MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview

ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview

( ಸಂದರ್ಶನ-ಜೋಗಿ )Rakshit Shetty: ರಕ್ಷಿತ್ ಶೆಟ್ಟರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ ಅವರು ಕೆಲಸ ಮಾಡುವ ಶೈಲಿ ಗೊತ್ತು. ಯಾವುದನ್ನೂ ಉಸಿರುಗಟ್ಟಿ ಮಾಡಿ ಮುಗಿಸಬೇಕು, ಹಿಂದಿನ ಸಿನಿಮಾದ ಗೆಲುವಿನ ಮೇಲೆ ಮುಂದಿನ ಸಿನಿಮಾ ಕಟ್ಟಬೇಕು ಅನ್ನುವ ಉದ್ದೇಶ ಇಲ್ಲ. 

2 Min read
Author : Kannadaprabha News
Published : Feb 16 2026, 12:58 PM IST
Share this Photo Gallery
  • FB
  • TW
  • Linkdin
  • Whatsapp
18
ಸಿನಿಮಾ ಮಾಡುವ ಆತುರ ರಕ್ಷಿತ್‌ಗಿಲ್ಲ
Image Credit : instagram

ಸಿನಿಮಾ ಮಾಡುವ ಆತುರ ರಕ್ಷಿತ್‌ಗಿಲ್ಲ

ರಕ್ಷಿತ್, ಯಾರ ಫೋನಿಗೂ ಸಿಗುತ್ತಿರಲಿಲ್ಲ. ನಾಲ್ಕೈದು ವರ್ಷಗಳಿಂದ ಸದ್ದಿಲ್ಲದೇ ಚಿತ್ರಕತೆಯಲ್ಲಿ ತೊಡಗಿದ್ದರು. ಅವರು ಅಮೆರಿಕಾದಲ್ಲಿದ್ದಾರೆ, ಉಡುಪಿಯಲ್ಲಿದ್ದಾರೆ, ದೇಶ ಸುತ್ತುತ್ತಿದ್ದಾರೆ, ಚಿತ್ರಕತೆ ಬರೆಯುತ್ತಿದ್ದಾರೆ ಮುಂತಾದ ಉಳಿದವರು ಕಂಡಂತೆ ಆಡುತ್ತಿದ್ದ ಮಾತುಗಳಲ್ಲಷ್ಟೇ ರಕ್ಷಿತ್ ಶೆಟ್ಟರ ಜಾಡು ತಿಳಿಯುತ್ತಿತ್ತು.

ಅವರು ಇದ್ದದ್ದೇ ಹಾಗೆ, ಅರ್ಧ ಅಂತರಂಗ, ಅರ್ಧ ಬಹಿರಂಗ. ಮುಂದೇನು ಅಂತ ಗೊತ್ತಿಲ್ಲದವರಂತೆ ಕೆಲಸ ಮಾಡುತ್ತಿದ್ದ ರಕ್ಷಿತ್, ನಾಳೆಗಳನ್ನು ಪ್ಲಾನ್ ಮಾಡುತ್ತಿರಲಿಲ್ಲ. ಇವತ್ತಿನ ಜನಪ್ರಿಯತೆಯ ಮೇಲೆ ನಾಳೆಗಳನ್ನು ಕಟ್ಟುತ್ತಿರಲಿಲ್ಲ. ಮುಗಿಬಿದ್ದು ಸಿನಿಮಾ ಮಾಡುವ ಆತುರ ತೋರಿದವರೂ ಅಲ್ಲ.

