MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ದಾಖಲೆಯ ಏರಿಕೆ ಕಂಡ ಚಿನ್ನದ ದರ: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ: ಹೇಗಿದೆ ಇಂದು ಬೆಳ್ಳಿ ಬಂಗಾರ ದರ

ದಾಖಲೆಯ ಏರಿಕೆ ಕಂಡ ಚಿನ್ನದ ದರ: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ: ಹೇಗಿದೆ ಇಂದು ಬೆಳ್ಳಿ ಬಂಗಾರ ದರ

Gold RateToday: ಚಿನ್ನದ ದರವು ನಿರಂತರವಾಗಿ ಏರಿಕೆಯಾಗುತ್ತಿದ್ದು, ಹೂಡಿಕೆಯಾಗಿ ಪರಿಗಣಿಸಲ್ಪಟ್ಟಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಲೇಖನದಲ್ಲಿ 24, 22, ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ ದರ ಹಾಗೂ ಪ್ರಮುಖ ನಗರಗಳಲ್ಲಿನ ಬೆಲೆ ಮತ್ತು ಬೆಳ್ಳಿಯ ದರವನ್ನು ನೀಡಲಾಗಿದೆ.

2 Min read
Anusha Kb
Published : Sep 16 2025, 11:11 AM IST
Share this Photo Gallery
  • FB
  • TW
  • Linkdin
  • Whatsapp
17
ಹೇಗಿದೆ ಇಂದಿನ ಬಂಗಾರದ ದರ
Image Credit : Pinterest

ಹೇಗಿದೆ ಇಂದಿನ ಬಂಗಾರದ ದರ

ಕೆಲ ದಿನಗಳಿಂದ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ತುಸುವೇ ಇಳಿದು ಒಮ್ಮಿಂದೊಮ್ಮೆಲೆ ಭಾರಿ ಏರಿಕೆ ಆಗುವ ಚಿನ್ನದ ದರದಿಂದ ಜನಸಾಮಾನ್ಯರ ಚಿನ್ನ ಕೊಳ್ಳುವ ಆಸೆಗೆ ತಣ್ಣೀರೆರಚಿದಂತಾಗಿದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಅಮೆರಿಕಾದ ತೆರಿಗೆ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಹಳ ಏರಿಳಿತವಾಗುತ್ತಿದ್ದು, ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.

27
ಚಿನ್ನದ ದರ ಇಂದು ಹೇಗಿದೆ
Image Credit : Pinterest

ಚಿನ್ನದ ದರ ಇಂದು ಹೇಗಿದೆ

ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 11,193 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,260 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,395 ಇದೆ.

Related Articles

Related image1
Inherited gold tax : ಅಮ್ಮ, ಅಜ್ಜಿ ನೀಡಿದ ಬಂಗಾರಕ್ಕೆ ತೆರಿಗೆ ಪಾವತಿಸ್ಬೇಕಾ? ಏನಿದೆ ಟ್ಯಾಕ್ಸ್ ರೂಲ್ಸ್?
Related image2
Gold Rate: ರೇಟ್ ಕಡಿಮೆ ಆದ್ಮೇಲೆ ಬಂಗಾರ ಖರೀದಿಸೋ ಪ್ಯಾನ್‌ ಇದೆಯಾ?; 5 ವರ್ಷಗಳಲ್ಲಿ ರೇಟ್‌ ಏನಾಗತ್ತೆ?
37
24 ಕ್ಯಾರೆಟ್ ಚಿನ್ನದ ದರ
Image Credit : Pinterest

24 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 11,193 ರೂಪಾಯಿ (ನಿನ್ನೆಗಿಂತ 87 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 89,544 ರೂಪಾಯಿ ( ನಿನ್ನೆಗಿಂತ 696 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 1,11,930 ರೂಪಾಯಿ (ನಿನ್ನೆಗಿಂತ 870 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 11,19,300 ರೂಪಾಯಿ (ನಿನ್ನೆಗಿಂತ 8,700 ರೂಪಾಯಿ ಏರಿಕೆ)

47
22 ಕ್ಯಾರೆಟ್ ಚಿನ್ನದ ದರ
Image Credit : Asianet News

22 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 10,260 ರೂಪಾಯಿ (ನಿನ್ನೆಗಿಂತ 80 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 82,080 ರೂಪಾಯಿ (ನಿನ್ನೆಗಿಂತ 640 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 1,02,600 ರೂಪಾಯಿ (ನಿನ್ನೆಗಿಂತ 800 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 10,26,000 ರೂಪಾಯಿ (ನಿನ್ನೆಗಿಂತ 8000 ರೂಪಾಯಿ ಏರಿಕೆ)

57
18 ಕ್ಯಾರೆಟ್ ಚಿನ್ನದ ದರ
Image Credit : Asianet News

18 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 8,395 ರೂಪಾಯಿ (ನಿನ್ನೆಗಿಂತ 66 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 67,610 ರೂಪಾಯಿ (ನಿನ್ನೆಗಿಂತ 528 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 83,950 ರೂಪಾಯಿ (ನಿನ್ನೆಗಿಂತ 660 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 8,39,500 ರೂಪಾಯಿ (ನಿನ್ನೆಗಿಂತ 6,600 ರೂಪಾಯಿ ಏರಿಕೆ)

67
 ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
Image Credit : Asianet News

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 102800 ರೂಪಾಯಿ, ಮುಂಬೈ: 102600 ರೂಪಾಯಿ, ದೆಹಲಿ: 102750 ರೂಪಾಯಿ, ಬೆಂಗಳೂರು: 102600 ರೂಪಾಯಿ, ಅಹಮದಾಬಾದ್: 102650 ರೂಪಾಯಿ, ಕೋಲ್ಕತ್ತಾ: 102600 ರೂಪಾಯಿ, ಹೈದರಾಬಾದ್‌: 102600 ರೂಪಾಯಿ, ವಡೋದರಾ: 102650 ರೂಪಾಯಿ

77
ದೇಶದಲ್ಲಿಂದು ಬೆಳ್ಳಿ ಬೆಲೆ
Image Credit : Pinterest

ದೇಶದಲ್ಲಿಂದು ಬೆಳ್ಳಿ ಬೆಲೆ

ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲೂ ಭಾರಿ ಏರಿಕೆ ಆಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ

10 ಗ್ರಾಂ: 1,340 ರೂಪಾಯಿ

100 ಗ್ರಾಂ: 13,400 ರೂಪಾಯಿ

1000 ಗ್ರಾಂ: 134000 ರೂಪಾಯಿ

ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ ಮತ್ತೆ ಮೇಘಸ್ಫೋಟ ಪ್ರವಾಹ: ತಪಕೇಶ್ವರ ದೇವಾಲಯ ಜಲಾವೃತ: ಹಲವರು ನಾಪತ್ತೆ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಚಿನ್ನದ ಕಿವಿಯೋಲೆಗಳು
ಚಿನ್ನದ ಬೆಲೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved