- Home
- Entertainment
- Cine World
- ಯಾವುದೇ ಸರ್ಜರಿ ಮಾಡ್ಸಿಲ್ಲ, ಆದ್ರೂ 55ನೇ ವಯಸ್ಸಲ್ಲೂ ಸೌಂದರ್ಯದ ಗಣಿ Ramya Krishnan
ಯಾವುದೇ ಸರ್ಜರಿ ಮಾಡ್ಸಿಲ್ಲ, ಆದ್ರೂ 55ನೇ ವಯಸ್ಸಲ್ಲೂ ಸೌಂದರ್ಯದ ಗಣಿ Ramya Krishnan
Ramya Krishnan: ‘ಪಡೆಯಪ್ಪ’, ‘ಬಾಹುಬಲಿ’ ಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ರಮ್ಯಾ ಕೃಷ್ಣ, ಯಾವುದೇ ಬ್ಯೂಟಿ ಸರ್ಜರಿ ಮಾಡದೇ, ನ್ಯಾಚುರಲ್ ಆಗಿ ಸೌಂದರ್ಯವನ್ನು ಕಾಪಾಡಿಕೊಂಡಿರುವ ಏಕೈಕ ನಟಿ ಅಂದ್ರೆ ರಮ್ಯಾ ಕೃಷ್ಣನ್.

ರಮ್ಯಾ ಕೃಷ್ಣನ್
"ಬಾಹುಬಲಿ" ಚಿತ್ರದಲ್ಲಿ ರಾಜಮಾತೆ ಶಿವಗಾಮಿಯಾಗಿ ಖ್ಯಾತಿ ಪಡೆದ ರಮ್ಯಾ ಕೃಷ್ಣನ್, ತಮ್ಮ ಸೌಂದರ್ಯ ಮತ್ತು ಚೆಲುವಿನಿಂದ ಇನ್ನೂ ಎಲ್ಲರನ್ನೂ ಆಕರ್ಷಿಸುತ್ತಾರೆ. 55 ವರ್ಷ ವಯಸ್ಸಿನಲ್ಲೂ ಅವರ ಸ್ಟೈಲ್, ಸೌಂದರ್ಯಕ್ಕೆ ಸೋಲದವರು ಯಾರು ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಅವರ ಪ್ರತಿಯೊಂದು ಫೋಟೋ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗುತ್ತದೆ. ಸ್ಟೈಲಿಶ್ ಲುಕ್‌ನಿಂದ ಹಿಡಿದು ಸಾಂಪ್ರದಾಯಿಕ ರಮ್ಯಾ ಕೃಷ್ಣನ್ ಯಾವುದೇ ಉಡುಗೆಯಲ್ಲೂ ಸೂಪರ್.
55ರಲ್ಲೂ ಸಖತ್ ಸುಂದರಿ
'ಬಾಹುಬಲಿ'ಯ ಶಿವಗಾಮಿ ಎಂದೇ ಖ್ಯಾತಿ ಪಡೆದ ನಟಿ ರಮ್ಯಾ ಕೃಷ್ಣನ್, ತಮ್ಮ ನಟನೆ ಹಾಗೂ ಸ್ಟೈಲ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. 55 ವರ್ಷ ವಯಸ್ಸಿನಲ್ಲೂ ರಮ್ಯಾ ಕೃಷ್ಣ ರಮ್ಮ ಸೌಂದರ್ಯದಿಂದ ಮೋಡಿ ಮಾಡುತ್ತಾರೆ ಎಂದು ಯಾರೂ ಅಂದುಕೊಂಡಿರಲೇ ಇಲ್ಲ. ಆದರೆ ಅವರನ್ನ ನೋಡಿದ್ರೆ, ಆ ಕಣ್ಣುಗಳೇ ಮಾಯಾ ಶಕ್ತಿಯಂತೆ ಸೆಳೆಯುತ್ತವೆ.
ಸರ್ಜರಿ ಮಾಡಿಸದೇ ಇರುವ ನ್ಯಾಚುರಲ್ ಬ್ಯೂಟಿ
ರಮ್ಯಾ ಕೃಷ್ಣನ್ ಅವರು ಇದುವರೆಗೂ ಯಾವುದೇ ಬ್ಯೂಟಿ ಸರ್ಜರಿ ಮಾಡಿಸಿಲ್ಲ. ಇಲ್ಲಿವರೆಗೂ ತಮ್ಮ ನ್ಯಾಚುರಲ್ ಸೌಂದರ್ಯದಿಂದಲೇ ಗಮನ ಸೆಳೆಯುತ್ತಿರುವ ಆ ಕಾಲದ ಏಕೈಕ ಸುಂದರಿ ಅಂತಾನೆ ಹೇಳಬಹುದು. ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಸುಂದರ ನಟಿ ಎಂದು ಈವಾಗ್ಲೂ ಜನ ಇವರ ಫೋಟೊಗಳನ್ನು ಶೇರ್ ಮಾಡುತ್ತಾರೆ.
ರಮ್ಯಾ ಕೃಷ್ಣ ವಿವಾಹ
ಈವಾಗ್ಲೂ ಎವರ್ ಗ್ರೀನ್ ಲುಕ್ ಹೊಂದಿರುವ ರಮ್ಯಾ ಕೃಷ್ಣನ್ 2003 ರಲ್ಲಿ, ಕೃಷ್ಣ ವಂಶಿ ಎನ್ನುವವರನ್ನು ವಿವಾಹವಾದರು. ಈಗ ಅವರಿಗೆ ರಿತ್ವಿಕ್ ವಂಶಿ ಎಂಬ ಮಗನಿದ್ದಾನೆ. ಸಣ್ನ ವಯಸ್ಸಿನಲ್ಲಿ ಸಿನಿಮಾ ಜೀವನ ಆರಂಭಿಸಿದ ನಟಿ, ಇಂದಿಗೂ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.
200ಕ್ಕೂ ಅಧಿಕ ಸಿನಿಮಾಗಲ್ಲಿ ನಟನೆ
ರಮ್ಯಾ ಕೃಷ್ಣನ್ ಇಲ್ಲಿವರೆಗೆ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಚಿತ್ರರಂಗದ ಸ್ಟ್ರಾಂಗ್ ನಟಿಯರ ಪಟ್ಟಿಯಲ್ಲಿ ರಮ್ಯಾ ಕೃಷ್ಣನ್ ಅವರ ಹೆಸರು ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ. ಅವರ 38 ವರ್ಷಗಳ ನಟನಾ ವೃತ್ತಿಜೀವನದಲ್ಲಿ, ಅವರು ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಸೇರಿದಂತೆ 200 ಕ್ಕೂ ಹೆಚ್ಚು ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ರಮ್ಯಾ ಕೃಷ್ಣ ಸೂಪರ್ ಹಿಟ್ ಸಿನಿಮಾಗಳು
ಬಾಹುಬಲಿ, ಪಡಯಪ್ಪ, ಸೂಪರ್ ಡಿಲಕ್ಸ್, ಪಂಚತಂಥಿರಮ್, ಅಮ್ಮನ್, ಮೇಜರ್ ಚಂದ್ರಕಾಂತ್ ಅಲ್ಲಾರಿ ಮುಗೋಡು, ಹೆಲೋ ಬ್ರದರ್, ಗಡಿ ಬಿಡಿ ಗಂಡ, ಮಾಂಗಲ್ಯಂ ತಂತು ನಾನೇನಾ, ಖಳ್ ನಾಯಕ್, ಕ್ರಿಮಿನಲ್ ರಮ್ಯಾ ಕೃಷ್ಣನ್ ಅಭಿನಯಿಸಿದ ಸೂಪರ್ ಹಿಟ್ ಸಿನಿಮಾಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