28
ಫೋನ್‌ ಸ್ವಿಚ್‌ ಆನ್‌ ಆಯ್ತು
Image Credit : instagram

ಫೋನ್‌ ಸ್ವಿಚ್‌ ಆನ್‌ ಆಯ್ತು

ಚಿತ್ರರಂಗಕ್ಕೆ ಅಪರೂಪವಾದ ಅಪೂರ್ವ ಸಂಯಮ ಮತ್ತು ನಿರಾಳ‍ದಲ್ಲಿ ಅವರು ಕೆಲಸ ಮಾಡುವವರು ಅಂತ ಅವರ ಸಿನಿಮಾಗಳ ಅಭಿಮಾನಿಗಳಿಗೂ ಗೊತ್ತಿದೆ. ಅವರೆಲ್ಲರೂ ರಿಚರ್ಡ್ ಆ್ಯಂಟನಿಗೆ ಕಾಯುತ್ತಿರುತ್ತಾರೆ. ಆ ಸಿನಿಮಾ ಯಾವಾಗ ಅಂತ ಕೇಳಲು ನಾವೆಲ್ಲ ತಿಂಗಳಿಗೆ ಒಂದಾದರೂ ಫೋನು ಮಾಡುತ್ತಿದ್ದರೆ, ಅವರ ಫೋನ್ ಸ್ವಿಚಾಫ್ ಆಗಿರುತ್ತಿತ್ತು. ಇವತ್ತು ಅವರ ಫೋನ್ ಸದ್ದುಮಾಡಿತು.

‘ಸದ್ಯಕ್ಕೆ ಉಡುಪಿಯಲ್ಲಿದ್ದೇನೆ’ ಅಂದರು ರಕ್ಷಿತ್ ಶೆಟ್ಟಿ. ಅವರ ಧ್ವನಿಯಲ್ಲಿ ನಿರಾಳತೆಯೂ ತೃಪ್ತಿಯೂ ಇದ್ದಂತಿತ್ತು. ಹಿಡಿದದ್ದನ್ನು ಸಾಧಿಸಿದ ಧನ್ಯತೆ ಅದು. ಅವರ ಮಾತಿನಲ್ಲಿಯೂ ಆ ಖುಷಿ ಮತ್ತು ಅಕ್ಕರೆ ಕಾಣಿಸಿತು.

Related Articles

Related image1
ಕೆರಿಯರ್‌ನ ಆರಂಭದಲ್ಲಿ ನಿರ್ಮಾಪಕರು ಸಿಗದೇ ಒದ್ದಾಟ.. ರಕ್ಷಿತ್‌ ಶೆಟ್ಟಿ ಬಳಿ ನಿರ್ದೇಶಕ ಹೇಮಂತ್‌ ರಾವ್‌ ಹೀಗಾ ಹೇಳೋದು!
Related image2
Now Playing
Vishnu Priya Kannada Movie | ವಿಷ್ಣು ಪ್ರಿಯಾ ಚಿತ್ರದ ಬಗ್ಗೆ ರಕ್ಷಿತ್‌ ಶೆಟ್ಟಿ, ಯಶ್‌ ಏನಂದ್ರು? Shreyas Manju
38
ಐದು ಸಿನಿಮಾ ಕಥೆ ರೆಡಿ ಇದೆ
Image Credit : instagram

ಐದು ಸಿನಿಮಾ ಕಥೆ ರೆಡಿ ಇದೆ

‘ಐದು ಸಿನಿಮಾಗಳ ಸ್ಕ್ರಿಪ್ಟಿನ ಮೇಲೆ ಕೆಲಸ ಮಾಡಿದ್ದೇನೆ. ಎಲ್ಲವೂ ನಾನು ಅಂದುಕೊಂಡಂತೆ ಬಂದಿದೆ. ಅವನ್ನು ಶೂಟ್ ಮಾಡುವುದಷ್ಟೇ ಬಾಕಿ. ಮಾರ್ಚ್ ಕೊನೆಯ ಹೊತ್ತಿಗೆ ಪ್ರೀ-ಪ್ರೊಡಕ್ಷನ್ ಕೆಲಸ ಶುರುಮಾಡುತ್ತೇನೆ. ಅದು ಮುಗಿಯುತ್ತಿದ್ದಂತೆ ಶೂಟಿಂಗ್ ಶುರುವಾಗುತ್ತದೆ. ಮೊದಲು ‘ರಿಚರ್ಡ್ ಆ್ಯಂಟನಿ’, ಅದಾದ ನಂತರ ‘ಪುಣ್ಯಕೋಟಿ’, ಆಮೇಲೆ ಮೂರು ಸಿನಿಮಾಗಳು. ಬೆನ್ನಿಂದ ಬೆನ್ನಿಗೆ ಐದು ಸಿನಿಮಾಗಳು ಬರುತ್ತಾ ಹೋಗುತ್ತವೆ. ತಂಡ ಸಿದ್ಧವಾಗಿದೆ, ಚಿತ್ರಕತೆಯೂ ಸಿದ್ಧವಾಗಿದೆ’ ಅಂತ ತನ್ನ ಪ್ಲಾನ್ ತೆರೆದಿಟ್ಟರು ರಕ್ಷಿತ್.

