ಬೆಂಗಳೂರು: ಸ್ಟಾರ್ ಹೋಟೆಲ್‌ ಊಟದಲ್ಲಿ ಜಿರಳೆ ಕಂಡು ಬೆಚ್ಚಿಬಿದ್ದ ಹೈಕೋರ್ಟ್ ವಕೀಲೆ!

ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆರ್ಡರ್ ಮಾಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದ್ದ ಹೋಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

A cockroach was found in order foodat Star Hotel FIR agains hotel staff at bengaluru rav

ಬೆಂಗಳೂರು (ಜ.5) ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆರ್ಡರ್ ಮಾಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದ್ದ ಹೋಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಹೈಕೋರ್ಟ್ ವಕೀಲೆಯಾಗಿರುವ ಶೀಲಾ ದೀಪಕ್‌ ಎಂಬುವವರು ಮಧ್ಯಾಹ್ನದ ಸಮಯದ ಊಟಕ್ಕೆ ತೆರಳಿದ್ದಾರೆ. ಅವರು ಆರ್ಡರ್ ಮಾಡಿದ್ದ ಪನ್ನೀರ್ ಗ್ರೇವಿಯಲ್ಲಿ ಅರ್ಧ ಸೇವಿಸಿದ ಬಳಿಕ ಅದರಲ್ಲಿ ಜಿರಳೆ ಪತ್ತೆಯಾಗಿದ್ದು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಬೇರೆ ಊಟ ಕೊಡುವುದಾಗಿ ಹೇಳಿದ್ದಾರೆ. ಆದರೆ ಅದನ್ನು ನಿರಕಾರಿಸಿದ ವಕೀಲೆ ಜಿರಳೆ ಕಂಡುಬಂದ ಊಟವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಅಡುಗೆ ಕೋಣೆ ಪರಿಶೀಲಿಸಿ ವಿಡಿಯೋ ಮಾಡಲು ಮುಂದಾದ ವೇಳೆ ಹೋಟೆಲ್ ಸಿಬ್ಬಂದಿ ವಕೀಲೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಕೂಡಲೇ ಪೊಲೀಸರಿಗೆ, ಫುಡ್ ಇನ್ಸ್ ಪೆಕ್ಟರ್ ಗೆ ಕರೆ ಮಾಡಿರುವ ವಕೀಲೆ. 

ಚೀನಾದಲ್ಲಿ ಪ್ರಸಿದ್ಧಿಯಾದ ಗ್ರಿಲ್ಡ್ ಐಸ್ ಕ್ಯೂಬ್ ಸ್ಟ್ರೀಟ್ ಫುಡ್, ಏನಪ್ಪಾ ಇದು?

ಹೋಟೆಲ್ ಸಿಬ್ಬಂದಿ ವಿರುದ್ಧ ಎಫ್‌ಐಆರ್:

ಊಟದಲ್ಲಿ ಜಿರಳೆ ಪತ್ತೆಯಾದ ಬಗ್ಗೆ ಪ್ರಶ್ನಿಸಿದ್ದಕ್ಕೆ  ಹೋಟೆಲ್ ಸಿಬ್ಬಂದಿ ತಳ್ಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಆರೋಪ ಮಾಡಿರುವ ವಕೀಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 352,  341, 504, 506 ಅಡಿ ಎಫ್ ಐಆರ್ ದಾಖಲು ಮಾಡಿದ್ದಾರೆ. 

ತಾಯಿ ಗರ್ಭದಿಂದ ಹೊರಬಂದ ಹಸುಗೂಸಿಗೆ ನರಕ ತೋರಿಸಿದ ಆಸ್ಪತ್ರೆ: ಮಗುವಿಗೆ ಮುತ್ತಿಕೊಂಡು ಕಚ್ಚಿದ ಜಿರಳೆಗಳು

ನೆನ್ನೆ ವಿಧಾನಸೌಧ ಪೊಲೀಸ್ ಠಾಣೆಗೆ ವಕೀಲೆಯೋರ್ವರು ದೂರು ನೀಡಿದ್ದಾರೆ. ಅವಾಚ್ಯವಾಗಿ ನಿಂದಿಸಿ ಎಳೆದಾಡಿರುವ ಈ ಹಿನ್ನಲೆ ಹೋಟೆಲ್ ನ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ಈ ಘಟನೆ ಬಗ್ಗೆ ಎಫ್ ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತದೆ.

ಕೇಂದ್ರ ವಿಭಾಗದ ಡಿಸಿಪಿ ಶೇಖರ್
 

Latest Videos
Follow Us:
Download App:
  • android
  • ios