Asianet Suvarna News Asianet Suvarna News

Thyroid ಸಮಸ್ಯೆ ಇದೆಯಾ? ತೆಂಗಿನಕಾಯಿ ಬಳಸಿ!

ಥೈರಾಯ್ಡ್ ಗ್ರಂಥಿಯು ಗಂಟಲಿನ ಬುಡದಲ್ಲಿ ಚಿಟ್ಟೆಯ ಆಕಾರದಲ್ಲಿ ಇರುವ ಒಂದು ಭಾಗ. ಈ ಸೂಕ್ಷ್ಮ ಗ್ರಂಥಿಯನ್ನು ಸರಿಯಾದ ರೀತಿಯಲ್ಲಿ ಕಾಳಜಿ ಮಾಡದೇ ಇದ್ದಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಥೈರಾಯ್ಡ್‌ ಆರೈಕೆಗೆ ತೆಂಗಿನಕಾಯಿ ಉತ್ತಮ ಆಹಾರವಾಗಿದೆ ಎಂಬುದು ನಿಮಗೆ ಗೊತ್ತೇ?

Coconut is Best Food For Thyroid Health
Author
Bangalore, First Published Feb 15, 2022, 5:52 PM IST

ನಮ್ಮ ದೇಹದಲ್ಲಿರುವ ಸೂಕ್ಷ್ಮ ಅಂಗಾಂಗಗಳಲ್ಲಿ ಥೈರಾಯ್ಡ್ ಗ್ರಂಥಿಯು (Thyroid) ಒಂದು. ಥೈರಾಯ್ಡ್ ಗ್ರಂಥಿಗೆ ಸ್ವಲ್ಪ ಏರುಪೇರು ಉಂಟಾದರೂ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತದೆ. ಅನಾರೋಗ್ಯಕರ ಜೀವನ ಶೈಲಿಯನ್ನು ದೇಹಕ್ಕೆ ರೂಢಿಸಿಕೊಳ್ಳುವುದರಿಂದ ಈಗಿನ ಜನರು ಚಿಕ್ಕ ವಯಸ್ಸಿನಲ್ಲಿಯೇ ಥೈರಾಯ್ಡ್ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಮೇಲೆ ನಿಗಾ ಇಟ್ಟು ಒತ್ತಡ (Stress) ಕಡಿಮೆ ಮಾಡಿಕೊಂಡು, ಪೌಷ್ಟಿಕ ಆಹಾರಗಳನ್ನು ಹೆಚ್ಚು ಸೇವನೆ ಮಾಡುವುದರಿಂದ ಥೈರಾಯ್ಡ್ ಸಮಸ್ಯೆಗಳು ಎದುರಾಗುವುದನ್ನು ತಪ್ಪಿಸಬಹುದು. 

ಹೀಗೆ ಥೈರಾಯ್ಡ್ ಆರೋಗ್ಯವನ್ನು ಹೆಚ್ಚಿಸುವ ಪೌಷ್ಟಿಕ ಆಹಾರಗಳ ಸಾಲಿನಲ್ಲಿ ತೆಂಗಿನಕಾಯಿಯು ಬಹು ಮುಖ್ಯಪಾತ್ರವನ್ನು ವಹಿಸುತ್ತದೆ. ತೆಂಗಿನಕಾಯಿಯನ್ನು (Coconut) ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಬಹಳ ಪ್ರಯೋಜನಗಳಿವೆ, ಇದು ಆಯುರ್ವೇದ ತಜ್ಞರು ಹೇಳಿರುವ ಮಾತು.

ಆಯುರ್ವೇದ ತಜ್ಞರು ಹೇಳುವ ಪ್ರಕಾರ ತೆಂಗಿನಕಾಯಿಯನ್ನು ಯಾವುದೇ ರೀತಿಯಲ್ಲಿ ದೇಹಕ್ಕೆ ಸೇವಿಸಬಹುದು- ತೆಂಗಿನಕಾಯಿಯ ಎಣ್ಣೆ, ತೆಂಗಿನಕಾಯಿ ನೀರು, ಚಟ್ನಿ, ತೆಂಗಿನಕಾಯಿ ಹಾಲು ಮತ್ತು ಬೆಲ್ಲದ ಉಂಡೆ ರೂಪದಲ್ಲಿ ಆಗಾಗ ಸೇವಿಸಬಹುದು. ಹೀಗೆ ತೆಂಗಿನಕಾಯಿಯನ್ನು ಯಾವುದೇ ರೂಪದಲ್ಲಿ ನಿಮ್ಮ ಆಹಾರ ಪದಾರ್ಥಗಳೊಂದಿಗೆ ಸೇವಿಸಬಹುದು. ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗಾದರೆ, ತೆಂಗಿನಕಾಯಿಯನ್ನು ಯಾವ ರೂಪದಲ್ಲಿ ಸೇವಿಸಬಹುದು, ಇದರಿಂದ ಯಾವೆಲ್ಲಾ ಉಪಯೋಗಗಳಿವೆ ಹಾಗೂ ಥೈರಾಯ್ಡ್ ಸಮಸ್ಯೆಯಿಂದ ಆರೋಗ್ಯವನ್ನು ತೆಂಗಿನಕಾಯಿ ಹೇಗೆ ಕಾಪಾಡುತ್ತದೆ ನೋಡೋಣ..

Kidney Health: ಬರಲಿದೆ ಬೇಸಿಗೆ, ಕಿಡ್ನಿ ಕಾಪಾಡಿಕೊಳ್ಳಿ ಹೀಗೆ...

ತೆಂಗಿನಕಾಯಿ ಎಣ್ಣೆ (Coconut oil)

ತೆಂಗಿನಕಾಯಿಯ ಎಣ್ಣೆಯನ್ನು ಕೊಬ್ಬರಿ ಎಣ್ಣೆ ಎಂದು ಕೂಡ ಕರೆಯುತ್ತಾರೆ. ತೆಂಗಿನಕಾಯಿಯ ಎಣ್ಣೆಯು ದೇಹದಲ್ಲಿರುವ ಉಷ್ಣಾಂಶವನ್ನು ಹೆಚ್ಚಿಸುವುದಕ್ಕೆ ಬಹಳ ಸಹಕಾರಿ. ಇದರ ಜೊತೆಗೆ, ನಿಮ್ಮ ದೇಹದಲ್ಲಿರುವ ಅನಾವಶ್ಯಕ ಕೊಬ್ಬನ್ನು ಕೂಡ ಕರಗಿಸುತ್ತದೆ. ಥೈರಾಯ್ಡ್ ಸಮಸ್ಯೆ ಇರುವವರು ಸ್ವಲ್ಪ ಕೈ ಕಾಲುಗಳು ತಣ್ಣಗಾಗುವ (Cold) ತೊಂದರೆಗಳನ್ನು  ಅನುಭವಿಸುತ್ತಿರುತ್ತಾರೆ. ಅಂಥವರು ಈ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ತೆಂಗಿನ ಎಣ್ಣೆಯಲ್ಲಿರುವ ಮತ್ತೊಂದು ಉತ್ತಮ ಅಂಶವೆಂದರೆ ಇದು ಬೇರೆ ಆಹಾರ ಪದಾರ್ಥಗಳ ರೀತಿ ಲವಣಾಂಶಗಳನ್ನು ಬಳಸಿಕೊಂಡು ಜೀರ್ಣವಾಗುವುದಿಲ್ಲ. ತೆಂಗಿನಕಾಯಿ ಎಣ್ಣೆಯು ನಿಮ್ಮ ಕರುಳಿನಿಂದ ಯಕೃತ್ತಿಗೆ ವೇಗವಾಗಿ ಹೋಗುತ್ತದೆ. ಈ ಕಾರಣದಿಂದ ಯಕೃತ್ತಿನ ಕೆಲಸ ಸುಲಭವಾಗುತ್ತದೆ ಹಾಗೂ ಥೈರಾಯ್ಡ್ ಹಾರ್ಮೋನ್ಗೆ (Harmone) ಇದು ಉಪಯೋಗಕಾರಿ.

ತೆಂಗಿನಕಾಯಿಯ ನೀರು (Coconut Water)

ಆಯುರ್ವೇದ ತಜ್ಞರ ಪ್ರಕಾರ ತೆಂಗಿನಕಾಯಿಯ ನೀರನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಆದರೆ, ನಿಮಗೆ ಶೀತ ಅಥವಾ ಕೆಮ್ಮಿನಂತಹ ತೊಂದರೆಗಳಿದ್ದರೆ ಆಗ ಇದರ ಸೇವನೆಯಿಂದ ದೇಹದಲ್ಲಿ ತಂಪು ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ತೆಂಗಿನಕಾಯಿಯ ನೀರನ್ನು ಸೇವಿಸದೇ ಇದ್ದರೆ ಒಳ್ಳೆಯದು.

Health And Nail Shape: ಏನು, ಉಗುರಿನ ಆಕಾರ ನೋಡಿ ಆರೋಗ್ಯ ತಿಳೀಬಹುದಾ?!

ತೆಂಗಿನಕಾಯಿ ಚಟ್ನಿ (Chutney)

 ತೆಂಗಿನಕಾಯಿಯ ಚಟ್ನಿಯನ್ನು ದಿನನಿತ್ಯ ಆಹಾರದಲ್ಲಿ ಸೇವಿಸಬಹುದು. ಬೆಳಗಿನ ತಿಂಡಿ (Breakfast) ದೋಸೆ, ಇಡ್ಲಿ, ರೊಟ್ಟಿ, ಚಪಾತಿ ಇತ್ಯಾದಿಗಳ ಜೊತೆಗೆ ತೆಂಗಿನಕಾಯಿ ಚಟ್ನಿಯನ್ನು ಸೇವಿಸಬಹುದು. ಅಥವಾ, ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ಕೂಡ ಸೇರಿಸಬಹುದು. ಇದು ಊಟದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೆ ಕೂಡ ಒಳ್ಳೆಯದು.

ತೆಂಗಿನಕಾಯಿಯ ಹಾಲು (Milk)

ತೆಂಗಿನ ಹಾಲನ್ನು ಮನೆಯಲ್ಲಿಯೇ ತಯಾರಿಸಬಹುದು. ತೆಂಗಿನಕಾಯಿಯನ್ನು ತುರಿದು ಅದರ ಹಾಲನ್ನು ತೆಗೆದು ಬೆಳಗಿನ ಸಮಯದಲ್ಲಿ ಕುಡಿಯಬೇಕು ಅಥವಾ ರಾತ್ರಿ ಮಲಗುವ ಮುನ್ನ ಕೂಡ ಸೇವಿಸಬಹುದು.

ತೆಂಗಿನಕಾಯಿ ಬೆಲ್ಲದ (Jaggery) ಉಂಡೆ 

ತೆಂಗಿನಕಾಯಿಯೊಂದಿಗೆ ಬೆಲ್ಲವನ್ನು ಸೇರಿಸಿ ಮಿಶ್ರಣ ಮಾಡಿ ಉಂಡೆಗಳನ್ನಾಗಿಸಿಕೊಂಡ  ಸ್ನಾಕ್ಸ್  ರೀತಿಯಲ್ಲಿ ಸೇವನೆ ಮಾಡುವುದರಿಂದ ಕೂಡ ಥೈರಾಯಿಡ್ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಗೆ ಇದರ ಸಿಹಿಯಿಂದಾಗಿ ನೀವು ನಾಲಿಗೆ ಚಪ್ಪರಿಸುವುದು.

ಇಷ್ಟೆಲ್ಲ ಉಪಯೋಗಗಳನ್ನು ಹೊಂದಿರುವ ತೆಂಗಿನಕಾಯಿಯನ್ನು ನಿಮ್ಮ ನಿತ್ಯ ಆಹಾರ ಶೈಲಿಯಲ್ಲಿ ಸೇರಿಸಿಕೊಳ್ಳಿ ಹಾಗೂ ಥೈರಾಯ್ಡ್ ಸಮಸ್ಯೆಗೆ ಗುಡ್ ಬೈ ಹೇಳಿ..

Follow Us:
Download App:
  • android
  • ios