ಕೋಲ್ಕತಾದಲ್ಲಿ ರಷ್ಯನ್​ ಚಹಾ ಮಾರುವ ಪಪಿಯಾ ಘೋಸಲ್​ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್​. ಆದರೆ, ಅಂಗಡಿ ಜನಪ್ರಿಯತೆ ಗಳಿಸುತ್ತಿದ್ದಂತೆ ನೈತಿಕ ಪೊಲೀಸ್​ಗಿರಿ ಎದುರಾಗಿದೆ. ಉದ್ಯೋಗ ತ್ಯಜಿಸಿ ಸ್ವಂತ ಚಹಾ ಅಂಗಡಿ ತೆರೆದಿದ್ದ ಪಪಿಯಾಗೆ ಅಂಗಡಿ ಮುಚ್ಚುವಂತೆ ಬೆದರಿಕೆ ಹಾಕಲಾಗಿದೆ. ಹಳ್ಳಿಯ ಪರಿಸರ ಹಾಳು ಮಾಡುತ್ತಿರುವ ಆರೋಪದ ಮೇಲೆ ಫತ್ವಾ ಹೊರಡಿಸಲಾಗಿದೆ ಎಂದು ಪಪಿಯಾ ಅಳಲು ತೋಡಿಕೊಂಡಿದ್ದಾರೆ.

ರಷ್ಯನ್​ನಲ್ಲಿ ಮಾಡುವ ಚಹದ ವಿಧಾನವನ್ನೇ ತಾವು ಮಾಡುತ್ತಿರುವುದಾಗಿ ಹೇಳಿಕೊಂಡಿರುವ ರಷ್ಯನ್​ ಚಾಯ್​ವಾಲಿ ಈಗ ಸೋಷಿಯಲ್​  ಮೀಡಿಯಾ ಸೆನ್ಸೇಷನ್​ ಆಗಿದ್ದಾರೆ. ಕೋಲ್ಕತಾದಲ್ಲಿ ಇವರು ನಡೆಸುತ್ತಿರುವ ಚಿಕ್ಕದೊಂದು ರಸ್ತೆಬದಿಯ ಅಂಗಡಿಗೆ ಜನರು ಮುಗಿ ಬೀಳುತ್ತಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಈ ಸುಂದಿ ಮಾಡುವ ಚಹಾ ಕುಡಿಯಲು ಪುರುಷರು ದೌಡಾಯಿಸುತ್ತಿದ್ದಾರೆ. ಇವರು ಮಾಡುವ ವಿಶೇಷ ರೀತಿಯ ರಷ್ಯನ್​ ಚಹಾ ಕುಡಿದರೆ ಸ್ವರ್ಗಸುಖ ಸಿಗುತ್ತದೆ ಎನ್ನುತ್ತಿದ್ದಾರೆ ಇದನ್ನು ಸೇವಿಸದವರು. ಅಷ್ಟು ಚೆನ್ನಾಗಿ ಇರುತ್ತಂತೆ ಇವರು ಮಾಡುವ ಚಹಾ. ಅಂದಹಾಗೆ ಇವರ ಹೆಸರು ಪಪಿಯಾ  ಘೋಸಲ್​.

ಇವರ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಅವರು ತಾವು ತಯಾರಿಸುವ ಚಹಾದ ಗುಟ್ಟನ್ನು ಹೇಳಿದ್ದಾರೆ. ಎಷ್ಟು ಹಾಲು ಹಾಕಬೇಕು, ಹೇಗೆ ಸಕ್ಕರೆ ಹಾಕಬೇಕು, ಬಳಿಕ ಚಹಾಪುಡಿ ಹಾಕಬೇಕು, ಸಕ್ಕರೆ ಹಾಕಿದ ಮೇಲೆ ಹೆಚ್ಚುಹೊತ್ತು ಕುದಿಸಬಾರದು ಎಂದೆಲ್ಲಾ ಹೇಳಿದ್ದಾರೆ. ಅಷ್ಟಕ್ಕೂ ಬಹುತೇಕ ಎಲ್ಲರೂ ಚಹಾ ಮಾಡುವ ವಿಧಾನ ಒಂದೇ ರೀತಿ ಆಗಿದ್ದರೂ ಒಬ್ಬೊಬ್ಬರು ಮಾಡುವ ಟೇಸ್ಟೇ ಬೇರೆ ರೀತಿ ಇರುತ್ತದೆ. ಇದು ಚಹಾ ಮಾತ್ರವಲ್ಲ, ಎಲ್ಲಾ ತಿನಿಸು, ಪಾನೀಯ, ಆಹಾರಗಳಿಗೂ ಅನ್ವಯ  ಆಗುತ್ತದೆ. ಅದದೇ ಸಾಮಗ್ರಿಗಳನ್ನು ಹಾಕಿ, ಅದೇ ರೀತಿಯ ವಿಧಾನ ಅನುಸರಿಸಿದರೂ ಒಬ್ಬೊಬ್ಬರ ಕೈರುಚಿ ಒಂದೊಂದು ರೀತಿ ಇರುತ್ತದೆ. ಅದೇ ರೀತಿ ಈ ರಷ್ಯನ್​ ಚಾಯ್​ವಾಲಿಯ ಚಹಾಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

ಮನೆಗೆ ತಂದ ಟೊಮ್ಯಾಟೋ ಗರ್ಭಿಣಿ: ವೈರಲ್‌ ವಿಡಿಯೋ ನೋಡಿ ಫ್ರಿಜ್‌ ಬಳಿ ಓಡ್ತಿರೋ ಮಹಿಳೆಯರು!

ಅಷ್ಟೇ ಅಲ್ಲದೇ, ಇವರ ಬಳಿ ಚಹಾ ಕುಡಿದರೆ ಉಚಿತವಾಗಿ ಸೆಲ್ಫಿಯನ್ನೂ ಇವರು ನೀಡುತ್ತಾರೆ. ಸೆಲ್ಫಿಯನ್ನು ತೆಗೆದುಕೊಳ್ಳಲು ಯುವಕರು ಚೆನ್ನಾಗಿ ತಾಮುಂದು ನಾಮುಂದು ಎನ್ನುತ್ತಿದ್ದಾರೆ. ಅದರೆ ಇದೀಗ ಈ ಚಾಯ್​ವಾಲಿಗೆ ಸಂಕಷ್ಟ ಎದುರಾಗಿದೆ. ಇವರು ಈ ಪರಿಯಲ್ಲಿ ಖ್ಯಾತಿ ಗಳಿಸುವುದನ್ನು ನೋಡಿ ಹಲವರಿಗೆ ಹೊಟ್ಟೆ ಉರಿ ಶುರುವಾಗಿದೆ. ಇದೇ ಕಾರಣಕ್ಕೆ ಅಂಗಡಿಯನ್ನು ಮುಚ್ಚುವಂತೆ ಪಪಿಯಾ ಘೋಸಲ್​ ಅವರಿಗೆ ಹೇಳಲಾಗಿದೆ. ಇವರ ಅಂಗಡಿಯ ಮೇಲೆ ಅಂಗಡಿ ಮುಚ್ಚುವಂತೆ ಬೆದರಿಕೆ ಹಾಕಲಾಗಿದ್ದು,  ನೈತಿಕ ಪೊಲೀಸ್ ಗಿರಿ ಮಾಡಲಾಗಿದೆ.
 
ಸ್ವಂತ ಉದ್ಯಮ ಸ್ಥಾಪಿಸುವ ಸಲುವಾಗಿ  ಕೆಲಸವನ್ನು ತ್ಯಜಿಸಿದ್ದೆ.  ನಾಲ್ಕು ತಿಂಗಳ ಹಿಂದೆ ಕೋಲ್ಕತಾದ ಡೊಮ್ಜೂರ್ ಬಳಿಯ ಅಂಕುರ್ಹಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 16 ರ ಬದಿಯಲ್ಲಿ ಒಂದು ಸಣ್ಣ ಚಹಾ ಅಂಗಡಿಯನ್ನು ಸ್ಥಾಪಿಸಿದ್ದೆ. ನಾನು ಮಾಡುವ ಟೀ ಸೇವನೆಗೆ ಅನೇಕ ಜನರು ಬರುತ್ತಿದ್ದರು. ಆದರೆ ಅಂಗಡಿ ಜನಪ್ರಿಯತೆ ಗಳಿಸುತ್ತಿದ್ದಂತೆ, ಕಿರುಕುಳ ಅನುಭವಿಸಲು ಶುರು ಮಾಡಿದ್ದೇನೆ. ನೈತಿಕ ಪೊಲೀಸ್​ಗಿರಿಯಿಂದ ನಾನು ಅಂಗಡಿ ಮುಚ್ಚುವ ಹಾಗಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ  ಪಪಿಯಾ. ಅವರ  ಪ್ರಕಾರ, ಅಂಗಡಿಯನ್ನು ಮುಚ್ಚುವಂತೆ ಗ್ರಾಮದಲ್ಲಿ ಫತ್ವಾ ಹೊಂದಿರುವ ಪೋಸ್ಟರ್ ಅನ್ನು ಹಾಕಲಾಗಿದೆ.  ಹಳ್ಳಿಯ ಪರಿಸರವನ್ನು ಹಾಳು ಮಾಡುತ್ತಿರುವುದಾಗಿ ಇದರಲ್ಲಿ ಹೇಳಲಾಗಿದೆ. ನಾನು ಚಹಾ  ಮಾಡುತ್ತಿದ್ದೇನೇ ವಿನಾ ಯಾವುದೇ ಅಕ್ರಮ ಎಸಗುತ್ತಿಲ್ಲ. ಆದರೂ ಈ ರೀತಿ ಮಾಡಲಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಗರ್ಭದಲ್ಲಿರೋ ಮಗುವಿನ ಚಲನಚಲನ ಪರೀಕ್ಷೆಗೆ ಕಿತ್ತಳೆ ಜ್ಯೂಸ್‌! ಖ್ಯಾತ ವೈದ್ಯರು ಹೇಳೋದೇನು ಕೇಳಿ..