Asianet Suvarna News Asianet Suvarna News

ಹೈಫೈ ರೆಸ್ಟೋರೆಂಟ್‌ನಿಂದ ವೆಜ್‌ ಊಟ ಆರ್ಡರ್ ಮಾಡಿದ ವ್ಯಕ್ತಿ, ಆಹಾರದಲ್ಲಿತ್ತು ಸತ್ತ ಇಲಿ!

ಹೆಸರಾಂತ ರೆಸ್ಟೋರೆಂಟ್‌ನ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಹಾರ ರೂಮ್‌ಗೆ ತಲುಪಿ ಬಾಕ್ಸ್ ಓಪನ್ ಮಾಡಿದ ಸ್ಪಲ್ಪ ಹೊತ್ತಿನಲ್ಲಿ ಬಾಕ್ಸ್‌ನಲ್ಲಿ ಸತ್ತ ಇಲಿಯನ್ನು ನೋಡಿದ್ದಾರೆ. ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Man finds dead rat in veg meal at Mumbai restaurant, hospitalized Vin
Author
First Published Jan 17, 2024, 4:52 PM IST

ಆಹಾರದಲ್ಲಿ ಜಿರಳೆ, ಹಲ್ಲಿ, ಕೀಟ, ನೊಣಗಳು ಹೊಸದೇನಲ್ಲ. ಸಾದಾ ಹೊಟೇಲ್ ಆದರೂ ಫೈವ್ ಸ್ಟಾರ್ ರೆಸ್ಟೋರೆಂಟ್ ಆದರೂ ಇಂಥಾ ಎಡವಟ್ಟುಗಳು ಆಗಾಗ ಆಗ್ತಾನೆ ಇರುತ್ತವೆ. ಜನರು ಈ ಬಗ್ಗೆ ದೂರು ಒಂದು ಬಾರಿ ವಿಚಾರ ಸುದ್ದಿಯಾಗಿ ಮತ್ತೆ ತೆರೆಮರೆಗೆ ಸರಿದು ಬಿಡುತ್ತದೆ. ಮತ್ತದೇ ತಪ್ಪು ಮರುಕಳಿಸುತ್ತದೆ ಹೊಟೇಲ್‌ನ ಕಳಪೆ ಆಹಾರ ತಿಂದು ಕೆಲವೊಬ್ಬರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರೋದು ಇದೆ. ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿಯೂ ಇಂಥಹದ್ದೇ ಘಟನೆ ನಡೆದಿದೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜನವರಿ 8, 2024ರಂದು ಮುಂಬೈಗೆ ಭೇಟಿ ನೀಡಿದ ರಾಜೀವ್‌ ಶುಕ್ಲಾ, ವರ್ಲಿಯಲ್ಲಿರುವ ಹೆಸರಾಂತ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದರು. ಆಹಾರ ರೂಮ್‌ಗೆ ತಲುಪಿ ಬಾಕ್ಸ್ ಓಪನ್ ಮಾಡಿ ತಿಂದ ಸ್ಪಲ್ಪ ಹೊತ್ತಿನಲ್ಲಿ ಬಾಕ್ಸ್‌ನಲ್ಲಿ ಸತ್ತ ಇಲಿಯನ್ನು ನೋಡಿದ್ದಾರೆ. ಆಹಾರ ತಿಂದು ಅಸ್ವಸ್ಥಗೊಂಡ ಶುಕ್ಲಾರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ಲಾ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರೂ, ಟ್ವೀಟ್ ಮಾಡುವ ಸಮಯದಲ್ಲಿ ನಾಗ್ಪಾಡಾ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿರಲಿಲ್ಲ.

ಝೊಮೆಟೋದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ಸಿಕ್ತು ಸತ್ತ ಹಲ್ಲಿ!

ಟ್ವೀಟ್‌ನೊಂದಿಗೆ ಆರ್ಡರ್ ರಸೀದಿ, ವಿತರಿಸಿದ ಪ್ಯಾಕೇಜ್ ಮತ್ತು ಇಲಿಯಿದ್ದ ಆಹಾರದ ಪ್ಯಾಕೆಟ್‌ನ ಪೋಟೋಗಳು ಇದ್ದವು. ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಸಹ ಶುಕ್ಲಾ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಈ ಘಟನೆ ತಕ್ಷಣವೇ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. ಹಲವಾರು X ಬಳಕೆದಾರರು ಶುಕ್ಲಾ ಅವರ ಪರವಾಗಿ ಸಹಾಯಕ್ಕಾಗಿ ಮನವಿಯಲ್ಲಿ ವಿವಿಧ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ. 

ರೆಸ್ಟೋರೆಂಟ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಅನಾನುಕೂಲತೆಗಾಗಿ ವಿಷಾದ ವ್ಯಕ್ತಪಡಿಸಿದೆ. ತಮ್ಮ ಹೇಳಿಕೆಯಲ್ಲಿ, ಮುಂಬೈನಲ್ಲಿರುವ ತಮ್ಮ ಪ್ರಾದೇಶಿಕ ಕಚೇರಿಯಿಂದ ಪರೇಶ್ ಎಂಬವರು ಪರಿಸ್ಥಿತಿಯ ವಿವರಗಳನ್ನು ತಿಳಿದುಕೊಳ್ಳಲು ಮತ್ತು ಪರಿಹಾರಕ್ಕಾಗಿ ಕೆಲಸ ಮಾಡಲು ಈಗಾಗಲೇ ಶುಕ್ಲಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ಉಲ್ಲೇಖಿಸಿದೆ.

ಬೆಂಗಳೂರು: ಸ್ಟಾರ್ ಹೋಟೆಲ್‌ ಊಟದಲ್ಲಿ ಜಿರಳೆ ಕಂಡು ಬೆಚ್ಚಿಬಿದ್ದ ಹೈಕೋರ್ಟ್ ವಕೀಲೆ!

Follow Us:
Download App:
  • android
  • ios