MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಮಹತ್ವದ ಮೈಲಿಗಲ್ಲು, ಸರಕು ಸೇವಾ ವಲಯದಲ್ಲಿ ಪಿಪಿಐ ಜಾರಿಗೊಳಿಸಿದ ಭಾರತ, ಜನರಿಗೆ ಇದ್ರ ಲಾಭವೇನು?

ಮಹತ್ವದ ಮೈಲಿಗಲ್ಲು, ಸರಕು ಸೇವಾ ವಲಯದಲ್ಲಿ ಪಿಪಿಐ ಜಾರಿಗೊಳಿಸಿದ ಭಾರತ, ಜನರಿಗೆ ಇದ್ರ ಲಾಭವೇನು?

ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. WPI ಬದಲು ಇದೀಗ ಪಿಪಿಐ ಜಾರಿಗೊಳಿಸಿದೆ. ಸರಕು ಹಾಗೂ ಸೇವಾ ವಲಯದಲ್ಲಿನ ಈ ಬದಲಾವಣೆಯಿಂದ ಜನಸಾಮಾನ್ಯರಿಗೆ ಏನು ಲಾಭ? ಏನಿದು ಹೊಸದಾಗಿ ತಂದಿರುವ ಪಿಪಿಐ?

2 Min read
Author : Chethan Kumar
Published : Jun 15 2026, 08:10 PM IST
Share this Photo Gallery
  • FB
  • TW
  • Linkdin
  • Whatsapp
16
ಉತ್ಪಾದಕರ ಬೆಲೆ ಸೂಚ್ಯಂಕ
Image Credit : our own

ಉತ್ಪಾದಕರ ಬೆಲೆ ಸೂಚ್ಯಂಕ

ಸರಕು ಹಾಗೂ ಸೇವಾ ವಲಯದಲ್ಲಿ ಸೃಷ್ಟಿಯಾಗುವ ಅಭಾವ, ಯುದ್ಧ ಸೇರಿದಂತೆ ಇತರ ಕಾರಣಗಳಿಂದ ಸಪ್ಲೈ ಚೈನ್ ಕೊರತೆ, ಹಣದುಬ್ಬರ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಬೆಲ ಏರಿಕೆ ನಿಖರವಾಗಿ ಅಳೆಯಲು ಹಾಗೂ ಮಹತ್ವದ ಸುಧಾರಣಾ ಭಾಗವಾಗಿ ಇದೀಗ ಪಿಪಿಐ ಜಾರಿಗೊಳಿಸುತ್ತಿದೆ. ಉತ್ಪಾದಕರ ಬೆಲೆ ಸೂಚ್ಯಂಕ (Producer Price Index - PPI) ವಿಧಾನವನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
WPI ಬದಲು ಭಾರತದಲ್ಲಿ ಪಿಪಿಐ
Image Credit : Pinterest

WPI ಬದಲು ಭಾರತದಲ್ಲಿ ಪಿಪಿಐ

ಇಷ್ಟು ದಿನ ಬಳಕೆಯಲ್ಲಿದ್ದ ಸಗಟು ಬೆಲೆ ಸೂಚ್ಯಂಕವನ್ನು (Wholesale Price Index - WPI) ಮುಂದಿನ 5 ವರ್ಷಗಳಲ್ಲಿ ಸಂಪೂರ್ಣವಾಗಿ ಕೈಬಿಡಲಾಗುತ್ತದೆ. ಇನ್ನು WPI ಬದಲು ಪಿಪಿಐ (PPI) ವ್ಯವಸ್ಥೆಯನ್ನು ತರಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನಿರ್ಧರಿಸಿದೆ.

Related Articles

Related image1
ಇರಾನ್-ಅಮೆರಿಕ ಒಪ್ಪಂದ: ಭಾರತಕ್ಕೆ ತೆರೆದ ಅದೃಷ್ಟದ ಬಾಗಿಲು, ಇದೇ ನೋಡಿ ಜಾಕ್‌ಪಾಟ್
Related image2
ವಿಶ್ವದ ಮೊದಲ ಟ್ರಿಲೇನಿಯರ್ ಎಲಾನ್ ಮಸ್ಕ್ ಶ್ರೀಮಂತಿಕೆ ಹಿಂದಿದೆ 400 ಚದರ ಅಡಿ ಸಣ್ಣ ಮನೆ
36
ಬೆಲೆ ಏರಿಕೆ ಅಳೆಯುವ ಮಾನದಂಡ
Image Credit : ANI

