ಇರಾನ್ ಶಾಂತಿ ಒಪ್ಪಂದದಿಂದ ತೈಲ ದರ ಕುಸಿತ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಯುತ್ತಾ?
ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ನಡೆದಿದೆ. ಇದರ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ದಿಢೀರ್ ಭಾರಿ ಕುಸಿತ ಕಂಡಿದೆ. ಇದೀಗ ಭರಾತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುತ್ತಾ?

ಶಾಂತಿ ಒಪ್ಪಂದಿಂದ ಶಾಂತಗೊಂಡ ಹೊರ್ಮುಜ್
ಮಧ್ಯಪ್ರಾಚ್ಯದಲ್ಲಿ ಕಳೆದ ಹಲವು ತಿಂಗಳಿನಿಂದ ನಡೆಯುತ್ತಿದ್ದ ಯುದ್ಧ ಅಂತ್ಯಗೊಂಡಿದೆ. ಅಮೆರಿಕ ಹಾಗೂ ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಪರಿಣಾಮ ಹೊರ್ಮುಜ್ ಜಲಸಂಧಿ ಶಾಂತವಾಗಿದೆ. ಅಡ್ಡಿ ಆತಂಕಗಳು ದೂರವಾಗಿದ್ದು, ಸರಕು ಸಾಮಾಗ್ರಿಗಳ ಹಡುಗು ಯಾವುದೇ ಸಮಸ್ಯೆ ಇಲ್ಲದೆ ಸಾಗತೊಡಗಿದೆ. ಈ ಬೆಳವಣಿಗೆಯಿಂದ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ
ಕಳೆದ ಮೂರು ತಿಂಗಳಲ್ಲೇ ಗರಿಷ್ಠ ಕುಸಿತ
ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 77 ರಿಂದ 78 ಡಾಲರ್‌ಗೆ ಇಳಿಕೆಯಾಗಿದೆ. ಕಳೆದ ಮೂರು ತಿಂಗಳಿಗೆ ಹೋಲಿಸಿದೆರೆ ಇದು ಅತ್ಯಂತ ಕನಿಷ್ಠ ಬೆಲೆಯಾಗಿದೆ. ಯುದ್ಧದಿಂದ ಸತತವಾಗಿ ಏರಿಕೆಯಾಗಿದ್ದ ಕಚ್ಚಾ ತೈಲ ಬೆಲೆ, ಹಣದುಬ್ಬರ, ವಿದೇಶಿ ವಿನಿಮಯ ಕೊರತೆಯಿಂದ ಭಾರತ ಹೈರಾಣಾಗಿತ್ತು. ಇದೀಗ ಕಚ್ಚಾ ತೈಲ ಬೆಲೆ ಇಳಿಕೆಯಿಂದ ತೀವ್ರ ಹೊರೆ ತಗ್ಗಿದೆ.
ಜನಸಾಮಾನ್ಯರಿಗೆ ಪೆಟ್ರೋಲ್ ಡೀಸೆಲ್ ಅಗ್ಗದಲ್ಲಿ ಸಿಗುತ್ತಾ
ಕಚ್ಚಾ ತೈಲ ಬೆಳೆ ಇಳಿಕೆಯಾಗಿದೆ. ಮತ್ತಷ್ಟು ಇಳಿಕೆಯಾಗುವ ಸೂಚನೆ ಸಿಕ್ಕಿದೆ. ಹೀಗಾಗಿ ಭಾರತದಲ್ಲಿ 120 ರೂಪಾಯಿ ಸಮೀಪದಲ್ಲಿರುವ ಪೆಟ್ರೋಲ್ ಬೆಲೆಯಲ್ಲಿ ಇಳಿಕೆಯಾಗುತ್ತಾ? ಸದ್ಯದಲ್ಲಿ ಯಾವುದೇ ಇಳಿಕೆ ಸೂಚನೆಗಳಿಲ್ಲ. ಈಗಾಗಲೇ ತೈಲ ಕಂಪನಿಗಳು, ಸರ್ಕಾರ ದಿಢೀರ್ ಕಡಿಮೆ ಮಾಡುವ ಯಾವ ಸಾಧ್ಯತೆ ಇಲ್ಲ. ಮುಂದೆ ತೈಲ ಬೆಲೆ ಏರಿಕೆಯಾದರೂ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ತಡೆಯಲು ನೆರವಾಗಲಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಸಾಧ್ಯತೆ
ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಸದ್ಯಕ್ಕೆ ಇಳಿಕೆಯಾಗುವ ಸಾಧ್ಯತೆಗಳಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಜೂನ್ ತಿಂಗಳಲ್ಲಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ.
ಮಧ್ಯಂತರ ಒಪ್ಪಂದದಿಂದ ಆತಂಕ ಹೆಚ್ಚಳ
ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಸದ್ಯಕ್ಕಿಲ್ಲ ಅನ್ನೋದಕ್ಕೆ ಮತ್ತೊಂದು ಬಲವಾದ ಕಾರಣವಿದೆ. ಅಮೆರಿಕ ಇರಾನ್ ನಡುವಿನ ಶಾಂತಿ ಒಪ್ಪಂದ ಮದ್ಯಂತರ ಒಪ್ಪಂದವಾಗಿದೆ. 60 ದಿನಗಳ ಒಳಗೆ ಎರಡು ರಾಷ್ಟ್ರಗಳು ಚರ್ಚಿಸಿ ಶಾಶ್ವತ ಪರಿಹಾರ ಕಾಣಲು ನಿರ್ಧರಿಸಲಾಗಿದೆ. ಇದರ ನಡುವಿನ ಮಾತುಕತೆ ಫಲಪ್ರದವಾಗದಿದ್ದರೆ ಹೊರ್ಮುಜ್‌ನಲ್ಲಿ ಕಾರ್ಮೋಡ ಆವರಿಸಲಿದೆ.
ಹೊರ್ಮುಜ್‌ನಿಂದ ತೈಲ ರಿಲೀಸ್
ಯುದ್ಧದಿಂದ ಹೊರ್ಮುಜ್ ಜಲಸಂಧಿಯಲ್ಲಿ ಹಲವು ತೈಲ ಟ್ಯಾಂಕರ್ ಬಂಧಿಯಾಗಿತ್ತು. ಇದೀಗ ಹೊರ್ಮುಜ್ ಶಾಂತವಾಗಿರುವ ಬೆನ್ನ್ಲೇ ಹಲವು ಮಿಲಿಯನ್ ಬ್ಯಾರೆಲ್ ತೈಲ ರಿಲೀಸ್ ಮಾಡಲಾಗಿದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳ ಸಂಕಷ್ಟಕ್ಕೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

