ಟಿವೈಆರ್‌ ಮತ್ತು ವೀವ್ಸ್‌ ಎನ್‌ನ್ಯೂಸ್‌ ಎಂಬ ಯೂಟೂಬ್‌ ಚಾನಲ್‌ಗಳಲ್ಲಿ ಭಾರತೀಯ ಸಂಬಾರ ಪದಾರ್ಥಗಳ ಕಂಪನಿಗಳಲ್ಲಿ ಹಸುವಿನ ಮೂತ್ರ ಹಾಗೂ ಸಗಣಿಯನ್ನು ಸೇರಿಸಲಾಗಿರುತ್ತದೆ ಎಂಬ 3 ಸುಳ್ಳು ವಿಡಿಯೋಗಳನ್ನು ಹರಿಬಿಡಲಾಗಿತ್ತು.

ನವದೆಹಲಿ (ಮೇ 6, 2023): ಭಾರತೀಯ ಮಸಾಲೆ ಪದಾರ್ಥಗಳ ಉತ್ಪನ್ನಗಳಲ್ಲಿ ಗೋಮೂತ್ರ ಮತ್ತು ಗೋಮಯವನ್ನು ಸೇರಿಸಲಾಗಿದೆ ಎಂದು ಸುಳ್ಳು ಮಾಹಿತಿ ಹರಡಲಾಗಿತ್ತು. ‘ಕ್ಯಾಚ್‌’ ಸೇರಿದಂತೆ ಪ್ರಮುಖ ಸಂಬಾರ ಪದಾರ್ಥಗಳ ಬ್ರ್ಯಾಂಡ್‌ಗಳ ಕುರಿತ ಸುಳ್ಳು ಮಾಹಿತಿಯ ಯೂಟ್ಯೂಬ್‌ ವಿಡಿಯೋಗಳನ್ನು ತೆಗೆದು ಹಾಕುವಂತೆ ಇಂಟರ್ನೆಟ್‌ ದೈತ್ಯ ಗೂಗಲ್‌ಗೆ ದೆಹಲಿ ಹೈಕೋರ್ಟ್‌ ನಿರ್ದೇಶಿಸಿದೆ.

ಟಿವೈಆರ್‌ ಮತ್ತು ವೀವ್ಸ್‌ ಎನ್‌ನ್ಯೂಸ್‌ ಎಂಬ ಯೂಟೂಬ್‌ ಚಾನಲ್‌ಗಳಲ್ಲಿ ಭಾರತೀಯ ಸಂಬಾರ ಪದಾರ್ಥಗಳ ಕಂಪನಿಗಳಲ್ಲಿ ಹಸುವಿನ ಮೂತ್ರ ಹಾಗೂ ಸಗಣಿಯನ್ನು ಸೇರಿಸಲಾಗಿರುತ್ತದೆ ಎಂಬ 3 ಸುಳ್ಳು ವಿಡಿಯೋಗಳನ್ನು ಹರಿಬಿಡಲಾಗಿತ್ತು. ಇವುಗಳ ವಿರುದ್ಧ ಕಂಪನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ‘ಈ ರೀತಿ ಬ್ರ್ಯಾಂಡ್‌ಗಳ ಹೆಸರು ಮತ್ತು ಗುರುತುಗಳನ್ನು ಬಳಸಿಕೊಂಡು ಆಧಾರ ರಹಿತವಾಗಿ ಕೇವಲ ಊಹಾತ್ಮಕವಾಗಿ ಸುಳ್ಳು ಮಾಹಿತಿಯ ವಿಡಿಯೋಗಳನ್ನು ಮಾಡಿ ಹರಿಬಿಡುವುದು ಉತ್ಪನ್ನಗಳ ‘ಮಾನಹಾನಿ ಮತ್ತು ಅವಹೇಳನ ಮಾಡುವ ದುರುದ್ದೇಶಪೂರ್ವಕ ಪ್ರಯತ್ನ’ ಎಂದು ಕೋರ್ಟ್‌ ಹೇಳಿದೆ.

ಇದನ್ನು ಓದಿ: ಹೇಳಿಕೆಗಳು ಎಲ್ಲೆ ಮೀರಬಾರದು: ರಾಹುಲ್‌ ಗಾಂಧಿಗೆ ಹೈಕೋರ್ಟ್‌ ಸಲಹೆ

ನಮ್ಮ ಬ್ರ್ಯಾಂಡ್‌ ಉತ್ತಮ ಗುಣಮಟ್ಟವುಳ್ಳದ್ದು, ಹಾಗೂ ಸಾಕಷ್ಟು ಗ್ರಾಹಕರನ್ನು ಹೊಂದಿದೆ ಎಂದು ಸಂಬಾರ ಸಾಮಗ್ರಿ ತಯಾರಕ ಕ್ಯಾಚ್‌ ಸಂಸ್ಥೆ ಹೇಳಿದೆ. ವಿಚಾರಣೆ ವೇಳೆ ವಿಡಿಯೋ ಮಾಡಿರುವ ಇಬ್ಬರು ಅಪರಾಧಿಗಳು ಕೋರ್ಟ್‌ಗೆ ಗೈರಾಗಿದ್ದರು. ಬಳಿಕ ಈ ರೀತಿಯ ಮೂರು ವಿಡಿಯೋಗಳನ್ನು ತೆಗದು ಹಾಕಲಾಗುವುದು, ಇವು ಇನ್ನು ಮುಂದೆ ಲಭ್ಯವಿರುವುದಿಲ್ಲ ಎಂದು ಗೂಗಲ್‌ ಕೋರ್ಟ್‌ಗೆ ತಿಳಿಸಿದೆ.

ಇದನ್ನೂ ಓದಿ: ಮೋದಿ ಸರ್‌ನೇಮ್‌ ಕೇಸ್‌: ಜೈಲು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಹುಲ್‌ ಗಾಂಧಿ