ಅಮೆರಿಕದ ಮಾದರಿಯಲ್ಲೇ, ಮೆಕ್ಸಿಕೋ ಕೂಡ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಲು ನಿರ್ಧರಿಸಿದೆ. 2026ರಿಂದ ಜಾರಿಗೆ ಬರಲಿರುವ ಈ ನೀತಿಯು, ದೇಶೀಯ ಉದ್ಯಮವನ್ನು ರಕ್ಷಿಸುವ ಗುರಿ ಹೊಂದಿದ್ದು, ಭಾರತದ ವಾಹನ ರಫ್ತು ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಭಾರತ ಹಾಗೂ ಅಮೆರಿಕಾದ ನಡುಣ ಶೀತಲ ಸಮರಕ್ಕೆ ಕಾರಣವಾಗಿರುವ ಶೇ.50 ಶೇಕಡಾ ಸುಂಕದ ನಂತರ ಈಗ ಮೆಕ್ಸಿಕೋ ಕೂಡ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಲು ನಿರ್ಧರಿಸಿದ್ದು, 2026ರ ಜನವರಿ ಮೊದಲ ದಿನದಂದೇ ಈ ಹೊಸ ಸುಂಕ ನೀತಿ ಜಾರಿಗೆ ಬರಲಿದೆ. ಅಮೆರಿಕಾದ ಸುಂಕ ನೀತಿಯಿಂದಾಗಿ ಈಗಾಗಲೇ ಸಂಕಷ್ಟಕ್ಕೀಡಾಗಿರುವ ಭಾರತಕ್ಕೆ ಈಗ ಮೆಕ್ಸಿಕೋದ ಸುಂಕವೂ ಕೂಡ ಮತ್ತಷ್ಟು ಹೊಡೆತ ನೀಡಲಿದೆ.

ಹೌದು ಭಾರತದ ಸರಕುಗಳಿಗೆ ಅಮೆರಿಕಾ ಶೇ.50 ರಷ್ಟು ಸುಂಕ ವಿಧಿಸಿದ ನಾಲ್ಕು ತಿಂಗಳ ನಂತರ, ಮೆಕ್ಸಿಕೋ ಕೂಡ ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಅಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಲು ಅನುಮೋದನೆ ನೀಡಿದೆ. ಅಲ್ಲಿನ ರಾಷ್ಟ್ರೀಯ ಉದ್ಯಮ ಮತ್ತು ಉತ್ಪಾದಕರನ್ನು ರಕ್ಷಿಸಲು ವಿದೇಶಿ ವಸ್ತುಗಳ ಮೇಲೆ ವಿಧಿಸಲಾಗುವ ಈ ಸುಂಕಗಳು 2026 ರ ಜನವರಿ 1ರಿಂದಲೇ ಜಾರಿಗೆ ಬರಲಿವೆ.

ಮೆಕ್ಸಿಕೋ ದೇಶವು ಏಷ್ಯಾ ರಾಷ್ಟ್ರಗಳಿಂದ ಆಮದಾಗುವ ವಾಹನಗಳ ಬಿಡಿಭಾಗಗಳು, ಲಘು ಕಾರುಗಳು, ಬಟ್ಟೆ, ಪ್ಲಾಸ್ಟಿಕ್‌ಗಳು, ಸ್ಟೀಲ್, ಗೃಹೋಪಯೋಗಿ ವಸ್ತುಗಳು, ಆಟಿಕೆಗಳು, ಜವಳಿ, ಪೀಠೋಪಕರಣಗಳು, ಪಾದರಕ್ಷೆಗಳು, ಚರ್ಮದ ವಸ್ತುಗಳು, ಕಾಗದ, ಕಾರ್ಡ್‌ಬೋರ್ಡ್, ಮೋಟಾರ್‌ಸೈಕಲ್‌ಗಳು, ಅಲ್ಯೂಮಿನಿಯಂ, ಟ್ರೇಲರ್‌ಗಳು, ಗಾಜು, ಸೋಪುಗಳು, ಸುಗಂಧ ದ್ರವ್ಯಗಳು ಮತ್ತು ಸೌಂದರ್ಯವರ್ಧಕಗಳಂತಹ ಸರಕುಗಳ ಮೇಲೆ ಸುಂಕ ವಿಧಿಸಿದೆ ಎಂದು ಮೆಕ್ಸಿಕನ್ ದಿನಪತ್ರಿಕೆ ಎಲ್ ಯೂನಿವರ್ಸಲ್ ವರದಿ ಮಾಡಿದೆ.

ಇದು ಭಾರತವೂ ಸೇರಿದಂತೆ ಮೆಕ್ಸಿಕೋ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳಾದ ದಕ್ಷಿಣ ಕೊರಿಯಾ, ಚೀನಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಮೆಕ್ಸಿಕೋ ವಿದೇಶಿ ಉತ್ಪನ್ನಗಳಿಗೆ ಇಷ್ಟೊಂದು ಸುಂಕ ವಿಧಿಸುತ್ತಿರುವುದು ಏಕೆ?

ಮೆಕ್ಸಿಕನ್ ಸರ್ಕಾರವು ಏಷ್ಯಾದ ದೇಶಗಳಿಂದ, ವಿಶೇಷವಾಗಿ ಚೀನಾದಿಂದ ವಸ್ತುಗಳ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ, ಏಕೆಂದರೆ ಚೀನಾದ ಜೊತೆ ಮೆಕ್ಸಿಕೋದ ವ್ಯಾಪಾರವೂ ಕೆಲ ಅಸಮತೋಲನವನ್ನು ಹೊಂದಿದೆ. ಈ ನಡುವೆ ಚೀನಾ ಗುರುವಾರ ಎಲ್ಲಾ ರೂಪಗಳಲ್ಲಿ ಏಕಪಕ್ಷೀಯ ಸುಂಕ ಹೆಚ್ಚಳವನ್ನು ಯಾವಾಗಲೂ ವಿರೋಧಿಸುತ್ತದೆ ಎಂದು ಹೇಳಿದೆ ಹಾಗೂ ಏಕಪಕ್ಷೀಯತೆ ಮತ್ತು ರಕ್ಷಣಾವಾದದ ತಪ್ಪು ಅಭ್ಯಾಸಗಳನ್ನು ಆರಂಭದಲ್ಲೇ ಸರಿಪಡಿಸುವಂತೆ ಮೆಕ್ಸಿಕೋಗೆ ಒತ್ತಾಯಿಸಿದೆ.

ಇದನ್ನೂ ಓದಿ: ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಬಾಂಬ್ ಸಿಡಿಸಿದ ಮಾಜಿ ಗರ್ಲ್‌ಫ್ರೆಂಡ್

2024 ರಲ್ಲಿ ಮೆಕ್ಸಿಕೋವೂ ಚೀನಾದಿಂದ $130 ಬಿಲಿಯನ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದರಿಂದ ಇದು ಚೀನಾದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮೆಕ್ಸಿಕೋ ವಿಧಿಸಿದ ಈ ಪ್ರಸ್ತಾವಿತ ಸುಂಕಗಳಿಂದ ಆ ದೇಶವೂ 3.8 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 33,910 ಕೋಟಿ ರೂ.) ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆಇಟ್ಟುಕೊಂಡಿದೆ.

ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಕೂಡ ದೇಶದ ಉದ್ಯಮಕ್ಕೆ ಹೆಚ್ಚಿನ ರಕ್ಷಣೆ ನೀಡಲು ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಬಯಸಿದ್ದಾರೆ. ಮೆಕ್ಸಿಕನ್ ಉದ್ಯಮವನ್ನು ಬೆಂಬಲಿಸುವುದು ಉದ್ಯೋಗಗಳನ್ನು ಸೃಷ್ಟಿಸುವುದು ಎಂದು ನಾವು ನಂಬುತ್ತೇವೆ ಎಂದು ಮೊರೆನಾದ ಚೇಂಬರ್ ಆಫ್ ಡೆಪ್ಯೂಟೀಸ್ ನಾಯಕ ಡೆಪ್ಯೂಟಿ ರಿಕಾರ್ಡೊ ಮಾನ್ರಿಯಲ್ ಹೇಳಿದ್ದಾರೆ ಎಂದು mexiconewsdaily.com ವರದಿ ಮಾಡಿದೆ. ಆದರೆ ಮೆಕ್ಸಿಕನ್ ಆರ್ಥಿಕ ಸುದ್ದಿ ಸಂಸ್ಥೆ ಎಲ್ ಫೈನಾನ್ಸಿಯರ್ ಪ್ರಕಾರ, ಅಮೆರಿಕ ಮೆಕ್ಸಿಕೋ ಕೆನಡಾ ರಿವೀವ್‌ಗೆ ಮೊದಲು ಅಮೆರಿಕವನ್ನು ಸಮಾಧಾನಪಡಿಸುವ ಉದ್ದೇಶವನ್ನು ಸುಂಕಗಳು ಹೊಂದಿವೆ ಎಂದು ವಿಶ್ಲೇಷಕರು ನಂಬಿದ್ದಾರೆ.

