MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಕಚ್ಚಾತೈಲ ಖರೀದಿಗೆ ಭಾರತದ ಬಳಿ ಇದೆ ಹಲವು ಆಯ್ಕೆ: ಯಾವುದೇ ದೇಶದಿಂದಲೂ ತೈಲ ಖರೀದಿಸಲು ಭಾರತ ಸ್ವತಂತ್ರವಾಗಿದೆ: ರಷ್ಯಾ

ಕಚ್ಚಾತೈಲ ಖರೀದಿಗೆ ಭಾರತದ ಬಳಿ ಇದೆ ಹಲವು ಆಯ್ಕೆ: ಯಾವುದೇ ದೇಶದಿಂದಲೂ ತೈಲ ಖರೀದಿಸಲು ಭಾರತ ಸ್ವತಂತ್ರವಾಗಿದೆ: ರಷ್ಯಾ

ರಷ್ಯಾದಿಂದ ಭಾರತದ ಕಚ್ಚಾ ತೈಲ ಆಮದು ಪ್ರಮಾಣವು 38 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಡಿಸೆಂಬರ್ 2025ರ ವರದಿಗಳ ಪ್ರಕಾರ, ರಷ್ಯಾದ ತೈಲದ ಪಾಲು ಗಣನೀಯವಾಗಿ ಕಡಿಮೆಯಾಗಿದ್ದು, ಅಮೆರಿಕದಿಂದ ಆಮದು ಹೆಚ್ಚಾಗಿದೆ. ಇದು ಭಾರತ ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುತ್ತಿರುವ ಸ್ಪಷ್ಟ ಸೂಚನೆಯಾಗಿದೆ.

3 Min read
Author : Anusha Kb
Published : Feb 06 2026, 04:26 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತವು ಯಾವುದೇ ಪೂರೈಕೆದಾರರಿಂದ ಕಚ್ಚಾ ತೈಲವನ್ನು ಖರೀದಿಸಲು ಮುಕ್ತವಾಗಿದೆ ಎಂದ ರಷ್ಯಾ
Image Credit : X

ಭಾರತವು ಯಾವುದೇ ಪೂರೈಕೆದಾರರಿಂದ ಕಚ್ಚಾ ತೈಲವನ್ನು ಖರೀದಿಸಲು ಮುಕ್ತವಾಗಿದೆ ಎಂದ ರಷ್ಯಾ

ಕೆಲ ದಿನಗಳ ಹಿಂದಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾವೂ ಭಾರತವು ಯಾವುದೇ ಪೂರೈಕೆದಾರರಿಂದ ಕಚ್ಚಾ ತೈಲವನ್ನು ಖರೀದಿಸಲು ಮುಕ್ತವಾಗಿದೆ ಮತ್ತು ಇಂಧನ ಆಮದುಗಳನ್ನು ವೈವಿಧ್ಯಗೊಳಿಸುವ ಅದರ ಪ್ರಯತ್ನಗಳು ಹೊಸದಲ್ಲ ಎಂದು ಹೇಳುವ ಮೂಲಕ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿತು.

26
ಭಾರತದ ನಿಲುವಿನಲ್ಲಿ ರಷ್ಯಾಕ್ಕೆ ಯಾವುದೇ ವಿಶೇಷತೆ ಕಾಣಿಸುತ್ತಿಲ್ಲ
Image Credit : X

ಭಾರತದ ನಿಲುವಿನಲ್ಲಿ ರಷ್ಯಾಕ್ಕೆ ಯಾವುದೇ ವಿಶೇಷತೆ ಕಾಣಿಸುತ್ತಿಲ್ಲ

ಪ್ರಧಾನಿ ನರೇಂದ್ರ ಮೋದಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿ ಅಮೆರಿಕ ಮತ್ತು ಬಹುಶಃ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಗೆ ಬದಲಾಯಿಸಲು ಒಪ್ಪಿಕೊಂಡಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ಭಾರತದ ನಿಲುವಿನಲ್ಲಿ ರಷ್ಯಾಕ್ಕೆ ಯಾವುದೇ ವಿಶೇಷತೆ ಕಾಣಿಸುತ್ತಿಲ್ಲ, ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಏಕೈಕ ಪೂರೈಕೆದಾರ ರಷ್ಯಾ ಅಲ್ಲ ಎಂದು ನಮಗೆ ಮತ್ತು ಇತರ ಎಲ್ಲಾ ಅಂತರರಾಷ್ಟ್ರೀಯ ಇಂಧನ ತಜ್ಞರಿಗೆ ಚೆನ್ನಾಗಿ ತಿಳಿದಿದೆ. ಭಾರತ ಯಾವಾಗಲೂ ಇತರ ದೇಶಗಳಿಂದ ಈ ಉತ್ಪನ್ನಗಳನ್ನು ಖರೀದಿಸುತ್ತದೆ. ಆದ್ದರಿಂದ, ನಾವು ಇಲ್ಲಿ ಹೊಸದೇನೂ ಕಾಣುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ರಷ್ಯಾದ ತೈಲ ಆಮದನ್ನು ನಿಲ್ಲಿಸುವ ಬಗ್ಗೆ ಭಾರತದಿಂದ ರಷ್ಯಾಕ್ಕೆ ಯಾವುದೇ ಅಧಿಕೃತ ಸಂವಹನ ಬಂದಿಲ್ಲ ಎಂದು ಪೆಸ್ಕೋವ್ ಹೇಳಿದ್ದರು.

Related Articles

Related image1
'ಖಂಡಿತ ರಷ್ಯಾದಿಂದ ತೈಲ ಖರೀದಿ ಮುಂದುವರಿಯುತ್ತೆ..' ಟ್ರಂಪ್ ಸುಂಕ ಬೆದರಿಕೆ ದಿಕ್ಕರಿಸಿ ಭಾರತ ದಿಟ್ಟ ನಿಲುವು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
Related image2
ಮೋದಿ ರಷ್ಯಾದಿಂದ ತೈಲ ಖರೀದಿಸಲ್ಲ ಎಂದಿದ್ದಾರೆ : ಮತ್ತೆ ಟ್ರಂಪ್‌ ಸುಳ್ಳು
36
ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಆಮದು ಪ್ರಮಾಣದಲ್ಲಿ ಕುಸಿತ
Image Credit : X

ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಆಮದು ಪ್ರಮಾಣದಲ್ಲಿ ಕುಸಿತ

ಆದರೆ ಈಗ 2025ರ ಡಿಸೆಂಬರ್‌ನಲ್ಲೇ ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಆಮದು ಪ್ರಮಾಣವೂ 38 ತಿಂಗಳಲ್ಲೇ ಅತ್ಯಂತ ಕನಿಷ್ಟವಾಗಿತ್ತು ಎಂದು ವರದಿಯಾಗಿದೆ. ರಷ್ಯಾದ ತೈಲವು ಭಾರತದ ಆಮದಿನ ಕಾಲು ಭಾಗಕ್ಕಿಂತ ಕಡಿಮೆಯಿದ್ದು, ಇದು ಕೇವಲ ಒಂದು ತಿಂಗಳ ಹಿಂದೆ 34% ರಷ್ಟಿತ್ತು ಎಂದು ಇತ್ತೀಚಿನ ದಾಖಲೆಗಳ ವಿಶ್ಲೇಷಣೆ ತೋರಿಸುತ್ತದೆ. ಹಾಗೆಯೇ ಡಿಸೆಂಬರ್ 2024 ಕ್ಕೆ ಹೋಲಿಸಿದರೆ US ನಿಂದ ಆಮದು ಸುಮಾರು 31% ರಷ್ಟು ಹೆಚ್ಚಾಗಿದೆ.

46
ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲಿದೆ
Image Credit : x

ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲಿದೆ

ಭಾರತದ ಆಮದಿನ ಮೇಲಿನ ಸುಂಕವನ್ನು ಅಮೆರಿಕ 50% ದಿಂದ 18% ಕ್ಕೆ ಇಳಿಸುವುದಕ್ಕೆ ಪ್ರತಿಯಾಗಿ ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡ ಕಳೆದ ವಾರ ಪದೇ ಪದೇ ಹೇಳಿಕೊಂಡಿತ್ತು ಅದೇ ಸಮಯದಲ್ಲಿ ಈ ಮಾಹಿತಿ ಬಂದಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ವ್ಯಾಪಾರ ಸಚಿವ ಪಿಯೂಷ್ ಗೋಯಲ್ ಬುಧವಾರ ಮಾತನಾಡುತ್ತಾ, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯ ನಡುವೆ ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲಿದೆ ಮತ್ತು ತನ್ನ ನಾಗರಿಕರಿಗೆ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಿದೆ ಎಂದು ಹೇಳಿದ್ದರು.

 ವ್ಯಾಪಾರ ಒಪ್ಪಂದದ ಕುರಿತು ಸಂಸತ್ತಿಗೆ ನೀಡಿದ ಮೊದಲ ಹೇಳಿಕೆಯಲ್ಲಿ, ಗೋಯಲ್ ಯಾವುದೇ ದೇಶದಿಂದ ಇಂಧನ ಖರೀದಿಗಳನ್ನು ಬೇರೆಡೆಗೆ ಬದಲಾಯಿಸುವ ಬಗ್ಗೆ ಉಲ್ಲೇಖಿಸಿಲ್ಲ. ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತೀಯ ಸಂಸ್ಕರಣಾಗಾರಗಳಿಗೆ ಸರ್ಕಾರ ಹೇಳಿಲ್ಲ ಮತ್ತು ಈಗಾಗಲೇ ಪ್ರಕ್ರಿಯೆಯಲ್ಲಿರುವ ಖರೀದಿಗಳನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ವರದಿಯಾಗಿದೆ. ಅಮೆರಿಕದ ಒಪ್ಪಂದದಲ್ಲಿ, ಭಾರತವು ಕೃಷಿ ಮತ್ತು ಹೈನುಗಾರಿಕೆಯಂತಹ ಸೂಕ್ಷ್ಮ ಕ್ಷೇತ್ರಗಳನ್ನು ಯಶಸ್ವಿಯಾಗಿ ರಕ್ಷಿಸಿದೆ ಎಂದು ಗೋಯಲ್ ಹೇಳಿದ್ದರು.

56
ರಷ್ಯಾದ ತೈಲ ಆಮದು ಪ್ರಮಾಣದಲ್ಲಿ ತೀವ್ರಕುಸಿತ
Image Credit : X

ರಷ್ಯಾದ ತೈಲ ಆಮದು ಪ್ರಮಾಣದಲ್ಲಿ ತೀವ್ರಕುಸಿತ

ಡಿಸೆಂಬರ್ 2025 ರಲ್ಲಿ $2.7 ಶತಕೋಟಿಯಷ್ಟಿದ್ದ ಭಾರತದ ರಷ್ಯಾದ ತೈಲ ಆಮದು, ಡಿಸೆಂಬರ್ 2024ರಲ್ಲಿ ಆಮದು ಮಾಡಿಕೊಂಡ ತೈಲದ ಪ್ರಮಾಣಕ್ಕಿಂತ 15% ಕಡಿಮೆಯಾಗಿದೆ ಮತ್ತು ನವೆಂಬರ್ 2025 ರಲ್ಲಿ ಆಮದು ಮಾಡಿಕೊಂಡ $3.7 ಶತಕೋಟಿ ಮೌಲ್ಯದ ಆಮದುಗಳಿಗಿಂತ 27.1% ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮವಾಗಿ, ಭಾರತದ ಒಟ್ಟಾರೆ ತೈಲ ಆಮದುಗಳಲ್ಲಿ ರಷ್ಯಾದ ಪಾಲು ಡಿಸೆಂಬರ್ 2025 ರಲ್ಲಿ 24.9% ಕ್ಕೆ ಇಳಿದಿದೆ, ಇದು ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ.

ಇದನ್ನೂ ಓದಿ: 

ಮೃತಪಟ್ಟ ವ್ಯಕ್ತಿ 48 ಗಂಟೆಗಳ ನಂತರ ಶವಾಗಾರದಲ್ಲಿ ಕಿರುಚುತ್ತಲ್ಲೇ ಎದ್ದ: ಸತ್ತು ಬದುಕಿದವನಿಗೆ ಕಾದಿತ್ತು ಮತ್ತೊಂದು ಆಘಾತ

66
 ತೈಲ ಆಮದು ಮಾಡಿಕೊಳ್ಳುವುದಕ್ಕೆ ಈಗ ಭಾರತಕ್ಕೆ ಹಲವು ಆಯ್ಕೆಗಳಿವೆ.
Image Credit : X

ತೈಲ ಆಮದು ಮಾಡಿಕೊಳ್ಳುವುದಕ್ಕೆ ಈಗ ಭಾರತಕ್ಕೆ ಹಲವು ಆಯ್ಕೆಗಳಿವೆ.

ಭಾರತವು ಡಿಸೆಂಬರ್ 2025 ರಲ್ಲಿ ಅಮೆರಿಕದಿಂದ $569.3 ಮಿಲಿಯನ್ ಮೌಲ್ಯದ ತೈಲವನ್ನು ಆಮದು ಮಾಡಿಕೊಂಡಿದೆ. ಇದು ನವೆಂಬರ್ 2025 ರಲ್ಲಿ ಆಮದು ಮಾಡಿಕೊಂಡ ಪ್ರಮಾಣಕ್ಕಿಂತ 60.5% ಕಡಿಮೆಯಿದ್ದರೂ, ನವೆಂಬರ್‌ನಲ್ಲಿ ಅಮೆರಿಕದಿಂದ ತೈಲ ಆಮದು ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ್ದರಿಂದ ಹೀಗಾಗಿದೆ. ಡಿಸೆಂಬರ್ 2024ಕ್ಕೆ ಹೋಲಿಸಿದರೆ 2025ರಲ್ಲಿ ಅಮೆರಿಕದಿಂದ ತೈಲ ಆಮದು ಸುಮಾರು 31% ಹೆಚ್ಚಾಗಿದೆ. ಭಾರತವು ಡಿಸೆಂಬರ್ 2025 ರಲ್ಲಿ ಅಮೆರಿಕಾದಿಂದ 1.1 ಮಿಲಿಯನ್ ಟನ್ ಆಮದು ಮಾಡಿಕೊಂಡಿದ್ದು, ಇದು ಹಿಂದಿನ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ 58% ಹೆಚ್ಚಾಗಿದೆ. ಒಟ್ಟಾರೆಯಾಗಿ, ಡಿಸೆಂಬರ್ 2025 ರಲ್ಲಿ ಭಾರತವು ತನ್ನ ತೈಲ ಆಮದುಗಳಿಗೆ ಹಲವು ದೇಶಗಳನ್ನು ಅವಲಂಬಿಸಿದ್ದು, ತೈಲ ಆಮದು ಮಾಡಿಕೊಳ್ಳುವುದಕ್ಕೆ ಈಗ ಭಾರತಕ್ಕೆ ಹಲವು ಆಯ್ಕೆಗಳಿವೆ.

ಇದನ್ನೂ ಓದಿ: ಭಾರತ ಅಮೆರಿಕಾ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಕರೆ ಬಹಳ ಅಗತ್ಯವಾಗಿತ್ತು: ಜೈಶಂಕರ್ ಪುತ್ರ ಧ್ರುವ್ ಜೈಶಂಕರ್

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಅಮೆರಿಕದ ವ್ಯಾಪಾರ ಯುದ್ಧ
ರಷ್ಯಾ

Latest Videos
Recommended Stories
Recommended image1
ಮನೆಯ ಮೊದಲ ಮಗು ಈ ದಿನಾಂಕಗಳಲ್ಲಿ ಹುಟ್ಟಿದರೆ.. ಅವರು ಕುಬೇರರಾಗುವುದು ಪಕ್ಕಾ
Recommended image2
ಕರ್ನಾಟಕದ ಎಲ್ಲೆಡೆ ಚಿನ್ನದ ಗಣಿ; ನಿಮ್ಮೂರಲ್ಲಿದ್ದರೂ ಸರ್ಕಾರ ಮಾಹಿತಿಯನ್ನೇ ಕೊಟ್ಟಿಲ್ಲ!
Recommended image3
Interesting Facts: ₹1 ನಾಣ್ಯ ತಯಾರಿಸಲು ₹1.11 ವೆಚ್ಚ! ನಷ್ಟ ಆದ್ರೂ ಖರ್ಚು ಮಾಡೋದ್ಯಾಕೆ ಸರ್ಕಾರ?
Related Stories
Recommended image1
'ಖಂಡಿತ ರಷ್ಯಾದಿಂದ ತೈಲ ಖರೀದಿ ಮುಂದುವರಿಯುತ್ತೆ..' ಟ್ರಂಪ್ ಸುಂಕ ಬೆದರಿಕೆ ದಿಕ್ಕರಿಸಿ ಭಾರತ ದಿಟ್ಟ ನಿಲುವು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
Recommended image2
ಮೋದಿ ರಷ್ಯಾದಿಂದ ತೈಲ ಖರೀದಿಸಲ್ಲ ಎಂದಿದ್ದಾರೆ : ಮತ್ತೆ ಟ್ರಂಪ್‌ ಸುಳ್ಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved