ಬಾಲಿವುಡ್‌ ನಟಿ ರೇಖಾ ತೊಂದರೆ ಕೊಡುವವರಿಗೆ ತೊಂದರೆ ಕೊಡ್ತಾರೆ ಎಂದು ನಟ ಹೃತಿಕ್‌ ರೋಶನ್‌ ತಂದೆ ರಾಕೇಶ್‌ ರೋಶನ್‌ ಹೇಳಿದ್ದಾರೆ. 

ಎಪ್ಪತ್ತರ ಹರೆಯದ ಖ್ಯಾತ ಬಾಲಿವುಡ್‌ ನಟಿ ರೇಖಾ ಇನ್ನೂ ಕೂಡ ಸಿಂಗಲ್‌ ಆಗಿದ್ದಾರೆ. ವಿವಾಹಿತ ಪುರುಷನ ಜೊತೆ ಸಂಬಂಧ ಹೊಂದಿರೋ ಬಗ್ಗೆ ನನ್ನ ಬಳಿ ಕೇಳಿ ಎಂದು ಹೇಳಿಕೊಂಡು ತಮ್ಮನ್ನು ತಾವೇ ಹೊಗಳಿಕೊಳ್ಳುವ ಈ ನಟಿ ಸರಿಯಾಗಿ ಕೆಲಸ ಮಾಡಲ್ಲ, ತೊಂದರೆ ಕೊಡ್ತಾರೆ ಅಂತ ದೂರು ಇತ್ತಂತೆ. ನಿರ್ದೇಶಕ ರಾಕೇಶ್‌ ರೋಶನ್‌ ಅವರು ಸಿನಿಮಾ ಮಾಡುವಾಗ ರೇಖಾರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಡಿ ಎಂದು ಸಾಕಷ್ಟು ಜನರು ಹೇಳಿದ್ದರು. ಆದರೆ ರಾಕೇಶ್‌ ಆ ಮಾತನ್ನು ತಳ್ಳಿ ಹಾಕಿದ್ದರು. 

ರಾಕೇಶ್‌ ರೋಶನ್‌ ಏನಂದ್ರು? 
“ರೇಖಾ ಅವರನ್ನು ನಿಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಬೇಡಿ, ಅವರು ಸಮಯಕ್ಕೆ ಸರಿಯಾಗಿ ಬರೋದಿಲ್ಲ ಎಂದು ನನಗೆ ಸಾಕಷ್ಟು ಜನರು ಎಚ್ಚರಿಕೆ ಕೊಟ್ಟಿದ್ದರು. ರೇಖಾಗೆ ಇರುವ ಗುಣಗಳನ್ನು ಕೆಲವೇ ಕೆಲವು ಹೀರೋಯಿನ್‌ಗಳು ಹೊಂದಿರುತ್ತಾರೆ. ಅವರು ಎಲ್ಲ ಸಿನಿಮಾದಲ್ಲಿಯೂ ಕೂಡ ಡಿಫರೆಂಟ್‌ ಆಗಿರುತ್ತಾರೆ. ನಟನಾಗಿ ʼಖೂಬ್‌ಸೂರತ್‌ʼ, ʼಆಕ್ರಮಣ್ʼ‌, ʼಔರತ್ʼ‌ ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ” ಎಂದು ರಾಕೇಶ್‌ ರೋಶನ್‌ ಹೇಳಿದ್ದಾರೆ. 

ಇದ್ದಕ್ಕಿದ್ದಂತೆ ಚಿತ್ರರಂಗದಿಂದಲೇ ಮರೆಯಾದ ಈ ಸ್ಟಾರ್ ನಟಿಯರು ಈವಾಗೇನು ಮಾಡ್ತಿದ್ದಾರೆ ?

ರೇಖಾ ತೊಂದರೆ ಕೊಡ್ತಾಳೆ
“ರೇಖಾ ಯಾವಾಗಲೂ ಅನ್‌ಪ್ರೊಫೆಶನಲ್‌ ಆಗಿ ವರ್ತಿಸಲೇ ಇಲ್ಲ. ರೇಖಾ ಜೊತೆ ನಾನು ಸಾಕಷ್ಟು ವಿಷಯಗಳನ್ನು ಮಾತನಾಡುತ್ತಿದ್ದೆ. ನಿರ್ದೇಶಕನಾಗಿದ್ದಾಗ ನಾನು ಅವಳಿಗೆ ಇದು ನನ್ನ ಎರಡನೇ ಸಿನಿಮಾ. ತುಂಬ ಕಷ್ಟಕರವಾದ ವಿಷಯವಿದು. ಇದು ಮಹಿಳಾ ಪ್ರಧಾನ ಸಿನಿಮಾ. ಈ ಸಿನಿಮಾ ಮಾಡಿ ನಾನು ರಿಸ್ಕ್‌ ತಗೊಳ್ತಿದ್ದೇನೆ. ಈ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಹೆಂಡತಿ ಗಂಡನನ್ನು ಕೊಲ್ಲುತ್ತಾಳೆ. ನನಗೆ ನೀನು ಯಾವುದೇ ತೊಂದರೆ ಕೊಡೋದಿಲ್ಲ ಅಲ್ವಾ ಅಂತ ಕೇಳಿದೆ. ಆಗ ಅವಳು ಏನ್‌ ಮಾತಾಡ್ತಿದ್ದೀಯಾ? ನಾನು ಯಾವಾಗಲಾದರೂ ಆ ರೀತಿ ಮಾಡಿದ್ದೀನಾ? ನನಗೆ ಯಾರು ಸಂಭಾವನೆ ಕೊಡೋದಿಲ್ಲವೋ, ಕಮಿಟ್‌ಮೆಂಟ್‌ ಕೊಡೋದಿಲ್ಲವೋ ಅವರಿಗೆ ನಾನು ತೊಂದರೆ ಕೊಡ್ತೀನಿ” ಎಂದು ರಾಕೇಶ್‌ ರೋಶನ್‌ ಹೇಳಿದ್ದಾರೆ.

ಅಂದು ತೆಗೆದುಕೊಂಡ ತಪ್ಪು ನಿರ್ಧಾರಗಳು ಅನುಷ್ಕಾ ಶರ್ಮಾಗೆ ಇಂದಿಗೂ ಕಾಡುತ್ತಿವೆಯಾ?

ನಿರ್ದೇಶಕ ರಂಜಿತ್‌ ಈ ಬಗ್ಗೆ ಮಾತನಾಡಿದ್ದು, “ರೇಖಾ ಎಲ್ಲ ನಿರ್ಮಾಪಕರನ್ನು ಹೊರಗಡೆ ಕಾಯುವ ಹಾಗೆ ಮಾಡುತ್ತಿದ್ದಳು, ನಾನು ಕೂಡ ಅವಳ ಜೊತೆ ಸಿನಿಮಾ ಮಾಡೋದು ಕಷ್ಟ ಆಗಿತ್ತು. ಹೀಗಾಗಿ ನನ್ನ ಹಣ ವಾಪಾಸ್‌ ಕೊಡು ಅಂತ ಕೇಳಿದ್ದೆ. ಈ ರೀತಿ ಯಾಕೆ ಮಾಡ್ತೀಯಾ ಅಂತ ಕೇಳಿದಾಗಲೂ ಅವಳು ಎಲ್ರೂ ಕಾಯಲಿಬಿಡಿ ಎಂದು ಹೇಳಿದ್ದರು” ಎಂದಿದ್ದಾರೆ.