ಭಾರತದ ಮೇಲೆ ಇದರ ಪರಿಣಾಮ ಏನು?

ರಾಯಿಟರ್ಸ್ ವರದಿಯ ಪ್ರಕಾರ, ಮೆಕ್ಸಿಕನ್ ಸುಂಕಗಳು ಭಾರತದ ಪ್ರಮುಖ ಕಾರು ರಫ್ತುದಾರರಾದ ವೋಕ್ಸ್‌ವ್ಯಾಗನ್, ಹುಂಡೈ, ನಿಸ್ಸಾನ್ ಮತ್ತು ಮಾರುತಿ ಸುಜುಕಿ ಮುಂತಾದ ಸಂಸ್ಥೆಗಳಿಗೆ ವ್ಯಾಪಕ ಹೊಡೆತ ನೀಡಲಿದೆ. ಇವುಗಳ 1 ಬಿಲಿಯನ್ ಡಾಲರ್ ಮೌಲ್ಯದ ರಫ್ತಿನ ಮೇಲೆ ಇದು ತೀವ್ರ ಪರಿಣಾಮ ಬೀರುತ್ತವೆ. ಸುಂಕದಿಂದಾಗಿ ಮೆಕ್ಸಿಕೋದಲ್ಲಿ ಕಾರುಗಳ ಮೇಲಿನ ಆಮದು ಸುಂಕವು 20% ರಿಂದ 50% ಕ್ಕೆ ಏರಿಕೆಯಾಗಲಿದ್ದು, ಭಾರತದ ಅತಿದೊಡ್ಡ ವಾಹನ ರಫ್ತುದಾರರಿಗೆ ಗಮನಾರ್ಹ ಹೊಡೆತ ಬೀಳಲಿದೆ.

ಇದನ್ನೂ ಓದಿ: ನದಿ ಸಮೀಪ ಸುಸೈಡ್ ನೋಟ್ ಬರೆದಿಟ್ಟು ಅತ್ಯಾ*ಚಾರ ಆರೋಪಿ ಎಸ್ಕೇಪ್

ಮೆಕ್ಸಿಕೋದ ಪ್ರಸ್ತಾವಿತ ಸುಂಕ ಹೆಚ್ಚಳವು ಮೆಕ್ಸಿಕೋಗೆ ಭಾರತೀಯ ಆಟೋ ಮೊಬೈಲ್ ರಫ್ತಿನ ಮೇಲೆ ನೇರ ಪರಿಣಾಮ ಬೀರುವ ನಿರೀಕ್ಷೆಯಿದೆ. ಹೀಗಾಗಿ ಮೆಕ್ಸಿಕನ್ ಸರ್ಕಾರದೊಂದಿಗೆ ಸ್ವಲ್ಪ ನಯವಾಗಿ ವರ್ತಿಸುವಂತೆ ನಾವು ಭಾರತ ಸರ್ಕಾರದ ಬೆಂಬಲವನ್ನು ಕೋರುತ್ತೇವೆ ಎಂದು ಸುಂಕವನ್ನು ಅಂತಿಮಗೊಳಿಸುವ ಮೊದಲು ಭಾರತದ ಕೈಗಾರಿಕೆಗಳ ಸಂಸ್ಥೆಯೂ ವಾಣಿಜ್ಯ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಸೌದಿ ಅರೇಬಿಯಾ ನಂತರ ಮೆಕ್ಸಿಕೋವೂ ಭಾರತದ ಮೂರನೇ ಅತಿದೊಡ್ಡ ಕಾರು ರಫ್ತು ಮಾರುಕಟ್ಟೆಯಾಗಿದೆ.