ಅನಾರೋಗ್ಯಕ್ಕೆ ಒಳಗಾಗಿರುವ ಜನರನ್ನು, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವವರನ್ನು ನೋಡಲು ಸ್ನೇಹಿತರು, ಬಂಧು-ಬಾಂಧವರು ಹಾಗೂ ಹಿತೈಷಿಗಳು ಹೋಗುವಾಗ ಯಾರೂ ಕೂಡ ಮಟನ್, ಬಿರಿಯಾನಿ ತೆಗೆದುಕೊಂಡು ಹೋಗೋದಿಲ್ಲ ಏಕೆ? ಇಲ್ಲಿದೆ ಈ ಪ್ರಶ್ನೆಗೆ ಉತ್ತರ ನೋಡಿ..!

ಅನಾರೋಗ್ಯಕ್ಕೆ ಒಳಗಾಗಿರುವ ಜನರನ್ನು, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವವರನ್ನು ನೋಡಲು ಸ್ನೇಹಿತರು, ಬಂಧು-ಬಾಂಧವರು ಹಾಗೂ ಹಿತೈಷಿಗಳು ಹೋಗುವಾಗ ಬ್ರೆಡ್, ಬನ್ನು, ಬಿಸ್ಕಿಟ್, ಜ್ಯೂಸ್ ಅಥವಾ ಎಳನೀರು ತೆಗೆದುಕೊಂಡು ಹೋಗುತ್ತಾರೆ. ಯಾರೂ ಕೂಡ ಮಟನ್ (Mutton), ಬಿರಿಯಾನಿ (Biryani) ತೆಗೆದುಕೊಂಡು ಹೋಗೋದಿಲ್ಲ ಏಕೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟ ಅಲ್ಲ, ಆಸ್ಪತ್ರೆಗೆ ಹೋದಾಗ ವೈದ್ಯರು ಮೊಟ್ಟಮೊದಲು ಕೇಳುವ ಪ್ರಶ್ನೆ ಎಂದರೆ ಅದು 'ನೀವು ವೆಜ್ ಅಥವಾ ನಾನ್‌-ವೆಜ್‌?' .. ನಾನ್-ವೆಜ್ ಎಂಬ ಉತ್ತರ ಬಂದರೆ, 'ಹಾಗಿದ್ರೆ ಸ್ವಲ್ಪ ದಿ, ಅಟಲೀಸ್ಟ್ 10-15 ದಿನ ತಿಳಿಸಾರು, ಗಂಜಿ, ಮೊಸರು ಅಥವಾ ಲೈಟ್ ಫುಡ್ ಕೊಡಿ.. ಆಮೇಲೆ ನಿಮ್ಮ ನಾರ್ಮಲ್ ಊಟದ ಪದ್ಧತಿಗೆ ಮರಳಿ..' ಅಂತಾರೆ.

ಹಾಗಿದ್ದರೆ ಅದೇಕೆ? ಅನಾರೋಗ್ಯವಾಗಿದ್ದಾಗ ಯಾವುದೇ ಡಾಕ್ಟರ್ ನಾನ್‌ ವೆಜ್ ಸಜೆಸ್ಟ್ ಮಾಡೋದಿಲ್ಲ ಏಕೆ?

ಅನಾರೋಗ್ಯದ ಸಮಯದಲ್ಲಿ ರೋಗಿಯ ಜೀರ್ಣಕ್ರಿಯೆ ದುರ್ಬಲವಾಗಿರುತ್ತದೆ. ಮಾಂಸಾಹಾರವು ಹೆಚ್ಚು ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುವುದರಿಂದ ಜೀರ್ಣವಾಗಲು ದೇಹಕ್ಕೆ ಹೆಚ್ಚು ಶಕ್ತಿ ಮತ್ತು ಸಮಯ ಬೇಕಾಗುತ್ತದೆ. ಆದ್ದರಿಂದ, ಚೇತರಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಹೊಟ್ಟೆಯ ಮೇಲಿನ ಒತ್ತಡವನ್ನು ತಪ್ಪಿಸಲು ವೈದ್ಯರು ಮಾಂಸಾಹಾರ, ನಾನ್‌ ವೆಜ್ ಅಡುಗೆಗಳನ್ನು ಸೂಚಿಸುವುದಿಲ್ಲ.

ಅಷ್ಟೇ ಅಲ್ಲ, ಆ ಸಮಯದಲ್ಲಿ ವೈದ್ಯರು ಮಾಂಸಾಹಾರವನ್ನು ದೂರವಿಡಲು ಪ್ರಮುಖ ಕಾರಣಗಳು ಇವು:-

ನಿಧಾನವಾದ ಜೀರ್ಣಕ್ರಿಯೆ: ಅನಾರೋಗ್ಯದ ಸಮಯದಲ್ಲಿ ಜಠರದ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಮಾಂಸಾಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಗ್ಯಾಸ್, ಮಲಬದ್ಧತೆ ಅಥವಾ ವಾಂತಿಯ ಸಮಸ್ಯೆಗಳು ಉಂಟಾಗಬಹುದು. ಜೊತೆಗೆ, ಕೆಲವು ರೋಗಗಳಿಗೆ ಕೆಲವು ಮಾಂಸಾಹಾರಗಳು ಅಥವಾ ಸಸ್ಯಾಹಾರಗಳು ಸೂಕ್ತವಾಗಲಾರವು.

ಸೋಂಕಿನ ಅಪಾಯ (Infection Risk): ಕಲುಷಿತ ಮಾಂಸ ಅಥವಾ ಸರಿಯಾಗಿ ಬೇಯಿಸದ ಮಾಂಸಾಹಾರವು ಸುಲಭವಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಹರಡುತ್ತದೆ. ಇದು ರೋಗನಿರೋಧಕ ಶಕ್ತಿ (Immunity) ಕಡಿಮೆಯಾದಾಗ ಅಪಾಯಕಾರಿ.ದೇಹದ ಶಕ್ತಿ: ಮಾಂಸವನ್ನು ಜೀರ್ಣಿಸಿಕೊಳ್ಳಲು ದೇಹವು ತನ್ನ ಬಹುಪಾಲು ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಈ ಶಕ್ತಿಯು ನೈಸರ್ಗಿಕವಾಗಿ ಗುಣಮುಖರಾಗಲು (Healing) ಬಳಕೆಯಾಗುವುದು ಉತ್ತಮ.

ಜ್ವರ ಮತ್ತು ಶೀತದ ಸಮಸ್ಯೆ: ಜ್ವರ, ಕೆಮ್ಮು ಅಥವಾ ಅಜೀರ್ಣದಂತಹ ಸಮಸ್ಯೆಗಳಿರುವಾಗ ದೇಹದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಮಾಂಸಾಹಾರವು ದೇಹದ ತಾಪಮಾನವನ್ನು ಹೆಚ್ಚಿಸುವ ಗುಣವನ್ನು ಹೊಂದಿರುತ್ತದೆ.ಸಲಹೆ:ನೀವು ಬೇಗನೆ ಚೇತರಿಸಿಕೊಳ್ಳಲು ವೈದ್ಯರು ಹಣ್ಣುಗಳು, ಬೇಯಿಸಿದ ತರಕಾರಿಗಳು ಮತ್ತು ಸೂಪ್‌ಗಳಂತಹ ಸುಲಭವಾಗಿ ಜೀರ್ಣವಾಗುವ (Easy to Digest) ಆಹಾರಗಳನ್ನು ಶಿಫಾರಸು ಮಾಡುತ್ತಾರೆ.

ಪೇಶೆಂಟ್‌ಗೆ ವಿಟಮಿನ್ ಅಥವಾ ಪ್ರೋಟೀನ್ ಕೊರತೆಯಿದ್ದರೆ..

ಆದಾಗ್ಯೂ, ಪೇಶೆಂಟ್‌ಗೆ ವಿಟಮಿನ್ ಅಥವಾ ಪ್ರೋಟೀನ್ ಕೊರತೆಯಿದ್ದರೆ, ವೈದ್ಯರು ಮೊಟ್ಟೆಯ ಬಿಳಿ ಭಾಗ ಅಥವಾ ಚಿಕನ್ ಸೂಪ್‌ನಂತಹವುಗಳನ್ನು ಮಿತವಾಗಿ ಸೇವಿಸಲು ಸೂಚಿಸಬಹುದು. ಆದರೆ ಹೆಚ್ಚಾಗಿ ಅನಾರೋಗ್ಯದ ಸಮಯದಲ್ಲಿ ಯಾವುದೇ ಡಾಕ್ಟರ್‌ ಆದಷ್ಟೂ ಮಾಂಸಾಹಾರವನ್ನು ತಪ್ಪಿಸಿ ಎಂದೇ ಹೇಳುತ್ತಾರೆ. ಅರೋಗ್ಯ ಸರಿಯಾದ ಮೇಲೆ ಯಾರೇ ಆಗಲಿ ಹೇಗೂ ಮತ್ತೆ ಮೊದಲಿನ ಅಂದರೆ ಅವರವರ ಆಹಾರ ಪದ್ಧತಿಯನ್ನು ಅನುಸರಿಸಲು ಯಾವುದೇ ಅಭ್ಯಂತರ ಇರುವುದಿಲ್ಲ. ಪಥ್ಯ ಅಥವಾ ಡಯಟ್ ಮಾಡುವ ಅಗತ್ಯ ಇರುವುದು ಕೇವಲ ಅನಾರೋಗ್ಯದ ಸಮಯದಲ್ಲಿ ಮಾತ್ರ ಎಂಬುದನ್ನು ಮರೆಯಬೇಡಿ!