ಬೆಲೆ ಏರಿಕೆ ಅಳೆಯುವ ಮಾನದಂಡ

ನಮ್ಮ ದೇಶದಲ್ಲಿ ಮಾರುಕಟ್ಟೆ ಬೆಲೆ ಏರಿಕೆಯನ್ನು ಅಳೆಯಲು ಸದ್ಯ ಎರಡು ಪ್ರಮುಖ ಮಾನದಂಡಗಳಿವೆ—ಒಂದು ಗ್ರಾಹಕರ ಹಂತದ ಬೆಲೆ ಏರಿಕೆ (CPI), ಮತ್ತೊಂದು ಸಗಟು ವ್ಯಾಪಾರಿಗಳ ಹಂತದ ಬೆಲೆ ಏರಿಕೆ (WPI). ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂದುವರಿದ ದೇಶಗಳು 'ಪಿಪಿಐ' ಮಾದರಿಯನ್ನೇ ಬಳಸುತ್ತವೆ.

46
ಫ್ಯಾಕ್ಟರಿ ಗೇಟ್‌ನ ನಿಖರ ಬೆಲೆ
Image Credit : Getty

ಫ್ಯಾಕ್ಟರಿ ಗೇಟ್‌ನ ನಿಖರ ಬೆಲೆ

WPI ಸಗಟು ಮಾರುಕಟ್ಟೆಯ ಬೆಲೆಯನ್ನು ಲೆಕ್ಕ ಹಾಕಿದರೆ, 'ಪಿಪಿಐ' ಸರಕುಗಳು ಕಾರ್ಖಾನೆಯಿಂದ ಹೊರಬರುವಾಗ (Factory Gate) ಇರುವ ಅಸಲಿ ಉತ್ಪಾದನಾ ವೆಚ್ಚದ ಏರಿಳಿತವನ್ನು ಅಳೆಯುತ್ತದೆ. ಇದರಲ್ಲಿ ಮಧ್ಯವರ್ತಿಗಳ ಲಾಭದ ಮಾರ್ಜಿನ್ ಅಥವಾ ಸಾರಿಗೆ ವೆಚ್ಚಗಳು ಸೇರಿರುವುದಿಲ್ಲ.

ಸೇವಾ ವಲಯಕ್ಕೂ ಎಂಟ್ರಿ: 

ಹಳೆಯ ಸಗಟು ಸೂಚ್ಯಂಕದಲ್ಲಿ (WPI) ಕೇವಲ ವಸ್ತುಗಳ (Goods) ಬೆಲೆಯನ್ನು ಮಾತ್ರ ಲೆಕ್ಕ ಹಾಕಲಾಗುತ್ತಿತ್ತು. ಆದರೆ ಹೊಸ ಪಿಪಿಐ ವ್ಯವಸ್ಥೆಯಲ್ಲಿ ಸರಕುಗಳ ಜೊತೆಗೆ 'ಸೇವಾ ವಲಯ'ವನ್ನು (Services Sector) ಸೇರಿಸಲಾಗಿದೆ. ಮೊದಲ ಹಂತದಲ್ಲಿ ಬ್ಯಾಂಕಿಂಗ್, ಇನ್ಶೂರೆನ್ಸ್, ಟೆಲಿಕಾಂ, ರೈಲ್ವೆ ಮತ್ತು ವಿಮಾನಯಾನ ಸೇರಿದಂತೆ 7 ಪ್ರಮುಖ ಸೇವೆಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ.

