- Home
- Automobile
- Car News
- ಸೆಲೆಬ್ರಿಟಿಗಳು ಹೆಂಡ್ತಿ ಹೆಸರಿನಲ್ಲಿ ಕಾರ್ ಖರೀದಿ ಮಾಡೋದೇಕೆ? ಗುಟ್ಟು ಗೊತ್ತಾದ್ರೆ ನಿಮ್ಗೂ ಲಾಭ
ಸೆಲೆಬ್ರಿಟಿಗಳು ಹೆಂಡ್ತಿ ಹೆಸರಿನಲ್ಲಿ ಕಾರ್ ಖರೀದಿ ಮಾಡೋದೇಕೆ? ಗುಟ್ಟು ಗೊತ್ತಾದ್ರೆ ನಿಮ್ಗೂ ಲಾಭ
ಹಬ್ಬದ ಸೀಸನ್ ಶುರುವಾಗ್ತಿದೆ. ಜನರು ಹಬ್ಬದ ಆಫರ್ ಟೈಮ್ ನಲ್ಲಿ ಕಾರ್ ಖರೀದಿ ಮಾಡೋದು ಹೆಚ್ಚು. ನೀವೂ ಈ ಗಣೇಶ ಚೌತಿ, ನವರಾತ್ರಿ ಇಲ್ಲ ದೀಪಾವಳಿ ಸಂದರ್ಭದಲ್ಲಿ ಕಾರು ಖರೀದಿ ಪ್ಲಾನ್ ಮಾಡಿದ್ದರೆ ನಿಮ್ಮ ಬದಲು ನಿಮ್ಮ ಹೆಂಡತಿ ಹೆಸರಿನಲ್ಲಿ ಕಾರನ್ನು ಖರೀದಿ ಮಾಡಿ. ಇದ್ರಿಂದ ಲಾಭ ಏನು ಗೊತ್ತಾ?

ಹೆಂಡತಿ ಹೆಸರಿನಲ್ಲಿ ಕಾರು ಖರೀದಿಸಿದ್ರೆ ಲಾಭ ಏನು?
ಕಾರನ್ನು ಹೆಂಡತಿ ಅಥವಾ ಸಹೋದರಿ ಇಲ್ಲ ಅಮ್ಮನ ಹೆಸರಿನಲ್ಲಿ ಖರೀದಿಸುವುದರಿಂದ ಕೆಲವು ಸಂದರ್ಭಗಳಲ್ಲಿ ಹಣ ಉಳಿಸ್ಬಹುದು. ಆದರೆ ಇದು ಎಲ್ಲರಿಗೂ ಒಂದೇ ರೀತಿ ಅನ್ವಯಿಸುವುದಿಲ್ಲ. ಬ್ಯಾಂಕ್ ಆಫರ್, ಸಾಲದ ಪ್ಲಾನ್ ಮತ್ತು ರಾಜ್ಯದ ನಿಯಮಗಳ ಮೇಲೆ ಲಾಭ ಬದಲಾಗಬಹುದು.
ಕಡಿಮೆ ಬಡ್ಡಿ ದರ
ಕೆಲವು ಬ್ಯಾಂಕ್ಗಳು ಮಹಿಳಾ ಗ್ರಾಹಕರಿಗೆ ವಿಶೇಷ ಕಾರ್ ಲೋನ್ ಆಫರ್ಗಳನ್ನು ನೀಡುತ್ತವೆ. ಬಡ್ಡಿ ದರದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ಹಲವು ವರ್ಷಗಳ ಸಾಲದಲ್ಲಿ ಒಟ್ಟು ಬಡ್ಡಿ ವೆಚ್ಚ ಕಡಿಮೆಯಾಗಬಹುದು. ಕೆಲ ಬ್ಯಾಂಕ್ ಗಳಲ್ಲಿ ಶೇಕಡಾ 0.5 ರಷ್ಟು ಬಡ್ಡಿ ಕಡಿಮೆ ಇದೆ. ಅಂದ್ರೆ ಬಡ್ಡಿ ಶೇಕಡಾ 8.5 ರಷ್ಟಿದ್ದರೆ ಮಹಿಳೆ ಹೆಸರಿನಲ್ಲಿ ಖರೀದಿ ಮಾಡಿದಾಗ ಬಡ್ಡಿ ಶೇಕಡಾ 8 ರಷ್ಟಾಗುತ್ತದೆ. ಆದರೆ ಲೋನ್ ತೆಗೆದುಕೊಳ್ಳುವ ಮೊದಲು ಬ್ಯಾಂಕ್ನ ಪ್ರಸ್ತುತ ಬಡ್ಡಿದರ ಮತ್ತು ಅರ್ಹತಾ ನಿಯಮಗಳನ್ನು ಪರಿಶೀಲಿಸುವುದು ಮುಖ್ಯ.
