ಬಲು ರುಚಿಯಾದ ಮಜ್ಜಿಗೆ ಮೆಣಸು ಮಾಡೋದು ಹೇಗೆ? ಸಿಂಪಲ್ ವಿಧಾನಗಳಿವು
food Mar 18 2026
Author: Padmashree Bhat Image Credits:instagram
Kannada
ಕಟ್ ಮಾಡ್ಕೊಳ್ಳಿ
ಮೆಣಸನ್ನು ಉದ್ದುದ್ದವಾಗಿ ಕಟ್ ಮಾಡಿಕೊಳ್ಳಿ ಅಥವಾ ಮೆಣಸಿನೊಳಗಡೆ ಮಜ್ಜಿಗೆ ಹೋಗುವಂತೆ ಮಧ್ಯೆ ಕಟ್ ಮಾಡ್ಕೊಳ್ಳಿ
Image credits: instagram
Kannada
ಇನ್ನೇನು ಬೇಕು?
ಒಂದು ಕಪ್ ಜೀರಿಗೆ, ಮೆಂತೆಯನ್ನು ಸಮಪ್ರಮಾಣದಲ್ಲಿ ತಗೊಳ್ಳಿ, ಅದನ್ನು ಪೌಡರ್ ಮಾಡಿಕೊಳ್ಳಿ, ಇಂಗು ಕೂಡ ಸ್ವಲ್ಪ ಬೇಕು
Image credits: instagram
Kannada
ಮಜ್ಜಿಗೆ
ಕೆನೆ ಇರದ ಮಜ್ಜಿಗೆಗೆ ಜೀರಿಗೆ, ಮೆಂತೆ, ಸ್ವಲ್ಪ ಇಂಗು, ಉಪ್ಪು ಹಾಕಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ
Image credits: instagram
Kannada
ಮಜ್ಜಿಗೆ, ಮೆಣಸು ಮಿಕ್ಸ್ ಮಾಡಿ
ಮಜ್ಜಿಗೆಗೆ ಮೆಣಸು ಹಾಕಿ 24 ಗಂಟೆ ನೆನೆಸಿಡಿ, ಆ ಬಳಿಕ ಮೆಣಸನ್ನು ಮಾತ್ರ ಕಾಟನ್ ಬಟ್ಟೆ ಮೇಲೆ ಹರಗಿ ಬಿಸಿಲಿನಲ್ಲಿ ಒಣಗಿಸಿ, ಮೂರು ದಿನ ಮಜ್ಜಿಗೆಯನ್ನು ನೆನೆಸಿ ಇಡೋದು, ಬಿಸಿಲಿನಲ್ಲಿ ಒಣಗಿಸೋದು ಮಾಡಿ
Image credits: instagram
Kannada
ರೆಡಿ ಆಗುತ್ತೆ
ಮೆಣಸು ಗರಿ ಗರಿ ಒಣಗಬೇಕು, ಆಗ ಮೆಣಸು ರೆಡಿ ಆದಂತೆ. ಅದನ್ನು ಒಂದು ಡಬ್ಬದಲ್ಲಿ ಸ್ಟೋರ್ ಮಾಡಿಕೊಳ್ಳಿ