Inherited Gold Tax :  ಹಿರಿಯರಿಂದ ನಿಮಗೆ ಬಂಗಾರ ಸಿಕ್ಕಿದ್ರೆ ಅದಕ್ಕೆ ತೆರಿಗೆ ಪಾವತಿ ಮಾಡ್ಬೇಕಾ? ಮಾಡೋದಾದ್ರೆ ಎಷ್ಟು? ಯಾವಾಗ ತೆರಿಗೆ ಪಾವತಿಸಬೇಕು? ಇಲ್ಲಿದೆ ಆ ಬಗ್ಗೆ ಮಾಹಿತಿ 

ಭಾರತೀಯರು ಬಂಗಾರ (Gold)ದ ಜೊತೆ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ. ಭಾರತೀಯರಿಗೆ ಇದು ಅಮೂಲ್ಯ ಲೋಹ ಮಾತ್ರ ಅಲ್ವೇ ಅಲ್ಲ. ಸಂಪ್ರದಾಯ (tradition)ಕ್ಕೆ ಸಂಬಂಧಿಸಿದ ಹೂಡಿಕೆ. ಕುಟುಂಬಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಈ ಬಂಗಾರದ ಆಭರಣ ಹಸ್ತಾಂತರವಾಗ್ತಿರುತ್ತದೆ. ಅನೇಕ ಜನರು ತಮ್ಮ ಪಾಲಕರು, ಅಜ್ಜ – ಅಜ್ಜಿ ಸೇರಿದಂತೆ ಹಿರಿಯರಿಂದ ಚಿನ್ನವನ್ನು ಆನುವಂಶಿಕವಾಗಿ ಪಡೆಯುತ್ತಾರೆ. ನೀವು ಚಿನ್ನವನ್ನು ಆನುವಂಶಿಕವಾಗಿ ಪಡೆದಿದ್ದರೆ ಅದಕ್ಕೆ ಎಷ್ಟು ತೆರಿಗೆ (tax) ಪಾವತಿ ಮಾಡ್ಬೇಕು ಎಂಬುದನ್ನು ತಿಳಿದಿರಬೇಕು. ಪೋಷಕರಿಂದ ಆನುವಂಶಿಕವಾಗಿ ಚಿನ್ನವನ್ನು ಪಡೆದಾಗ, ಅದು ಆರ್ಥಿಕ ಪ್ರಾಮುಖ್ಯತೆ ಹಾಗೂ ಭಾವನಾತ್ಮಕ ಬಾಂಧವ್ಯ ಎರಡನ್ನೂ ಹೊಂದಿರುತ್ತದೆ. ಪಿತ್ರಾರ್ಜಿತ ಚಿನ್ನದ ಮೇಲೆ ಯಾವುದೇ ತಕ್ಷಣದ ತೆರಿಗೆ ಭಾರ ನಿಮಗೆ ಇರೋದಿಲ್ಲ. ಆದ್ರೆ ಆ ಚಿನ್ನವನ್ನು ನೀವು ಮಾರಾಟ ಮಾಡಲು ಮುಂದಾದ್ರೆ, ಉಡುಗೊರೆಯಾಗಿ ನೀಡಲು ಮುಂದಾದ್ರೆ ಇಲ್ಲವೇ ಹೂಡಿಕೆ ಮಾಡಲು ಮುಂದಾದಾಗ ತೆರಿಗೆ ಅನ್ವಯವಾಗುತ್ತೆ.

ಪಿತ್ರಾರ್ಜಿತವಾಗಿ ಪಡೆದ ಚಿನ್ನದ ಮೇಲೆ ಯಾವುದೇ ತೆರಿಗೆ ಇಲ್ಲ : ಪಿತ್ರಾರ್ಜಿತವಾಗಿ ಚಿನ್ನ ಹೊಂದಿದ್ರೆ ಅದನ್ನು ಆದಾಯ ಅಂತ ಪರಿಗಣಿಸೋದಿಲ್ಲ. ನಿಮ್ಮ ತಂದೆಯಿಂದ ಅಥವಾ ಹಿರಿಯರಿಂದ ಈ ಬಂಗಾರ ನಿಮ್ಮ ಕೈಗೆ ಬಂದ್ರೆ, ಬಂದ ತಕ್ಷಣ ನೀವು ಅದಕ್ಕೆ ತೆರಿಗೆ ಪಾವತಿ ಮಾಡೋ ಅಗತ್ಯ ಇರೋದಿಲ್ಲ. ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ವಿಲ್, ಉಡುಗೊರೆ ಪತ್ರ ಅಥವಾ ಉತ್ತರಾಧಿಕಾರ ಪ್ರಮಾಣಪತ್ರದ ಮೂಲಕ ಪಡೆದ ಚಿನ್ನ ತೆರಿಗೆ ಮುಕ್ತವಾಗಿರುತ್ತದೆ. ಆದ್ರೆ ನೀವು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಕೊಂಡಿರಬೇಕು. ನೀವು ಫೀಚರ್ ನಲ್ಲಿ ಇದನ್ನು ಮಾರಾಟ ಮಾಡೋಕೆ ಮುಂದಾದ್ರೆ ಇಲ್ಲ ಹೂಡಿಕೆ ಮಾಡಲು ಪ್ಲಾನ್ ಮಾಡಿದ್ರೆ ಆಗ ದಾಖಲೆಗಳ ಅಗತ್ಯವಿರುತ್ತದೆ.

ನಿಮ್ಮ ಆದಾಯ ವಿನಾಯಿತಿ ಮಿತಿ ಒಳಗಿದ್ದರೂ ಐಟಿಆರ್ ಸಲ್ಲಿಕೆ ಮಾಡಲೇಬೇಕು ಯಾಕೆ?

ಚಿನ್ನ ಮಾರಾಟ ಮಾಡುವಾಗ ಬಂಡವಾಳ ಲಾಭ ತೆರಿಗೆ ಅನ್ವಯ : ನೀವು ಚಿನ್ನವನ್ನು ಮಾರಾಟ ಮಾಡಿದಾಗ ನಿಜವಾದ ತೆರಿಗೆ ಅನ್ವಯವಾಗುತ್ತದೆ. ನೀವು ಪಾಲಕರಿಂದ ಬಂಗಾರ ಪಡೆದಾಗ ಇದ್ದ ಹಣದ ಬದಲು, ನಿಮ್ಮ ಪಾಲಕರು ಬಂಗಾರ ಖರೀದಿ ಮಾಡಿದಾಗ ಇದ್ದ ಬೆಲೆಯನ್ನೇ ವೆಚ್ಚದ ಬೆಲೆ ಅಂತ ಪರಿಗಣಿಸಲಾಗುತ್ತೆ. ಏಪ್ರಿಲ್ 1, 2001 ಕ್ಕಿಂತ ಮೊದಲು ಚಿನ್ನವನ್ನು ಖರೀದಿಸಿದ್ದರೆ, ಆ ಸಮಯದಲ್ಲಿ ನ್ಯಾಯಯುತ ಮಾರುಕಟ್ಟೆ ಮೌಲ್ಯವನ್ನು ವೆಚ್ಚವೆಂದು ಪರಿಗಣಿಸಲಾಗುತ್ತದೆ.

ಲಾಭದ ಮೇಲೆ ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ? : ಚಿನ್ನ ಮಾರಾಟದಿಂದ ಬರುವ ಲಾಭ ಬಂಡವಾಳ ಲಾಭ ತೆರಿಗೆಗೆ ಒಳಪಟ್ಟಿರುತ್ತದೆ. ಇದು ಎರಡು ವಿಧವಾಗಿದೆ. ಮೊದಲನೆಯದು ಅಲ್ಪಾವಧಿಯ ಬಂಡವಾಳ ಲಾಭಗಳು (STCG) ಮತ್ತು ಎರಡನೆಯದು ದೀರ್ಘಾವಧಿಯ ಬಂಡವಾಳ ಲಾಭಗಳು (LTCG). ನೀವು 24 ತಿಂಗಳೊಳಗೆ ಚಿನ್ನವನ್ನು ಮಾರಾಟ ಮಾಡಿದರೆ, ನೀವು ಅಲ್ಪಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ತೆರಿಗೆಯನ್ನು ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ವಿಧಿಸಲಾಗುತ್ತದೆ. ನೀವು 24 ತಿಂಗಳ ನಂತರ ಚಿನ್ನವನ್ನು ಮಾರಾಟ ಮಾಡಿದರೆ, ನೀವು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ, ಅದು ಶೇಕಡಾ 12.5 ಆಗಿರುತ್ತದೆ.

ITR Refund: ಐಟಿಆರ್‌ ಫೈಲ್‌ ಮಾಡಿ ದಿನಗಳೇ ಆಗಿದ್ರೂ ರೀಫಂಡ್‌ ಬಂದಿಲ್ವಾ? ಈ 6 ಕಾರಣಗಳಿರಬಹುದು..

ಉಡುಗೊರೆ ಮತ್ತು ಆನುವಂಶಿಕತೆಯ ನಡುವಿನ ವ್ಯತ್ಯಾಸ : ನಿಮ್ಮ ಪೋಷಕರು ನಿಮಗೆ ಚಿನ್ನವನ್ನು ಉಡುಗೊರೆಯಾಗಿ ನೀಡಿದರೆ ಅದು ತೆರಿಗೆ ಮುಕ್ತವಾಗಿರುತ್ತದೆ. ಆದ್ರೆ ನಿಕಟ ಸಂಬಂಧಿ ಹೊರತುಪಡಿಸಿ ಬೇರೆ ಯಾರಾದ್ರೂ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದರೆ ಮತ್ತು ಅದರ ಮೌಲ್ಯ 50,000 ರೂಪಾಯಿಗಿಂತ ಹೆಚ್ಚಿದ್ದರೆ ಅದನ್ನು ಆದಾಯವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ನೀವು ತೆರಿಗೆ ವಿಧಿಸಬೇಕು.