Asianet Suvarna News Asianet Suvarna News

ಏಲಿಯನ್ ಸಂಪರ್ಕ ಮಾಡಿದ್ದಕ್ಕೆ ಹೃತಿಕ್ ರೋಶನ್‌ಗೆ ಜೋರಾಗಿ ಹೊಡೆದ ರೇಖಾ!

ಸಿನಿಮಾ ನೋಡಿದವರಿಗೆ ನಟ ಹೃತಿಕ್ ಕಣ್ಣಲ್ಲಿ ನೀರು ಬಂದಿರುವುದು ಅದೆಷ್ಟು ಸಹಜವಾಗಿ ಎನ್ನುಸುತ್ತಿತ್ತು ಎಂದರೆ, ಸಿನಿಮಾವನ್ನು ತೆರೆಯಲ್ಲಿ ನೋಡಿದವರ ಕಣ್ಣಲ್ಲಿ ಕೂಡ ನೀರು ಜಿನುಗಿತ್ತು. ಹಿರಿಯ ನಟಿ ರೇಖಾ ಉದ್ದೇಶ ಅದೇ ಆಗಿದ್ದರೆ..

Bollywood actress Rekha slaps actor Hrithik Roshan in Bollywood movie koi mil gaya srb
Author
First Published Jun 20, 2024, 3:40 PM IST

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಹೃತಿಕ್ ರೋಶನ್ (Hrithik Roshan) ನಟನೆಯ 'ಕೋಯಿ ಮಿಲ್ ಗಯಾ' ಕೂಡ ಒಂದು. ಈ ಸಿನಿಮಾದಲ್ಲಿ ನಟ ಕೃತಿಕ್ ರೋಶನ್ ಮುಖ್ಯ ಭೂಮಿಕೆಯಲ್ಲಿದ್ದು, ರಾದು ಎನ್ನುವ ಹೆಸರಿನ ಬೇರೆ ಗ್ರಹದಿಂದ ಬಂದ ಏಲಯನ್‌ ಹಾಗೂ ವಿಭಿನ್ನ ಪಾತ್ರದಲ್ಲಿ ಹೃತಿಕ್ ರೋಶನ್ ಮಿಂಚಿದ್ದರು. ಇದೇ ಚಿತ್ರದಲ್ಲಿ ಹಿರಿಯ ನಟಿ ರೇಖಾ (Rekha) ಹೃತಿಕ್ ರೋಶನ್ ತಾಯಿಯಾಗಿ ಅಮೋಘ ಅಭಿನಯ ನೀಡಿದ್ದು, ಅದನ್ನು ಯಾರೂ ಮರೆಯಲು ಅಸಾಧ್ಯ. ಈ ಚಿತ್ರದಲ್ಲಿ ಬರುವ ಹಲವು ನೆನಪಿನಲ್ಲಿ ಉಳಿಯುವ ದೃಶ್ಯಗಳಲ್ಲಿ ನಟಿ ರೇಖಾ ನಟ ಹೃತಿಕ್ ರೋಶನ್‌ ಕಪಾಳಕ್ಕೆ ಹೊಡೆಯುವ ದೃಶ್ಯವೂ ಒಂದು. 

ಸಿನಿಮಾದ ಒಂದು ದೃಶ್ಯದಲ್ಲಿ ನಟ ಹೃತಿಕ್ ವಿಶಿಷ್ಠ ಕಂಪ್ಯೂಟರ್ ಒಂದನ್ನು ಮುಚ್ಚಿ ಆನ್ ಮಾಡಿರುತ್ತಾರೆ. ಅದು ಬೇರೆ ಗ್ರಹಕ್ಕೆ ಸಂಪರ್ಕ ಕಲ್ಪಿಸುವ ಸೈಂಟಿಫಿಕ್ ಕಂಪ್ಯೂಟರ್ ಆಗಿರುತ್ತದೆ. ಅದನ್ನು ಗೊತ್ತಿಲ್ಲದೇ ಆನ್ ಮಾಡಿ ಇಲ್ಲದ ಸಮಸ್ಯೆಯನ್ನು ತಂದುಕೊಂಡಿರುತ್ತಾರೆ ಹೃತಿಕ್ ರೋಶನ್. ಈ ವಿಷಯ ತಿಳಿದ ರೇಖಾ, ತನ್ನ ಮಗನಿಗೆ ಕೋಪದಿಂದ ಜೋರಾಗಿ ಹೊಡೆಯಬೇಕು. ಆ ದೃಶ್ಯ ಚೆನ್ನಾಗಿ, ನ್ಯಾಚುರಲ್‌ ಆಗಿ ಬರಲಿ ಎಂದು ನಟಿ ರೇಖಾ ನಟ ಹೃತಿಕ್ ರೋಶನ್‌ಗೆ ಜೋರಾಗಿ ಕಪಾಳ ಮೋಕ್ಷ ಮಾಡಿದ್ದರಂತೆ. 

ಹೆಂಗ್ ಕೊಡ್ಬೇಕು ಹಂಗೆ ಕೊಟ್ಟು, ಹೊಡ್ದು ಎತ್ಕೊಂಡು ಬಂದ್ವಲ್ಲಾ; ಕೆಜಿಎಫ್ ಸ್ಟಾರ್ ನಟ ಯಶ್!

