ಅಕ್ಷಯ ತೃತೀಯ ಮರುದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ದರ?
ಅಕ್ಷಯ ತೃತೀಯದ ಮರುದಿನವಾದ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆದರೆ, ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಭಾರೀ ಇಳಿಕೆ
ಭಾರತದಲ್ಲಿ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿ ಮಾಡಬೇಕೆಂದು ಜನರು ಕಾಯುತ್ತಿರುತ್ತಾರೆ. ಈ ವಿಶೇಷ ದಿನದಂದು ಬೆಲೆ ಎಷ್ಟೇ ಆಗಿದ್ರೂ ಜನರು ಕನಿಷ್ಠ 1 ಗ್ರಾಂನಷ್ಟು ಚಿನ್ನವನ್ನು ಖರೀದಿ ಮಾಡುತ್ತಿದ್ದಾರೆ. ಅಕ್ಷಯ ತೃತೀಯ ಮರುದಿನವಾದ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.
ಚಿನ್ನದ ಬೆಲೆ
ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 4,900 ರೂ.ಗಳಷ್ಟು ಕಡಿಮೆಯಾಗಿದೆ. ಚಿನ್ನದ ಬೆಲೆಗಳು ನಗರದಿಂದ ನಗರಕ್ಕೆ ಭಿನ್ನವಾಗಿರುತ್ತವೆ. ಹಾಗೆಯೇ 18, 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 14,235 ರೂಪಾಯಿ
8 ಗ್ರಾಂ: 1,13,880 ರೂಪಾಯಿ
10 ಗ್ರಾಂ: 1,42,350 ರೂಪಾಯಿ
100 ಗ್ರಾಂ: 14,23,500 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,529 ರೂಪಾಯಿ
8 ಗ್ರಾಂ: 1,24,232 ರೂಪಾಯಿ
10 ಗ್ರಾಂ: 1,55,290 ರೂಪಾಯಿ
100 ಗ್ರಾಂ: 15,52,900 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,43,000 ರೂಪಾಯಿ, ಮುಂಬೈ: 1,42,350 ರೂಪಾಯಿ, ದೆಹಲಿ: 1,42,500 ರೂಪಾಯಿ, ಕೊಲ್ಕತ್ತಾ: 1,42,350 ರೂಪಾಯಿ, ಬೆಂಗಳೂರು: 1,42,350 ರೂಪಾಯಿ, ಪುಣೆ: 1,42,350 ರೂಪಾಯಿ, ಹೈದರಾಬಾದ್: 1,42,350 ರೂಪಾಯಿ, ವಡೋದರಾ: 1,42,400 ರೂಪಾಯಿ, ಅಹಮದಾಬಾದ್: 1,42,400 ರೂಪಾಯಿ ಆಗಿದೆ.
ಇದನ್ನೂ ಓದಿ: ಇಂದು ಅಕ್ಷಯ ತೃತೀಯ: ₹20000 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಸೇಲ್ ನಿರೀಕ್ಷೆ
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ರೆ, ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಇಂದು ದೇಶದಲ್ಲಿ ಬೆಳ್ಳಿ ದರ ಈ ಕೆಳಗಿನಂತಿದೆ
10 ಗ್ರಾಂ: 2750 ರೂಪಾಯಿ
100 ಗ್ರಾಂ: 27,500 ರೂಪಾಯಿ
1000 ಗ್ರಾಂ: 2,75,000 ರೂಪಾಯಿ
ಇದನ್ನೂ ಓದಿ: ಸಿಕ್ಕಿಂ ಟೆಮಿ ಚಹಾ ಪುಡಿ ದಾಖಲೆಯ ಬೆಲೆಗೆ ಸೇಲ್: 1 ಕೇಜಿಗೆ ಬರೋಬ್ಬರಿ 27,000 ರೂ.ಗೆ ಸೇಲ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

