ಕಾಜೋಲ್, ಅಜಯ್ ದೇವ್‌ಗನ್ ಬೇರೆ ಬೇರೆ ವಾಸಿಸುತ್ತಿದ್ದರಾ?
ಬಾಲಿವುಡ್‌ನ ಮೋಸ್ಟ್ ಲವಿಂಗ್ ಹಾಗೂ ಹ್ಯಾಪಿ ಕಪಲ್‌ಗಳು ಕಾಜೋಲ್ ಮತ್ತು ಅಜಯ್ ದೇವಗನ್. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಈಗ ಕಾಜೋಲ್ ಮತ್ತು ಅಜಯ್ ಸಲುವಾಗಿ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳುತ್ತೀವೆ. ಈ ದೊಡ್ಡ ನಿರ್ಧಾರಕ್ಕೆ ಕಾರಣವೇನು?
ಮಕ್ಕಳ ನಂತರ, ದಂಪತಿಗಳ ಜೀವನವು ಅವರ ಮಕ್ಕಳ ಲೈಫ್, ಯೋಗಕ್ಷೇಮ ಮತ್ತು ಸಂತೋಷಕ್ಕೆ ಸೀಮಿತವಾಗುತ್ತದೆ ಹಾಗೂ ಜೀವನದಲ್ಲಿ ಬದಲಾವಣೆ ಅನಿವಾರ್ಯವಾಗುತ್ತದೆ. ಇದು ಕೆಲವು ದೊಡ್ಡ ನಿರ್ಧಾರಗಳಿಗೆ ಕಾರಣವಾಗುತ್ತದೆ. ಇದಕ್ಕೆ ಸೆಲೆಬ್ರೆಟಿಗಳೂ ಹೊರತಾಗಿಲ್ಲ.
1999ರಲ್ಲಿ ಮದುವೆಯಾದ ಕಾಜೋಲ್ ಮತ್ತು ಅಜಯ್‌ರ ಬಿ-ಟೌನ್ ಹ್ಯಾಪಿ ಕಪಲ್. ಬಬ್ಲಿ ಕಾಜೋಲ್ ಮತ್ತು ಆಕೆಗೆ ವಿರುದ್ಧ ವ್ಯಕ್ತಿತ್ವವನ್ನು ಹೊಂದಿರುವ ಅಜಯ್ ಅನೇಕ ವರ್ಷಗಳಿಂದ ತಮ್ಮ ಸಂಬಂಧವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ.
ದಂಪತಿಗೆ ನೈಸಾ (ಮಗಳು) ಮತ್ತು ಯುಗ್ (ಮಗ) ಎಂಬ ಇಬ್ಬರು ಮಕ್ಕಳಿವೆ.ತಮ್ಮ ಮಕ್ಕಳ ಸಲುವಾಗಿ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದೆ ಈ ಜೋಡಿ.
ಮಗಳು ನೈಸಾ ಸಿಂಗಾಪುರದಲ್ಲಿ ಓದುತ್ತಿದ್ದಾಳೆ.
ಸಿಂಗಾಪುರದಲ್ಲಿ ಕಾಲೇಜುಗಳು ಮತ್ತೆ ಪ್ರಾರಂಭವಾಗುತ್ತಿರುವುದರಿಂದ, ಕಾಜೋಲ್ ತಮ್ಮ ಮಗಳೊಂದಿಗಿರಲು ಹೋಗಲಿದ್ದಾರೆ, ಏಕೆಂದರೆ ವಿದೇಶದಲ್ಲಿ ಇಂತಹ ಸಂದರ್ಭಗಳಲ್ಲಿ ತನ್ನ ಮಗಳು ಒಂಟಿಯಾಗಿರುವುದು ಕಾಜೋಲ್ ದಂಪತಿಗೆ ಇಷ್ಟವಿಲ್ಲ.
2018ರಲ್ಲಿ, ಅಜಯ್ ಮತ್ತು ಕಾಜೋಲ್ ಸಿಂಗಾಪುರದಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಅಜಯ್ ದೇವ್‌ಗನ್ ಮಗ ಯುಗ್ ಜೊತೆ ಇರಲಿದ್ದಾರೆ.
ತಮ್ಮ ಕೆರಿಯರ್ ಕಮಿಟ್ಮೆಂಟ್‌ಗಳನ್ನು ಪೂರ್ಣಗೊಳಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಹೋಮ್ ಪ್ರೊಡೆಕ್ಷನ್‌ಗಾಗಿ ಎರಡು ಸ್ಕ್ರಿಪ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಪೊಸ್ಟ್ ಪ್ರೊಡಕ್ಷನ್‌ಗಳ ಕೆಲಸ ಸಹ ಮಾಡುತ್ತಿದ್ದಾರೆ.
ಕಾಜೋಲ್ ಮತ್ತು ನೈಸಾ ತಾಯಿ-ಮಗಳ ಸಂಬಂಧದ ಬಗ್ಗೆ ಕೆಲವು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ನೈಸಾ ಈ ಮೊದಲು ತಾಯಿಯೊಂದಿಗಿನ ತಮ್ಮ ಇಕ್ವೇಷನ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾಳೆ. ತಾಯಿ ಜೊತೆ ಉತ್ತಮ ಬಾಂಡಿಂಗ್ ಮತ್ತು ಇಬ್ಬರೂ ಸೂಪರ್ ಚಿಲ್ಲಿಂಗ್ ವ್ಯಕ್ತಿತ್ವ ಹೊಂದಿದ್ದಾರೆ. ಹಾಗೆಯೇ ತಂದೆ ಕಲಿಸುವ ಜೀವನ ಪಾಠಗಳ ಬಗ್ಗೆಯೂ ಮಾತನಾಡಿದ್ದಾಳೆ.
ಇದೀಗ, ನೈಸಾಳ ಶಿಕ್ಷಣ ಕಾರಣ ಆದರ್ಶ ದಂಪತಿಗಳು ಬೇರೆಯಾಗುತ್ತಿದ್ದಾರೆ.