Kitchen Tips : ಫ್ರೀಜರ್ ನಲ್ಲಿಟ್ಟ ಐಸ್ ಕ್ರೀಮ್ ಹಾಳಾಗೋದ್ಯಾವಾಗ?
ಬೇಸಿಗೆಯಲ್ಲಿ ಐಸ್ ಕ್ರೀಂಗೆ ಬೇಡಿಕೆ ಹೆಚ್ಚು. ಐಸ್ ಕ್ರೀಮ್ ತಿನ್ನೋ ಆಸೆ ಆದಾಗೆಲ್ಲ ಅದು ಸಿಗೋದಿಲ್ಲ. ಕೆಲವರು ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ಐಸ್ ಕ್ರೀಮ್ ಖರೀದಿಸಿ ಫ್ರೀಜರ್ ನಲ್ಲಿ ಇಡ್ತಾರೆೆ. ಐಸ್ ಕ್ರೀಮ್ ಫ್ರೀಜರ್ ನಲ್ಲಿ ಎಷ್ಟು ದಿನ ಇಡೋದು ಸೇಫ್ ನಿಮಗೆ ಗೊತ್ತಾ?

ಫ್ರೀಜರ್ ನಲ್ಲಿ ಐಸ್ ಕ್ರೀಮ್ ಸೇಫಾ?
ಫ್ರೀಜರ್ ನಲ್ಲಿಟ್ರೆ ಎಲ್ಲ ಆಹಾರ ಪದಾರ್ಥ ಸೇಫ್ ಆಗಿರುತ್ತೆ ಅಂತ ನಾವು ಭಾವಿಸ್ತೇವೆ. ಆದ್ರೆ ಇದು ತಪ್ಪು ಕಲ್ಪನೆ. ಪ್ರತಿಯೊಂದು ಆಹಾರ ಡೇಟ್ ಬಾರ್ ಆಗುತ್ತೆ. ಐಸ್ ಕ್ರೀಮ್ ಕೂಡ ಹಾಳಾಗುತ್ತೆ. ಐಸ್ ಕ್ರೀಮನ್ನು ತುಂಬಾ ದಿನ ಸರಿಯಾದ ವಿಧಾನದಲ್ಲಿ ಸಂಗ್ರಹಿಸಿದೆ ಹಾಗೆ ಇಟ್ರೆ ಅದು ವಾಸನೆ ಬರಲು ಶುರುವಾಗುತ್ತೆ. ಐಸ್ ಕ್ರೀಮನ್ನು ಫ್ರೀಜರ್ ನಲ್ಲಿ ಹೇಗೆ ಇಡ್ಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಬೇಕು.
ಐಸ್ ಕ್ರೀಮ್ ಎಷ್ಟು ಕಾಲ ಸುರಕ್ಷಿತ?
ಐಸ್ ಕ್ರೀಮ್ ಪ್ಯಾಕ್ ಓಪನ್ ಮಾಡಿಲ್ಲ ಎಂದಾದ್ರೆ ನೀವು ಅದನ್ನು ಒಂದರಿಂದ ಎರಡು ತಿಂಗಳವರೆಗೆ ಫ್ರೀಜರ್ನಲ್ಲಿ ಸಂಗ್ರಹಿಸಬಹುದು. ಪ್ಯಾಕೇಜ್ನಲ್ಲಿರುವ ದಿನಾಂಕಕ್ಕೆ ಗಮನ ಕೊಡುವುದು ಮುಖ್ಯ. ಅದೇ ನೀವು ಪ್ಯಾಕೇಜ್ ಓಪನ್ ಮಾಡಿದ್ರೆ ಅದನ್ನು ಏಳರಿಂದ ಹತ್ತು ದಿನಗಳಲ್ಲಿ ತಿನ್ಬೇಕು. ಅಷ್ಟು ದಿನ ಮಾತ್ರ ಐಸ್ ಕ್ರೀಮ್ ತಾಜಾ ಆಗಿರುತ್ತೆ.
ಐಸ್ ಕ್ರೀಮ್ ಹಾಳಾಗಿದ್ದನ್ನು ಹೀಗೆ ಪತ್ತೆ ಮಾಡಿ
ನೀವು ಐಸ್ ಕ್ರೀಮನ್ನು ಸದಾ ತಣ್ಣನೆಯ ತಾಪಮಾನದಲ್ಲಿ ಇಡ್ಬೇಕು. ಉಷ್ಣಾಂಶ ಹೆಚ್ಚಾದ್ರೆ ಐಸ್ಕ್ರೀಮ್ ಬೇಗ ಹಾಳಾಗುತ್ತದೆ. ಐಸ್ ಕ್ರೀಮ್ ರುಚಿ ಬದಲಾಗಿದ್ದರೆ, ಐಸ್ ಹೆಪ್ಪುಗಟ್ಟಿದ್ದರೆ, ಐಸ್ ಕ್ರೀಮ್ ನಿಂದ ಫ್ರೀಜರ್ ವಾಸನೆ ಬರ್ತಿದ್ದರೆ ನಿಮ್ಮ ಐಸ್ಕ್ರೀಮ್ ಹಾಳಾಗಿದೆ ಎಂದರ್ಥ.
ಐಸ್ ಕ್ರೀಮ್ ಸಂಗ್ರಹ ಹೀಗಿರಲಿ
ಇಷ್ಟಪಟ್ಟು ಖರೀದಿ ಮಾಡಿದ ಐಸ್ ಕ್ರೀಮ್ ತುಂಬಾ ದಿನ ಬರ್ಬೇಕು ಅಂದ್ರೆ ಅದನ್ನು ಸೂಕ್ತ ವಿಧಾನದಲ್ಲಿ ಸಂಗ್ರಹಿಸಬೇಕು. ಗಾಳಿಯಾಡದ ಪಾತ್ರೆಯಲ್ಲಿ ಐಸ್ ಕ್ರೀಮ್ ಇಡಿ. ಮುಚ್ಚಳ ಬಿಗಿಯಾಗಿರುವಂತೆ ನೋಡಿಕೊಳ್ಳಿ. ಆಗಾಗ್ಗ ಐಸ್ ಕ್ರೀಮ್ ಬಾಕ್ಸ್, ಫ್ರೀಜರ್ ತೆಗೆಯೋದನ್ನು ತಪ್ಪಿಸಿ. ಐಸ್ ಕ್ರೀಮ್ ಮೇಲೆ ಬೆಣ್ಣೆ ಹಚ್ಚಿದ ಪೇಪರ್ ಹಾಳೆ ಇಡೋದ್ರಿಂದ ಗಾಳಿಯಾಡುವುದು ಕಡಿಮೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
