ನಂದಗೋಕುಲ: ಮಾಧವ-ಪ್ರಿಯಾ ಫಸ್ಟ್‌ನೈಟ್ ರೂಮ್‌ನಲ್ಲಿ ವಲ್ಲಭ-ಅಮ್ಮು ತುಂಟಾಟದ ರೊಮ್ಯಾನ್ಸ್
ನಂದಗೋಕುಲ ಧಾರಾವಾಹಿಯಲ್ಲಿ ಮಾಧವ-ಪ್ರಿಯಾ ಮದುವೆ ಸಂಭ್ರಮ ಮನೆಮಾಡಿದೆ. ನವಜೋಡಿಯ ಮೊದಲರಾತ್ರಿಗಾಗಿ ಕೋಣೆ ಸಿಂಗರಿಸುವಾಗ ವಲ್ಲಭ ಮತ್ತು ಅಮ್ಮು ನಡುವೆ ಜಗಳವಾಗಿ, ಆಕಸ್ಮಿಕವಾಗಿ ಹೂವಿನ ಹಾಸಿಗೆಯ ಮೇಲೆ ಬಿದ್ದು ರೊಮ್ಯಾಂಟಿಕ್ ಕ್ಷಣ ಸೃಷ್ಟಿಯಾಗಿದೆ.

ನಂದಗೋಕುಲ ಸೀರಿಯಲ್
ದಿನಗಳು ಕಳೆದಂತೆ ನಂದಗೋಕುಲ ಸೀರಿಯಲ್ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯುತ್ತಿರೋದರಿಂದ ಟಿಆರ್‌ಪಿಯನ್ನು ಏರಿಕೆ ಮಾಡಿಕೊಳ್ಳುತ್ತಿದೆ. ನಂದಕುಮಾರ್ ಅತಿದೊಡ್ಡ ಕನಸು ಮಕ್ಕಳ ಮದುವೆ ಮಾಡೋದಾಗಿತ್ತು. ಕೇಶವ ಪ್ರೀತಿಸಿ ಮದುವೆಯಾದ್ರೆ, ವಲ್ಲಭನ ಮದುವೆ ಅಮ್ಮನ ಒತ್ತಾಯಕ್ಕೆ ನಡೆದಿರುತ್ತದೆ. ಇದೀಗ ನಂದಕುಮಾರ್ ತನ್ನಾಸೆಯಂತೆ ಹಿರಿಯ ಮಗ ಮಾಧವನ ಮದುವೆ ಮಾಡಿದ್ದಾನೆ.
ಮಾಧವನ ಮದುವೆ
ಎಲ್ಲಾ ಅಡೆತಡೆಗಳನ್ನು ಮೀರಿ ಮಾಧವನ ಮದುವೆ ನಡೆದಿದ್ದು, ಸೊಸೆ ಪ್ರಿಯಾಳನ್ನು ಮನೆ ತುಂಬಿಸಿಕೊಳ್ಳಲಾಗಿದೆ. ನವಜೋಡಿ ಮಾಧವ ಮತ್ತು ಪ್ರಿಯಾ ಮೊದಲರಾತ್ರಿಗಾಗಿ ಸಿಂಗರಿಸಲಾಗಿರುವ ಕೋಣೆಯಲ್ಲಿ ವಲ್ಲಭ ಮತ್ತು ಅಮ್ಮು ಕೋಳಿ ಜಗಳ ಮಾಡಿಕೊಂಡಿದ್ದಾರೆ.
ಅಣ್ಣ-ಅತ್ತಿಗೆಯ ಫಸ್ಟ್‌ನೈಟ್
ಹೌದು, ಅಣ್ಣ-ಅತ್ತಿಗೆಯ ಫಸ್ಟ್‌ನೈಟ್‌ಗಾಗಿ ಕೇಶವ ಮತ್ತು ವಲ್ಲಭ ಕೋಣೆಯನ್ನು ಅಲಂಕರಿಸಿದ್ದರು. ಈ ನಡುವೆ ಅಲ್ಲಿಗೆ ಬಂದ ಅಮ್ಮು ಬೆಡ್ ಮೇಲಿದ್ದ ಎಲ್ಲಾ ಹೂಗಳನ್ನು ತೆಗೆದು ಬೇರೆ ರೀತಿಯಲ್ಲಿ ಅಲಂಕರಿಸಿರುತ್ತಾಳೆ. ಇದರಿಂದ ವಲ್ಲಭ ಕೋಪಗೊಳ್ಳುತ್ತಾನೆ.
ನಾಗವಲ್ಲಿ ರೂಪ ತಾಳಿದ ಅಮ್ಮು
ನಾವೆಲ್ಲರೂ ಎಷ್ಟು ಚೆನ್ನಾಗಿ ಅಲಂಕಾರ ಮಾಡಿದ್ದೀವಿ. ಎಲ್ಲಾ ಹಾಳು ಮಾಡಿದ್ದೀಯಾ ಎಂದು ಅಮ್ಮು ಕೈಯಲ್ಲಿದ್ದ ಹೂವಿನ ಬುಟ್ಟಿಯನ್ನು ಕಿತ್ತುಕೊಳ್ಳಲು ವಲ್ಲಭ ಮುಂದಾಗುತ್ತಾನೆ. ನಾಗವಲ್ಲಿ ರೂಪ ತಾಳಿದ ಅಮ್ಮು, ಹೂವಿನ ಬುಟ್ಟಿ ಕೊಡಲು ಒಪ್ಪಲ್ಲ.
ಇದನ್ನೂ ಓದಿ: ಶ್ರುತಿ ನಾಯ್ಡು ಜೀ ಕನ್ನಡ ವಾಹಿನಿಯಲ್ಲಿ ಮಾತ್ರ ಸೀರಿಯಲ್ ಮಾಡೋದ್ಯಾಕೆ? 4 ವರ್ಷ ಆಗಿದ್ದೇನು?
ರೊಮ್ಯಾಂಟಿಕ್ ಸೀನ್ ಕ್ರಿಯೇಟ್
ಇದರಿಂದ ಅಮ್ಮು-ವಲ್ಲಭ ನಡುವೆ ಒಬ್ಬರಿಗೊಬ್ಬರು ತಳ್ಳುತ್ತಾ ಬಾಗಿಲಿನ ಬಳಿ ಬರುತ್ತಾರೆ. ಇದೇ ವೇಳೆಗೆ ಕೇಶವ್ ಬಾಗಿಲು ತೆಗೆದಿದ್ದರಿಂದ ಅಮ್ಮು-ವಲ್ಲಭ ಬೆಡ್ ಮೇಲೆ ಬೀಳುತ್ತಾರೆ. ಬುಟ್ಟಿಯಲ್ಲಿದ್ದ ಹೂಗಳೆಲ್ಲಾ ಇಬ್ಬರ ಮೇಲೆ ಬಿದ್ದು ರೊಮ್ಯಾಂಟಿಕ್ ಸೀನ್ ಕ್ರಿಯೇಟ್ ಆಗಿದೆ.
ಇದನ್ನೂ ಓದಿ: ಕರ್ಣ ಕೊಟ್ಟ ಟಕ್ಕರ್‌ಗೆ ದುಷ್ಟ ರಮೇಶ್ ವಿಲವಿಲ; ಇತ್ತ ಸೀರಿಯಲ್‌ಗೆ ಹೊಸ ಚೆಲುವೆಯ ಆಗಮನ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