48
ರಿಚರ್ಡ್ ಆ್ಯಂಟನಿ ಮಾಡ್ತಾರೆ
Image Credit : instagram

ರಿಚರ್ಡ್ ಆ್ಯಂಟನಿ ಮಾಡ್ತಾರೆ

ಅವರ ಪ್ರಕಾರ ಪುಣ್ಯಕೋಟಿಗೆ ಸಿಕ್ಕಾಪಟ್ಟೆ ವಿಎಫ್ಎಕ್ಸ್ ಕೆಲಸಗಳಿವೆ. ಅವು ಸಿದ್ಧವಾದ ನಂತರವೇ ಶೂಟಿಂಗಿಗೆ ಹೋಗಲು ಸಾಧ್ಯ. ರಿಚರ್ಡ್ ಆ್ಯಂಟನಿ ಶುರುವಾಗುವ ಮೊದಲೇ ಪುಣ್ಯಕೋಟಿಯ ತಾಂತ್ರಿಕ ತಂಡ ಕೆಲಸ ಆರಂಭಿಸುತ್ತದೆ. ರಿಚರ್ಡ್ ಆ್ಯಂಟನಿಗೂ ಸಾಕಷ್ಟು ವಿಎಫ್ಎಕ್ಸ್ ಕೆಲಸಗಳು ನಡೆಯಬೇಕಿದೆ. ಆದರೆ ಶೂಟಿಂಗಿಗೆ ಹೋಗುವುದಕ್ಕೆ ಅಡ್ಡಿಯಿಲ್ಲ. ಹೀಗಾಗಿ ತಂಡವನ್ನು ಸಿದ್ಧಮಾಡಿ ಅವರಿಗೆ ಕೆಲಸ ವಹಿಸಿ, ತಾನು ರಿಚರ್ಡ್ ಆ್ಯಂಟನಿ ಚಿತ್ರದಲ್ಲಿ ತೊಡಗಿಕೊಳ್ಳುವುದು ರಕ್ಷಿತ್ ಶೆಟ್ಟರ ಸದ್ಯದ ಪ್ಲಾನು. ರಿಚರ್ಡ್ ಆ್ಯಂಟನಿ ಮುಗಿಯುತ್ತಿದ್ದಂತೆ ಪುಣ್ಯಕೋಟಿಯ ಫೌಂಡೇಶನ್ ಸಿದ್ಧವಾಗಿರುತ್ತದೆ. ಅದರಲ್ಲಿ ತೊಡಗಿಸಿಕೊಳ್ಳುತ್ತಾರೆ.