ಆಗ ನಟ ಹೃತಿಕ್ ರೋಶನ್‌ ಅವರಿಗೆ ನಿಜವಾಗಿಯೂ ರೇಖಾ ಹೊಡೆತ ನೋವನ್ನುಂಟುಮಾಡಿ ಕಣ್ಣೀರು ತರಿಸಿತ್ತು ಎನ್ನಲಾಗಿದೆ. ಬೇಕಂತಲೇ ರೇಖಾ ಅವರು ಹೃತಿಕ್‌ಗೆ ಆ ಮಟ್ಟಿಗೆ ಜೋರಾಗಿ ಹೊಡೆದಿದ್ದಾರೆ ಎಂದು ಅಂದು ಈ ಸುದ್ದಿ ಬಾಲಿವುಡ್‌ ಗಲ್ಲಿಗಲ್ಲಿಗಳಲ್ಲಿ ಓಡಾಡಿತ್ತು. ಆದರೆ, ಅದಕ್ಕೆ ರೇಖಾ 'ದೃಶ್ಯ ನೈಜವಾಗಿ ಬರಲಿ ಎಂದು ಜೋರಾಗಿ ನಾನು ಹೊಡೆದೆ, ಬೇರೆ ಯಾವುದೇ ಉದ್ದೇಶ ಇರಲಿಲ್ಲ' ಎಂದು ನಟಿ ರೇಖಾ ಅಂದೇ ಸ್ಪಷ್ಟನೆ ಕೊಟ್ಟಿದ್ದರು. 

ಬದಲಾವಣೆ ಜಗದ ನಿಯಮ ಹೌದು, ಆದ್ರೆ ಬೆಕ್ಕು ಹುಲಿ ಆಗುವುದಿಲ್ಲ; ಪ್ರಿಯಾಂಕಾ ಚೋಪ್ರಾ ಬಾಂಬ್!

ಆದರೆ, ಸಿನಿಮಾ ನೋಡಿದವರಿಗೆ ನಟ ಹೃತಿಕ್ ಕಣ್ಣಲ್ಲಿ ನೀರು ಬಂದಿರುವುದು ಅದೆಷ್ಟು ಸಹಜವಾಗಿ ಎನ್ನುಸುತ್ತಿತ್ತು ಎಂದರೆ, ಸಿನಿಮಾವನ್ನು ತೆರೆಯಲ್ಲಿ ನೋಡಿದವರ ಕಣ್ಣಲ್ಲಿ ಕೂಡ ನೀರು ಜಿನುಗಿತ್ತು. ಹಿರಿಯ ನಟಿ ರೇಖಾ ಉದ್ದೇಶ ಅದೇ ಆಗಿದ್ದರೆ ಸತ್ಯವಾಗಿಯೂ ಆ ದೃಶ್ಯ ನೈಜವಾಗಿಯೇ ಬಂದಿದೆ ಎಂದು ಎಲ್ಲರೂ ಮಾತನಾಡಿಕೊಂಡರು. 

ಕಿರುತೆರೆ ನಟಿಯರು ಕೈಕೈ ಹಿಡಿದು ಕುಣಿದರು, ಕೇಕೆ ಹಾಕಿ ನಕ್ಕರು; ಯಾಕೆ ಹೀಗೆ ಗುರೂ!

ಆದರೆ ನಟ ಹೃತಿಕ್ ರೋಶನ್‌ ಅವರಿಗೆ ಮಾತ್ರ ರೇಖಾ ಮಾಡಿದ್ದ ಕಪಾಳಮೋಕ್ಷವನ್ನೂ ಎಂದೂ ಮರೆಯಲು ಸಾಧ್ಯವಿಲ್ಲವಂತೆ. ಆ ದೃಶ್ಯ ಎಷ್ಟು ನೈಜವಾಗಿ ಬಮದಿದೆಯೋ ಅಷ್ಟೇ ನೈಜವಾಗಿ ನನಗೂ ನೋವು ಉಂಟಾಗಿತ್ತು ಎಂದಿದ್ದಾರೆ ನಟ ಹೃತಿಕ್ ರೋಶನ್.  ಅಂದಹಾಗೆ, ನಟಿ ರೇಖಾ ಇತ್ತೀಚೆಗೆ ಅಷ್ಟಾಗಿ ಸಿನಿಮಾಗಳ ನಟನೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ನಟ ಹೃತಿಕ್ ರೋಶನ್‌ ಕೂಡ ಅಷ್ಟೇ, ಹಿಟ್ ಸಿನಿಮಾ ಕೊಟ್ಟು ಅದೆಷ್ಟೋ ಕಾಲವಾಯ್ತು!

ವೀರಪ್ಪನ್ ಅಣ್ಣಾವ್ರನ್ನು ಬಿಡುಗಡೆ ಮಾಡಿದಾಗ ಕೊಟ್ಟ ಗಿಫ್ಟ್ ಏನು? ಸೇತುಕುಳಿ ಅದನ್ನ ಕೊಟ್ಟಿದ್ನ?

Latest Videos
Follow Us:
Download App:
  • android
  • ios