ಪಾರ್ಟಿಯಲ್ಲಿ Ajay Devgn ಮತ್ತು Arjun Rampal ಪುತ್ರಿಯರು ಫೋಟೋ ವೈರಲ್!
ಅಜಯ್ ದೇವಗನ್ (Ajay Devgn)ಅವರ ರನ್ವೇ 34 (Runway 34) ಚಿತ್ರಕ್ಕಾಗಿ ಸುದ್ದಿ ಮಾಡುತ್ತಿದ್ದಾರೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ವರದಿಗಳ ಪ್ರಕಾರ, ಅವರ ಈ ಚಿತ್ರವು 2015 ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಈ ನಡುವೆ ಅವರ ಮಗಳು ನ್ಯಾಸಾ ದೇವಗನ್ (Nysa Devgn) ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಪಾರ್ಟಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
ಹೊರಬಿದ್ದ ಫೋಟೋಗಳಲ್ಲಿ, ನ್ಯಾಸಾ ಕಪ್ಪು ಬಟ್ಟೆಯಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ. ಅದೇ ಸಮಯದಲ್ಲಿ, ಅರ್ಜುನ್ ರಾಂಪಾಲ್ ಅವರ ಪುತ್ರಿ ಮಹಿಕಾ ರಾಂಪಾಲ್ ಮತ್ತು ಇತರ ಕೆಲವು ಸ್ನೇಹಿತರು ಸಹ ಅವರೊಂದಿಗೆ ಫನ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನ್ಯಾಸಾ ದೇವಗನ್ ಮತ್ತು ಮಿಹೀಕಾ ರಾಂಪಾಲ್ ಪಾರ್ಟಿಯನ್ನು ಆನಂದಿಸುತ್ತಿರುವ ಫೋಟೋಗಳು ವೈರಲ್ ಆಗಿವೆ . ಅಜಯ್ ದೇವಗನ್ ಅವರ ಮಗಳು ಇತ್ತೀಚೆಗೆ ತನ್ನ 19 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ
ಅವರ ಹುಟ್ಟುಹಬ್ಬದಂದು ತಂದೆ ಅಜಯ್ ದೇವಗನ್ ಮತ್ತು ತಾಯಿ ಕಾಜೋಲ್ ಅವರಿಗೆ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಅಂದಹಾಗೆ, ಅಜಯ್ ದೇವಗನ್ ಅವರ ಮಗಳು ನ್ಯಾಸಾ ದೇವಗನ್ ಲೈಮ್‌ಲೈಟ್‌ನಿಂದ ದೂರವಿರಲು ಬಯಸುತ್ತಾರೆ, ಆದರೆ ಆಗಾಗ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ನ್ಯಾಸಾ ಮತ್ತು ಮಹಿಕಾ ಇಬ್ಬರು ಗಾರ್ಜಿಯಸ್ ಲುಕ್ ಕಾಣಿಸುತ್ತಿದೆ. ಇಬ್ಬರೂ ಪಾರ್ಟಿ ಎಂಜಾಯ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ ವೈರಲ್ ಆಗುತ್ತಿರುವ ಫೋಟೋಗಳಲ್ಲಿ, ನ್ಯಾಸಾ ದೇವಗನ್ ಮತ್ತು ಮಹಿಕಾ ರಾಂಪಾಲ್ ಸ್ನೇಹಿತರೊಂದಿಗೆ ಕ್ಲಬ್‌ನಲ್ಲಿ ಪಾರ್ಟಿ ಮಾಡುವುದನ್ನು ಕಾಣಬಹುದು.
ನ್ಯಾಸಾ ಅವರ ಸ್ನೇಹಿತ ಅರ್ಹಾನ್ ಅವತಾರಮಣಿ ಈ ಫೋಟೋಗಳನ್ನು ಕೆಲವು ಗಂಟೆಗಳ ಹಿಂದೆ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ . ಎಲ್ಲಾ ಫೋಟೋಗಳಲ್ಲಿ ನ್ಯಾಸಾ ಮತ್ತು ಮಹಿಕಾ ತುಂಬಾ ಸಂತೋಷವಾಗಿ ಮತ್ತು ಸಿಜ್ಲಿಂಗ್ ಆಗಿ ಕಾಣುತ್ತಿದ್ದಾರೆ.
ಈ ದಿನಗಳಲ್ಲಿ ಅಜಯ್ ದೇವಗನ್ ಅವರ ಮಗಳು ಸಿಂಗಾಪುರದಲ್ಲಿ ಓದುತ್ತಿದ್ದಾರೆ. ನ್ಯಾಸಾಗೆ ಅಧ್ಯಯನವೆಂದರೆ ತುಂಬಾ ಇಷ್ಟ. ರಜೆಗೆಂದು ಆಗಾಗ ಮುಂಬೈಗೆ ಬರುತ್ತಾರೆ.
ಇತ್ತೀಚೆಗೆ ಅಜಯ್ ದೇವಗನ್ ಅವರಿಗೆ ಮಗಳು ನ್ಯಾಸಾ ಬಾಲಿವುಡ್‌ಗೆ ಪದಾರ್ಪಣೆ ಮಾಡುವ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದುವರೆಗೂ ಅವರ ಮಗಳು ಅಂತಹ ಯಾವುದೇ ಆಸೆಯನ್ನು ವ್ಯಕ್ತಪಡಿಸಿಲ್ಲ ಎಂದು ಅವರು ಹೇಳಿದರು.
ಅದೇ ಸಮಯದಲ್ಲಿ, ಅವಳು ತನ್ನ ವೃತ್ತಿಯನ್ನು ತಾನೇ ಆರಿಸಿಕೊಳ್ಳುವುದಾಗಿ ಮತ್ತು ಅವಳ ಮೇಲೆ ಯಾವುದೇ ಒತ್ತಡವಿಲ್ಲ ಎಂದೂ ಅಜಯ್ ದೇವಗನ್ ಹೇಳಿದರು.