58
ಮೂರು ಸಿನಿಮಾ ನಿರ್ಮಾಣ
Image Credit : instagram

ಮೂರು ಸಿನಿಮಾ ನಿರ್ಮಾಣ

‘ಪುಣ್ಯಕೋಟಿ ಮತ್ತು ನಂತರ ಬರುವ ಮೂರು ಸಿನಿಮಾಗಳನ್ನು ನಾನೇ ನಿರ್ಮಾಣ ಮಾಡುವುದು ಅಂತ ನಿರ್ಧರಿಸಿದ್ದೇನೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದೇನೆ. ಎಲ್ಲರೂ ನನ್ನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ ಅನ್ನುವುದು ನನಗೂ ಗೊತ್ತಿದೆ. ಆದರೆ ನಾನು ಕೆಲಸ ಮಾಡುವ ರೀತಿಯೇ ಹಾಗೆ. ನನಗೆ ನನ್ನದೇ ಆದ ಸಾವಧಾನ ಇದೆ. ಅದನ್ನು ಬಿಡುವುದು ನನಗೆ ಸಾಧ್ಯವೇ ಇಲ್ಲ’ ಅಂತ ರಕ್ಷಿತ್ ಶೆಟ್ಟಿ ಸಿನಿಮಾ ನಿಧಾನವಾಗಿದ್ದು ಯಾಕೆ ಅನ್ನುವುದನ್ನು ಹೇಳುತ್ತಾ ಹೋದರು.

68
 ಎಲ್ಲವೂ ಒಮ್ಮೆಗೇ ಆಗಬೇಕು ಅನ್ನುವ ಆಸೆ ಇಲ್ಲ.
Image Credit : instagram

ಎಲ್ಲವೂ ಒಮ್ಮೆಗೇ ಆಗಬೇಕು ಅನ್ನುವ ಆಸೆ ಇಲ್ಲ.

‘ಬದುಕಿನ ಒಂದು ಮಜಲಿನಿಂದ ಇನ್ನೊಂದಕ್ಕೆ ಹೊರಳಿಕೊಳ್ಳುವ ಸಮಯದಲ್ಲಿ, ಬದಲಾವಣೆಯ ಹೊತ್ತಲ್ಲಿ ನಾನು ನನಗೆ ಬೇಕಾದಷ್ಟು ಸಮಯ ತೆಗೆದುಕೊಂಡೇ ಕೆಲಸ ಮಾಡುತ್ತೇನೆ. ನಾನು ತಕ್ಷಣ ಸಿನಿಮಾ ಮಾಡಿ ತಕ್ಷಣ ಹಣ ಮಾಡುವುದಕ್ಕೆ ಬಂದವನಲ್ಲ. ದುಡ್ಡು ಬೇಕು, ಅದು ನನಗೂ ಗೊತ್ತಿದೆ. ಆದರೆ ಎರಡು ವರ್ಷ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾ ಇದ್ದು, ನಂತರ ಎರಡು ವರ್ಷದ್ದನ್ನು ದುಡಿಯುವುದು ಸಾಧ್ಯವಾದರೆ ಅದೇ ನನಗೆ ಇಷ್ಟ. ಎಲ್ಲವೂ ಒಮ್ಮೆಗೇ ಆಗಬೇಕು ಅನ್ನುವ ಆಸೆ ನನಗಿಲ್ಲ.

78
ನಾನಿರುವುದೇ ಹಾಗೆ
Image Credit : instagram

ನಾನಿರುವುದೇ ಹಾಗೆ

ಇದೆಲ್ಲಾ ಸಿನಿಮಾರಂಗಕ್ಕೆ ಬೇರೆ ಥರ ಅನ್ನಿಸಬಹುದು. ಹೀಗೂ ಇರುತ್ತಾರಾ ಅಂತ ಆಶ್ಚರ್ಯ ಆಗಬಹುದು. ಆದರೆ ನಾನಿರುವುದೇ ಹಾಗೆ, ಬಾಲ್ಯದಿಂದಲೂ ಹೀಗೆಯೇ ಕೆಲಸ ಮಾಡಿಕೊಂಡು ಬಂದವನು. ಬೇರೆ ಥರ ಇರಲಿಕ್ಕೆ ನನ್ನಿಂದ ಸಾಧ್ಯವಿಲ್ಲ. ನಾನು ಬದಲಾಗಲು ಹೊರಟರೆ ನನ್ನತನ ಕಳೆದುಕೊಳ್ಳುತ್ತೇನೆ’.

