ಇದೇ ವಿಶ್ವದ ದುಬಾರಿ ಐಸ್‌ಕ್ರೀಂ: ಈ ಬೆಲೆಯಲ್ಲಿ ಒಂದು ಕಾರೇ ತಗೋಬೋದು!
ಈ ಐಸ್‌ಕ್ರೀಂನ ಬೆಲೆ ಎಷ್ಟು ಅಂತೀರಾ? ಈ ರುಚಿಕರವಾದ ಐಸ್ ಕ್ರೀಂನ ಒಂದು ಸರ್ವಿಂಗ್‌ಗೆ 873,400 ಜಪಾನೀಸ್ ಯೆನ್ ವೆಚ್ಚವಾಗುತ್ತದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 5 ಲಕ್ಷಕ್ಕಿಂತ ಹೆಚ್ಚು!
ನವದೆಹಲಿ (ಮೇ 20, 2023): ಬೇಸಿಗೆಯ ಬಿಸಿಲು ಸಾಕಪ್ಪಾ ಸಾಕು ಅಂತ ಅನೇಕರು ಬೈಕೋತಿರ್ತಾರೆ. ಈ ಹಿನ್ನೆಲೆ ತಣ್ಣಾಗಾಗೋಕೆ ಜನ ಅನೇಕ ಮಾರ್ಗಗಳನ್ನು ಹುಡುಕುತ್ತಾರೆ. ಈ ಪೈಕಿ ಜ್ಯೂಸ್, ಕೂಲ್ ಡ್ರಿಂಕ್ಸ್ ಕುಡಿಯೋದು ಒಂದಾದರೆ, ಐಸ್‌ಕ್ರೀಂ ತಿನ್ನೋದು ಸಮಂಜಸವಾದ ಮತ್ತು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಆದರೆ, ನಾವು ಹೇಳಲು ಹೊರಟಿರುವ ಸ್ಟೋರಿ ದುಬಾರಿ ಐಸ್‌ಕ್ರೀಂನದ್ದು. ನೀವು ಒಂದು ಬಾರಿ ಈ ಐಸ್‌ಕ್ರೀಂ ತಿಂದರೆ ಇದು ಅನೇಕ ಜನರ ಒಂದು ವರ್ಷದ ಸಂಬಳವಾಗಿರುತ್ತೆ.
ಹೌದು, ಜಪಾನ್‌ನ ಐಸ್‌ಕ್ರೀಂ ಬ್ರ್ಯಾಂಡ್ ಆದ ಸೆಲಾಟೋ ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಮ್ ಅನ್ನು ಮಾರಾಟ ಮಾಡುತ್ತದೆ. ಇದನ್ನು ಬರೀ ನಾವ್ ಹೇಳ್ತಿಲ್ಲ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್ ಇದನ್ನು ದೃಢಪಡಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್‌ನ ಪ್ರಕಾರ, ಈ ಐಸ್‌ಕ್ರೀಮ್‌ನ ಬೆಲೆಯು ಒಂದು ಕುಟುಂಬದ ರಜೆಯ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ. ಈ ಐಸ್‌ಕ್ರೀಂ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಫಾರಿನ್ ಟ್ರಿಪ್ ಅನ್ನು ಆರಾಮಾಗಿ ಮಾಡ್ಕೋಬರ್ಬೋದು.
ಇದನ್ನು ಓದಿ: AI ಎಫೆಕ್ಟ್: ನೀವ್ ಆರ್ಡರ್ ಮಾಡದಿದ್ರೂ ನಿಮ್ಮ ಮೂಡ್‌ಗೆ ತಕ್ಕಂತೆ ನಿಮ್ಮ ಟೇಬಲ್‌ಗೆ ಬರುತ್ತೆ ಪಿಜ್ಜಾ!
ಇನ್ನು, ಈ ಐಸ್‌ಕ್ರೀಂ ಯಾಕಿಷ್ಟು ದುಬಾರಿ ಅಂತೀರಾ? ಸುದ್ದಿ ವರದಿಗಳ ಪ್ರಕಾರ, 'ಬೈಕುಯಾ' ಹೆಸರಿನ ಐಸ್ ಕ್ರೀಮ್ ಅನ್ನು ಅಪರೂಪದ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಅದ್ರಲ್ಲಿ ಮಹಿಳೆಯರ ಮೆಚ್ಚಿನ ಆಭರಣವಾದ ಚಿನ್ನವೂ ಇರುತ್ತದೆ! ಹೌದು, ಈ ಐಸ್‌ಕ್ರೀಂನಲ್ಲಿ ಖಾದ್ಯ ಚಿನ್ನದ ಎಲೆಗಳು, ವೈಟ್ (ಬಿಳಿ) ಟ್ರಫಲ್, ಪರ್ಮಿಜಿಯಾನೊ ರೆಗ್ಜಿಯಾನೊ ಮತ್ತು ಸೇಕ್ ಲೀಸ್ ಸೇರಿವೆ. ಈ ಐಸ್ ಕ್ರೀಮ್ ಅನ್ನು ರಿವಿಯಲ್ಲಿ ಮುಖ್ಯ ಬಾಣಸಿಗರಾಗಿರುವ ತಡಯೋಶಿ ಯಮಡಾ ಅವರು ರಚಿಸಿದ್ದಾರೆ ಮತ್ತು ಅವರು ಕಾಲ್ಪನಿಕ ಫ್ಯೂಷನ್ ಪಾಕಪದ್ಧತಿಗೆ ಹೆಸರುವಾಸಿಯಾಗಿರುವುದರಿಂದ ಅವರನ್ನು ಈ ಹೆಸರಿನಿಂದ ವಿಶೇಷವಾಗಿ ಕರೆಯಲಾಗುತ್ತದೆ.
ಅಂದ ಹಾಗೆ, ಈ ಐಸ್‌ಕ್ರೀಂನ ಬೆಲೆ ಎಷ್ಟು ಅಂತೀರಾ? ಈ ರುಚಿಕರವಾದ ಐಸ್ ಕ್ರೀಂನ ಒಂದು ಸರ್ವಿಂಗ್‌ಗೆ 873,400 ಜಪಾನೀಸ್ ಯೆನ್ ವೆಚ್ಚವಾಗುತ್ತದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 5 ಲಕ್ಷಕ್ಕಿಂತ ಹೆಚ್ಚು! ಹೌದು, ಈ ಐಸ್‌ಕ್ರೀಂ ಬೆಲೆಯಲ್ಲಿ ವ್ಯಕ್ತಿಯು ಸೆಕೆಂಡ್ ಹ್ಯಾಂಡ್ ಕಾರನ್ನು ಸುಲಭವಾಗಿ ಖರೀದಿಸಬಹುದು. ಅಷ್ಟೇ ಅಲ್ಲ, ಕೆಲ ಹೊಸ ಕಾರುಗಳನ್ನು ಸಹ ಖರೀದಿಸಬಹುದು.
ಇದನ್ನೂ ಓದಿ: ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಗೋಮೂತ್ರ, ಸಗಣಿ: ಫೇಕ್ ವಿಡಿಯೋ ತೆರವಿಗೆ ಹೈಕೋರ್ಟ್ ಆದೇಶ
ಟೇಸ್ಟ್
ಈ ಐಸ್‌ಕ್ರೀಂ ವೈಟ್ ಟ್ರಫಲ್‌ನ ದೃಢವಾದ ಸುಗಂಧವನ್ನು ಹೊಂದಿರುತ್ತದೆ. ಈ ಸುವಾಸನೆ ನಿಮ್ಮ ಮೂಗಿಗೂ ತಂಪು ಮಾಡುತ್ತದೆ, ಅದರ ಜತೆಗೆ ನಿಮ್ಮ ಬಾಯಿಗೂ ಸಖತ್ ಟೇಸ್ಟ್ ಸಿಗುತ್ತದೆ. ಅಲ್ಲದೆ, ಪಾರ್ಮಿಜಿಯಾನೊ ರೆಗ್ಜಿಯಾನೊದ ಕಾಂಪ್ಲೆಕ್ಸ್ ಮತ್ತು ಹಣ್ಣಿನ ರುಚಿಯನ್ನು ಹೊಂದಿರುತ್ತದೆ. ಹಾಗೂ, ಸೇಕ್ ಲೀಸ್ ಅದ್ಭುತವಾದ ರುಚಿಯ ಅನುಭವವನ್ನು ನೀಡುತ್ತದೆ.
ಇನ್ನು, ಈ ಐಸ್‌ಕ್ರೀಂ ತಯಾರಿಸೋಕೆ ನಮಗೆ 1.5 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಟೇಸ್ಟ್ ಅನ್ನು ಸರಿಯಾಗಿ ಪಡೆಯಲು ಸಾಕಷ್ಟು ಟ್ರಯಲ್ ಅಂಡ್ ಎರರ್ ತೆಗೆದುಕೊಂಡಿರೋದ್ರಿಂದ ಇಷ್ಟು ಸಮಯ ಹಿಡಿದಿದೆ ಎಂದು ಐಸ್ ಕ್ರೀಮ್ ಬ್ರ್ಯಾಂಡ್ ಸೆಲಾಟೋದ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗೂ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಸಾಧಿಸುವ ಪ್ರಯತ್ನವು ಸಾರ್ಥಕವಾಯಿತು ಎಂದೂ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕ್ಯಾಡ್ಬರಿ ಚಾಕೊಲೇಟ್ ಪ್ರಿಯರೇ ಎಚ್ಚರ: ಸಾವಿರಾರು ಉತ್ಪನ್ನ ಹಿಂಪಡೆದ ಕಂಪನಿ, ಖರೀದಿಸಿದ್ದನ್ನು ತಿನ್ನದಂತೆ ಎಚ್ಚರಿಕೆ!