MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಸಿಂಗೂರು ಟಾಟಾ ಕಂಪನಿ ಜಾಗ ವಿವಾದ: ಅವಮಾನಿಸಿದ್ದ ಜಾಗ್ವಾರ್‌ ಕಂಪನಿಯನ್ನೇ ಖರೀದಿಸಿದ ರತನ್‌ ಟಾಟಾ!

ಸಿಂಗೂರು ಟಾಟಾ ಕಂಪನಿ ಜಾಗ ವಿವಾದ: ಅವಮಾನಿಸಿದ್ದ ಜಾಗ್ವಾರ್‌ ಕಂಪನಿಯನ್ನೇ ಖರೀದಿಸಿದ ರತನ್‌ ಟಾಟಾ!

1980-90ರ ದಶಕದಲ್ಲಿ ಭಾರತದಲ್ಲಿ ಯಾವುದೇ ಸ್ವದೇಶಿ ಕಂಪನಿಗಳು ಕಾರುಗಳನ್ನು ಉತ್ಪಾದಿಸುತ್ತಿರಲಿಲ್ಲ. ಆಗೇನಿದ್ದರೂ ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ಭಾರತದಲ್ಲಿ ಕಾರು ಉತ್ಪಾದನೆಯಾಗುತ್ತಿತ್ತು.

3 Min read
Author : Govindaraj S
Published : Oct 10 2024, 08:45 AM IST
Share this Photo Gallery
  • FB
  • TW
  • Linkdin
  • Whatsapp
16

ರತನ್‌ ಟಾಟಾ ತಮ್ಮ ಕನಸಿನ ಟಾಟಾ ನ್ಯಾನೋ ಕಾರು ಘಟಕವನ್ನು ಆರಂಭಿಸಲು ಮೊದಲಿಗೆ ಪಶ್ಚಿಮ ಬಂಗಾಳದ ಸಿಂಗೂರು ಗ್ರಾಮ ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಅಂದಿನ ಸಿಪಿಎಂ ಸರ್ಕಾರ ಭೂಮಿ ನೀಡಿತ್ತು. ಅದರಂತೆ ಘಟಕ ನಿರ್ಮಾಣದ ಕಾಮಗಾರಿಯೂ ಆರಂಭವಾಗಿತ್ತು. ಆದರೆ ಆದರೆ ಈ ಘಟಕದಲ್ಲಿ ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳದಿದ್ದನ್ನು ವಿರೋಧಿಸಿ ಮತ್ತು ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡಿದ್ದನ್ನು ಅಂದಿನ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಲವಾಗಿ ವಿರೋಧಿಸಿದರು. ರೈತರ ಹೋರಾಟಕ್ಕೆ ಕೈಜೋಡಿಸಿದ ಮಮತಾ ದೊಡ್ಡ ಮಟ್ಟದ ಪ್ರತಿಭಟನೆ ಆರಂಭಿಸಿದರು. ಹೋರಾಟ ತೀವ್ರಗೊಂಡು ಹಿಂಸಾರೂಪ ಪಡೆದ ಕಾರಣ ಬೇಸತ್ತ ರತನ್ ಟಾಟಾ ನ್ಯಾನೋ ಘಟಕವನ್ನು ಗುಜರಾತಿನ ಅಹ್ಮದಾಬಾದಿಗೆ ಸ್ಥಳಾಂತರಿಸಿದರು.

26

2008ರಲ್ಲಿ ಫೋರ್ಡ್‌ ದಿವಾಳಿಯಾದಾಗ ಲ್ಯಾಂಡ್‌ ರೋವರ್‌, ಜಾಗ್ವಾರ್ ಖರೀದಿಸಿದ ಟಾಟಾಗ್ರೂಪ್‌: 1980-90ರ ದಶಕದಲ್ಲಿ ಭಾರತದಲ್ಲಿ ಯಾವುದೇ ಸ್ವದೇಶಿ ಕಂಪನಿಗಳು ಕಾರುಗಳನ್ನು ಉತ್ಪಾದಿಸುತ್ತಿರಲಿಲ್ಲ. ಆಗೇನಿದ್ದರೂ ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ಭಾರತದಲ್ಲಿ ಕಾರು ಉತ್ಪಾದನೆಯಾಗುತ್ತಿತ್ತು. ಜೊತೆಗೆ ವಿದೇಶಿ ಕಂಪನಿಗಳ ಕಾರುಬಾರೇ ಜೋರಾಗಿತ್ತು. ಈ ಹಂತದಲ್ಲಿ ರತನ್‌ ಟಾಟಾ ಅವರು ಮೊದಲ ಬಾರಿಗೆ ಪ್ರಯಾಣಿಕ ವಾಹನಗಳ ವಿಭಾಗಕ್ಕೆ ಲಗ್ಗೆ ಇಡುವ ಪ್ರಯತ್ನ ಮಾಡಿದರು. 1998ರಲ್ಲಿ ಭಾರತದಲ್ಲಿ ಟಾಟಾ ಕಂಪನಿಯು ಪ್ಯಾಸೆಂಜರ್‌ ವಾಹನದ ಮಾರುಕಟ್ಟೆಗೆ ‘ಟಾಟಾ ಇಂಡಿಕಾ’ ಕಾರ್‌ನೊಂದಿಗೆ ಸ್ವದೇಶಿ ಮಾರುಕಟ್ಟೆಗೆ ಪ್ರವೇಶಿಸಿತ್ತು. ರತನ್‌ ಟಾಟಾ ಅವರು ವೈಯಕ್ತಿಕವಾಗಿ ಈ ಕಾರಿನ ಮೇಲೆ ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿತ್ತು. ಭಾರತೀಯರು ಈ ಕಾರುಗಳನ್ನು ತಿರಸ್ಕರಿಸಿದ್ದರು. ಇದು ರತನ್‌ ಟಾಟಾ ಅವರಿಗೆ ಎಲ್ಲಿಲ್ಲದ ನೋವು ತಂದಿತ್ತು. ಕಂಪನಿ ಭಾರಿ ನಷ್ಟ ಅನುಭವಿಸುವಂತೆ ಮಾಡಿತ್ತು. ಇದರಿಂದಾಗಿ ತಮ್ಮ ವಾಹನ ತಯಾರಿಕೆ ಉದ್ಯಮವನ್ನೇ ಮಾರಾಟ ಮಾಡಲು ರತನ್‌ ಟಾಟಾ ನಿರ್ಧರಿಸಿದ್ದರು.