88
ರಿಚರ್ಡ್ ಆ್ಯಂಟನಿಯ ಪ್ರಯಾಣ ಶುರು
Image Credit : Asianet News

ರಿಚರ್ಡ್ ಆ್ಯಂಟನಿಯ ಪ್ರಯಾಣ ಶುರು

‘ಮಿಡ್‌ಲೈಫ್‌ಗೆ ಬಂದಾಗ ಒಂದು ಬದಲಾವಣೆ ಬೇಕಾಗುತ್ತದೆ. ಆ ಬದಲಾವಣೆ ಸಾಧ್ಯವಾಗಬೇಕಿದ್ದರೆ ಜೀವನದ ಒಂದು ಚಕ್ರ ಮುಗಿಯಬೇಕು. ಅದನ್ನು ಮುಗಿಸಿ ಮತ್ತೊಂದಕ್ಕೆ ಕಾಲಿಡುವವನು ನಾನು. ಅದಕ್ಕೆ ಅದರದ್ದೇ ಆದ ಅವಧಿ, ಸಾವಧಾನ ಎಲ್ಲವೂ ಬೇಕು. ನಾನು ಅದನ್ನೆಲ್ಲ ಇಷ್ಟಪಡುತ್ತಲೇ ಮಾಡುತ್ತೇನೆ’ ಅಂತ ಹೇಳುತ್ತಿದ್ದ ರಕ್ಷಿತ್ ಶೆಟ್ಟರ ಮಾತಲ್ಲಿ ತಾನು ಅಂದುಕೊಂಡಿದ್ದನ್ನು ಅಂದುಕೊಂಡ ರೀತಿಯಲ್ಲೇ ಮಾಡಿ ಮುಗಿಸಿದ ಸಂತೋಷ ಇತ್ತು. ರಿಚರ್ಡ್ ಆ್ಯಂಟನಿಯ ಪ್ರಯಾಣ ಶುರುವಾಗಿದೆ ಮತ್ತು ಆತನ ಜತೆ ಯಾರಿದ್ದಾರೆ ಅನ್ನುವುದು ಇಷ್ಟರಲ್ಲೇ ಬಯಲಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಮನರಂಜನಾ ಸುದ್ದಿ
ರಕ್ಷಿತ್ ಶೆಟ್ಟಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
Darshan Thoogudeepa: ಜೈಲಿನ ಸಲಾಕೆಗಳ ಹಿಂದೆ 'ದರ್ಶನ್' ಬರ್ತ್‌ಡೇ: ಗೆಳೆಯ ದರ್ಶನ್ ನೆನೆದು ನಟಿ ರಕ್ಷಿತಾ ಭಾವುಕ!
Recommended image2
ಮಹಾಮಾರಿ ಕಾಯಿಲೆ ಬಂತು, ಆರು ತಿಂಗಳಿಗೆ ಮದುವೆ ಮುರಿತು: ಗೂಳಿ ಸಿನಿಮಾ ನಟಿ ಮಮತಾ ಹೆಗಲೇರಿದ ಶನಿ! ಪಾಪ..!
Recommended image3
ಹಾಸನ ನಿವೇಶನ ಒತ್ತುವರಿ ಪ್ರಕರಣ: ಪುಷ್ಪಾ ಅರುಣ್‌ಕುಮಾರ್‌ಗೆ ಮೊದಲ ಹಂತದ ಗೆಲುವು
Related Stories
Recommended image1
ಕೆರಿಯರ್‌ನ ಆರಂಭದಲ್ಲಿ ನಿರ್ಮಾಪಕರು ಸಿಗದೇ ಒದ್ದಾಟ.. ರಕ್ಷಿತ್‌ ಶೆಟ್ಟಿ ಬಳಿ ನಿರ್ದೇಶಕ ಹೇಮಂತ್‌ ರಾವ್‌ ಹೀಗಾ ಹೇಳೋದು!
Recommended image2
Now Playing
Vishnu Priya Kannada Movie | ವಿಷ್ಣು ಪ್ರಿಯಾ ಚಿತ್ರದ ಬಗ್ಗೆ ರಕ್ಷಿತ್‌ ಶೆಟ್ಟಿ, ಯಶ್‌ ಏನಂದ್ರು? Shreyas Manju
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved