MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ವಿಶ್ವದ ಮೊದಲ ಟ್ರಿಲೇನಿಯರ್ ಎಲಾನ್ ಮಸ್ಕ್ ಶ್ರೀಮಂತಿಕೆ ಹಿಂದಿದೆ 400 ಚದರ ಅಡಿ ಸಣ್ಣ ಮನೆ

ವಿಶ್ವದ ಮೊದಲ ಟ್ರಿಲೇನಿಯರ್ ಎಲಾನ್ ಮಸ್ಕ್ ಶ್ರೀಮಂತಿಕೆ ಹಿಂದಿದೆ 400 ಚದರ ಅಡಿ ಸಣ್ಣ ಮನೆ

ಎಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲೇನಿಯರ್ ಶ್ರೀಮಂತ. ಮಸ್ಕ್‌ನಷ್ಟು ಶ್ರೀಮಂತ ಯಾರೂ ಇಲ್ಲ. ಹಲವು ದೇಶಗಳ ಆರ್ಥಿಕತೆಗಿಂತ ಮಸ್ಕ್ ಸಂಪತ್ತು ಹೆಚ್ಚಿದೆ. ಇಷ್ಟಿದ್ದರೂ ಮಸ್ಕ್ ಇರೋದು ಕೇವಲ 400 ಚದರ ಅಡಿಯ 2 ಬೆಡ್ ರೂಂ ಮನೆಯಲ್ಲಿ . ಇದೇ ಮನೆ ಮಸ್ಕ್ ಯಶಸ್ಸಿನ ಹಿಂದಿದೆ.

2 Min read
Author : Chethan Kumar
Published : Jun 14 2026, 07:02 PM IST
Share this Photo Gallery
  • FB
  • TW
  • Linkdin
  • Whatsapp
16
ಟ್ರಿಲೇನಿಯರ್ ಶ್ರೀಮಂತನ ಮನೆ ಕೇವಲ 400 ಚದರ ಅಡಿ
Image Credit : Dima Zeniuk x

ಟ್ರಿಲೇನಿಯರ್ ಶ್ರೀಮಂತನ ಮನೆ ಕೇವಲ 400 ಚದರ ಅಡಿ

ಉದ್ಯಮಿ ಎಲನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ಅನ್ನೋದು ಹೊಸದಲ್ಲ. ಆದರೆ ವಿಶ್ವದ ಮೊದಲ ಟಿಲೇನಿಯರ್ ಶ್ರೀಮಂತನಾಗಿ ಬಡ್ತಿ ಪಡೆದಿದ್ದಾರೆ. ಮಿಲಿನೇರಿಯರ್, ಬಿಲೇನಿಯರ್ ಎಂದೆಲ್ಲಾ ಕೇಳಿದ್ದೇವೆ, ಆದರೆ ಇವೆಲ್ಲವನ್ನೂ ದಾಟಿರುವ ಎಲಾನ್ ಮಸ್ಕ್ ಇದೀಗ ಟ್ರಿಲೇನಿಯರ್ ಶ್ರೀಮಂತ. ಸ್ಪೇಸ್‌ಎಕ್ಸ್ ಐಪಿಒ ಮೂಲಕ ಮಸ್ಕ್ ಶ್ರೀಮಂತಿಕೆ ಡಬಲ್ ಆಗಿದೆ. ಇಷ್ಟೊಂದು ಶ್ರೀಮಂತಿಕೆಯ ಎಲಾನ್ ಮಸ್ಕ್ ಇರೋದು ಅತೀ ಸಣ್ಣ 2 ಬೆಡ್ ರೂಂ ಮನೆ. ಇದರ ಚದರ ಅಡಿ ಕೇವಲ 400 ಮಾತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಸ್ಕ್ ಯಶಸ್ಸಿನ ಹಿಂದಿದೆ 400 ಚದರ ಅಡಿ ಸಣ್ಣ ಮನೆ
Image Credit : Dima Zeniuk x

ಮಸ್ಕ್ ಯಶಸ್ಸಿನ ಹಿಂದಿದೆ 400 ಚದರ ಅಡಿ ಸಣ್ಣ ಮನೆ

ಎಲನ್ ಮಸ್ಕ್ ಶ್ರೀಮಂತಿಕೆಗೆ ಸರಿಸಾಟಿ ಯಾರು ಇಲ್ಲ. ವಿಶೇಷ ಅಂದರೆ ಈ ಮಟ್ಟಿಗೆ ಮಸ್ಕ್ ಯಶಸ್ಸು ಗಳಿಸಲು ಅವರ 400 ಚದರ ಅಡಿಯ 2 ಬೆಡ್ ರೂಂ ಮನೆ ಕೂಡ ಕಾರಣ. ಟೆಕ್ಸಾಸ್‌ನಲ್ಲಿರುವ ಈ ಸಣ್ಣ ಮನೆ ಎಲಾನ್ ಮಸ್ಕ್ ದೂರದೃಷ್ಠಿ, ಹೂಡಿಕೆ, ಲೆಕ್ಕಾಚಾರ ಎಲ್ಲದ್ದಕ್ಕೂ ಸಾಕ್ಷಿಯಾಗಿದೆ. ಇದೇ ಮನೆ ಮಸ್ಕ್ ನಡೆಯನ್ನು ತೋರಿಸುತ್ತದೆ.

Related Articles

Related image1
ಎಲಾನ್ ಮಸ್ಕ್ ಕಂಪನಿ SpaceX IPO ಬದಲಿಸಲಿದೆ ಅದೃಷ್ಟ, ಕೋಟ್ಯಾಧಿಪತಿಗಳಾಗಲಿದ್ದಾರೆ 4400 ಉದ್ಯೋಗಿಗಳು
Related image2
ವಿಶ್ವದ ಮೊದಲ ಟ್ರಿಲೇನಿಯರ್ ಶ್ರೀಮಂತ ಪಟ್ಟ, ಭಾರತೀಯ ರೂಪಾಯಿಗಳಲ್ಲಿ ಎಲನ್ ಮಸ್ಕ್ ಸಂಪತ್ತು
36
ಲಕ್ಷ ಲಕ್ಷ ಕೋಟಿ ಹೂಡಿಕೆ ಮಾಡುವ ಉದ್ಯಮಿಗೆ ಸಣ್ಣ ಮನೆ
Image Credit : Dima Zeniuk x

ಲಕ್ಷ ಲಕ್ಷ ಕೋಟಿ ಹೂಡಿಕೆ ಮಾಡುವ ಉದ್ಯಮಿಗೆ ಸಣ್ಣ ಮನೆ

ಎಲಾನ್ ಮಸ್ಕ್ ಉದ್ಯಮ ಆರಂಭಿಸುವಾಗ ಎಷ್ಟು ಲಕ್ಷ ಕೋಟಿ ಬೇಕಾದರು ಹೂಡಿಕೆ ಮಾಡುತ್ತಾರೆ. ಆದರೆ ಮನೆಗೆ ಹೆಚ್ಚಿನ ಹೂಡಿಕೆ ಮಾಡಿಲ್ಲ. ಉಳಿದುಕೊಳ್ಳುವ ಮನೆ ಕೇವಲ 400 ಚದರ ಅಡಿಯ 2 ಬೆಡ್ ರೂಂ ಮನೆ. ಹಲವರು ಮನೆಗೆ ಹೆಚ್ಚಿನ ಬಂಡವಾಳ ಹಾಕಲ್ಲ. ಕಾರಣ ಅಂದರಿಂದ ಯಾವುದೇ ಲಾಭವಿಲ್ಲ. ಇಲ್ಲಿ ಎಲಾನ್ ಮಸ್ಕ್ ಕೂಡ ಅಷ್ಟೇ ಹಲವು ಕಡೆ ಆಸ್ತಿ, ಮನೆ ಖರೀದಿಸಿದ್ದಾರೆ. ಆದರೆ ತಾವು ಉಳಿದುಕೊಳ್ಳಲು ಐಷಾರಾಮಿ ಬಂಗಲೆ, ಅದಕ್ಕೊಂದು ಖರ್ಚು ಮಾಡಿಲ್ಲ. ಮಸ್ಕ್ ಹೂಡಿಕೆ ಮಾಡಿದರೆ ಅದರಿಂದ ಅಷ್ಟೇ ರಿಟರ್ನ್ಸ್ ಪಡೆದುಕೊಳ್ಳುವ ಚಾಣಾಕ್ಷ ಉದ್ಯಮಿ.

46
ಮಸ್ಕ್ ಬ್ಯೂಸಿನೆಸ್ ಮೈಂಡ್
Image Credit : Asianet News

ಮಸ್ಕ್ ಬ್ಯೂಸಿನೆಸ್ ಮೈಂಡ್

ಎಲಾನ್ ಮಸ್ಕ್ ಯಶಸ್ಸಿನ ಹಿಂದೆ 400 ಚದರ ಅಡಿ ಮನೆ ಜೊತೆ ವ್ಯವಹಾರಗಳು ಕೂಡ ಕಾರಣ. ಎಲ್ಲಿ ಹೂಡಿಕೆ ಮಾಡಬೇಕು, ಯಾವುದು ಅಗತ್ಯ, ಯಾವುದು ಅನಿವಾರ್ಯ ಅನ್ನೋದು ಎಲಾನ್ ಮಸ್ಕ್‌ಗೆ ಚೆನ್ನಾಗಿ ತಿಳಿದಿದೆ. ಐಷಾರಾಮಿ ಬಂಗಲೆ, ಅದಕ್ಕೊಂದಿಷ್ಟು ಆಳು, ಖರ್ಚು ವೆಚ್ಚಕ್ಕೆ ಮಸ್ಕ್ ಬಳಿ ಸ್ಥಾನವಿಲ್ಲ. ಏನಿದ್ದರೂ ಬ್ಯೂಸಿನೆಸ್ ಮೈಂಡ್.

56
ಬಾಡಿಗೆ ನೀಡುತ್ತಾರೆ ಮಸ್ಕ್
Image Credit : Getty

ಬಾಡಿಗೆ ನೀಡುತ್ತಾರೆ ಮಸ್ಕ್

2020ರಲ್ಲಿ ಎಲಾನ್ ಮಸ್ಕ್ ಕ್ಯಾಲಿಫೋರ್ನಿಯಾದಿಂದ ಟೆಕ್ಸಾಸ್‌ಗೆ ಸ್ಥಳಾಂತರಗೊಂಡಿದ್ದಾರೆ. ಈ ವೇಳೆ ಕ್ಯಾಲಿಫೋರ್ನಿಯಾದ ತಮ್ಮ ಐಷಾರಾಮಿ ಮನೆ ಮಾರಾಟ ಮಾಡಿದ್ದಾರೆ. ಇನ್ನು ಆಸ್ಟಿನ್ ಬಳಿ ಸುಮಾರು 35 ಬಿಲಿಯನ್ ಡಾಲರ್ ಮೊತ್ತದಲ್ಲಿ ಆಸ್ತಿ ಖರೀದಿಸಿದ್ದಾರೆ. 2021ರಲ್ಲಿ ಸ್ಪೇಸ್ ಎಕ್ಸ್ ಒಡೆತನದ ಕಟ್ಟದಲ್ಲಿರುವ ಮನೆಗೆ ಮಸ್ಕ್ ತಿಂಗಳಿಗೆ 50,000 ಡಾಲರ್ ಬಾಡಿಗೆ ನೀಡುತ್ತಿದ್ದಾರೆ.

66
ಅತೀ ಸಣ್ಣ ಮನೆಯಲ್ಲಿದ್ದು ವಿಶ್ವವನ್ನೇ ಆಳುತ್ತಿರುವ ಮಸ್ಕ್
Image Credit : Asianet News

ಅತೀ ಸಣ್ಣ ಮನೆಯಲ್ಲಿದ್ದು ವಿಶ್ವವನ್ನೇ ಆಳುತ್ತಿರುವ ಮಸ್ಕ್

ಲಿವಿಂಗ್ ಏರಿಯಾ, ಬೆಡ್ ರೂಂ, ಕಿಚನ್, ಟಬ್ ಹಾಗೂ ಶೊವರ್ ಇರುವ ಬಾತ್‌ರೂಂ. ಇಷ್ಟೇ ಎಲಾನ್ ಮಸ್ಕ್ ಮನೆ. ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲೇನಿಯರ್ ಶ್ರೀಮಂತ ಅತೀ ಸಣ್ಣ ಮನೆಯಲ್ಲಿ ಉಳಿದುಕೊಂಡು ವಿಶ್ವವನ್ನೇ ಆಳುತ್ತಿದ್ದಾನೆ. ಇದುವೇ ಮಸ್ಕ್ ಯಶಸ್ಸಿನ ಹಿಂದಿನ ಸೀಕ್ರೆಟ್.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಎಲಾನ್ ಮಸ್ಕ್
ಅಂತರರಾಷ್ಟ್ರೀಯ ಸುದ್ದಿ
ಮನೆ

Latest Videos
Recommended Stories
Recommended image1
ಕೇವಲ ಆಧಾರ್ ಸಂಖ್ಯೆ ಬಳಸಿ ನಿಮ್ಮ ಬ್ಯಾಂಕ್ ಹಣ ಲಪಟಾಯಿಸಲು ಸಾಧ್ಯವೇ? ಈ ಬಗ್ಗೆ UIDAI ನೀಡಿದ ಮಹತ್ವದ ಮಾಹಿತಿ ಇಲ್ಲಿದೆ!
Recommended image2
Techie Career Change: 2 ಕೋಟಿ ಸಂಬಳದ ಕೆಲಸ ಬಿಟ್ಟು ಕೆಫೆ ತೆರೆದ 29ರ ಯುವತಿ! ಟೆಕ್ಕಿಯ ಕಥೆನೇ ರೋಚಕ
Recommended image3
ಸೀರಿಯಲ್‌ ಬಿಟ್ಟು ಹೊಸ ಉದ್ಯಮ ಆರಂಭಿಸಿದ ಸೀರಿಯಲ್‌ ನಟಿ 'ವಧು' ದುರ್ಗಾಶ್ರೀ, ಶುಭ ಕೋರಿದ ಸೃಜನ್‌ ಲೋಕೇಶ್‌
Related Stories
Recommended image1
ಎಲಾನ್ ಮಸ್ಕ್ ಕಂಪನಿ SpaceX IPO ಬದಲಿಸಲಿದೆ ಅದೃಷ್ಟ, ಕೋಟ್ಯಾಧಿಪತಿಗಳಾಗಲಿದ್ದಾರೆ 4400 ಉದ್ಯೋಗಿಗಳು
Recommended image2
ವಿಶ್ವದ ಮೊದಲ ಟ್ರಿಲೇನಿಯರ್ ಶ್ರೀಮಂತ ಪಟ್ಟ, ಭಾರತೀಯ ರೂಪಾಯಿಗಳಲ್ಲಿ ಎಲನ್ ಮಸ್ಕ್ ಸಂಪತ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved