MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Anant Nag Dada Saheb Phalke
Renuka Swamy Case Update
CM DK Shivakumar on KPSC
Upper Bhadra Project
Bengaluru-Mangaluru Vande Bharat
Karnataka Lokayukta Raids
Bengaluru Property Records
Archaeological Discovery Karnataka
Trump’s Greenland Agreement
MLA Suresh Gowda Daughter
IMD Weather Forecast
  • Home
  • Astrology
  • ನೆಲಕ್ಕೆ ಬಿದ್ದ ಪಾರಿಜಾತ ಹೂವನ್ನು ತೊಳೆಯದೇ ಶಿವನಿಗೆ ಅರ್ಪಿಸುವುದೇಕೆ? ಹೂವಿನ ವಿಶೇಷತೆ ಏನು ಗೊತ್ಟಾ?

ನೆಲಕ್ಕೆ ಬಿದ್ದ ಪಾರಿಜಾತ ಹೂವನ್ನು ತೊಳೆಯದೇ ಶಿವನಿಗೆ ಅರ್ಪಿಸುವುದೇಕೆ? ಹೂವಿನ ವಿಶೇಷತೆ ಏನು ಗೊತ್ಟಾ?

ಪಾರಿಜಾತ ಕೇವಲ ಹೂವಿನ ಗಿಡವಲ್ಲ. ಅದಕ್ಕೊಂದು ದೈವಿಕ, ಆಧ್ಯಾತ್ಮಿಕ ಹಿನ್ನೆಲೆ ಇದೆ. ನೆಲಕ್ಕೆ ಬಿದ್ದ ಪಾರಿಜಾತ ಹೂಗಳನ್ನು ತೊಳೆಯದೇ ಶಿವನಿಗೆ ಅರ್ಪಿಸುವುದೇಕೆ? ಈ ಹೂವಿನ ಪೌರಾಣಿಕೆ ಹಿನ್ನೆಲೆ, ಪೂಜೆಗೆ ಅರ್ಪಿಸುವ ನಿಯಮಗಳು, ಪಾರಿಜಾತ ಹೂವಿನ ವಾಸ್ತು ಮಹತ್ವ ಇಲ್ಲಿ ವಿವರಿಸಲಾಗಿದೆ.

2 Min read
Author : Ravi Janekal
Published : Sep 23 2026, 01:05 PM IST
Share this Photo Gallery
  • FB
  • TW
  • Linkdin
  • Whatsapp
14
ಪರಿಜಾತ ಹೂವಿನ ವಿಶೇಷತೆ ಏನು ಗೊತ್ತಾ?
Image Credit : Asianet News

ಪರಿಜಾತ ಹೂವಿನ ವಿಶೇಷತೆ ಏನು ಗೊತ್ತಾ?

ಪಾರಿಜಾತ (Harsingar) ಗಿಡವು ಅದರ ಸುಗಂಧದ ಪರಿಮಳ, ಧಾರ್ಮಿಕ ಮಹತ್ವದಿಂದ ಪ್ರಸಿದ್ಧವಾಗಿದೆ. ಭಾರತೀಯರ ನಂಬಿಕೆಯ ಪ್ರಕಾರ ಪಾರಿಜಾತ ಗಿಡವನ್ನು ಸ್ವರ್ಗದಿಂದ ಭೂಮಿಗೆ ಬಂದಿದ್ದೆಂದು ನಂಬಲಾಗಿದೆ. ಬಹಳಷ್ಟು ಜನರಿಗೆ ಪಾರಿಜಾತ ಹೂವಿನ ಬಗ್ಗೆ ಗೊತ್ತಿದೆ. ಪಾರಿಜಾತ ಹೂ ಇಲ್ಲದೆ ಪೂಜೆಯೇ ಅಪೂರ್ಣ. ಅದರಲ್ಲೂ ಶಿವನ ಪೂಜೆಗೆ ಪಾರಿಜಾತ ಹೂಗಳು ಬೇಕೇಬೇಕು.

ಪರಿಜಾತ ಹೂವಿನ ಬಗ್ಗೆ ದೊಡ್ಡ ಇತಿಹಾಸವೇ ಇದೆ. ಹರಿವಂಶ ಪುರಾಣದಲ್ಲಿ ಪಾರಿಜಾತವನ್ನು ಇಷ್ಟಾರ್ಥಗಳನ್ನು ಈಡೇರಿಸುವ ವೃಕ್ಷ ಎಂದು ವಿವರಿಸಲಾಗಿದೆ. ಪಾರಿಜಾತ ಹೂವಿನ ವಿಶೇಷವೆಂದರೆ ಈ ಹೂವು ಸೂರ್ಯನ ಬೆಳಕಿನಲ್ಲಿ ಅರಳುವುದಿಲ್ಲ. ಮಧ್ಯರಾತ್ರಿ ಚಂದ್ರನ ಬೆಳಕಿನಲ್ಲಿ ಅರಳುತ್ತಾ ಅರಳುತ್ತಾ ಬೆಳಗಾಗುವಷ್ಟರಲ್ಲಿ ನೆಲಕ್ಕೆ ಉದುರುತ್ತದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಶಿವನಿಗೆ ಪಾರಿಜಾತ ಹೂವು ಅರ್ಪಿಸಲು ಹಲವು ನಿಯಮಗಳಿವೆ
Image Credit : Asianet News

ಶಿವನಿಗೆ ಪಾರಿಜಾತ ಹೂವು ಅರ್ಪಿಸಲು ಹಲವು ನಿಯಮಗಳಿವೆ

ಪಾರಿಜಾತ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವು. ಹೀಗಾಗಿ ಮಹಾದೇವನಿಗೆ ಈ ಹೂವನ್ನು ಅರ್ಪಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ, ಪೂಜೆಯ ಫಲ ದೊರೆಯುತ್ತದೆ ಎಂಬುದು ಶಿವನ ಭಕ್ತರು ನಂಬುತ್ತಾರೆ. ಆದರೆ ಪರಿಜಾತ ಹೂಗಳನ್ನ ಅರ್ಪಿಸುವಲ್ಲಿ ಹಲವು ನಿಯಮಗಳಿವೆ. ಮುಖ್ಯವಾಗಿ ಶಿವಲಿಂಗಕ್ಕೆ ಅರ್ಪಿಸುವ ಹೂಗಳನ್ನು ನೇರವಾಗಿ ಗಿಡದಿಂದ ಕಿತ್ತು ತಂದಿರಬಾರದು. ಗಿಡದಿಂದ ಕಿತ್ತು ತಂದ ಪಾರಿಜಾತ ಹೂಗಳನ್ನ ಶಿವನಿಗೆ ಅರ್ಪಿಸಬಾರದು ಇದರಿಂದ ಪೂಜೆಯ ಫಲ ದೊರೆಯುವುದಿಲ್ಲ ಎಂಬ ನಂಬಿಕೆಯಿದೆ.

Related Articles

Related image1
ಶಿವನಿಗೆ ಪ್ರಿಯವಾದ ಈ ಗಿಡ ಮನೆಯಲ್ಲಿದ್ದರೆ ಹಣದ ಸಮಸ್ಯೆ, ಶನಿಕಾಟ ಇರೋದಿಲ್ಲ!
Related image2
ಆಸ್ತಮಾದಿಂದ ಚಿಕುನ್​ ಗುನ್ಯಾದವರೆಗೆ... ಪಾರಿಜಾತ ವೃಕ್ಷದಿಂದ ಅಬ್ಬಾ ಇಷ್ಟೆಲ್ಲಾ ಪ್ರಯೋಜನಗಳಾ?
34
ನೆಲಕ್ಕೆ ಬಿದ್ದ ಪಾರಿಜಾತ ಹೂಗಳು ಶಿವನಿಗೆ ಪ್ರಿಯ
Image Credit : Asianet News

ನೆಲಕ್ಕೆ ಬಿದ್ದ ಪಾರಿಜಾತ ಹೂಗಳು ಶಿವನಿಗೆ ಪ್ರಿಯ

ಪಾರಿಜಾತ ಹೂವಿನ ವಿಶೇಷತೆ ಎಂದರೆ ಅದು ಎಲ್ಲ ಹೂವುಗಳಂತಲ್ಲ. ಸೂರ್ಯನ ಬೆಳಕಿಗೆ ಅರಳುವುದಿಲ್ಲ. ರಾತ್ರಿ ಚಂದ್ರನ ಬೆಳದಿಂಗಳ ಬೆಳಕಲ್ಲಿ ಅರಳುತ್ತಾ ಅರಳುತ್ತಾ.. ಸೂರ್ಯೋದಯಕ್ಕೂ ಮೊದಲೇ ನೆಲಕ್ಕೆ ಉದುರಿರುತ್ತದೆ. ಹೀಗಾಗಿ ಗಿಡದಿಂದ ಕೀಳುವ ಬದಲು ನೆಲಕ್ಕೆ ಉದುರಿದ ಹೂವನ್ನೇ ಶಿವನಿಗೆ ಅರ್ಪಿಸಲಾಗುತ್ತದೆ. ಕೆಳಗೆ ಬಿದ್ದ ಹೂವನ್ನು ನೀರಿನಿಂದ ತೊಳೆಯುವಂತಿಲ್ಲ. ಧಾರ್ಮಿಕ ಗ್ರಂಥಗಳ ಪ್ರಕಾರ ಪಾರಿಜಾತ ಹೂವು ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗಿದೆ. ಹೀಗಾಗಿ ನೆಲದಿಂದ ತೆಗೆದುಕೊಂಡ ಹೂವನ್ನು ತೊಳೆಯದೇ ಶಿವನಿಗೆ ಅರ್ಪಿಸುವುದರಿಂದ ಮಹಾದೇವನ ವಿಶೇಷ ಕೃಪೆ ದೊರೆಯುತ್ತದೆ ಎಂಬ ನಂಬಿಕೆಯಿದೆ.

44
ಪಾರಿಜಾತ ಗಿಡದ ವಾಸ್ತು ಮಹತ್ವವೇನು?
Image Credit : Asianet News

ಪಾರಿಜಾತ ಗಿಡದ ವಾಸ್ತು ಮಹತ್ವವೇನು?

ಪಾರಿಜಾತ ಗಿಡವನ್ನು ಅದೊಂದು ಆಲಂಕಾರಿಕ ಹೂವಿನ ಗಿಡವೆಂದೇ ಬಹಳಷ್ಟು ಜನ ಭಾವಿಸಿದ್ದಾರೆ. ಆದರೆ ಪಾರಿಜಾತ ಗಿಡಕ್ಕೆ ದೈವಿಕ ಹಿನ್ನೆಲೆಯಿದೆ. ಭಾರತೀಯ ಪುರಾಣಗಳು, ಆಧ್ಯಾತ್ಮಿಕ ಆಚರಣೆಗಳಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಹಿಂದೂ ಪುರಾಣಗಳ ಪ್ರಕಾರ ಸಮುದ್ರ ಮಂಥನದ ಸಂದರ್ಭದಲ್ಲಿ ಪಾರಿಜಾತ ಗಿಡವು ಹೊರಹೊಮ್ಮಿತು ಎಂದು ಹೇಳಲಾಗುತ್ತದೆ. ಹೀಗಾಗಿ ಪಾರಿಜಾತವನ್ನು ದೈವಿಕ ಹೂವು ಆಗಿದೆ. ಪುರಾಣದ ಕಥೆಯೊಂದರಲ್ಲಿ ಶ್ರೀಕೃಷ್ಣನು ತನ್ನ ಪ್ರಿಯ ಪತ್ನಿ ರುಕ್ಮಿಣಿಗಾಗಿ ಪಾರಿಜಾತ ಗಿಡವನ್ನು ಭೂಮಿಗೆ ತಂದನು ಎಂದು ಹೇಳಲಾಗಿದೆ. ಹೀಗಾಗಿ ಪಾರಿಜಾತ ಹೂವುಗಳನ್ನು ಹಿಂದೂ ಧಾರ್ಮಿಕ ಪೂಜೆ, ದೇವಾಲಯಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಪಾರಿಜಾತ ಹೂವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಈ ಹೂವು ಪವಿತ್ರತೆ, ಪ್ರೀತಿ, ಆಧ್ಯಾತ್ಮಿಕ ಭಕ್ತಿಯ ಸಂಕೇತವಾಗಿದೆ.

ಪಾರಿಜಾತ ಗಿಡದ ಔಷಧೀಯ ಗುಣಗಳು

ಇನ್ನು ಪಾರಿಜಾತ ಗಿಡವು ಧಾರ್ಮಿಕ ಮಹತ್ವದ ಜೊತೆಗೆ ಔಷಧೀಯ ಗುಣಗಳಿಗೂ ಪ್ರಸಿದ್ಧವಾಗಿದೆ. ಇದರ ಕಾಂಡ, ಎಲೆಗಳು, ಹೂವುಗಳು, ತೊಗಟೆ ಮತ್ತು ಬೀಜಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದರ ಜೊತೆಗೆ, ಪಾರಿಜಾತ ಗಿಡದಿಂದ ಸುಗಂಧ ದ್ರವ್ಯಗಳನ್ನು ಸಹ ತಯಾರಿಸಲಾಗುತ್ತದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಜ್ಯೋತಿಷ್ಯ
ವಾಸ್ತು ಸಲಹೆಗಳು
 

Latest Videos
Recommended Stories
Recommended image1
ಈ 4 ರಾಶಿಗಳು 92 ದಿನಗಳ ಕಾಲ ರಾಜರಂತೆ ಬದುಕುತ್ತವೆ, ಗ್ರಹ ಸ್ಥಾನದಿಂದ ಭರ್ಜರಿ ಹಬ್ಬ
Recommended image2
ನವೆಂಬರ್ 5 ರವರೆಗೆ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ, ಈ ರಾಶಿಗೆ ಲಕ್ಷ್ಮಿ-ನಾರಾಯಣ ಯೋಗದಿಂದ ಉತ್ತಮ ಲಾಭ
Recommended image3
ಈ 4 ರಾಶಿಗಳ ಖಜಾನೆ ತುಂಬಿ ಹರಿಯುತ್ತದೆ, ಅವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಊಹಿಸಲಾಗದ ಲಾಭ
Related Stories
Recommended image1
ಶಿವನಿಗೆ ಪ್ರಿಯವಾದ ಈ ಗಿಡ ಮನೆಯಲ್ಲಿದ್ದರೆ ಹಣದ ಸಮಸ್ಯೆ, ಶನಿಕಾಟ ಇರೋದಿಲ್ಲ!
Recommended image2
ಆಸ್ತಮಾದಿಂದ ಚಿಕುನ್​ ಗುನ್ಯಾದವರೆಗೆ... ಪಾರಿಜಾತ ವೃಕ್ಷದಿಂದ ಅಬ್ಬಾ ಇಷ್ಟೆಲ್ಲಾ ಪ್ರಯೋಜನಗಳಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved