- Home
- Entertainment
- Cine World
- ಬೀದಿಗೆ ಬಂದ Actor Aamir Khan ಮನೆ ಜಗಳ; ಮಾನಸಿಕ ಅಸ್ವಸ್ಥ ಅಂತ ಸುಳ್ಳು ಹೇಳಿ ಮಾತ್ರೆ ಕೊಡ್ತಿದ್ರಾ?
ಬೀದಿಗೆ ಬಂದ Actor Aamir Khan ಮನೆ ಜಗಳ; ಮಾನಸಿಕ ಅಸ್ವಸ್ಥ ಅಂತ ಸುಳ್ಳು ಹೇಳಿ ಮಾತ್ರೆ ಕೊಡ್ತಿದ್ರಾ?
Bollywood Actor Aamir Khan: ಕೆಲ ನಟ-ನಟಿಯರ ಬದುಕು ಸಾರ್ವಜನಿಕವಾಗಿ ಚರ್ಚೆ ಆಗುವುದು. ಅಂತೆಯೇ ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಅವರ ಸಹೋದರ ಫೈಸಲ್ ಖಾನ್ ನಡುವಿನ ಸಂಬಂಧ ಸರಿಯಾಗಿಲ್ಲ. ಹಾಗಾದರೆ ಏನಾಯ್ತು?

ಮನೆಯಲ್ಲಿ ಹೇಗೆ ಫೈಟ್ ಮಾಡ್ತೀರಿ?
ಆಮಿರ್ ಖಾನ್ ಅವರು ಈ ಹಿಂದೆ ತಮ್ಮ ಸಹೋದರನ ಜೊತೆ ನಡೆದ ಕಹಿ ಘಟನೆಗಳು ಮತ್ತು ಕಾನೂನು ಹೋರಾಟದ ಬಗ್ಗೆ ಮಾತನಾಡಿದ್ದರು. ಫೈಸಲ್ ಖಾನ್ ಅವರು ತಮ್ಮ ಕುಟುಂಬದ ಜೊತೆ, ವಿಶೇಷವಾಗಿ ಆಮಿರ್ ಜೊತೆ ಸಂಬಂಧವನ್ನು ಮುರಿದ ಬಗ್ಗೆ ಆಮಿರ್ ಮಾತನಾಡಿದ್ದರು. "ನಿಮ್ಮ ಸ್ವಂತ ಕುಟುಂಬದೊಂದಿಗೆ ನೀವು ಹೇಗೆ ಫೈಟ್ ಮಾಡ್ತೀರಿ? ಅದು ತುಂಬ ನೋವು ಕೊಡುತ್ತದೆ" ಎಂದು ಹೇಳಿದ್ದರು.
ಸಹೋದರನಿಗೆ ಮಾನಸಿಕ ಕಾಯಿಲೆ ಇರಲಿಲ್ಲ
ಈ ಹಿಂದೆಯೇ ಫೈಸಲ್ ಖಾನ್ ಅವರು, ಸಹೋದರ ಆಮಿರ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆಮಿರ್ ಖಾನ್ ನಮ್ಮನ್ನು ಮನೆಯಲ್ಲಿ ಲಾಕ್ ಮಾಡಿದ್ದರು, ನನಗೆ ಯಾವುದೇ ಮಾನಸಿಕ ಕಾಯಿಲೆ ಇರಲಿಲ್ಲ, ಆದರೆ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲು ಪ್ರಯತ್ನಿಸಿಪಟ್ಟರು. ಆದರೂ ಬಲವಂತವಾಗಿ ಮಾತ್ರೆಗಳನ್ನು ಕೊಡುತ್ತಿದ್ದರು” ಎಂದು ಹೇಳಿದ್ದರು.
ಫೈಸಲ್ ಪರವಾಗಿ ತೀರ್ಪು
ಫೈಸಲ್ ಪಾಲನೆ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಕೂಡ ನಡೆದಿತ್ತು. ಆ ಟೈಮ್‌ನಲ್ಲಿ ಆಮಿರ್ ಖಾನ್ ಕೂಡ ಸಹೋದರನ ಜವಾಬ್ದಾರಿ ತಗೋತೀನಿ ಎಂದು ಹೇಳಿದ್ದರು. ನ್ಯಾಯಾಲಯವು ಫೈಸಲ್ ಪರವಾಗಿ ತೀರ್ಪು ನೀಡಿತ್ತು, ಆಮಿರ್ ಖಾನ್ ಅವರು ಸ್ವತಂತ್ರವಾಗಿ ಬದುಕಲು ಅನುಮತಿಯನ್ನು ಕೊಟ್ಟಿತ್ತು.
ಬ್ರದರ್ ಬಗ್ಗೆ ದ್ವೇಷವಿಲ್ಲ
ಇದೆಲ್ಲ ಆದ ಬಳಿಕ ಆಮಿರ್ ಖಾನ್, "ನನಗೆ ನನ್ನ ಬ್ರದರ್ ಬಗ್ಗೆ ಯಾವುದೇ ದ್ವೇಷವಿಲ್ಲ. ನನ್ನ ಬ್ರದರ್‌ಗೆ ನನ್ನ ಜೊತೆ ಮಾತನಾಡಲು ಇಷ್ಟವಿಲ್ಲ. ನಾನು ಕೂಡ ಏನೂ ಮಾಡಲು ಸಾಧ್ಯವಿಲ್ಲ. ಕುಟುಂಬ ಎನ್ನುವುದು ತುಂಬ ಮುಖ್ಯವಾಗುತ್ತದೆ, ಆದರೆ ಈ ಥರದ ಪರಿಸ್ಥಿತಿಯಲ್ಲಿ ನಾವು ಅಸಹಾಯಕರಾಗುತ್ತೇವೆ" ಎಂದು ತಿಳಿಸಿದ್ದರು.
ಒಂದೇ ಸಿನಿಮಾದಲ್ಲಿ ನಟನೆ
'ಮೇಳ' (Mela) ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಫೈಸಲ್ ಖಾನ್ ನಟಿಸಿದ್ದರು. ಆ ಸಿನಿಮಾದ ನಂತರ ಫೈಸಲ್ ಕರಿಯರ್, ಪರ್ಸನಲ್ ಲೈಫ್ ಕೂಡ ಏರಿಳಿತ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