36

ಫೋರ್ಡ್‌ಗೆ ಮಾರಾಟ ಪ್ರಯತ್ನ: ಪ್ರಯಾಣಿಕ ವಾಹನ ಉದ್ಯಮ ಕೈಹಿಡಿಯಲ್ಲ ಎಂಬ ನಿರಾಸೆ ಹಿನ್ನೆಲೆಯಲ್ಲಿ, ಇಡೀ ಪ್ರಯಾಣಿಕ ವಾಹನ ಕಂಪನಿಯನ್ನೇ ಮಾರಾಟ ಮಾಡಲು ರತನ್‌ ನಿರ್ಧರಿಸಿದರು. ಅದರಂತೆ ರತನ್‌ ಟಾಟಾ ಮತ್ತು ಅವರ ತಂಡ ಅಮೆರಿಕದ ಫೋರ್ಡ್‌ ಕಂಪನಿಯ ಅಂದಿನ ಮುಖ್ಯಸ್ಥರಾದ ಬಿಲ್‌ ಫೋರ್ಡ್‌ ಅವರನ್ನು ಭೇಟಿಯಾಗಿ ಅವರಿಗೆ ತಮ್ಮ ಇಡೀ ಪ್ಯಾಸೆಂಜರ್‌ ತಯಾರಿಕೆ ಉದ್ಯಮವನ್ನು ಮಾರಾಟ ಮಾಡಲು ಪ್ರಸ್ತಾಪ ಮುಂದಿಟ್ಟಿರು. ಈ ಕುರಿತು ಅಮೆರಿಕದ ಡೆಟ್ರಾಯ್ಟ್‌ಗೆ ತೆರಳಿದ ಟಾಟಾ, ಫೋರ್ಡ್‌ ಕಂಪನಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.

46

ಅಹಂಕಾರದ ಮಾತು: ಆದರೆ ಬಿಲ್‌ ಫೋರ್ಡ್‌ ಮತ್ತು ಅವರ ತಂಡ ಅಹಂಕಾರದಿಂದಲೇ ಟಾಟಾ ಪ್ರಯಾಣಿಕ ವಾಹನ ವಿಭಾಗ ಖರೀದಿ ಮಾಡಲು ಮುಂದಾಯಿತು. ಜೊತೆಗೆ ರತನ್‌ ಟಾಟಾ ಅವರನ್ನು ಅತ್ಯಂತ ಕೀಳಾಗಿ ನೋಡಿತು. ‘ಕಾರುಗಳು ವ್ಯವಹಾರ ನಿಮಗೇಕೆ ಬೇಕಿತ್ತು’ ಎಂದು ತುಂಬಾ ಹೀನಾಯವಾಗಿ ರತನ್‌ ಟಾಟಾ ಅವರನ್ನು ಅವಮಾನಿಸಿತ್ತು. ಹೀಗಾಗಿ ರತನ್‌ ಟಾಟಾ ಅವರು ಮಾರಾಟ ಮಾಡದೇ ಹಾಗೇ ಮರಳಿದ್ದರು. ಈ ಅವಮಾನವು ರತನ್ ಟಾಟಾರನ್ನು ಕಾರುಗಳ ಬಿಸಿನೆಸ್‌ನಲ್ಲಿ ಇನ್ನಷ್ಟು ಉತ್ತಮಗೊಳಿಸಿಕೊಳ್ಳುವಲ್ಲಿ ಪ್ರೇರೇಪಿಸಿತ್ತು.

