Asianet Suvarna News Asianet Suvarna News

ಕಡಿಮೆ ಬೆಲೆಯಲ್ಲಿ ಸ್ಟಾರ್‌ಬಕ್ಸ್‌ ಕಾಫಿ ಕುಡಿಯಲು ನೀವೂ ಈ ದೇಸಿ ಐಡಿಯಾ ಮಾಡ್ಬೋದು!

ಸ್ಟಾರ್‌ಬಕ್ಸ್‌ನಲ್ಲಿ ಕಾಫಿ ಬೆಲೆ ಹೆಚ್ಚು ಅನ್ನೋರು ಇನ್ಮೇಲೆ ಈ ಪ್ಲ್ಯಾನ್‌ ಮಾಡಿ ಸಾಕಷ್ಟು ಹಣ ಉಳಿಸ್ಬೋದು. ಅಲ್ಲದೆ, ಸ್ಟಾರ್‌ಬಕ್ಸ್‌ ಔಟ್ಲೆಟ್‌ಗೇ ಹೋಗಿ ಆರಾಮಾಗಿ ಕಾಫಿ ಕುಡಿಯಲು ಹೀಗೆ ಮಾಡ್ಬೋದು.

man orders coffee from zomato while sitting in starbucks to save money ash
Author
First Published Jun 9, 2023, 1:17 PM IST

ನವದೆಹಲಿ (ಜೂನ್ 9, 2023): ಉತ್ತಮ ಕಾಫಿ ಎಲ್ಲಿ ಸಿಗುತ್ತೆ ಅಂತ ಕಾಫಿ ಪ್ರಿಯರು ಹುಡುಕ್ತಾನೇ ಇರುತ್ತಾರೆ. ಅಲ್ಲದೆ ಒಬ್ಬೊಬ್ರು ಒಂದೊಂದು ಆಯ್ಕೆಗಳನ್ನೂ ಹೊಂದಿದ್ದಾರೆ. ಕಾಫಿ-ಪ್ರೇಮಿಗಳ ಸಂತೋಷಕ್ಕಾಗಿ ದೇಶಾದ್ಯಂತ ನಾನಾ ಕಾಫಿ ಚೈನ್‌ಗಳು ಇವೆ. ಕಾಫಿ ಡೇ, ಥರ್ಡ್‌ ವೇವ್‌ ಕಾಫಿ, ಸ್ಟಾರ್‌ಬಕ್ಸ್‌ - ಹೀಗೆ ನಾನಾ ಬ್ರ್ಯಾಂಡ್‌ಗಳು ಇವೆ. ಈ ಪೈಕಿ, ಸ್ಟಾರ್‌ಬಕ್ಸ್ ಅಂತಹ ಬ್ರ್ಯಾಂಡ್ ಆಗಿದ್ದು ಅದು ಉತ್ತಮ ಕಾಫಿಗೆ ಸಮಾನಾರ್ಥಕವಾಗಿದೆ. 

ಆದರೆ, ಸ್ಟಾರ್‌ಬಕ್ಸ್‌ನಲ್ಲಿ ಕಾಫಿ ಬೆಲೆ ಹೆಚ್ಚು ಅನ್ನೋರು ಇನ್ಮೇಲೆ ಈ ಪ್ಲ್ಯಾನ್‌ ಮಾಡಿ ಸಾಕಷ್ಟು ಹಣ ಉಳಿಸ್ಬೋದು. ಅಲ್ಲದೆ, ಸ್ಟಾರ್‌ಬಕ್ಸ್‌ ಔಟ್ಲೆಟ್‌ಗೇ ಹೋಗಿ ಆರಾಮಾಗಿ ಕಾಫಿ ಕುಡೀಬಹುದು! ಅದು ಹೇಗಪ್ಪಾ ಅಂತೀರಾ.. ಇತ್ತೀಚೆಗೆ, ಒಬ್ಬ ವ್ಯಕ್ತಿಯು ತನ್ನ ನೆಚ್ಚಿನ ಕಾಫಿಯನ್ನು ಸ್ಟಾರ್‌ಬಕ್ಸ್‌ನಲ್ಲಿ ಆನಂದಿಸಲು ಹೋಗಿದ್ದಾರೆ. ಹಾಗೆ, ಹಣವನ್ನು ಉಳಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ.

ಇದನ್ನು ಓದಿ: ಇದೇ ವಿಶ್ವದ ದುಬಾರಿ ಐಸ್‌ಕ್ರೀಂ: ಈ ಬೆಲೆಯಲ್ಲಿ ಒಂದು ಕಾರೇ ತಗೋಬೋದು!

ಸಂದೀಪ್ ಮಾಲ್ ಎಂಬ ಬಳಕೆದಾರರು ಸ್ವಲ್ಪ ಹಣವನ್ನು ಉಳಿಸುವ ಸಲುವಾಗಿ ಜನಪ್ರಿಯ ಡೆಲಿವರಿ ಅಪ್ಲಿಕೇಶನ್ ಝೊಮ್ಯಾಟೋ ಬಳಸಿಕೊಂಡು ಸ್ಟಾರ್‌ಬಕ್ಸ್‌ನಿಂದ ಕಾಫಿ ಆರ್ಡರ್ ಮಾಡಿದ ಅನುಭವವನ್ನು ವಿವರಿಸಿದ್ದಾರೆ. ಈ ಟ್ವೀಟ್‌ ವೈರಲ್‌ ಆಗಿದ್ದು, ಹಲವು ನೆಟ್ಟಿಗರು ನಾನಾ ಕಾಮೆಂಟ್‌ಗಳನ್ನು, ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಇದು ಉತ್ತಮ ಐಡಿಯಾ ಎಂದೂ ಹಲವರು ಸಂದೀಪ್‌ ಮಾಲ್‌ನನ್ನು ಶ್ಲಾಘಿಸಿದ್ದಾರೆ.

ಅವರ ವೈರಲ್‌ ಆದ ಟ್ವೀಟ್ ಅನ್ನು ಇಲ್ಲಿ ನೋಡಿ:

ಇದನ್ನೂ ಓದಿ: AI ಎಫೆಕ್ಟ್‌: ನೀವ್‌ ಆರ್ಡರ್‌ ಮಾಡದಿದ್ರೂ ನಿಮ್ಮ ಮೂಡ್‌ಗೆ ತಕ್ಕಂತೆ ನಿಮ್ಮ ಟೇಬಲ್‌ಗೆ ಬರುತ್ತೆ ಪಿಜ್ಜಾ!

"ಸ್ಟಾರ್‌ಬಕ್ಸ್‌ನಲ್ಲಿ ಕುಳಿತಿದ್ದೇನೆ - ಕಾಫಿಗೆ 4000 ರೂ. ಇದೆ. ಆದರೆ, ಝೊಮ್ಯಾಟೋದಲ್ಲಿ ಅದೇ ಕಾಫಿಗೆ ಡೀಲ್‌ನೊಂದಿಗೆ 190 ರೂ.ಗೆ ಲಭ್ಯವಿದೆ. ಈ ಹಿನ್ನೆಲೆ ಸ್ಟಾರ್‌ಬಕ್ಸ್‌ನ ವಿಳಾಸದೊಂದಿಗೆ ಝೊಮ್ಯಾಟೋಗೆ ಆರ್ಡರ್‌ ಮಾಡಿದೆ. ಝೊಮ್ಯಾಟೋ ಡೆಲಿವರಿ ಬಾಯ್‌ ಆರ್ಡರ್‌ ತೆಗೆದುಕೊಂಡು ಬಂದು ಸ್ಟಾರ್‌ಬಕ್ಸ್‌ನಲ್ಲಿರುವ ನನ್ನ ಟೇಬಲ್‌ಗೆ ನೀಡಿದ್ದಾನೆ. ಈ ವ್ಯವಹಾರವು ಅದರ ಬುದ್ಧಿವಂತಿಕೆಯೊಂದಿಗೆ ಸಂಪೂರ್ಣವಾಗಿ ಹೊರಗಿದೆ’’ ಎಂದು ಆತ ಟ್ವೀಟ್‌ ಮಾಡಿದ್ದಾನೆ. 

@SandeepMall ಖಾತೆಯ ಮೂಲಕ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಮತ್ತು ಸುಮಾರು 10 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಗೋಮೂತ್ರ, ಸಗಣಿ: ಫೇಕ್‌ ವಿಡಿಯೋ ತೆರವಿಗೆ ಹೈಕೋರ್ಟ್‌ ಆದೇಶ

ಇನ್ನು, ಸ್ಟಾರ್‌ಬಕ್ಸ್ ಕಾಫಿಯನ್ನು ಆರ್ಡರ್ ಮಾಡುವಾಗ ಹಣವನ್ನು ಉಳಿಸುವ ಬಗ್ಗೆ ಈ  ಘಟನೆಗೆ ಇಂಟರ್ನೆಟ್‌ ನಾನಾ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದೆ. ಅವರು ಸ್ಟಾರ್‌ಬಕ್ಸ್ ಔಟ್‌ಲೆಟ್‌ನಲ್ಲಿ ಕುಳಿತಿದ್ದಾಗ ಝೊಮ್ಯಾಟೋ ಆರ್ಡರ್‌ ಮಾಡಿರುವುದನ್ನು ಅನೇಕ ಜನರು ಅವರ ದೇಸಿ ಜುಗಾಡ್ ಐಡಿಯಾವನ್ನು ಮೆಚ್ಚಿಕೊಂಡಿದ್ದಾರೆ.

 "ಪ್ರಾಮಾಣಿಕವಾಗಿ, ಇದು ಭಾರತೀಯ ಜುಗಾಡ್‌ನ ಪೀಕ್‌ ಮತ್ತು ನಾನು ಇದನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. "1 ಮಿಲಿಯನ್ ವೀಕ್ಷಣೆಗಳು ಮತ್ತು ತುಂಬಾ ಪ್ರೆಸ್‌.  ಆ 200 ರೂ. ರಿಯಾಯಿತಿಯು ಸಂಪೂರ್ಣವಾಗಿ ಯೋಗ್ಯವಾಗಿದೆ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕ್ಯಾಡ್ಬರಿ ಚಾಕೊಲೇಟ್‌ ಪ್ರಿಯರೇ ಎಚ್ಚರ: ಸಾವಿರಾರು ಉತ್ಪನ್ನ ಹಿಂಪಡೆದ ಕಂಪನಿ, ಖರೀದಿಸಿದ್ದನ್ನು ತಿನ್ನದಂತೆ ಎಚ್ಚರಿಕೆ!

ಇನ್ನು, ಸ್ಟಾರ್‌ಬಕ್ಸ್ ತನ್ನ ಬೆಲೆಗೆ ಸುದ್ದಿಯಲ್ಲಿರುವುದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆ, ಕಾಫಿ ದೈತ್ಯ ಕಂಪನಿ ಕೇವಲ ಎರಡು ಕಾಫಿಗಳಿಗೆ 3.3 ಲಕ್ಷ ರೂ. ಬಿಲ್‌ ಮಾಡಿ ಸುದ್ದಿಯಾಗಿತ್ತು.

Follow Us:
Download App:
  • android
  • ios