ಡೌನ್ ಪೇಮೆಂಟ್
ಕೆಲವು ವಿಶೇಷ ಸಾಲ ಯೋಜನೆಗಳಲ್ಲಿ ಕಡಿಮೆ ಡೌನ್ ಪೇಮೆಂಟ್ ಅಥವಾ ಹೆಚ್ಚಿನ ಲೋನ್ ಮೊತ್ತದ ಅವಕಾಶ ಸಿಗುತ್ತದೆ. ಆದ್ರೆ ಮಹಿಳೆಯರ ಹೆಸರಿನಲ್ಲಿ ಕಾರು ಖರೀದಿಸಿದರೆ ಎಲ್ಲ ಬ್ಯಾಂಕ್ಗಳೂ Zero Down Payment ನೀಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಬ್ಯಾಂಕ್ ನಿಯಮ ನೋಡಿ ನೀವು ಸಾಲ ಪಡೆಯಬೇಕು. ಐದು ಲಕ್ಷ ಡೌನ್ ಪೇಮೆಂಟ್ ಮಾಡುವ ಜಾಗದಲ್ಲಿ 2.5 ಲಕ್ಷ ಡೌನ್ ಪೇಮೆಂಟ್ ಮಾಡಿದ್ರೆ ಸಾಕು.
ಪ್ರೊಸೆಸಿಂಗ್ ಫೀ ಮತ್ತು ಇತರ ಶುಲ್ಕ
ಕೆಲವು ಬ್ಯಾಂಕ್ಗಳು ಅಥವಾ ವಾಹನ ಕಂಪನಿಗಳು ಮಹಿಳಾ ಗ್ರಾಹಕರಿಗೆ ವಿಶೇಷ ಆಫರ್ಗಳನ್ನು ನೀಡುತ್ತವೆ. ಇದರಲ್ಲಿ ಕಡಿಮೆ ಪ್ರೊಸೆಸಿಂಗ್ ಫೀ, ವಿಶೇಷ ಬಡ್ಡಿದರ ಅಥವಾ ವೇಗದ ಲೋನ್ ಪ್ರಕ್ರಿಯೆ ಸೇರಿರುತ್ತದೆ. ಆದ್ರೆ ಇವು ಶಾಶ್ವತ ನಿಯಮಗಳಲ್ಲ. ಆ ಸಮಯದ ಆಫರ್ ಮತ್ತು ಬ್ಯಾಂಕ್ನ ಷರತ್ತುಗಳನ್ನು ನೋಡಿ ನೀವು ಸಾಲ ಪಡೆಯಬೇಕು.
ರೋಡ್ ಟ್ಯಾಕ್ಸ್
ಮಹಿಳೆಯ ಹೆಸರಿನಲ್ಲಿ ಕಾರು ನೋಂದಾಯಿಸಿದರೆ ರೋಡ್ ಟ್ಯಾಕ್ಸ್ ಕೂಡ ಕಡಿಮೆ. ಇದು ರಾಜ್ಯದಿಂದ ರಾಜ್ಯಕ್ಕೆ ಬೇರೆ ಇದೆ. ಶೇಕಡಾ 2 ರಿಂದ ಶೇಕಡಾ 10ರವರೆಗೆ ರೋಡ್ ಟ್ಯಾಕ್ಸ್ ಕಡಿಮೆ ಆಗೋದ್ರಲ್ಲಿ ಅನುಮಾನ ಇಲ್ಲ. ಮಹಿಲೆಯರ ಹೆಸರಿನಲ್ಲಿ ಕಾರು ಖರೀದಿಸುವ ಮುನ್ನ ಕೇವಲ ತೆರಿಗೆ ಉಳಿತಾಯವಾಗುತ್ತದೆ ಎಂದು ನಿರ್ಧಾರ ತೆಗೆದುಕೊಳ್ಳಬೇಡಿ. ಬ್ಯಾಂಕ್ನ ಬಡ್ಡಿದರ, ಪ್ರೊಸೆಸಿಂಗ್ ಫೀ, ಡೌನ್ ಪೇಮೆಂಟ್, ವಿಮೆ ಮತ್ತು ರಾಜ್ಯದ ಪ್ರಸ್ತುತ ರೋಡ್ ಟ್ಯಾಕ್ಸ್ ನಿಯಮಇವೆಲ್ಲವನ್ನೂ ಹೋಲಿಕೆ ಮಾಡಿ ನೋಡಿ.