56

ಕಾಪಾಡಿ ಎಂದ ಫೋರ್ಡ್‌ ಕಂಪನಿ ಕರೆಗೆ ಓಗೊಟ್ಟ ರತನ್‌ ಟಾಟಾ, ನಷ್ಟದಲ್ಲಿದ್ದ ಜಾಗ್ವಾರ್‌, ಲ್ಯಾಂಡ್‌ ರೋವರ್‌ ಕಾರು ವಿಭಾಗ ಖರೀದಿ: 2008ರಲ್ಲಿ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿಕೆಯಾಗಿ ದೊಡ್ಡ ದೊಡ್ಡ ಕಂಪನಿಗಳೆಲ್ಲಾ ನೆಲೆಕಚ್ಚುತ್ತಿದ್ದವು. ಫೋರ್ಡ್‌ ಕಂಪನಿಯು ಇದೇ ಹಾದಿಯಲ್ಲಿ ದಿವಾಳಿಯಾಗಿತ್ತು. ಅದರ ಐಷಾರಾಮಿ ಕಾರುಗಳ ಕಂಪನಿ ಜಾಗ್ವಾರ್‌ ಮತ್ತು ಲ್ಯಾಂಡ್‌ ರೋವರ್‌ ಸಂಪೂರ್ಣ ನಷ್ಟದಲ್ಲಿತ್ತು. 1989ರಲ್ಲಿ ಜಾಗ್ವಾರ್‌ ಕಂಪನಿಯನ್ನು ಫೋರ್ಡ್‌ ಕಂಪನಿ 2.5 ಶತಕೋಟಿ ಡಾಲರ್‌ ಕೊಟ್ಟು ಖರೀದಿ ಮಾಡಿತ್ತು, 2000 ಇಸವಿಯಲ್ಲಿ 2.7 ಶತಕೋಟಿ ಡಾಲರ್‌ ಕೊಟ್ಟು ಲ್ಯಾಂಡ್‌ ರೋವರ್‌ನನ್ನು ಸಹ ಫೋರ್ಡ್‌ ಖರೀದಿಸಿತ್ತು. ಆದರೆ, ಈ ಎರಡೂ ಕಂಪನಿಗಳು ಫೋರ್ಡ್‌ನ ಯೋಜನೆಯಂತೆ ನಡೆಯುತ್ತಿರಲಿಲ್ಲ. ಫೋರ್ಡ್‌ಗೆ ಇವು ಬಿಳಿ ಆನೆ ಸಾಕಿದಂತೆ ಆಗಿತ್ತು. 

66

ಹೀಗಾಗಿ ಎರಡೂ ಕಂಪನಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಬಿಲ್ ಫೋರ್ಡ್‌, ಜಗತ್ತನ್ನು ಅಂಗಲಾಚುತ್ತಿದ್ದರು. ಇದೇ ಅವಕಾಶವನ್ನು ಪ್ರತಿಕಾರ ತೆಗೆದುಕೊಳ್ಳಲು ಬಳಸಿಕೊಂಡ ರತನ್‌ ಟಾಟಾ, ಎರಡೂ ಕಂಪನಿಗಳನ್ನು ಕೇವಲ 2.3 ಶತಕೋಟಿ ಡಾಲರ್‌ಗೆ ಖರೀದಿ ಮಾಡಿ ಭಾರಿ ಲಾಭ ಪಡೆದರು. ಟಾಟಾ ಅವರ ಈ ಖರೀದಿಗೆ ಬಿಲ್‌ ಫೋರ್ಡ್‌ ಧನ್ಯವಾದ ಸಲ್ಲಿಸಿದ್ದರು. ಬಳಿಕ ಟಾಟಾ ತೆಕ್ಕೆಯಲ್ಲಿ ಜಾಗ್ವಾರ್‌ ಮತ್ತು ಲ್ಯಾಂಡ್‌ ರೋವರ್‌ ಕಂಪನಿಗಳು ಜಗತ್ತಿನ ಐಷಾರಾಮಿ ಕಾರುಗಳ ಸಾಲಿನಲ್ಲಿ ರಾರಾಜಿಸುವಂತೆ ರತನ್‌ ಟಾಟಾ ಯಶಸ್ಸುಗಳಿಸಿ, ಪ್ರತಿಕಾರವನ್ನು ಯಶಸ್ಸಿನಲ್ಲಿ ತೆಗೆದುಕೊಳ್ಳಬೇಕು ಎಂದು ಸಂದೇಶ ಸಾರಿದ್ದರು.
 

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.

Latest Videos
Recommended Stories
Recommended image1
ಅಲ್ಲಿ ಯುದ್ಧ, ಇಲ್ಲಿ ರಾಕೆಟ್ ವೇಗದಲ್ಲಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ: ಖರೀದಿದಾರರಿಗೆ ಹಬ್ಬ!
Recommended image2
ಕಳೆದ ಬಜೆಟ್‌ನ 90% ಯೋಜನೆ ಅನುಷ್ಠಾನ
Recommended image3
ಮಧ್ಯಪ್ರಾಚ್ಯ ಸಂಘರ್ಷ: ಭಾರತ ಇನ್ನೂ ಕಾಯುವುದು ಸೂಕ್ತವಲ್ಲ, ತೈಲ, ಚಿನ್ನದ ಆಮದು ಅವಲಂಬನೆಗೆ ಅನಿಲ್ ಆರ್ಥಿಕ ಸಲಹೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved