ದಕ್ಷಿಣ ಆಫ್ರಿಕಾದಲ್ಲಿ, ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ಘೋಷಿಸಲಾದ ವ್ಯಕ್ತಿಯೊಬ್ಬ, ಶವಾಗಾರದ ಫ್ರೀಜರ್‌ನಲ್ಲಿ 48 ಗಂಟೆಗಳ ನಂತರ ಎಚ್ಚರಗೊಂಡಿದ್ದಾನೆ. ಈ ಘಟನೆಯ ನಂತರ ಆತ ಚೇತರಿಸಿಕೊಂಡರೂ, ಆತನಿಗೆ ಮತ್ತೊಂದು ಆಘಾತ ಕಾದಿತ್ತು. ಏನದು?
ಅಪಘಾತದಲ್ಲಿ ಸಾವು ಎಂದು ಘೋಷಣೆ: 48 ಗಂಟೆ ಫ್ರೀಜರ್‌ನಲ್ಲಿದ್ದವ ಎದ್ದು ಕುಳಿತ
ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಿಸಿದ ನಂತರ ವ್ಯಕ್ತಿಯೊಬ್ಬ ಶವಗಾರದಲ್ಲಿ 48 ಗಂಟೆಗಳ ನಂತರ ಕಿರುಚುತ್ತಾ ಎದ್ದು ಕುಳಿತ ವಿಚಿತ್ರ ಘಟನೆಯೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಸಿಫೊ ವಿಲಿಯಂ ಮ್ಡ್ಲೆಟ್ಶೆ ಎಂಬ ವ್ಯಕ್ತಿ ಕಾರು ಅಪಘಾತಕ್ಕೀಡಾಗಿದ್ದು, ವೈದ್ಯರು ಆತ ಅಪಘಾತದಿಂದಾಗಿ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದರು. ನಂತರ ಆತನನ್ನು ಅಲ್ಲಿನ ಶವಾಗಾರವೊಂದರಲ್ಲಿ ಪ್ರೀಜರ್ ಡ್ರವರ್‌ನಲ್ಲಿ ಇರಿಸಲಾಗಿತ್ತು. ಫ್ರೀಜರ್‌ನಲ್ಲಿ ಇಟ್ಟರೆ ಅರೆಜೀವ ಇದ್ದವರು ಸಾಯೋದು ಪಕ್ಕ. ಅಂತದರಲ್ಲಿ ಈತ ಮಾತ್ರ ಘಟನೆ ನಡೆದು 48 ಗಂಟೆಗಳ ನಂತರ ಕಿರುಚುತ್ತಲೇ ಮೇಲೆದ್ದು ಕುಳಿತಿದ್ದಾನೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ವಿಲಿಯಂ ಸಾವನ್ನಪ್ಪಿದ್ದಾನೆ ಎಂದು ತಿಳಿದ ನಂತರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ದಕ್ಷಿಣದಲ್ಲಿರುವ ಸೆಬೊಕೆಂಗ್ ಪಟ್ಟಣದ ಇಪ್ಪತ್ತು ವರ್ಷದ ವ್ಯಕ್ತಿಯನ್ನು ಅಂತ್ಯಕ್ರಿಯೆಗಾಗಿ ಶವಗಾರಕ್ಕೆ ಸಾಗಿಸಲಾಯಿತು. ಅಲ್ಲಿ ಅವನನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲಾಗಿತ್ತು. ಅಲ್ಲಿ ಸಾವನ್ನಪ್ಪಿರುವುದು ಘೋಷಣೆಯಾದ ನಂತರ ಶವವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡುವುದು ಅಲ್ಲಿನ ಪ್ರಮಾಣಿತ ಕಾರ್ಯವಿಧಾನವಾಗಿತ್ತು. ಆದರೆ ಎರಡು ದಿನಗಳ ನಂತರ ಶವಾಗಾರದ ನೌಕರರು ಶವಗಳನ್ನು ಇಡುವ ಕಬ್ಬಿಣದ ಕೋಲ್ಡ್ ಸ್ಟೋರೇಜೊಂದರಿಂದ ಹೊರಹೊಮ್ಮುತ್ತಿರುವ ವಿಚಿತ್ರ ಶಬ್ದಗಳನ್ನು ಗಮನಿಸಿ ಪರಿಶೀಲಿಸಿದಾಗ ಭಯಬಿದ್ದು ಓಡುವ ಸ್ಥಿತಿ ಅವರದ್ದಾಗಿತ್ತು.
ಇದನ್ನೂ ಓದಿ: 26ರ ಹರೆಯಕ್ಕೆ ಸಿಇಒ ಆದವಳಿಂದ ಭಾರಿ ವಂಚನೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಯುವತಿ ವಿರುದ್ಧ ತನಿಖೆ
ಘಟನೆಯ ನಂತರ ಭಯಗೊಂಡು ಮದುವೆಯಾಗಲು ನಿರಾಕರಿಸಿದ ಗೆಳತಿ
ಸದ್ದು ಕೇಳಿ ಏನೋ ತೀವ್ರವಾಗಿ ತಪ್ಪಾಗಿದೆ ಎಂದು ಗುರುತಿಸಿದ ಸಿಬ್ಬಂದಿ ಡ್ರಾಯರ್ ಅನ್ನು ತೆರೆದಾಗ ಮೆಡ್ಲೆಟ್ಶೆ ಉಸಿರಾಡುತ್ತಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಅಲ್ಲದೇ ಅವರು, ಎಚ್ಚರಗೊಂಡು ಒಳಗಿನಿಂದ ಸಹಾಯಕ್ಕಾಗಿ ಕೂಗಿದ್ದಾರೆ. ಅವರು ತಾನೆಲ್ಲಿದ್ದೇನೆ ಎಂಬುದನ್ನು ಕೂಡಲೇ ಅರಿತುಕೊಂಡು ಕಿರುಚಾಡಲು ಶುರು ಮಾಡಿದರು. ಆದರೆ ವಿಲಿಯಂ ಅವರ ದುರಾದೃಷ್ಟ ಇಲ್ಲಿಗೆ ಮುಗಿಯಲಿಲ್ಲ, ಅಪಘಾತಕ್ಕೂ ಮೊದಲು ವಿಲಿಯಂಗೆ ವಿವಾಹ ನಿಶ್ಚಯವೂ ಆಗಿತ್ತು. ಆದರೆ ಅಪಘಾತದಲ್ಲಿ ಸತ್ತು ಬದುಕಿ ಬಂದು ಚೇತರಿಕೆಯ ಬಳಿಕ ಆತನೊಂದಿಗೆ ಮದುವೆ ನಿಗದಿಯಾಗಿದ್ದ ಯುವತಿ, ಆತನನ್ನು ಮದುವೆಯಾಗಲು ನಿರಾಕರಿಸಿದಳು, ಈತನೋರ್ವ ವಿಚಿತ್ರ ಅಸಾಧಾರಣ ವ್ಯಕ್ತಿ ಎಂದು ಆಕೆ ಹೇಳಿ ಹೊರಟು ಹೋದಳು ಎಂದು ವರದಿಯಾಗಿದೆ. ಅವನು ಸಮಾಧಿಯಿಂದ ಹಿಂತಿರುಗಿದ ಜೊಂಬಿ ಎಂದು ಅವಳು ನಂಬಿದ್ದಳು ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತ ಅಮೆರಿಕಾ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಕರೆ ಬಹಳ ಅಗತ್ಯವಾಗಿತ್ತು: ಜೈಶಂಕರ್ ಪುತ್ರ ಧ್ರುವ್ ಜೈಶಂಕರ್


