Asianet Suvarna News Asianet Suvarna News

Freezerನಲ್ಲಿ ಆಹಾರ ಇಡೋ ಮುನ್ನ ಈ ಆರ್ಟಿಕಲ್ ಓದ್ಬಿಡಿ

ಎಲ್ಲರ ಮನೆಯಲ್ಲೂ ಫ್ರಿಡ್ಜ್ಇರುತ್ತೆ. ಆಹಾರ ಕೆಡಬಾರದು ಎಂದು ಆಹಾರವನ್ನು ಫ್ರಿಡ್ಜ್ನಲ್ಲಿ ಇಡುತ್ತೀವಿ. ಆದರೆ ಇದರಿಂದ ಆರೋಗ್ಯ ಕೆಡುವ ಹಾಗಾಗಬಾರದಲ್ಲವೇ? ಆಹಾರವನ್ನು ಹೇಗೆ ಶೇಖರಿಸಿಡಬೇಕು ಎಂದು ಸಲಹೆ ಪಾಲಿಸಿ

 

Using food preserved in refrigerator not recommendable for good health
Author
Bangalore, First Published Jan 28, 2022, 5:56 PM IST

ಫ್ರಿಡ್ಜ್‌ನ (Fridge) ಬಾಗಿಲು ತೆಗೆದರೆ ಸಾಕು ಸಣ್ಣ ಮಕ್ಕಳಿಗೆಂದು ತಂದಿರಿಸಿರುವ ಚಾಕಲೇಟು, ಐಸ್‌ಕ್ರೀಮ್‌ (Ice cream) ಹಾಗೂ ಜ್ಯೂಸಿನಿಂದ ಹಿಡಿದು ಅಡುಗೆಗೆ ಬಳಸುವ ಸಾಮಾಗ್ರಿ, ಹಾಲು ಮೊಸರು, ತರಕಾರಿ, ಹಣ್ಣು ಹಂಪಲು ಹೀಗೆ ಎಲ್ಲಾ ವಸ್ತುಗಳು ಕಾಣಿಸುತ್ತವೆ. ಇದನ್ನೆಲ್ಲಾ ನೋಡಿ ನೀವು ಪ್ರಿಡ್ಜ್‌ನಿಂದ ಏನನ್ನು ತೆಗೆದುಕೊಳ್ಳಲು ಹೋಗಿದ್ದೀವಿ ಅನ್ನೋದೆ ಮರೆತು ಬಿಡುತ್ತೀವಿ. ಇದನ್ನೆಲ್ಲಾ ಹೀಗೆ ಫ್ರಿಡ್ಜ್‌ನಲ್ಲಿಯೇ ಏಕೆ ಇಡುತ್ತೇವೆ ಎಂದರೆ ಇದರಲ್ಲಿರುವ ತಂಪಾದ ಗಾಳಿಯಿಂದಾಗಿ ಇಟ್ಟ ಪಧಾರ್ಥಗಳು ಕೆಡುವುದಿಲ್ಲ ಹಾಗೂ ತಣ್ಣಗೇ ಉಳಿಯುತ್ತದೆ ಎಂದು. ಅದರಲ್ಲಿಯೂ ಫ್ರೀಜರ್‌ನಲ್ಲಿ ಅಡುಗೆ ಪಧಾರ್ಥವನ್ನು ಇಡುತ್ತಾರೆ ಇದರಿಂದಾಗಿ ಆಹಾರ ತಣ್ಣಗೆ ಹಾಗೂ ಫ್ರೆಶ್‌ (Fresh) ಆಗಿರುತ್ತದೆ ಜೊತೆಗೆ ಹೆಚ್ಚು ಸಮಯದ ತನಕ ಹಾಳಾಗದಂತೆ ತಡೆಯುತ್ತದೆ.

 ಆದರೆ ಫ್ರೀಜರ್‌ನಲ್ಲಿ ಆಹಾರ ಇಡುವುದಕ್ಕೂ ಕೆಲವು ರೀತಿ ನೀತಿಗಳಿವೆ ಇಲ್ಲವಾದರೆ ಆಹಾರ ಪಧಾರ್ಥ ಕೆಡುವ ಜೊತೆಗೆ ಇದೇ ಕಾರಣದಿಂದ ಆರೋಗ್ಯ ಹಾಳಾಗಬಾರದು ಅಲ್ಲವೇ ಅದಕ್ಕಾಗಿ ಈ ಕೆಲವು ಸಣ್ಣ ವಿಚಾರಗಳ ಬಗ್ಗೆ ಹೆಚ್ಚು ಗಮನವಿಡಿ. ಇದರಿಂದ ನಿಮ್ಮ ಫ್ರೀಜರ್‌ಕೂಡ ಪದೇ ಪದೇ ಹಾಳಾಗದೆ ಉಳಿಯುತ್ತದೆ.

ಆಹಾರ ಪಧಾರ್ಥ ತಣ್ಣಗಾದ (Cool) ಬಳಿಕ ಫ್ರೀಜರ್‌ನಲ್ಲಿಡಿ
ಯಾವಾಗಲೂ ಈ ವಿಚಾರ ನೆನಪಿನಲ್ಲಿಡಿ. ಯಾವುದೇ ಆಹಾರ ಪಧಾರ್ಥ ಬಿಸಿ (Hot) ಇರುವಾಗ ಫ್ರೀಜರ್‌ನಲ್ಲಿಡುವ ಕೆಲಸ ಮಾಡಬೇಡಿ. ಅದು ಸ್ವಲ್ಪ ಮಟ್ಟಿಗೆ ತಣ್ಣಗಾಗುವ ತನಕ ಕಾದು ಅಂದರೆ ಪಧಾರ್ಥ ನಿಮ್ಮ ರೂಮ್‌ ಟೆಂಪರೇಚರ್‌ಗೆ ಬಂದ ಬಳಿಕವಷ್ಟೇ ಫ್ರೀಜರ್‌ನಲ್ಲಿಡಿ. ಇಲ್ಲವಾದರೆ  ಅದರ ಬಿಸಿಯಿಂದಾಗಿ ಫ್ರೀಜರ್‌ನ ಟೆಂಪರೇಚರ್‌ಗೆ (Temperature) ತೊಂದರೆಯಾಗಬಹುದು. ಇದರ ಜೊತೆಗೆ ಫ್ರೀಜರ್‌ನಲ್ಲಿರುವ ಇನ್ನ ಬೇರೆ ಖಾದ್ಯಗಳು ಕೆಡುವ ಸಾಧ್ಯತೆ ಕೂಡಾ ಇದೆ. ಹಾಗೂ ಇದು ಫ್ರೀಜರ್‌ನ ತಣ್ಣಗಾಗಿಸುವ ವಿಧಾನವನ್ನು ತಡವಾಗಿಸುವ ಸಾಧ್ಯತೆ ಕೂಡಾ ಇದೆ.

Junk Foodನಿಂದ ದೂರ ಇರೋಕೆ ಈ ಟಿಪ್ಸ್ ಫಾಲೋ ಮಾಡಿ..
 

ಪಧಾರ್ಥವನ್ನು ಸರಿಯಾಗಿ ಕಟ್ಟಿ ಇಡಿ (Wrap)
ಯಾವುದೇ ಪಧಾರ್ಥವನ್ನು ಫ್ರೀಜರ್‌ನಲ್ಲಿ ಇಡುತ್ತಿದ್ದೀರಾ ಎಂದಾದರೆ ಅದನ್ನು ಸರಿಯಾಗಿ ಕವರ್‌ ಆಗುವ ಹಾಗೆ ಕಟ್ಟಿದ್ದೀರಾ ಎಂದು ಪರೀಕ್ಷಿಸಿಕೊಳ್ಳಿ ಇಲ್ಲವಾದರೆ ಫ್ರೀಜರ್‌ನಲ್ಲಿ ಸುಟ್ಟು ಹೋಗುವ ಅಪಾಯವಿದೆ. ಹೀಗಾಗದಂತೆ ನೋಡಿಕೊಳ್ಳಿ. ಸುಟ್ಟು ಹೋಗುವುದು ಎಂದರೆ ನೀವು ಇಡುವ ಪಧಾರ್ಥದಲ್ಲಿ ಇರುವ ನೀರಿನಾಂಶ ಹೊರಬಂದು ಆಹಾರ ಪಧಾರ್ಥದಲ್ಲಿ ನೀರಿನಾಂಶವಿಲ್ಲದೆ ನಿರ್ಜಲೀಕರಣ ಆಗಬಹುದು.

ಈ ಎಲ್ಲಾ ಕಾರಣದಿಂದಾಗಿ ಆಹಾರದ ರುಚಿ ಕೆಡುವುದರ ಜೊತೆಗೆ ಇಂತಹ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರು ಕಾಣುತ್ತೀರಿ.

ಒಂದೇ ಸಲಕ್ಕೆ ಹೆಚ್ಚು ಪಧಾರ್ಥಗಳನ್ನು ಫ್ರೀಜರ್‌ನಲ್ಲಿಡುವುದ ನಿಲ್ಲಿಸಿ (Over-storing) ಒಂದು ಪಧಾರ್ಥವನ್ನು ಹೆಚ್ಚು ಸಮಯಗಳ ಕಾಲ ಫ್ರೀಜರ್‌ನಲ್ಲಿಡುವುದು ಒಳ್ಳೆಯದಲ್ಲ. ಇದರಿಂದಾಗಿ ಆಹಾರ ಪಧಾರ್ಥ ಸಂಪೂರ್ಣವಾಗಿ ತನ್ನ ಗುಣಮಟ್ಟ (Quality) ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಇಂತಹ ಆಹಾರ ಆರೋಗ್ಯಕ್ಕೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಇನ್ನು ಫ್ರೀಜರ್‌ನಲ್ಲಿ ಬಹಳ ಪಧಾರ್ಥಗಳಿಂದ ತುಂಬಿಸಿಡುವುದು ಫ್ರೀಜರ್‌ನ ಆರೋಗ್ಯ (Working condition) ಹಾಳುಮಾಡುವ ಸಾಧ್ಯತೆಯಿದೆ. ಆದ್ದರಿಂದ ಓವರ್‌ ಸ್ಟೋರಿಂಗ್‌ ನಿಲ್ಲಿಸಿಬಿಡಿ.
Delicious sweet: ಸಿಹಿಯಾದ ಎಳ್ಳುಂಡೆ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು
 

ಲೇಬಲ್‌ ಅಂಟಿಸುವುದು. (Labeling)
ಒಂದು ಒಳ್ಳೆಯ ಮಾರ್ಗ ಲೇಬಲಿಂಗ್‌ ಎಂದರೆ, ಯಾವ ಆಹಾರ ಪಧಾರ್ಥವನ್ನು ಯಾವ ದಿನದಂದು ಫ್ರಿಡ್ಜ್‌ನಲ್ಲಿರಿಸಿದ್ದೀರಾ ಎಂದು ಆ ಪಧಾರ್ಥದ ಮೇಲೆ ಬರೆದಿಡುವುದು. ಜೊತೆಗೆ ಇದರಲ್ಲಿ ಕಚ್ಚಾ ಪಧಾರ್ಥಗಳು ಹಾಗೂ ಬೇಯಿಸಿದ ಪಧಾರ್ಥಗಳನ್ನು ಬೇರೆಬೇರೆಯಾಗಿ ವಿಂಗಡಿಸಿ ಇಡುವುದು.

ವಾರಕ್ಕೊಮ್ಮೆ ಫ್ರೀಜರ್‌ ಅನ್ನು ಕ್ಲೀನ್‌ ಮಾಡಿ (Cleaning).
ಅಡುಗೆಗೆ ಬಳಸುವ ಎಷ್ಟೋ ಪಧಾರ್ಥಗಳನ್ನು ಫ್ರೀಜರ್‌ನಲ್ಲಿಯೇ ಇರುಸುತ್ತೀರ ಎಂದಮೇಲೆ ಅದನ್ನು ಆಗಾಗ ಸ್ವಚ್ಛ ಮಾಡಿಟ್ಟುಕೊಳ್ಳುವ ಅವಶ್ಯಕತೆ ಇದೆ. ಇಲ್ಲವಾದರೆ ಯಾವುದೋ ಒಂದು ಪಧಾರ್ಥದ ವಾಸನೆಯು ಬೇರೆಲ್ಲಾ ಪಧಾರ್ಥಗಳಿಗೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ.

ಇನ್ನು ಮುಂದೆ ಫ್ರೀಜರ್‌ ಬಳಸುವಾಗ ಈ ಎಲ್ಲಾ ವಿಷಯಗಳ ಬಗ್ಗೆ ಗಮನವಿರಿಸಿ ನಿಮ್ಮ ಆರೋಗ್ಯದ ಜೊತೆ ಫ್ರೀಜರ್‌ನ ಆರೋಗ್ಯ ಕೂಡ ಕೆಡದಂತೆ ನೋಡಿಕೊಳ್ಳಿ.

Follow Us:
Download App:
  • android
  • ios