56
ವರದಿ ಆಧಾರದ ಮೇಲೆ ಈ ಮಹತ್ವದ ಬದಲಾವಣೆ
Image Credit : Asianet News

ವರದಿ ಆಧಾರದ ಮೇಲೆ ಈ ಮಹತ್ವದ ಬದಲಾವಣೆ

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಶಿಫಾರಸುಗಳ ಅನ್ವಯ ಮತ್ತು ನೀತಿ ಆಯೋಗದ ಮಾಜಿ ಸದಸ್ಯ ರಮೇಶ್ ಚಂದ್ ನೇತೃತ್ವದ ತಜ್ಞರ ಸಮಿತಿಯ ವರದಿಯ ಆಧಾರದ ಮೇಲೆ ಈ ಮಹತ್ವದ ಬದಲಾವಣೆ ತರಲಾಗಿದೆ. ಉತ್ಪಾದಕರು ಬಳಸುವ ಕಚ್ಚಾ ವಸ್ತುಗಳ ಬೆಲೆ (Input Cost) ಮತ್ತು ಅವರು ಸಿದ್ಧಪಡಿಸುವ ಅಂತಿಮ ವಸ್ತುವಿನ ಬೆಲೆ (Output Cost) ಎರಡನ್ನೂ ಈ ಸೂಚ್ಯಂಕ ಪ್ರತ್ಯೇಕವಾಗಿ ಟ್ರ್ಯಾಕ್ ಮಾಡುತ್ತದೆ. ಇದರಿಂದಾಗಿ ಕಂಪನಿಗಳ ಉತ್ಪಾದನಾ ವೆಚ್ಚದ ಹೊರೆ ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಗ್ರಾಹಕರ ಮೇಲೆ ವರ್ಗಾವಣೆಯಾಗುತ್ತಿದೆ ಎಂಬುದನ್ನು ಆರ್‌ಬಿಐ (RBI) ಮತ್ತು ಸರ್ಕಾರಕ್ಕೆ ಅತ್ಯಂತ ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇದು ದೇಶದ ಜಿಡಿಪಿ (GDP) ಲೆಕ್ಕಾಚಾರವನ್ನು ಇನ್ನಷ್ಟು ಅಚ್ಚುಕಟ್ಟುಗೊಳಿಸಲಿದೆ.

66
ಮುಂದಿನ 5 ವರ್ಷದ ಯೋಜನೆ
Image Credit : Google

ಮುಂದಿನ 5 ವರ್ಷದ ಯೋಜನೆ

ದೇಶದ ಸಣ್ಣ ಮತ್ತು ದೊಡ್ಡ ಉದ್ಯಮಗಳ ಅನೇಕ ವ್ಯಾಪಾರ ಒಪ್ಪಂದಗಳು ಹಾಗೂ ಟೆಂಡರ್‌ಗಳು ಸದ್ಯ 'WPI' ದರದ ಮೇಲೆಯೇ ಲಿಂಕ್ ಆಗಿರುತ್ತವೆ. ಇದ್ದಕ್ಕಿದ್ದಂತೆ ಅದನ್ನು ನಿಲ್ಲಿಸಿದರೆ ಮಾರುಕಟ್ಟೆಯಲ್ಲಿ ಗೊಂದಲ ಉಂಟಾಗಬಹುದು. ಇದೇ ಕಾರಣಕ್ಕೆ ಸರ್ಕಾರ ಮುಂದಿನ 5 ವರ್ಷಗಳವರೆಗೆ WPI ಮತ್ತು PPI ಎರಡೂ ದರಗಳನ್ನು ಒಟ್ಟಿಗೆ ಪ್ರಕಟಿಸಲಿದೆ. ಆ ಬಳಿಕ WPI ಅನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಭಾರತ ಸುದ್ದಿ
ವ್ಯಾಪಾರ ಸುದ್ದಿ
ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆಗೆ ಮನೆ ಬೇಕೇ?: ಉತ್ತಮ ಸಂಪರ್ಕ ಹೊಂದಿರುವ 8 ಬಜೆಟ್ ಸ್ನೇಹಿ ಏರಿಯಾಗಳಿವು
Recommended image2
Now Playing
ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
Recommended image3
Snapchat ಸಿಇಒಗೆ ಕೇವಲ 3 ಸಾಲಿನ ಇಮೇಲ್ ಕಳುಹಿಸಿದ ಭಾರತೀಯ ವಿದ್ಯಾರ್ಥಿ: ರಿಪ್ಲೈ ಕೊಟ್ಟು ಶಾಕ್ ನೀಡಿದ ಬಾಸ್!
Related Stories
Recommended image1
ಇರಾನ್-ಅಮೆರಿಕ ಒಪ್ಪಂದ: ಭಾರತಕ್ಕೆ ತೆರೆದ ಅದೃಷ್ಟದ ಬಾಗಿಲು, ಇದೇ ನೋಡಿ ಜಾಕ್‌ಪಾಟ್
Recommended image2
ವಿಶ್ವದ ಮೊದಲ ಟ್ರಿಲೇನಿಯರ್ ಎಲಾನ್ ಮಸ್ಕ್ ಶ್ರೀಮಂತಿಕೆ ಹಿಂದಿದೆ 400 ಚದರ ಅಡಿ ಸಣ್ಣ ಮನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved