ಭಾರತದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಪಾರ್ಲೆ-ಜಿ ಬಿಸ್ಕೆಟ್‌ನ 5 ರೂಪಾಯಿ ಬೆಲೆ ನೋಡಿ ರಷ್ಯಾದ ಯುವತಿಯೊಬ್ಬಳು ಆಶ್ಚರ್ಯಚಕಿತಳಾಗಿದ್ದಾಳೆ. ರಷ್ಯಾದಲ್ಲಿ ಇಂತಹ ಬಿಸ್ಕೆಟ್‌ಗೆ 500 ರೂ. ಬೆಲೆ ಇರುವುದರಿಂದ ಆಕೆಗೆ ಈ ಅಗ್ಗದ ಬೆಲೆ ಅಚ್ಚರಿ ತಂದಿದೆ. 1939ರಲ್ಲಿ ಆರಂಭವಾದ ಈ ಬಿಸ್ಕೆಟ್ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.

ದೆಹಲಿ: ಭಾರತದಲ್ಲಿ ಹಲವು ದಶಕಗಳ ಹಿಂದಿನಿಂದಲೂ ಫೇಮಸ್​ ಆಗಿರೋ ಪಾರ್ಲೆ-ಜಿ ಬಿಸ್ಕೆಟ್​ಗೆ ಅದರದ್ದೇ ಆದ ಮಹತ್ವ ಇದೆ. 1929ರಲ್ಲಿ ಮೋಹನ್‌ಲಾಲ್ ದಯಾಳ್ ಚೌಹಾಣ್ ಅವರು ಮುಂಬೈನ ವಿಲೆ ಪಾರ್ಲೆ (Vile Parle) ಪ್ರದೇಶದಲ್ಲಿ ಕೇವಲ 12 ಕಾರ್ಮಿಕರೊಂದಿಗೆ ಸಣ್ಣ ಕಾರ್ಖಾನೆಯನ್ನು ಪ್ರಾರಂಭಿಸಿದರು. ಮೊದಲು ಅವರು ಮಿಠಾಯಿಗಳನ್ನು (ಕಾಂಡಿ) ತಯಾರಿಸುತ್ತಿದ್ದರು. 1939ರಲ್ಲಿ ಕಂಪನಿಯು 'ಪಾರ್ಲೆ ಗ್ಲುಕೋ' (Parle Gluco) ಹೆಸರಿನಲ್ಲಿ ತನ್ನ ಮೊದಲ ಬಿಸ್ಕತ್ತನ್ನು ಮಾರುಕಟ್ಟೆಗೆ ಪರಿಚಯಿಸಿತು. ಇದು ಬ್ರಿಟಿಷ್ ಬಿಸ್ಕತ್ತುಗಳಿಗೆ ಅಗ್ಗದ ಭಾರತೀಯ ಪರ್ಯಾಯವಾಗಿ ಜನಪ್ರಿಯವಾಯಿತು. 947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಬ್ರಿಟಿಷ್ ಬಿಸ್ಕತ್ತುಗಳ ವಿರುದ್ಧ ಸ್ವದೇಶಿ ಬಿಸ್ಕತ್ತು ಎಂದು ದೊಡ್ಡ ಮಟ್ಟದ ಜಾಹೀರಾತು ಅಭಿಯಾನ ಕೈಗೊಳ್ಳಲಾಯಿತು. ರ್ಲೆ-ಜಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ತು ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. 2013ರಲ್ಲಿ ಇದು ಭಾರತದಲ್ಲಿ ₹5,000 ಕೋಟಿ ಮಾರಾಟದ ಗಡಿ ದಾಟಿದ ಮೊದಲ FMCG ಬ್ರಾಂಡ್ ಎನಿಸಿಕೊಂಡಿತು.

ರಷ್ಯಾ ಯುವತಿ ಕಕ್ಕಾಬಿಕ್ಕಿ

ಇಂಥ ಪಾರ್ಲೆ-ಜಿ ಬಿಸ್ಕೆಟ್​ನ ಚಿಕ್ಕ ಪೊಟ್ಟಣ ಈಗಲೂ ಐದು ರೂಪಾಯಿಗೆ ಸಿಗುವುದು ಇದೆ. ಕೆಲವರು ಈ ಬಿಸ್ಕೆಟ್​ ಆರಂಭದ ದಿನಗಳಷ್ಟು ಸ್ವಾದ ಉಳಿಸಿಕೊಂಡಿಲ್ಲ ಎಂದು ಹೇಳುತ್ತಲಾದರೂ, ಈ ಬಿಸ್ಕೆಟ್​ ಹಲವರಿಗೆ ವರದಾನವಾಗಿದೆ. ಬಹುತೇಕ ಎಲ್ಲರೂ ಇಷ್ಟಪಡುವ ಬಿಸ್ಕೆಟ್​ ಇದಾಗಿದೆ. ಇದೀಗ ಭಾರತಕ್ಕೆ ಸ್ನೇಹಿತನ ಭೇಟಿಗಾಗಿ ಬಂದ ರಷ್ಯನ ಯುವತಿಯೊಬ್ಬಳು, ಪಾರ್ಲೆ-ಜಿ ಬಿಸ್ಕೆಟ್​ ಖರೀದಿಸಲು ಹೋಗಿ, ಕಕ್ಕಾಬಿಕ್ಕಿಯಾಗಿದ್ದಾಳೆ. ಭಾರತದ ಭೇಟಿಯ ಸಮಯದಲ್ಲಿ, ಪಾರ್ಲೆ-ಜಿ ಬಿಸ್ಕತ್ತುಗಳ ಪ್ಯಾಕೆಟ್ ಖರೀದಿಸಲು ವಿಮಾನ ನಿಲ್ದಾಣದ ಸಮೀಪ ಇರುವ ಅಂಗಡಿಗೆ ಹೋದಳು. ಬಿಸ್ಕತ್ತುಗಳನ್ನು ಖರೀದಿಸಿದ ನಂತರ, ಅಂಗಡಿಯವನು ಅವಳಿಗೆ ಕೇವಲ ₹5 ಪಾವತಿಸಲು ಹೇಳಿದನು. ಬೆಲೆಯನ್ನು ಕೇಳಿದಾಗ ರಷ್ಯಾದ ಹುಡುಗಿ ಸಂಪೂರ್ಣವಾಗಿ ಆಶ್ಚರ್ಯಚಕಿತಳಾದಳಂತೆ.

ಇದಕ್ಕೆ ಕಾರಣ ಇಷ್ಟೇ. ಈ ರೀತಿಯ ಬಿಸ್ಕತ್ತುಗಳಿಗೆ ರಷ್ಯಾದಲ್ಲಿ ಕನಿಷ್ಠ 500 ರೂಪಾಯಿ ಬೆಲೆ ಇವೆ ಎನ್ನುವುದು. ಇದೇ ಕಾರಣಕ್ಕೆ, ಭಾರತದಲ್ಲಿ ಇಷ್ಟು ಚೀಪಾ ಎಂದು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿರೋ ಯುವತಿ, ಇದನ್ನು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಅದೀಗ ವೈರಲ್​ ಆಗುತ್ತದೆ. ಭಾರತದಲ್ಲಿ ಬಿಸ್ಕತ್ತುಗಳ ಪ್ಯಾಕೆಟ್ ಕೇವಲ ₹5 ಬೆಲೆಯಲ್ಲಿ ಲಭ್ಯವಿದೆ ಎಂದು ಅವಳು ನಂಬಲು ಸಾಧ್ಯವಾಗಲಿಲ್ಲ ಎಂದು ಆಕೆ ಹೇಳಿದ್ದಾಳೆ. ಕೆಲವೊಮ್ಮೆ, ನಾವು ಲಘುವಾಗಿ ಪರಿಗಣಿಸುವ ಸಣ್ಣ ವಿಷಯಗಳು ಇತರ ದೇಶಗಳ ಜನರನ್ನು ಆಶ್ಚರ್ಯಗೊಳಿಸಬಹುದು. ಭಾರತದ ಕೈಗೆಟುಕುವ ದೈನಂದಿನ ಉತ್ಪನ್ನಗಳು ವಿದೇಶಿ ಸಂದರ್ಶಕರಿಗೆ ನಿಜವಾಗಿಯೂ ಆಕರ್ಷಕವಾಗಿರಬಹುದು ಎಂದು ಕಮೆಂಟಿಗರು ಹೇಳುತ್ತಿದ್ದಾರೆ.

ಬಿಸ್ಕೆಟ್​ ಇತಿಹಾಸ

ಇನ್ನು ಈ ಬಿಸ್ಕೆಟ್​ನ ಇತಿಹಾಸ ನೋಡುವುದಾದರೆ, 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಬ್ರಿಟಿಷ್ ಬಿಸ್ಕತ್ತುಗಳ ವಿರುದ್ಧ ಸ್ವದೇಶಿ ಬಿಸ್ಕತ್ತು ಎಂದು ದೊಡ್ಡ ಮಟ್ಟದ ಜಾಹೀರಾತು ಅಭಿಯಾನ ಕೈಗೊಳ್ಳಲಾಯಿತು. 1980ರ ದಶಕದವರೆಗೆ ಇದನ್ನು 'ಪಾರ್ಲೆ ಗ್ಲುಕೋ' ಎಂದೇ ಕರೆಯಲಾಗುತ್ತಿತ್ತು. ನಂತರ 1982ರಲ್ಲಿ ಇದನ್ನು 'ಪಾರ್ಲೆ-ಜಿ' ಎಂದು ಮರುನಾಮಕರಣ ಮಾಡಲಾಯಿತು. ಇಲ್ಲಿರುವ 'G' ಮೂಲತಃ 'ಗ್ಲೂಕೋಸ್' (Glucose) ಎಂದು ಸೂಚಿಸುತ್ತದೆ, ಆದರೆ ನಂತರದ ದಿನಗಳಲ್ಲಿ ಕಂಪನಿಯು 'G ಫಾರ್ ಜೀನಿಯಸ್' (G for Genius) ಎಂದು ಬ್ರಾಂಡ್ ಘೋಷಣೆಯನ್ನು ಬಳಸಿತು. ಹಳದಿ ಬಣ್ಣದ ಕಾಗದದ ಪ್ಯಾಕೆಟ್‌ನಲ್ಲಿರುವ ಮುದ್ದಾದ ಪುಟ್ಟ ಮಗುವಿನ ಚಿತ್ರವು ಪಾರ್ಲೆ-ಜಿಯ ವಿಶೇಷತೆಯಾಗಿದೆ.