- Home
- Entertainment
- Cine World
- War 2 Teaser: ಬಿಕಿನಿಯಲ್ಲಿ 2 ಸೆಕೆಂಡ್ ಕಾಣಿಸ್ಕೊಂಡು ಕೋಲಾಹಲ ಎಬ್ಬಿಸಿದ ಕಿಯಾರಾ ಅಡ್ವಾಣಿ; RGV ಕಾಮೆಂಟ್‌ಗೆ ಆಕ್ರೋಶ
War 2 Teaser: ಬಿಕಿನಿಯಲ್ಲಿ 2 ಸೆಕೆಂಡ್ ಕಾಣಿಸ್ಕೊಂಡು ಕೋಲಾಹಲ ಎಬ್ಬಿಸಿದ ಕಿಯಾರಾ ಅಡ್ವಾಣಿ; RGV ಕಾಮೆಂಟ್‌ಗೆ ಆಕ್ರೋಶ
ಎಲ್ಲರೂ ಕಾಯುತ್ತಿದ್ದ 'ವಾರ್ 2' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆಕ್ಷನ್‌ನಿಂದ ತುಂಬಿರುವ ಈ ಟೀಸರ್ ರಿತಿಕ್ ರೋಷನ್ ಮತ್ತು ಜೂನಿಯರ್ NTR ಮೇಲೆ ಕೇಂದ್ರೀಕೃತವಾಗಿದೆ. 1.34 ನಿಮಿಷಗಳ ಈ ಟೀಸರ್‌ನಲ್ಲಿ ಕಿಯಾರಾ ಆಡ್ವಾಣಿ ಕೂಡ ಕಾಣಿಸಿಕೊಂಡಿದ್ದಾರೆ.

ಅತ್ಯಂತ ನಿರೀಕ್ಷಿತ ಚಿತ್ರ 'ವಾರ್ 2' ರ ಟೀಸರ್ ಬಿಡುಗಡೆಯಾಗಿದೆ. ಭರ್ಜರಿ ಆಕ್ಷನ್‌ನಿಂದ ತುಂಬಿರುವ ಈ ಟೀಸರ್ ಸಂಪೂರ್ಣವಾಗಿ ರಿತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಮೇಲೆ ಕೇಂದ್ರೀಕೃತವಾಗಿದೆ. 1.34 ನಿಮಿಷಗಳ ಈ ಟೀಸರ್‌ನಲ್ಲಿ ಕಿಯಾರಾ ಅಡ್ವಾಣಿ ಕೂಡ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಕಿಯಾರಾ ಆಡ್ವಾಣಿ ಅವರನ್ನು ಎರಡು ದೃಶ್ಯಗಳಲ್ಲಿ ತೋರಿಸಲಾಗಿದೆ. ಒಂದೂವರೆ ನಿಮಿಷದ ಟೀಸರ್‌ನಲ್ಲಿ ಕಿಯಾರಾ ಆಡ್ವಾಣಿ ಕೇವಲ 2 ಸೆಕೆಂಡುಗಳ ಕಾಲ ಕಾಣಿಸಿಕೊಂಡಿದ್ದಾರೆ.
ಒಂದು ದೃಶ್ಯದಲ್ಲಿ ಅವರು ಬಿಕಿನಿಯಲ್ಲಿ ಪೋಸ್ ನೀಡುತ್ತಿದ್ದರೆ, ಇನ್ನೊಂದು ದೃಶ್ಯದಲ್ಲಿ ರಿತಿಕ್ ರೋಷನ್ ಜೊತೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಆಡ್ವಾಣಿ ರಿತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ರಿಲೀಸ್ ಆದ ವಾರ್ 2 ಚಿತ್ರದ ಟೀಸರ್‌ನಲ್ಲಿ ಕಿಯಾರಾ ಅವರ ಬಿಕಿನಿ ಸೀನ್ ಚರ್ಚೆಯಲ್ಲಿದೆ. ಆರ್‌ಜಿವಿ ಈ ಸೀನ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು ಅಸಭ್ಯ ಕಾಮೆಂಟ್ ಮಾಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು.
ಫಿಲ್ಮ್‌ಮೇಕರ್ ರಾಮ್ ಗೋಪಾಲ್ ವರ್ಮಾ ಅವರು ಕಿಯಾರಾ ಅಡ್ವಾಣಿ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ ಪೋಸ್ಟ್‌ಗಾಗಿ ನೆಟ್ಟಿಗರಿಂದ ಟ್ರೋಲ್ ಆಗಿದ್ದಾರೆ. "ಇದು ಅವರು ಸಾರ್ವಜನಿಕವಾಗಿ ಹೇಳುತ್ತಿರುವುದು, ಖಾಸಗಿಯಾಗಿ ಹೇಗಿರಬಹುದು ಎಂದು ಊಹಿಸಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಚಿಲ್ಲರೆ ಬುಡ್ಡ" ಎಂದು ಮತ್ತೊಬ್ಬರು ಬರೆದಿದ್ದಾರೆ. ಕಿಯಾರಾ ಅಭಿಮಾನಿಗಳಿಂದ ಟೀಕೆ ವ್ಯಕ್ತವಾದ ನಂತರ ಆರ್‌ಜಿವಿ ಪೋಸ್ಟ್ ಅಳಿಸಿದ್ದಾರೆ.
ಒಂದು ಕಡೆ ಅವರು ಬಿಕಿನಿಯಲ್ಲಿ ಪೋಸ್ ಕೊಡುತ್ತಿದ್ದರೆ, ಇನ್ನೊಂದು ಕಡೆ ರಿತಿಕ್ ರೋಷನ್ ಜೊತೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಕಿಯಾರಾ ಆಡ್ವಾಣಿ ರಿತಿಕ್ ರೋಷನ್ ಮತ್ತು ಜೂನಿಯರ್ NTR ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ರಿತಿಕ್ ಈ ಚಿತ್ರದ ನಾಯಕ, ಜೂನಿಯರ್ NTR ಖಳನಾಯಕ. ಕಿಯಾರಾ ಪಾತ್ರದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.
ವಾರ್ 2, 2019ರ ಬ್ಲಾಕ್‌ಬಸ್ಟರ್ ವಾರ್‌ನ ಎರಡನೇ ಭಾಗ ಆಗಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದ ಮೊದಲ ಭಾಗದಲ್ಲಿ ಹೃತಿಕ್ ರೋಷನ್, ಟೈಗರ್ ಶ್ರಾಫ್ ನಟಿಸಿದ್ದರು. ಅಯಾನ್ ಮುಖರ್ಜಿ ನಿರ್ದೇಶನದ ವಾರ್ 2ರಲ್ಲಿ ಹೃತಿಕ್, ಕಿಯಾರಾ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿದ್ದಾರೆ. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದಂದು ರಿಲೀಸ್ ಆದ ಟೀಸರ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಚಿತ್ರವು ಆಗಸ್ಟ್ 14, 2025 ರಂದು ಬಿಡುಗಡೆಯಾಗಲಿದೆ.