ನಾಗಲೋಟಕ್ಕೆ ಬಿತ್ತು ಬ್ರೇಕ್; ಚಿನ್ನದ ಬೆಲೆಯಲ್ಲಿ ಎರಡನೇ ದಿನವೂ ಇಳಿಕೆ, ಇಂದೇ ಖರೀದಿಸಿ
ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರಗಳು ಕುಸಿದಿದ್ದು, ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಲಾಭದಾಯಕವಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಚಿನ್ನ
ಮಧ್ಯಮವರ್ಗದ ಜನತೆಗೆ ಚಿನ್ನ ಅನ್ನೋದು ಗಗನಕುಸುಮವಾಗಿದೆ. ಚಿನ್ನ ಯಾವಾಗ ಖರೀದಿ ಮಾಡಬೇಕು ಅನ್ನೋ ಗೊಂದಲದಲ್ಲಿ ನೀವು ಸಿಲುಕಿದ್ರೆ, ಇಂದಿನ ದಿನ ನಿಮಗೆ ಲಾಭದಾಯಕವಾಗಲಿದೆ. ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದ ಪರಿಣಾಮ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 13,850 ರೂಪಾಯಿ
8 ಗ್ರಾಂ: 1,10,800 ರೂಪಾಯಿ
10 ಗ್ರಾಂ: 1,38,500 ರೂಪಾಯಿ
100 ಗ್ರಾಂ: 13,85,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,110 ರೂಪಾಯಿ
8 ಗ್ರಾಂ: 1,20,880 ರೂಪಾಯಿ
10 ಗ್ರಾಂ: 1,52,100 ರೂಪಾಯಿ
100 ಗ್ರಾಂ: 15,11,000 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,40,300 ರೂಪಾಯಿ, ಮುಂಬೈ: 1,38,500 ರೂಪಾಯಿ, ದೆಹಲಿ: 1,38,650 ರೂಪಾಯಿ, ಕೋಲ್ಕತ್ತಾ: 1,38,500 ರೂಪಾಯಿ, ಬೆಂಗಳೂರು: 1,38,500 ರೂಪಾಯಿ, ಪುಣೆ: 1,38,500 ರೂಪಾಯಿ, ಹೈದರಾಬಾದ್: 1,38,500 ರೂಪಾಯಿ
ಇದನ್ನೂ ಓದಿ: Snapchat ಸಿಇಒಗೆ ಕೇವಲ 3 ಸಾಲಿನ ಇಮೇಲ್ ಕಳುಹಿಸಿದ ಭಾರತೀಯ ವಿದ್ಯಾರ್ಥಿ: ರಿಪ್ಲೈ ಕೊಟ್ಟು ಶಾಕ್ ನೀಡಿದ ಬಾಸ್!
ಬೆಳ್ಳಿ ಬೆಲೆ
ಇಂದು 22 ಕ್ಯಾರಟ್ ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 250 ರೂ. ಮತ್ತು 270 ರೂ.ಗಳಷ್ಟು ಇಳಿಕೆಯಾಗಿದೆ. ಆದ್ರೆ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಇಂದಿನ ಬೆಳ್ಳಿ ಬೆಲೆ ಈ ರೀತಿಯಾಗಿದೆ.
10 ಗ್ರಾಂ: 2,650 ರೂಪಾಯಿ
100 ಗ್ರಾಂ: 26,500 ರೂಪಾಯಿ
1000 ಗ್ರಾಂ: 2,65,000 ರೂಪಾಯಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆಗೆ ಮನೆ ಬೇಕೇ?: ಉತ್ತಮ ಸಂಪರ್ಕ ಹೊಂದಿರುವ 8 ಬಜೆಟ್ ಸ್ನೇಹಿ ಏರಿಯಾಗಳಿವು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

