ಇರಾನ್-ಅಮೆರಿಕ ಒಪ್ಪಂದ: ಭಾರತಕ್ಕೆ ತೆರೆದ ಅದೃಷ್ಟದ ಬಾಗಿಲು, ಇದೇ ನೋಡಿ ಜಾಕ್‌ಪಾಟ್
ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಇದರಿಂದ ಹರ್ಮೋಜ್ ಜಲಸಂಧಿ ತೆರೆಯಲಿದೆ. ಈ ಬೆಳವಣಿಗೆಯು ಭಾರತಕ್ಕೆ ಅಗ್ಗದ ದರದಲ್ಲಿ ಇರಾನ್‌ನಿಂದ ತೈಲ ಖರೀದಿಸಲು ಮತ್ತು ಚಾಬಹಾರ್ ಬಂದರು ಯೋಜನೆಯನ್ನು ಪುನರಾರಂಭಿಸಲು ಸಹಾಯ ಮಾಡಲಿದೆ, ಇದು ದೇಶದ ಆರ್ಥಿಕತೆಗೆ ದೊಡ್ಡ ಲಾಭವನ್ನು ತರಲಿದೆ.

ಇರಾನ್ - ಅಮೆರಿಕ ನಡುವೆ ಶಾಂತಿ ಒಪ್ಪಂದ
ಮೂರು ತಿಂಗಳ ದಾಳಿ-ಪ್ರತಿದಾಳಿ ಬಳಿಕ ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಜೂನ್ 19ರಂದು ಜಿನೇವಾದಲ್ಲಿ ಸಹಿ ಬೀಳಲಿದೆ. ಈ ಎರಡು ದೇಶಗಳ ನಡುವಿನ ಒಪ್ಪಂದದಿಂದ ಭಾರತಕ್ಕೆ ಹೆಚ್ಚು ಲಾಭವಾಗಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಬಳಿಕ ಹರ್ಮೋಜ್ ಜಲಸಂಧಿ ತೆರೆದುಕೊಳ್ಳಲಿದೆ. ಇತ್ತ ಅಮೆರಿಕಾ ಹಾಕಿರುವ ದಿಗ್ಬಂಧನವೂ ತೆರವು ಆಗಲಿದೆ.
ತೈಲ ಹರಿಯಲಿ
ಇರಾನ್ ಜೊತೆ ಒಪ್ಪಂದ ಆಗಿದ್ದು, ಹರ್ಮೋಜ್ ಜಲಸಂಧಿ ಟೋಲ್ ಫ್ರೀ ಆಗಲಿದೆ. ಹಾಗೆಯೇ ಅಮೆರಿಕ ನೌಕಾಪಡೆಯ ದಿಗ್ಬಂದನ ತೆಗೆಯಲು ಆದೇಶಿಸುತ್ತೇನೆ. ಇದೀಗ ವಿಶ್ವದ ಹಡಗುಗಳು ಮತ್ತೆ ಈ ಮಾರ್ಗದ ಮೂಲಕ ತೆರಳಬಹುದಾಗಿದೆ. ತೈಲ ಹರಿಯಲಿ ಎಂದು ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ವಿಶ್ವದ ಶೇ.20ರಷ್ಟು ತೈಲ ಮತ್ತು ಎಲ್‌ಎನ್‌ಜಿ ಹರ್ಮೋಜ್ ಮೂಲಕ ಬರುತ್ತದೆ.
ಭಾರತಕ್ಕೇನು ಲಾಭ?
ಈ ಒಪ್ಪಂದದಿಂದ ಭಾರತದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಒತ್ತಡ ಕಡಿಮೆಯಾಗಲಿದೆ. ದರ ನಿಯಂತ್ರಣಕ್ಕೆ ಬಂದ್ರೆ ಹಣದುಬ್ಬರ ನಿಯಂತ್ರಣ ಮಾಡಲು ಸಹಾಯವಾಗುತ್ತದೆ. ಭಾರತದ ತೈಲ ಆಮದು ಬಿಲ್ ಕಡಿಮೆಯಾಗುತ್ತದೆ. ದೇಶೀಯ ಮೀಸಲುಗಳ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ರೂಪಾಯಿ ಬಲಗೊಳ್ಳುತ್ತದೆ. ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಿಂದಾಗಿ ತೈಲ ಖರೀದಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು.
ಭಾರತ ತೈಲ
ಇದೀಗ ಇರಾನ್‌ನಿಂದ ಭಾರತ ಕಡಿಮೆ ಬೆಲೆಯಲ್ಲಿ ತೈಲ ಖರೀದಿ ಮಾಡಲಿದೆ. ಬೇರೆ ದೇಶಗಳೊಂದಿಗೆ ಡಾಲರ್ ರೂಪದಲ್ಲಿ ಭಾರತ ತೈಲ ಖರೀದಿಸಬೇಕು. ಆದ್ರೆ ಇರಾನ್ ಜೊತೆ ರೂಪಾಯಿ ಮೌಲ್ಯದಲ್ಲಿ ತೈಲ ಖರೀದಿ ಮಾಡೋದರಿಂದ ಅಗ್ಗದ ಬೆಲೆಯಲ್ಲಿ ತೈಲ ಭಾರತಕ್ಕೆ ಲಭ್ಯವಾಗಲಿದೆ. ಅಮೆರಿಕ ತನ್ನ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಭಾರತ ಮತ್ತೊಮ್ಮೆ ಇರಾನ್‌ನ ಕಚ್ಚಾ ತೈಲವನ್ನು ಖರೀದಿಸಬಹುದು.
ಚಾಬಹಾರ್ ಬಂದರು
ಅಮೆರಿಕ-ಇರಾನ್ ಒಪ್ಪಂದದ ಮತ್ತೊಂದು ಪ್ರಮುಖ ಪರಿಣಾಮ ಭಾರತದ ಕಾರ್ಯತಂತ್ರದ ಚಾಬಹಾರ್ ಬಂದರು ಯೋಜನೆಯಾಗಬಹುದು. ಭಾರತವು ಇರಾನ್‌ನ ಚಾಬಹಾರ್ ಬಂದರಿನಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಈ ಯೋಜನೆಯು ಭಾರತಕ್ಕೆ ಅಫ್ಘಾನಿಸ್ತಾನ ಮತ್ತು ಮಧ್ಯಪ್ರಾಚ್ಯಕ್ಕೆ ನೇರ ಪ್ರವೇಶವನ್ನು ನೀಡುತ್ತದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧಗಳಲ್ಲಿ ಸುಧಾರಣೆಯು ಚಾಬಹಾರ್ ಮೇಲಿನ ಅಮೆರಿಕದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಇದು ಭಾರತದ ಬಂದರು ವಿಸ್ತರಣೆ, ಹೊಸ ಹೂಡಿಕೆಗಳು ಮತ್ತು ಹೆಚ್ಚಿದ ವ್ಯಾಪಾರವನ್ನು ಸುಗಮಗೊಳಿಸುತ್ತದೆ. ಇದಲ್ಲದೆ, ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಸಹ ವೇಗಗೊಳ್ಳುವ ನಿರೀಕ್ಷೆಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

