟ್ ಸೀಲ್ಡ್. ಚಿತ್ರದಲ್ಲಿ ಅನುಷ್ಕಾ ರಂಜನ್ ಮತ್ತು ವಾಣಿ ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಅನುಷ್ಕಾ ರಂಜನ್ ತಮ್ಮ ಸಂಗೀತ ಸಮಾರಂಭದಲ್ಲಿ ತುಂಬಾ ಸುಂದರವಾದ ಲೆಹೆಂಗಾವನ್ನು ಧರಿಸಿದ್ದರು. ದೀರ್ಘ ಕಾಲದ ತಮ್ಮ ಬಾಯ್ ಫ್ರೆಂಡ್ ಆದಿತ್ಯ ಸೀಲ್ ಜೊತೆ ಸೆಟಲ್ ಆದ ಖುಷಿ ಅವರ ಮುಖದಲ್ಲಿ ಕಾಣುತ್ತಿತ್ತು.
ವಾಣಿ ಕಪೂರ್, ಸುಸಾನೆ ಖಾನ್, ಕ್ರಿಸ್ಟಲ್ ಡಿಸೋಜಾ, ಅಲಿ ಗೋನಿ ಮತ್ತು ಅರ್ಸ್ಲಾನ್ ಗೋನಿ ಅವರು ಅನುಷ್ಕಾ ರಂಜನ್ ಆದಿತ್ಯ ಸೀಲ್ ಸ್ಟಾರ್-ಸ್ಟಡ್ ಪಾರ್ಟಿಗೆ ಆಗಮಿಸಿದರು .
ಶುಕ್ರವಾರ, ಅನುಷ್ಕಾ ರಂಜನ್ ಮತ್ತು ಆದಿತ್ಯ ಸೀಲ್ ಅವರ ಸಂಗೀತ ಸಮಾರಂಭದ ದಿನ ಅನುಷ್ಕಾರ ಬೆಸ್ಟ್ ಫ್ರೆಂಡ್ ಆಲಿಯಾ ಭಟ್ ಆಗಮಿಸಿದ್ದರು. ಈ ಸಮಯದಲ್ಲಿ ನಟಿ ಸಾಂಪ್ರದಾಯಿಕ ಉಡುಗೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಆರೆಂಜ್ ಕಲರ್ ಲೆಹೆಂಗಾ ಧರಿಸಿದ್ದ ಆಲಿಯಾ ಫ್ರೆಂಡ್ಸ್ ಜೊತೆ ಫೋಟೋಗೆ ಪೋಸ್ ನೀಡಿದ್ದು ಹೀಗೆ.
ಅನುಷ್ಕಾ ಬ್ಯಾಚಿಲ್ಲೋರೆಟ್ ಪಾರ್ಟಿಯಲ್ಲಿ ನೇರಳೆ ಬಣ್ಣದ ಸ್ಪಾರ್ಕ್ಲಿ ಸೀರೆಯ ಲುಕ್ ನಲ್ಲಿ ಸಖತ್ ಸುಂದರವಾಗಿ ಕಾಣುತ್ತಿದ್ದರು. ಅದೇ ಸಮಯದಲ್ಲಿ, ಆದಿತ್ಯ ಆಲಿವ್ ಹಸಿರು ಉಡುಪಿನಲ್ಲಿ ಡ್ಯಾಶಿಂಗ್ ಆಗಿ ಕಾಣುತ್ತಿದ್ದರು.
ಆದಿತ್ಯ ಮತ್ತು ಅನುಷ್ಕಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು ಮತ್ತು ಈಗ ಅವರ ಸಂಬಂಧದ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದಾರೆ.ವರದಿಗಳ ಪ್ರಕಾರ, ಈ ಜೋಡಿ ಸುಮಾರು ಮೂರೂವರೆ ವರ್ಷಗಳ ಹಿಂದೆ ಅನುಷ್ಕಾ ಕುಟುಂಬ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೇಟಿಯಾದರು. ಸ್ನೇಹ ಬೆಳೆದು ನಂತರ ಪ್ರೀತಿಯಾಗಿ ಬೆಳೆಯಿತು.
ಆದಿತ್ಯ ಸೀಲ್ ಇತ್ತೀಚೆಗೆ 'ದಿ ಎಂಪೈರ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಮತ್ತು ಆದಿತ್ಯ ಆಲ್ಟ್ ಬಾಲಾಜಿ ಅವರ ವೆಬ್ ಸೀರೀಸ್ 'ಫಿಟ್ರತ್' ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದರಲ್ಲಿ ಕ್ರಿಸ್ಟಲ್ ಡಿಸೋಜಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಮೇರಿ ಜಿಂದಗಿ ಮೇ' ಮ್ಯೂಸಿಕ್ ವಿಡಿಯೋದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.