ಫ್ರೆಂಡ್ ಕೆನ್ನೆಗೆ ಹೊಡೆದ ಅಜಯ್ ದೇವಗನ್ ಪುತ್ರಿ!
ಬಾಲಿವುಡ್ ಸ್ಟಾರ್‌ಗಳಾದ ಕಾಜೋಲ್ (Kajol) ಮತ್ತು ಅಜಯ್ ದೇವಗನ್ (Ajay Devgn )ದಂಪತಿ ಪುತ್ರಿ ನ್ಯಾಸಾ (Nysa) ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯವಾಗಿರುವ ನ್ಯಾಸಾ ಇತ್ತೀಚೆಗೆ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಇದರಲ್ಲಿ ಅವರು ಬಿಳಿ ಬಣ್ಣದ ಫ್ರಾಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ನ್ಯಾಸಾಳ ಜೊತೆಯಲ್ಲಿ ಫ್ರೆಂಡ್ ಸಹ ಅವಳು ಹತ್ತಿರದಲ್ಲಿ ಕುಳಿತಿದ್ದಾಳೆ. ನ್ಯಾಸ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ತನ್ನ ಕೈಗಳನ್ನು ಮೂವ್ ಮಾಡುವಾಗ ಹತ್ತಿರದಲ್ಲಿಯೇ ಕುಳಿತಿದ್ದ ತನ್ನ ಸ್ನೇಹಿತೆಯ ಕೆನ್ನೆಗೆ ಜೋರಾಗಿ ಹೊಡೆದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.
ನ್ಯಾಸಾಳ ಕೈಯಿಂದ ಜೋರಾಗಿ ಹೊಡೆತ ತಿಂದ ಫ್ರೆಂಡ್ ಮುಖವನ್ನು ಮುಚ್ಚಿ ಅಳಲು ಆರಂಭಿಸಿದಳು. ಇದನ್ನು ನೋಡಿ, ಅವಳನ್ನು ಸಮಾಧಾನಪಡಿಸುವ ಬದಲು, ನ್ಯಾಸಾ ತಾನು ಮಾಡಿದ ಕೆಲಸಕ್ಕಾಗಿ ನಗಲು ಶುರು ಮಾಡಿದಳು.
ನ್ಯಾಸಾ ಶೇರ್ ಮಾಡಿರುವ ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಕಾಮೆಂಟ್ ಮಾಡುತ್ತಿದ್ದಾರೆ. 'ಇವಳು ಖಂಡಿತವಾಗಿ ತನ್ನ ತಾಯಿಯಂತೆ ' ಎಂದು ಒಬ್ಬ ವ್ಯಕ್ತಿ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.
'ನೋಡಿಕೊಂಡು ವೀಡಿಯೋ ಮಾಡು, ಪಾಪ ಆ ಹುಡುಗಿಯ ಕಣ್ಣಿಗೆ ಪೆಟ್ಟು ಮಾಡಿದ್ದಿಯಾ' ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ' ಹುಚ್ಚು ಹುಡುಗಿ, ಹಿಂದೆ ನೋಡು ' ಎಂದು ಕಾಮೆಂಟ್ ಮಾಡಿದ್ದಾರೆ .
ಅಜಯ್ ದೇವಗನ್ ಅವರ ಪ್ರೀತಿಯ ಮಗಳು (Loving Daughter) ನ್ಯಾಸಾ ದೇವಗನ್‌ಗೆ 18 ವರ್ಷ. ಏಪ್ರಿಲ್ 20, 2003 ರಂದು ಮುಂಬೈನಲ್ಲಿ (umbai) ಜನಿಸಿದ ನ್ಯಾಸಾ ತಂದೆಯ ಫೇವರೇಟ್. ನ್ಯಾಸಾಳ ಸೌಂದರ್ಯವನ್ನು ಆಕೆಯ ತಾಯಿ ಕಾಜೋಲ್‌ನೊಂದಿಗೆ ಅನೇಕ ಬಾರಿ ಹೋಲಿಸಲಾಗಿದೆ. ನ್ಯಾಸಾಳ ಮೈಬಣ್ಣದಿಂದಾಗಿ ಅನೇಕ ಬಾರಿ ಟ್ರೋಲ್ (Troll) ಮಾಡಲಾಗಿದೆ.
ನ್ಯಾಸಾ ಪ್ರಸ್ತುತ ಸಿಂಗಾಪುರದಲ್ಲಿ ಓದುತ್ತಿದ್ದಾಳೆ. ಓದಿನ ಜೊತೆ ಅವಳು ಉತ್ತಮ ಸ್ವೀಮ್ಮರ್ ಕೂಡ ಹೌದು. ನ್ಯಾಸಾ ತುಂಬಾ ಬುದ್ಧಿವಂತೆ. ಅವಳು ತುಂಬಾ ಯೋಚಿಸುತ್ತಾಳೆ ಮತ್ತು ವಿಷಯಗಳನ್ನು ವಿಶ್ಲೇಷಿಸುತ್ತಾಳೆ ಎಂದು ಅಜಯ್ ದೇವಗನ್ ಸಂದರ್ಶನವೊಂದರಲ್ಲಿ ಹೇಳಿದ್ದರು
.
ನ್ಯಾಸಾ ತನ್ನ ಡ್ರೆಸ್‌ಗಳ ಕಾರಣದಿಂದ ಆಗಾಗ್ಗೆ ಟ್ರೋಲ್ ಆಗುತ್ತಾಳೆ. ಈ ಬಗ್ಗೆ ಸಂದರ್ಶನವೊಂದರಲ್ಲಿ, ಆಕೆಯ ತಂದೆ ಅಜಯ್ ದೇವಗನ್ ಈ ಹಿಂದೆ ನ್ಯಾಸಾಳ ಮೇಲೆ ಈ ಎಲ್ಲ ವಿಷಯಗಳು ಸಾಕಷ್ಟು ಪರಿಣಾಮ ಬಿರುತ್ತಿದ್ದವು. ಆದರೆ ಈಗ ಅವುಗಳನ್ನು ನಿರ್ಲಕ್ಷಿಸಲು ಕಲಿತಿದ್ದಾಳೆ ಎಂದು ಹೇಳಿದ್ದರು.
ಅಜಯ್ ದೇವಗನ್ ತನ್ನ ಮಗಳ (Daughter) ಡ್ರೆಸ್ಸಿಂಗ್ ಸೆನ್ಸ್ (dressing sense) ಅನ್ನು ಶ್ಲಾಘಿಸಿದರು ಮತ್ತು ತನ್ನ ಮಗಳು ತನ್ನನ್ನು ತಾನು ರೂಪಿಸಿಕೊಳ್ಳುವ ರೀತಿ ಮತ್ತು ಅದನ್ನು ಸೊಗಸಾಗಿ ಸಾಗಿಸುವ ಬಗ್ಗೆ ಹೆಮ್ಮೆ ಪಡುತ್ತೇನೆ. ನ್ಯಾಸಾಳ ವ್ಯಕ್ತಿತ್ವ (Personality) ವಿಕಸನಗೊಂಡಿರುವುದನ್ನು ನೋಡಿ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಅಜಯ್ ವ್ಯಕ್ತಪಡಿಸಿದ್ದರು.
ನ್ಯಾಸಾಗೆ ತಾಯಿ (Mother) ಕಾಜೋಲ್ (Kajol) ಜೊತೆ ಉತ್ತಮ ಬಾಂಧವ್ಯವಿದೆ (bonding). ನ್ಯಾಸಾ ಪ್ರಕಾರ, ಅವಳು ಚಲನಚಿತ್ರಗಳಲ್ಲಿ ನಟಿಸಲು ಬಯಸುವುದಿಲ್ಲ. ಅವಳ ಕನಸು (Dream) ವಿಶ್ವವಿಖ್ಯಾತ ಶೆಫ್ (Chef) ಆಗುವುದಂತೆ. ನ್ಯಾಸಾ ಪ್ರಸ್ತುತ ಬೇಕಿಂಗ್ (Baking) ಪ್ರಯತ್ನಿಸುತ್ತಿದ್ದಾಳೆ ಮತ್ತು ಬೇಕಿಂಗ್ ಅನ್ನು ಇಷ್ಟಪಡುತ್ತಾಳೆ ಎಂದು ಸ್ವಲ್ಪ ಸಮಯದ ಹಿಂದೆ ಕಾಜೋಲ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಕಾಜೋಲ್ ತನ್ನ ಮಕ್ಕಳ (ಕಗ್ೇ) ಬಗ್ಗೆ ತುಂಬಾ ಪ್ರೊಟೆಕ್ಟೀವ್ (Protective). ' ಯಾರಾದರೂ ನನ್ನ ಮಕ್ಕಳ ಮೇಲೆ ಕಣ್ಣು ಹಾಕಲು ಪ್ರಯತ್ನಿಸಿದರೆ, ನಾನು ಅವರನ್ನು ತಿಂದು ಹಾಕುತ್ತೇನೆ. ನಿಮ್ಮ ಮಕ್ಕಳು ಜೀವನದ ಸವಾಲುಗಳನ್ನು ನಿಭಾಯಿಸುತ್ತಾರೆ ಎಂದು ನಿಮ್ಮ ಮಕ್ಕಳಲ್ಲಿ ಮತ್ತು ನಿಮ್ಮ ಪಾಲನೆಯ (parenting) ಮೇಲೆ ನೀವು ಭರವಸೆ ಇಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಇಂಟರ್‌ವ್ಯೂವ್‌ನಲ್ಲಿ ಕಾಜೋಲ್ ಹೇಳಿದ್ದರು.