ಇರಾನ್-ಅಮೆರಿಕ ಶಾಂತಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಇದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಆದರೆ, ಮಾತುಕತೆಯ ಸಮಯದಲ್ಲಿ ಟ್ರಂಪ್ ಅವರ ವಿಚಿತ್ರ ವರ್ತನೆಯನ್ನು ಅರಿಯಲು ಇರಾನ್ ಮನಃಶಾಸ್ತ್ರಜ್ಞರನ್ನು ನೇಮಿಸಿಕೊಂಡಿತ್ತು ಎಂಬ ಅಚ್ಚರಿಯ ಸಂಗತಿ ವರದಿಯಾಗಿದೆ.

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಫ್ರಾನ್ಸ್‌ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ-ಇರಾನ್ ಒಪ್ಪಂದದ ಮುದ್ರಿತ ಪ್ರತಿಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಊಟದ ಮೇಜಿನ ಬಳಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಹಿ ಹಾಕುವ ವೀಡಿಯೊವನ್ನು ಶ್ವೇತಭವನ ಪ್ರಕಟಿಸಿದೆ. ಇದೊಂದು ತಾತ್ಕಾಲಿಕ ಒಪ್ಪಂದವಷ್ಟೇ. ಇರಾನ್ ಸರಿಯಾಗಿ ನಡೆದುಕೊಳ್ಳದಿದ್ದರೆ ಮತ್ತೆ ದಾಳಿ ನಡೆಸುತ್ತೇವೆ. ಇರಾನ್ ಅಣ್ವಸ್ತ್ರ ಪಡೆಯಲು ಪ್ರಯತ್ನಿಸಿದರೆ ನರಕ ದರ್ಶನವಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ನಿನ್ನೆಯೇ ಎಚ್ಚರಿಕೆ ನೀಡಿದ್ದರು
ಮಾತು ಕೇಳದಿದ್ರೆ ಮತ್ತೆ ಬಾಂಬ್ ಹಾಕ್ತೀವಿ: ಟ್ರಂಪ್
ಇರಾನ್ ನಮ್ಮ ಮಾತು ಕೇಳದಿದ್ದರೆ ಮತ್ತೆ ಯುದ್ಧ ಶುರು ಮಾಡ್ತೀವಿ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್ ಜೊತೆ ಮಾಡಿಕೊಳ್ಳುತ್ತಿರುವುದು ಅಂತಿಮ ಒಪ್ಪಂದವಲ್ಲ, ಇದೊಂದು ತಿಳುವಳಿಕಾ ಪತ್ರವಷ್ಟೇ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ವೇಳೆ ಈಜಿಪ್ಟ್ ಜೊತೆಗಿನ ದ್ವಿಪಕ್ಷೀಯ ಮಾತುಕತೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ತಿಂಗಳುಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಕೇವಲ 48 ಗಂಟೆಗಳು ಬಾಕಿ ಇರುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಟ್ರಂಪ್ ವರ್ತನೆ ಅರಿಯಲು ಇರಾನ್ ಮನಃಶಾಸ್ತ್ರಜ್ಞರ ನೇಮಕ!
ಯುದ್ಧವನ್ನು ಕೊನೆಗೊಳಿಸುವ ಶಾಂತಿ ಒಪ್ಪಂದದ ಮಾತುಕತೆಯ ಸಮಯದಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ವಿಚಿತ್ರ ವರ್ತನೆಯನ್ನು ನಿಭಾಯಿಸಲು ಇರಾನ್ ಮನಃಶಾಸ್ತ್ರಜ್ಞರ ಸಹಾಯವನ್ನು ಪಡೆದುಕೊಂಡಿತ್ತು ಎಂಬ ಅಚ್ಚರಿಯ ಸಂಗತಿಯನ್ನು ಡ್ರಾಪ್ ಸೈಟ್ ವರದಿ ಮಾಡಿದೆ.
ಟ್ರಂಪ್ ಮನಃಸ್ಥಿತಿ
ಟ್ರಂಪ್ ಮನಃಸ್ಥಿತಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಅವರ ಮಾನಸಿಕ ಸ್ಥಿತಿಯ ಮೌಲ್ಯಮಾಪನ ಮಾಡಲು ಇಬ್ಬರು ಹಿರಿಯ ಮನಃಶಾಸ್ತ್ರಜ್ಞರನ್ನು ಇರಾನ್ ನೇಮಿಸಿಕೊಂಡಿತ್ತು. ಇವರು ಮಾತುಕತೆಯ ಸಲಹಾ ಮಂಡಳಿಯಲ್ಲಿದ್ದರು.
ಪಾಕಿಸ್ತಾನ ಹಾಗೂ ಕತಾರ್‌ನಂತಹ ಮಧ್ಯವರ್ತಿಗಳ ಮೂಲಕ ಟ್ರಂಪ್‌ಗೆ ರವಾನಿಸುವ ಸಂದೇಶಗಳನ್ನು ಇವರ ಸಹಾಯದಿಂದ ರೂಪಿಸಲಾಗುತ್ತಿತ್ತು. ಟ್ರಂಪ್ ಮನಃಸ್ಥಿತಿಯನ್ನು ಅರಿತು, ಅದಕ್ಕೆ ಪೂರಕವಾಗಿ ಸಂದೇಶಗಳನ್ನು ರವಾನಿಸಲಾಗುತ್ತಿತ್ತು ಎಂದು ವರದಿ ಉಲ್ಲೇಖಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

